Daily Horoscope 9 June: ಆರೋಗ್ಯ ಕೈ ಕೊಡುವ ಸಾಧ್ಯತೆ, ಖರ್ಚು ಹೆಚ್ಚಾಗಬಹುದು ಎಚ್ಚರ!

ಇಂದಿನ (2023 ಜೂನ್​ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope 9 June: ಆರೋಗ್ಯ ಕೈ ಕೊಡುವ ಸಾಧ್ಯತೆ, ಖರ್ಚು ಹೆಚ್ಚಾಗಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 09, 2023 | 12:02 AM

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಐಂದ್ರ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:55 ರಿಂದ ಮಧ್ಯಾಹ್ನ 12:32ರ ವರೆಗೆ, ಯಮಘಂಡ ಕಾಲ‌ ಮಧ್ಯಾಹ್ನ 03:45 ರಿಂದ 05:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:41 ರಿಂದ 09:18ರ ವರೆಗೆ.

ಮೇಷ: ಕಚೇರಿ ಕೆಲಸಗಳಲ್ಲಿ ಸಮಯಪಾಲನೆಯಿಂದ ಅಧಿಕಾರಿಗಳ ಮೆಚ್ಚುಗೆ ಗಳಿಸುವ ಸಾಧ್ಯತೆ ಇದೆ. ನಿಮ್ಮ ಕೆಲಸವು ಇದೇ ಉತ್ಸಾಹದಿಂದ ಸಾಗಲಿ. ಮಕ್ಕಳು ಸೋಮಾರಿಗಳಾಗದಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿರುತ್ತದೆ. ಏನಾದರೊಂದು ಕಾರಣ ಹೇಳಿ ಮನೆಯಲ್ಲಿಯೇ ಇರಲು ಇಚ್ಛಿಸುವಿರಿ. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ವ್ಯವಹಾರಗಳನ್ನು ಹೇಳಿ ಪ್ರಯೋಜನವಿಲ್ಲ. ಅತ್ಯಂತ ಮಹತ್ತ್ವದ ಯೋಜನೆಯು ಪ್ರಾರಂಭ ಮಾಡುವ ಯೋಚನೆ ಬರಬಹುದು. ಸಂಬಂಧಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ‌. ಈ ದಿನ ನಿಮ್ಮ ಆರ್ಥಿಕ ಸ್ಥಿತಿಯನ್ನು ನೋಡಿಕೊಳ್ಳಿ ಮತ್ತು ಅಪರಿಚಿತರ ಜೊತೆ ಹಣದ ವ್ಯವಹಾರ ಮಾಡಬೇಡಿ. ಮೋಸಹೋಗುವ ಸಾಧ್ಯತೆ ಇದೆ.

ವೃಷಭ: ತಾವು ಉಳಿದುಕೊಳ್ಳಲು ಯಾರ ಮೇಲೂ ಅನಗತ್ಯ ಆರೋಪ ಮಡಿಯಾರು. ಯಂತ್ರಗಳ ವ್ಯಾಪಾರಿಗಳಿಗೆ ಸಂತೋಷದ ದಿನವಾಗಲಿದೆ. ಅಧಿಕ ಲಾಭವನ್ನೂ ನೀವು ಗಳಿಸುವ ಸಾಧ್ಯತೆ ಇದೆ. ಉತ್ಸಾಹವು ಎಷ್ಟೇ ಇದ್ದರೂ ಶಾಂತವಾದ ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ. ಹಿರಿಯರು ನಿಮಗೆ ಉತ್ತಮ ವಿಚಾರಗಳನ್ನು ತಿಳಿಸುವರು. ನಿಮಗೆ ಇಂದು ಪ್ರಭಾವೀವ್ಯಕ್ತಿಯನ್ನು ಭೇಟಿಯಾಗಿ, ಅವರ ಜೊತ ಕಾಲವನ್ನು ಕಳೆಯಲು ಅವಕಾಶ ಸಿಗಬಹುದು. ಇಂದು ನಿಮ್ಮ ಕಠಿಣ ಪರಿಶ್ರಮವು ವ್ಯರ್ಥವಾಗಬಹುದು. ಹಿತಶತ್ರುಗಳಿಗೆ ನಿಮ್ಮ ಯಶಸ್ಸು ಸಹಿಸಲಾಗದ ಶೂಲವಾದೀತು. ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ.

