Horoscope: ರಾಶಿ ಭವಿಷ್ಯ; ಇಂದು ಏನನ್ನಾದರೂ ಮಾಡಲು ಹೋಗಿ ಎಡವುವಿರಿ-ಎಚ್ಚರ

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 16 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ಇಂದು ಏನನ್ನಾದರೂ ಮಾಡಲು ಹೋಗಿ ಎಡವುವಿರಿ-ಎಚ್ಚರ
ರಾಶಿ ಭವಿಷ್ಯ
Edited By:

Updated on: May 16, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ನವಮೀ, ನಿತ್ಯನಕ್ಷತ್ರ: ಮಘಾ, ಯೋಗ: ವೃದ್ಧಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 52 ನಿಮಿಷಕ್ಕೆ, ರಾಹು ಕಾಲ 14:05ರಿಂದ 15:41ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:06 ರಿಂದ 07:42ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:18ರಿಂದ 10:53ರ ವರೆಗೆ.

ಸಿಂಹ ರಾಶಿ :ಇಂದು ನೀವು ಅನಾಯಾಸವಾಗಿ ವೃತ್ತಿಯಲ್ಲಿ ತೊಡಗುವಿರಿ. ಕುಟುಂಬದಲ್ಲಿ ನಡೆಯಲಿರುವ ವಿವಾಹ ಕಾರ್ಯದ ಓಡಾಟವಿರುವುದು. ಉತ್ತಮ ಯೋಚನಾ ಶಕ್ತಿಯಿಂದ ಮಾರ್ಗವನ್ನು ಹುಡುಕುವಿರಿ. ಭೂ ಸಂಬಂಧಿತ ವ್ಯಾಪಾರ ಲಾಭವಿರುತ್ತದೆ. ಆಲಸ್ಯ ಮನೋಭಾವದಿಂದ ಹೊರಬರುವುದು ಕಷ್ಟವಾಗುವುದು. ಯಾರನ್ನೂ ದೂಷಿಸುವುದು ನಿಮಗೆ ಹೇಳಿಸಿದ್ದಲ್ಲ. ಕೃಷಿಗೆ ಸಂಬಂಧಿಸಿದ ಕಾರ್ಯವನ್ನು ವೇಗವಾಗಿ ಮಾಡಿಕೊಳ್ಳಿ. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶ ಬರುವುದು. ಔಷಧದ ವ್ಯಾಪಾರದಿಂದ ನಿಮಗೆ ಅಧಿಕ ಲಾಭವಾಗಬಹುದು. ಧೈರ್ಯದಿಂದ ಮುನ್ನಡೆಯುವ ಇಚ್ಛಾಶಕ್ತಿಯನ್ನು ರೂಢಿಸಿಕೊಳ್ಳಿ. ಸಾಮಾಜಿಕವಾಗಿ ಏನನ್ನಾದರೂ ಮಾಡಬೇಕು ಎಂದೆನಿಸಬಹುದು. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ.

ಕನ್ಯಾ ರಾಶಿ :ನೀವು ಇನ್ನೊಬ್ಬರನ್ನು ದ್ವೇಷಿಸುವಿರಿ. ಹಣದ ತೊಂದರೆಗೆ ಅನ್ಯರ ಸಹಾಯವನ್ನು ಕೇಳಬೇಕಾಗುವುದು. ವಾಹನ ಸಂಚಾರದಲ್ಲಿ ನಿಮಗೆ ಅಡ್ಡಿಗಳು ಬರಬಹುದು. ಇಂದಿನ ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ವೈದ್ಯಕೀಯ ಕ್ಷೇತ್ರದ ಕಲಿಕೆ ಬಹಳ ಕಷ್ಟವೆನಿಸಬಹುದು. ಮರೆವು ನಿಮಗೆ ವರವಾದಂತೆ ಅನ್ನಿಸುವುದು. ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿರಲು ನಿರ್ಧಾರ ಮಾಡುವಿರಿ. ನಿಮ್ಮ ಇಂದಿನ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ನಿಮ್ಮ ಬಗ್ಗೆ ನಕಾರಾತ್ಮಕ ಮಾತುಗಳನ್ನು ಕೇಳಬೇಕಾಗುವುದು. ಒಮ್ಮೆಲೆ ಕಷ್ಟಗಳು ಬರುವುದರಿಂದ ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಅಪ್ರಿಯರಾಗುವಿರಿ. ಸಣ್ಣ ಉದ್ಯೋಗವಾದರೂ ಕ್ರಮಬದ್ಧವಾಗಿರಲಿ.

