ಭವಿಷ್ಯ ನುಡಿಯುವುದು ಆ ಭಗವಂತನ ಅನುಗ್ರಹ. ದಿನ ಬೆಳಗಾಗೆದ್ದು ಭಗವಂತನ ನೆನೆದು ನಿತ್ಯದ ಕಾಯಕದಲ್ಲಿ ತೊಡಗಿಕೊಳ್ಳುವ ಮುನ್ನ ಕೆಲವರಿಗೆ ಇಂದಿನ ಪಂಚಾಂಗ ಭವಿಷ್ಯ ನೋಡುವುದು ರೂಢಿ. ಅದರಂತೆ ಇಲ್ಲಿ ಜುಲೈ 05ರ ದಿನ ಭವಿಷ್ಯ ಮತ್ತು ಪಂಚಾಂಗವನ್ನು ನೀಡಿದ್ದು, ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಜ್ಯೇಷ್ಠಾ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ 11:00ರಿಂದ 12:37ರ ವರೆಗೆ, ಯಮಘಂಡ ಕಾಲ 15:51 ರಿಂದ 17:28ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:47 ರಿಂದ 09:24ರ ವರೆಗೆ.
ಮೇಷ ರಾಶಿ :ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು. ಆಯ್ಕೆ ವಿಚಾರದಲ್ಲಿ ನೀವು ಸೋಲಬಹುದು. ಸಿಹಿ ನೆನಪು ಕಾಡಲಿದೆ. ಸಂಗಾತಿಯ ಜೊತೆ ವಾಸ್ತವದ ಬಗ್ಗೆ ಆಲೋಚಿಸಿ. ಹೂಡಿಕೆಯಲ್ಲಿ ನಂಬಿಕೆ ಹೆಚ್ಚಾಗುವುದು. ನಿಮ್ಮವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಪತ್ನಿಯ ಜೊತೆ ದೂರದ ಊರಿಗೆ ಪ್ರಯಾಣವನ್ನು ಮಾಡುವಿರಿ. ಭೂಮಿಯ ವ್ಯವಹಾರಕ್ಕೆ ಸದ್ಯ ಕೈ ಹಾಕುವುದು ಬೇಡ. ತಪ್ಪನ್ನು ಒಪ್ಪಿಕೊಳ್ಳುವ ಮನೋಭಾವವಿರದು. ಮಕ್ಕಳು ನಿಮ್ಮಿಂದ ಹಣವು ಖಾಲಿಯಾಗುವಂತೆ ಮಾಡಿಯಾರು. ಅವರು ಬೇಸರಗೊಳ್ಳದಂತೆ ನೋಡಿಕೊಳ್ಳಿ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ತಾಳ್ಮೆಯನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಇಂದು ಭೂಮಿ ಅಥವಾ ಚರಾಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ.
ವೃಷಭ ರಾಶಿ :ಇಂದು ನಿಮ್ಮ ಮುಂದೆ ಸಾಲದ ವಿಚಾರ ಬಂದರೆ ಮೌನವಹಿಸುವಿರಿ. ಶತ್ರುಗಳ ಕಾಟವಿರಬಹುದು. ಮಾನಸಿಕವಾಗಿ ಅವರು ನಿಮಗೆ ಇಂದು ತೊಂದರೆಯನ್ನು ಕೊಡಬಹುದು. ಕುಟುಂಬದಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಕಲಹಗಳು ಆಗಬಹುದು. ಅದು ಆಗದಂತೆ ನೋಡಿಕೊಳ್ಳುವುದು ಉತ್ತಮ. ಮಕ್ಕಳ ಬಗೆಗಿನ ಕಾಳಜಿ ಹೆಚ್ಚಾಗುವುದು. ಬರಬೇಕಾದ ಸಂಪತ್ತು ಕೈಗೆ ಸಿಗದೇ ಸಾಲವನ್ನು ಮಾಡಬೇಕಾದೀತು. ಕುಟುಂಬದಲ್ಲಿ ನಿರ್ವಹಣೆಯು ಸರಿಯಾಗಿ ಆಗುತ್ತಿಲ್ಲ ಎಂದು ದಾಂಪತ್ಯದಲ್ಲಿ ಕಲಹವು ಉಂಟಾಗಬಹುದು. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ಕೈಲಾಗದ್ದನ್ನು ಮಾಡುವ ಉತ್ಸಾಹ ಬೇಡ. ಆಸೆಯಿಂದ ಕಳೆದುಕೊಳ್ಳುವುದು ಹೆಚ್ಚಾಗಬಹುದು. ಬೇಡ ವಿಚಾರವನ್ನು ತಲೆಯಿಂದ ಹೊರಹಾಕಿ.
ಮಿಥುನ ರಾಶಿ :ಇಂದು ಹಳೆಯ ಪ್ರಣಯವು ಆರಂಭದ ಸೂಚನೆ ಸಿಗುವುದು. ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ನೀವು ಸೋಲಬಹುದು. ನಿಮ್ಮ ಆಲೋಚನೆಗಳನ್ನು ಬೇರೆಯವರ ಮೇಲೆ ಹೇರಬೇಡಿ. ಅನ್ಯರ ತಪ್ಪುಗಳನ್ನು ಮನ್ನಿಸುವ ಗುಣವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಆಕಸ್ಮಿಕವಾದ ಕೆಲವು ಘಟನೆಗಳು ನಿಮ್ಮನ್ನು ಚಿಂತೆಯಲ್ಲಿ ಇರುವಂತೆ ಮಾಡುವುದು. ಏಕಾಂತವು ನಿಮಗೆ ಬಲವನ್ನು ಕೊಡುವುದು. ಯುಕ್ತಿಯಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳಿ. ಎಲ್ಲಿಯೂ ಕಲಹವಾಗದೇ ಕೆಲಸವು ಮುಕ್ತಾಯವಾಗುವುದು. ವಿಶೇಷ ಸಂದರ್ಭದಲ್ಲಿ ಭಾಗವಹಿಸಲಿದ್ದೀರಿ. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಸಹೋದರರ ಭಾವಕ್ಕೆ ಅಡ್ಡಿಯಾಗದಂತೆ ವರ್ತಿಸುವಿರಿ. ಕೆಲವನ್ನು ಅನುಭವಿಸುವುದು ಅನಿವಾರ್ಯ.
ಕಟಕ ರಾಶಿ :ಇಂದು ನೀವು ವಹಿಸಿಕೊಂಡ ಕಾರ್ಯವನ್ನು ಬಿಡದೇ ಮುನ್ನಡೆಸುವಿರಿ. ಗೊತ್ತಿದ್ದೂ ಉದ್ವೇಗದಲ್ಲಿ ಸಿಕ್ಕಿಕೊಳ್ಳಬೇಡಿ. ಹಿರಿಯರ ಜೊತೆ ಮಾತನಾಡುವಾಗ ಹಿಡಿತವಿರಲಿ. ನೀವಾಡುವ ಅನವಶ್ಯಕ ಹಾಗೂ ನಿಷ್ಪ್ರಯೋಜಕ ಮಾತಿನಿಂದ ನಿಮ್ಮನ್ನು ಅಳೆಯಬಹುದು. ಅಪವಾದದಿಂದ ನೀವು ಚುರುಕಾಗುವಿರಿ. ಯಾರದೋ ಮಾತಿಗೆ ಮಣಿದು ನಿಮ್ಮ ಗುರಿಯನ್ನು ಬದಲಿಸಿಕೊಳ್ಳುವುದು ಸರಿಯಲ್ಲ. ನೀವು ಬಹಳ ವೇಗವಾಗಿ ನಡೆಯುವಿರಿ ಹಾಗೂ ವೇಗವಾಗಿ ಮಾತನಾಡುವಿರಿ. ಸ್ತ್ರೀಯರಿಂದ ಸಹಕಾರವು ಸಿಗಬಹುದು. ಆತ್ಮೀಯತೆಯು ಬದಲಾಗಬಹುದು. ನಿಮ್ಮವರನ್ನು ನೀವು ಬಿಟ್ಟುಕೊಡಲಾರಿರಿ. ನಿಮ್ಮ ಕೆಲಸವು ನಿಮಗೆ ತೃಪ್ತಿಕರವಾಗಿ ಇರಲಿದೆ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನಿಮ್ಮ ಬೆರೆಯುವಿಕೆಯು ಕಡಿಮೆ ಆಗಬಹುದು. ಎಲ್ಲವನ್ನೂ ಬೇರೆಯವರ ದೃಷ್ಟಿಯಲ್ಲಿ ನೋಡುವುದು ಸರಿಯಾಗದು.