ಮಿಥುನ: ಕಛೇರಿಯಲ್ಲಿ ಅಧಿಕಾರಿಯ ಜೊತೆ ವಾದಕ್ಕೆ ಇಳಿಯಬಹುದು. ಯಾರಿಗೂ ಸಾಲವನ್ನು ಕೊಡಲು ಮುಂದಾಗುವುದು ಬೇಡ. ಒಡಹುಟ್ಟಿದವರಿಗೆ ಮಾರ್ಗದರ್ಶನ ನೀಡಿ ಮತ್ತು ಅವರ ಅಗತ್ಯಕ್ಕೆ ಅನುಗುಣವಾಗಿ ಅವರನ್ನು ಬೆಂಬಲಿಸಿ ಸಂತೋಷಪಡಿಸಿ. ಸಂಬಂಧಗಳು ಬಳಕೆಯಲ್ಲಿ ಇಲ್ಲದೇ ದೂರವಾಗಬಹುದು. ಬುದ್ಧಿಪೂರ್ವಕವಾಗಿ ತಪ್ಪುಗಳಾನ್ನು ಮಾಡುವಿರಿ. ಸಕಾರಾತ್ಮಕ ಅಂಶಗಳನ್ನು ಸ್ವೀಕರಿಸಲು ತಯಾರಾಗಿ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದು ನಿಮಗೆ ಖುಷಿ ಕೊಡುವ ಸಂಗತಿಯಾಗಿದೆ. ಇಂದು ನೆರೆ ಹೊರೆಯವರ ಭಿನ್ನಾಭಿಪ್ರಾಯವು ಬೆಳಕಿಗೆ ಬರಬಹುದು. ನಿಮ್ಮ ಇಚ್ಛೆಗೆ ವಿರುದ್ಧವಾಗಿದ್ದರೆ ಕೋಪಗೊಳ್ಳುವುದು ಬೇಡ.

ಕರ್ಕ: ಅಧಿಕೃತ ಕೆಲಸವನ್ನು ಬಿಟ್ಟು ಅನ್ಯ ಕೆಲಸವನ್ನು ಮಾಡಬೇಕಾಗಬಹುದು. ಅಧಿಕ ಲಾಭವನ್ನು ನೀವು ನಿರೀಕ್ಷಿಸಿದರೂ ನಿಮಗೆ ಫಲವು ಸಿಗಲಿಕಗಕಿಲ್ಲ. ವೃತ್ತಿಯ ಬಗ್ಗೆ ನಿಮಗೆ ಕೀಳರಿಮೆ ಬರುವ ಸಾಧ್ಯತೆ ಇದೆ. ಪ್ರಾಮಾಣಿಕತೆಯಿಂದ ನಿಮಗೆ ಲಾಭವಾಗಬಹುದು. ಕುಟುಂಬದ ಜೊತೆ ಬದುಕುವ ಆನಂದವನ್ನು ಅನುಭವಿಸುವಿರಿ. ಸಂಗಾತಿಯ ಮಾತುಗಳನ್ನು ನೀವು ತಳ್ಳಿಹಾಕುವಿರಿ. ನಿಮಗೆ ವಹಿಸಿದ ಕೆಲಸವು ವಿಳಂಬವಾಗಬಹುದು. ಇದು ನಿಮ್ಮ ಸಾಮರ್ಥ್ಯ ಕೊರತೆ ಎಂದು ಬಿಂಬಿತವಾಗಲಿದೆ. ನಿಮಗೆ ಉಂಟಾದ ಬೇಸರವನ್ನು ದೂರ ಮಾಡಿಕೊಳ್ಳಲು ಸತತ ಪ್ರಯಾಸಪಡುವಿರಿ.