ತುಲಾ ರಾಶಿ :ಅವಸರದಲ್ಲಿ ಉದ್ಯೋಗದ ತೀರ್ಮಾನವನ್ನು ತೆಗೆದುಕೊಳ್ಳಬೇಡ. ವ್ಯಾಪಾರದಲ್ಲಿ ಅಜ್ಞಾನದಿಂದ ನಷ್ಟವಾಗುತ್ತದೆ. ಮಕ್ಕಳಿಂದ ನೆಮ್ಮದಿಯು ನಿಮಗೆ ಸಿಗುತ್ತದೆ. ಹಣಕ್ಕಾಗಿ ಕಿರಿಕಿರಿಗಳು ಅಧಿಕವಾದಂತೆ ತೋರುವುದು. ವಿದ್ಯಾರ್ಥಿಗಳು ಮನೋಭಾವವನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ವರ್ತನೆಯು ಹಾದಿ ತಪ್ಪಿದಂತೆ ಹೆಚ್ಚಿನವರಿಗೆ ತೋರುವುದು. ನಿಮಗೆ ಇಂದು ಬರುವ ಅಶುಭವಾರ್ತೆಯಿಂದ ತಲ್ಲಣಿಸಬಹುದು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿಯಾಗಿರುವುದು. ಮನಃಶಾಂತಿಗೆ ಧ್ಯಾನವನ್ನು ರೂಢಿ ಮಾಡಿಕೊಳ್ಳಿ. ಮಹಿಳೆಯರಿಗೆ ಈ ದಿನ‌ ಶುಭವಿರುವುದು. ಅಧಿಕ ಆದಾಯದಿಂದ ನಿಮ್ಮ ನೆಮ್ಮದಿಯ ಹರಣವಾಗಿದೆ ಎಂದು ಅನ್ನಿಸಲೂಬಹುದು. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗವಾಗುವಂತೆ ನೋಡಿ.

ವೃಶ್ಚಿಕ ರಾಶಿ :ಇಂದು ಸ್ನೇಹಿತರು ನಿಮಗೆ ಬೇಕಾದ ಸಲಹೆಯನ್ನು ಪಡೆಯುವಿರಿ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಗಳು ನೀವು ನಿರ್ವಹಿಸಬೇಕಾಗುವುದು. ಆದಾಯವನ್ನು ಉತ್ತಮ ಮಾಡಿಕೊಳ್ಳುವಿರಿ. ನಿಮ್ಮ ಮೇಲಿನ ಗೌರವು ಈ ಕಾರಣಕ್ಕೆ ಕಡಿಮೆ ಆಗಬಹುದು. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಸಹೋದ್ಯೋಗಿಗಳು ಉದ್ಯೋಗಕ್ಕೆ ಸಂಬಂಧಿಸಿದ ಗೊಂದಲವನ್ನು ಪರಿಹರಿಸಲು ಸಹಕಾರ ನೀಡಬಹುದು.
ಅದೃಷ್ಟವನ್ನು ಮಾತ್ರ ನಂಬಿ ಕೆಲಸ ಮಾಡುವುದು ಬೇಡ. ನೀವು ಪಡೆದ ಸಾಲವನ್ನು ಮರುಪಾವತಿಸುವಿರಿ. ಸೃಜನಾತ್ಮಕವಾಗಿ ಏನನ್ನಾದರೂ ಮಾಡಲು ಹೋಗಿ ಎಡವುವಿರಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರು ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳಿ.