Nithya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಸ್ವಭಾವಕ್ಕೆ ಹೊಂದಿಕೆಯಾಗುವ ಸಂಗಾತಿ ಸಿಗುಲಿದ್ದಾರೆ

|

Updated on: Jun 09, 2023 | 10:50 PM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 8) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಇಂದಿನ ರಾಶಿಭವಿಷ್ಯ, ಈ ರಾಶಿಯವರ ಸ್ವಭಾವಕ್ಕೆ ಹೊಂದಿಕೆಯಾಗುವ ಸಂಗಾತಿ ಸಿಗುಲಿದ್ದಾರೆ
ಇಂದಿನ ರಾಶಿಭವಿಷ್ಯ, ಜೂನ್ 9
Image Credit source: freepik
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 9 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಐಂದ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:55 ರಿಂದ ಮಧ್ಯಾಹ್ನ 12:32ರ ವರೆಗೆ, ಯಮಘಂಡ ಕಾಲ‌ ಮಧ್ಯಾಹ್ನ 03:45 ರಿಂದ 05:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:41 ರಿಂದ 09:18ರ ವರೆಗೆ.

ಸಿಂಹ: ನಿಮಗೆ ನಿಮ್ಮ ಸಾಮರ್ಥ್ಯ ಗೊತ್ತಿದ್ದರೂ ಹಿಂದೆಟು ಹಾಕಬಹುದು. ಸ್ನೇಹಿತರ ಕಾರಣದಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ಒತ್ತಡಕ್ಕೆ ಸಿಲುಕಿ ಕೆಟ್ಟ ಮಾರ್ಗವನ್ನು ಅನಿವಾರ್ಯವಾಗಿ ಹಿಡಿಯಬೇಕಾದೀತು. ಕುಟುಂಬ ಜೀವನದಲ್ಲಿ ಜಾಗರೂಕರಾಗಿರಿ, ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಂಡಷ್ಟು ಉತ್ತಮವಾಗಲಿದೆ. ಹಣವೂ ನಿಮ್ಮ ಸ್ಥಾನಮಾನಕ್ಕೆ ಯೋಗ್ಯವಾಗಿ ವ್ಯವಸ್ಥೆಯನ್ನು ಮಡುವುದೆ. ನೂತನ‌ ಆಭರಣವನ್ನು ಖರೀದಿಸುವಿರಿ.

ಕನ್ಯಾ: ನಿಮ್ಮ ಸ್ವಭಾವಕ್ಕೆ ಹೊಂದಿಕೆಯಾಗುವ ಸಂಗಾತಿಯು ಸಿಗುವರು. ನಿಮ್ಮ ಸಮಯಕ್ಕೆ ಯೋಗ್ಯವಾದ ವಸ್ತುವೊಂದು ಬರಲಿದೆ. ಯಾರ ಸಾಮರ್ಥ್ಯವನ್ನೂ ನೀವು ಕೆಳದರ್ಜೆಯಲ್ಲಿ ಕಾಣಲು ಬಯಸುವಿರಿ. ಅಧಿಕೃತ ಮಾಹಿತಿಯ ಕೊರತೆಯಿಂದ ನಿಮಗೆ ಸಿಗಬೇಕಾದ ಸ್ಥಾನದಿಂದ‌ ನೀವು ವಂಚಿತರಾದಿರಿ. ಸುಮ್ಮನೇ ಕುಳಿತು ನಕಾರಾತ್ಮಕ ಚಿಂತನೆಗಳನ್ನು ಮಾಡಿಕೊಳ್ಳುವವರಿದ್ದೀರಿ. ಸಮೀಪದ‌ ದೇವಾಲಯ ದರ್ಶನವು‌ ಮನಸ್ಸಿಗೆ ಯಾವುದೇ ಕಾರಗಣಕ್ಕಾಗಿ ಧನಾತ್ಮಕ ಚಿಂತನೆಯನ್ನು ಮಾಡಿಳ್ಳಿ. ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ‌ಮಾಡಿ.

ತುಲಾ: ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹೋದ್ಯೋಗಿಗಳ ಸಹಾಯ ಪಡೆಯುವಿರಿ. ಉದ್ಯೋಗದಲ್ಲಿ ಸಿಗುವ ಬಡ್ತಿಗೆ ನೀವು ಕಾಯುತ್ತಿರುವಿರಿ. ಲಾಭ ಹಾಗೂ ನಷ್ಟವನ್ನು ಸರಿಗೂಡಿಸಿಕೊಂಡು ನೋಡುವುದು ಉತ್ತಮ. ಕ್ರೀಡೆಯಲ್ಲಿ ಇಂದು ಹೆಚ್ಚು ಆಸಕ್ತಿ ಬರಬಹುದು. ಮನೋರಂಜನೆಗೆ ಇಂದು ಸಮಯವನ್ನು ಕೊಡುವಿರಿ. ಸಾಮರ್ಥ್ಯಕ್ಕೆ ಯೋಗ್ಯವಾದ ಉದ್ಯೋಗವನ್ನು ಮಾಡಲು ಸುತ್ತಾಟ ನಡೆಸಬೇಕಾದೀತು. ಯಾರದೋ ಸಿಟ್ಟನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ನಿಮ್ಮ‌ ನಿಜಸ್ವರೂಪ ಗೊತ್ತಾಗಬಹುದು.

ವೃಶ್ಚಿಕ: ನಿಮ್ಮ ಯೋಜನೆಯನ್ನು ಮುಂದುವರಿಸಲು ನಿಮಗೆ ಆತಂಕವು ಬರಬಹುದು. ಕಾರ್ಯದ‌ ನಿಮಿತ್ತ ಬೇರೆ ಕಡೆಗೆ ಪ್ರಯಾಣವನ್ನು ಮಾಡಬೇಕಾಗಿಬರಬಹುದು. ನೀವೇ ಇಂದು ಸಂಗಾತಿಯನ್ನು ಆರಿಸಿಕೊಳ್ಳಲು ಮುಂದಾಗುವಿರಿ. ಮನೆಯಲ್ಲಿ ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಲೆಕ್ಕಪರಿಶೋಧಕರು ಒತ್ತಡದಿಂದ ಹೊರಬಂದಿರುವರು. ನಿಮ್ಮನ್ನು ಇಷ್ಟಪಡುವವರು ನಿಮಗೆ ಉಡುಗೊರೆಯನ್ನು ಕೊಟ್ಟಾರು. ನಿಮ್ಮ ಆಲೋಚನೆಗಳಿಂದ‌ ನಕಾರಾತ್ಮಕತೆಯು ಉಂಟಾಗಬಹುದು. ಸಮಯವನ್ನು ನೋಡಿಕೊಂಡು ನೀವು ಮುಂದುವರಿಯುವುದು ಯೋಗ್ಯವಿದೆ.

-ಲೋಹಿತಶರ್ಮಾ ಇಡುವಾಣಿ

Published On - 12:30 am, Fri, 9 June 23