ಸಿಂಹ: ನಿಮಗೆ ನಿಮ್ಮ ಸಾಮರ್ಥ್ಯ ಗೊತ್ತಿದ್ದರೂ ಹಿಂದೆಟು ಹಾಕಬಹುದು. ಸ್ನೇಹಿತರ ಕಾರಣದಿಂದ ಮನೆಯಲ್ಲಿ ಕಲಹಗಳು ಉಂಟಾಗಬಹುದು. ಒತ್ತಡಕ್ಕೆ ಸಿಲುಕಿ ಕೆಟ್ಟ ಮಾರ್ಗವನ್ನು ಅನಿವಾರ್ಯವಾಗಿ ಹಿಡಿಯಬೇಕಾದೀತು. ಕುಟುಂಬ ಜೀವನದಲ್ಲಿ ಜಾಗರೂಕರಾಗಿರಿ, ಕೋಪವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಂಡಷ್ಟು ಉತ್ತಮವಾಗಲಿದೆ. ಹಣವೂ ನಿಮ್ಮ ಸ್ಥಾನಮಾನಕ್ಕೆ ಯೋಗ್ಯವಾಗಿ ವ್ಯವಸ್ಥೆಯನ್ನು ಮಡುವುದೆ. ನೂತನ‌ ಆಭರಣವನ್ನು ಖರೀದಿಸುವಿರಿ.

ಕನ್ಯಾ: ನಿಮ್ಮ ಸ್ವಭಾವಕ್ಕೆ ಹೊಂದಿಕೆಯಾಗುವ ಸಂಗಾತಿಯು ಸಿಗುವರು. ನಿಮ್ಮ ಸಮಯಕ್ಕೆ ಯೋಗ್ಯವಾದ ವಸ್ತುವೊಂದು ಬರಲಿದೆ. ಯಾರ ಸಾಮರ್ಥ್ಯವನ್ನೂ ನೀವು ಕೆಳದರ್ಜೆಯಲ್ಲಿ ಕಾಣಲು ಬಯಸುವಿರಿ. ಅಧಿಕೃತ ಮಾಹಿತಿಯ ಕೊರತೆಯಿಂದ ನಿಮಗೆ ಸಿಗಬೇಕಾದ ಸ್ಥಾನದಿಂದ‌ ನೀವು ವಂಚಿತರಾದಿರಿ. ಸುಮ್ಮನೇ ಕುಳಿತು ನಕಾರಾತ್ಮಕ ಚಿಂತನೆಗಳನ್ನು ಮಾಡಿಕೊಳ್ಳುವವರಿದ್ದೀರಿ. ಸಮೀಪದ‌ ದೇವಾಲಯ ದರ್ಶನವು‌ ಮನಸ್ಸಿಗೆ ಯಾವುದೇ ಕಾರಗಣಕ್ಕಾಗಿ ಧನಾತ್ಮಕ ಚಿಂತನೆಯನ್ನು ಮಾಡಿಳ್ಳಿ. ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ‌ಮಾಡಿ.

ತುಲಾ: ನಿಮ್ಮ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸಹೋದ್ಯೋಗಿಗಳ ಸಹಾಯ ಪಡೆಯುವಿರಿ. ಉದ್ಯೋಗದಲ್ಲಿ ಸಿಗುವ ಬಡ್ತಿಗೆ ನೀವು ಕಾಯುತ್ತಿರುವಿರಿ. ಲಾಭ ಹಾಗೂ ನಷ್ಟವನ್ನು ಸರಿಗೂಡಿಸಿಕೊಂಡು ನೋಡುವುದು ಉತ್ತಮ. ಕ್ರೀಡೆಯಲ್ಲಿ ಇಂದು ಹೆಚ್ಚು ಆಸಕ್ತಿ ಬರಬಹುದು. ಮನೋರಂಜನೆಗೆ ಇಂದು ಸಮಯವನ್ನು ಕೊಡುವಿರಿ. ಸಾಮರ್ಥ್ಯಕ್ಕೆ ಯೋಗ್ಯವಾದ ಉದ್ಯೋಗವನ್ನು ಮಾಡಲು ಸುತ್ತಾಟ ನಡೆಸಬೇಕಾದೀತು. ಯಾರದೋ ಸಿಟ್ಟನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ನಿಮ್ಮ‌ ನಿಜಸ್ವರೂಪ ಗೊತ್ತಾಗಬಹುದು.

ವೃಶ್ಚಿಕ: ನಿಮ್ಮ ಯೋಜನೆಯನ್ನು ಮುಂದುವರಿಸಲು ನಿಮಗೆ ಆತಂಕವು ಬರಬಹುದು. ಕಾರ್ಯದ‌ ನಿಮಿತ್ತ ಬೇರೆ ಕಡೆಗೆ ಪ್ರಯಾಣವನ್ನು ಮಾಡಬೇಕಾಗಿಬರಬಹುದು. ನೀವೇ ಇಂದು ಸಂಗಾತಿಯನ್ನು ಆರಿಸಿಕೊಳ್ಳಲು ಮುಂದಾಗುವಿರಿ. ಮನೆಯಲ್ಲಿ ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ಲೆಕ್ಕಪರಿಶೋಧಕರು ಒತ್ತಡದಿಂದ ಹೊರಬಂದಿರುವರು. ನಿಮ್ಮನ್ನು ಇಷ್ಟಪಡುವವರು ನಿಮಗೆ ಉಡುಗೊರೆಯನ್ನು ಕೊಟ್ಟಾರು. ನಿಮ್ಮ ಆಲೋಚನೆಗಳಿಂದ‌ ನಕಾರಾತ್ಮಕತೆಯು ಉಂಟಾಗಬಹುದು. ಸಮಯವನ್ನು ನೋಡಿಕೊಂಡು ನೀವು ಮುಂದುವರಿಯುವುದು ಯೋಗ್ಯವಿದೆ.

ಧನುಸ್ಸು: ಸ್ವತಂತ್ರವಾಗಿರುವ ನಿಮಗೆ ಏನನ್ನೋ ಕಳೆದುಕೊಂಡಿದ್ದೀರಿ ಎಂದು ಅನ್ನಿಸಬಹುದು.‌ ಮಕ್ಕಳು ನಿಮ್ಮನ್ನು ಅನೇಕ ಪ್ರಕಾರವಾಗಿ ಪೀಡಿಸಿಯಾರು. ದಾಂಪತ್ಯದಲ್ಲಿ ಬಿರುಕು ಬರುವ ಸಾಧ್ಯತೆ ಇದೆ.‌ ಹೊಸತನ್ನು ಕಲಿಯುವ ಆಸೆಯಿದ್ದರೂ ಅವಕಾಶಗಳು ಕಡಿಮೆ ಇರಲಿದೆ. ಕುಲದಿಂದ‌ ನಿಮಗೆ ಗೌರವ ಸಿಗಬಹುದು. ಕಛೇರಿಯಲ್ಲಿ ನಿಮ್ಮ‌ ಕೆಳಗಿನವರು ನಿಮಗೆ ಆದೇಶ ಮಾಡಿಯಾರು. ಆರಂಭಿಸಿದ ಕೆಲಸಗಳು ಮಂದಗತಿಯಲ್ಲಿ ಸಾಗಬಹುದು. ಅಕ್ರಮ ಆಸ್ತಿಯಿಂದ‌ ನಿಮಗೆ ಇಂದು ತೊಂದರೆಯಾಗಬಹುದು. ರಾಜಕಾರಣಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಚ್ಚು ಓಡಾಡುವರು.

ಮಕರ: ನಿಮಗೆ ಹೇಳಬೇಕಾದ ವಿಷಯವನ್ನು ನೇರವಾಗಿ ಹೇಳಲು ಕಷ್ಟವಾದೀತು. ಆರೋಗ್ಯವು ನಿಮ್ಮ ಕೈ ತಪ್ಪಿ ಹೋಗಬಹುದು. ದಾರಿ ತಪ್ಪಿಸಲು ನಿಮಗೆ ಯಾರಾದರೂ ಮಾರ್ಗದರ್ಶನ ಮಾಡಬಹುದು. ಭೂಮಿಯ ಖರೀದಿಗೆ ಅಧಿಕ ಖರ್ಚಾಗಬಹುದು. ನಿಮ್ಮ ಉದ್ಯೋಗವು ಅಭಿವೃದ್ಧಿಯ ಕಡೆಗೆ ಸಾಗಲಿದೆ. ಅಪರಿಚಿತ ಕರೆಗೆ ನೀವು ಮಾರುಹೋಗಬಹುದು, ಎಚ್ಚರವಾಗಿರಿ. ನಿಮಗೆ ಏಕಾಂತ ಬೇಕೆನಿಸಿ ಏಕಾಂಗಿಯಾಗಿ ಹೋಗಬಹುದು‌. ಸಜ್ಜನರ ಸಹವಾಸವು ನಿಮ್ಮ ಅಹಮ್ಮಿನಿಂದ ತಪ್ಪಿಹೋಗಬಹುದು. ಅಲಂಕಾರಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ.

ಕುಂಭ: ಸಮಯವನ್ನು ವ್ಯರ್ಥವಾಗಿ ಮಾಡಿಕೊಳ್ಳಲು ಅನೇಕ ಮಾರ್ಗಗಳು ತೆರೆದುಕೊಳ್ಳಬಹುದು. ಉದ್ಯೋಗಕ್ಕೆ ಸಂಬಂಧಿಸಿದ ನಿಮ್ಮ‌ ನಿರ್ಧಾರಗಳನ್ನು ಯಾರ ಬಳಿಯಾದರೂ ಹಂಚಿಕೊಳ್ಳಿ. ನಿಮ್ಮ ಸಾಮರ್ಥ್ಯವು ಬೂದಿ ಮುಚ್ಚಿದ ಕೆಂಡದಂತೆ ಸುಪ್ತವಾಗಿರುವುದು. ನಿಮ್ಮ ಪ್ರೇಮಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು.‌ ಸಕಾರಾತ್ಮಕವಾಗಿ ಇದೆಯೇ ಎಂಬ ಬಗ್ಗೆ ಖಚಿತ ಮಾಹಿತಿ ಇರಲಿ. ಮಕ್ಕಳ ವಿಚಾರಕ್ಕೆ ಕಲಹವಾಗಬಹುದು. ನ್ಯಾಯಾಲಯದಲ್ಲಿ ನಿಮಗೆ ಸೋಲಾಗಬಹುದು. ಅಪವಾದವನ್ನು ದೂರಮಾಡಿಕೊಳ್ಳಲು ಹಣವನ್ನು ಕಳೆದುಕೊಳ್ಳುವಿರಿ.

ಮೀನ: ನೀವು ಬಂದಿದ್ದನ್ನು ಎದುರಿಸುವ ಮನೋದಾರ್ಢ್ಯವನ್ನು ಇಟ್ಟುಕೊಳ್ಳುವಿರಿ. ನಿಮ್ಮ ಉದ್ಯೋಗಕ್ಕೆ ಕೆಲವು ಅಡೆತಡೆಗಳು ಬಂದರೂ ಅದನ್ನು ಸರಿಮಾಡಿಕೊಳ್ಳುವ ಬಗ್ಗೆ ಅರಿವಿರಲಿದೆ. ಯುವಕರು ಬಲವಂತರಾಗಿದ್ದರೂ ಸರಿಯಾದ ಮಾರ್ಗವು ಸಿಗದೇ ಒದ್ದಾಡಬೇಕಾದೀತು. ವಾಹನಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ಕೃತಘ್ನತೆಯ ಆರೋಪವು ನಿಮ್ಮ ಮೇಲೆ ಬರಬಹುದು. ಸಹೋದರರ ಸಂಬಂಧವು ಇಂದು ಸ್ವಲ್ಪ ಸುಧಾರಿಸಬಹುದು. ಕೈತಪ್ಪಿ ಹೋದ ವಸ್ತುವನ್ನು ನೀವು ನಿಮ್ಮ ಸ್ವಾಧೀನಕ್ಕೆ ತಂದುಕೊಳ್ಳುವಿರಿ.

ಲೋಹಿತಶರ್ಮಾ – 8762924271 (what’s app only)

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!