ಸಿಂಹ ರಾಶಿ :ಇಂದು ನೀವು ವಾಹನವನ್ನು ಚಲಾಯಿಸುವುದು ಬೇಡ. ಹೊಸ ಆದಾಯದ ಮೂಲವನ್ನು ಹುಡುಕುವುದು ಉತ್ತಮ. ಇದಕ್ಕೆ ಸಹೋದರನ ಬೆಂಬಲವೂ ಸಹಕಾರವೂ ಸಿಗಲಿದೆ. ಅನಗತ್ಯ ಓಡಾಟದಿಂದ ಶರೀರಕ್ಕೆ ಆಯಾಸವಾಗಬಹುದು. ನಿಮ್ಮ ವಾಹನವನ್ನು ಅಪರಿಚಿತರ ಕೈಗೆ ನೀಡಬೇಡಿ. ಇಂದು ನೀವು ಸೋಲನ್ನು ಒಪ್ಪಿಕೊಳ್ಳುವ ಮನಃಸ್ಥಿತಿಯಲ್ಲಿ ಇರುವುದಿಲ್ಲ. ಕೈಗೆ ಬಂದ ಹಣವು ಹೇಗೆ ಖರ್ಚಾಯಿತು ಎಂಬುದೇ ಊಹಾತೀತವಾಗುವುದು. ಅನೇಕ ಕ್ಷೇತ್ರಗಳಲ್ಲಿ ಬೆಳೆಯಬೇಕು ಎಂಬ ತುಡಿತ ಉಂಟಾಗಬಹುದು. ಯಾರ ಜೊತೆ ಸ್ಪರ್ಧೆಗೆ ಇಳಿಯೇ ನಿಮ್ಮ ಕೆಲಸವನ್ನು ಮುಂದುರಿಸುವುದು ಉತ್ತಮ. ರಾಜಕೀಯದಲ್ಲಿ ಸಂಪರ್ಕ ಪ್ರದೇಶವು ವಿಶಾಲವಾಗಿರುತ್ತದೆ. ನಿಮ್ಮ ರಕ್ಷಣೆಯಲ್ಲಿ ನೀವಿರಿ. ಯಾರಮೇಲೂ ಅವಲಂಬಿತವಾಗುವುದು ನಿಮಗೆ ಇಷ್ಟವಾಗದು. ಕೆಲವು ಹೊಸ ಅವಕಾಶಗಳನ್ನು ಪಡೆಯುವ ಪ್ರಯತ್ನವಿರುವುದು.
ಕನ್ಯಾ ರಾಶಿ :ಇಂದು ನಿಮ್ಮ ದುರಭ್ಯಾಸಗಳು ಇತರರಿಗೆ ಗೊತ್ತಾಗುವುದು. ಕುಟುಂಬದಲ್ಲಿ ಸಣ್ಣ ಮಟ್ಟಿನ ಕಲಹವೂ ಆದೀತು. ಉದ್ಯೋಗವನ್ನು ಬದಲಿಸುವುದು ನಿಮಗೆ ನಿತ್ಯದ ಕೆಲಸದಂತೆ ಸಲೀಸಾಗಬಹುದು. ಒಂದೇ ಉದ್ಯೋಗವನ್ನು ಹೆಚ್ವು ಕಾಲ ಮಾಡಲು ಇಷ್ಟ ಪಡದೇ ಬದಲಿಸುವಿರಿ. ರಾಜಕೀಯ ಪ್ರೇರಣೆಯಿಂದ ಕೆಲಸಮಾಡುವಿರಿ. ವಾತಾವರಣಕ್ಕೆ ಹೊಂದಿಕೊಳ್ಳುವ ಸ್ವಭಾವವನ್ನು ಬೆಳಿಸಿಕೊಳ್ಳಬೇಕಾಗಬಹುದು. ಏನೇ ಹೊಸದನ್ನು ಮಾಡಿದರೂ ಅದಕ್ಕೆ ನಿಮ್ಮರಿಂದಲೇ ತಡೆ ಬರಬಹುದು. ಸಾಂಸಾರಿಕ ಜೀವನವನ್ನು ಬಹಳ ಗಂಭೀರವಾಗಿ ಸ್ವೀಕರಿಸಿದ್ದೀರಿ. ಸಂಧಿಗಳಲ್ಲಿ ನೋವುಗಳು ಹೆಚ್ಚಾಗಬಹುದು. ನಿಷ್ಕಾಳಜಿ ಮಾಡಬೇಡಿ. ನೀವು ಹೊಸ ಯೋಜನೆಯ ಬಗ್ಗೆ ಅಧಿಕ ಆಲೋಚನೆ ಇರಲಿದೆ. ಆಚಾತುರ್ಯದಿಂದ ಅನಂತರ ಪಶ್ಚಾತ್ತಾಪ ಪಡುವಿರಿ. ಯಾರ ಪ್ರೀತಿಯನ್ನೂ ಕಡೆಗಾಣಿಸುವುದು ಬೇಡ. ಸಂತಾನದ ಅಪೇಕ್ಷೆಯು ಫಲಿಸುವುದು.
ತುಲಾ ರಾಶಿ :ಇಂದು ನಿಮ್ಮ ಹಣವು ಬಲವಂತದಿಂದ ಬರಲಿದೆ. ವೈದ್ಯಕೀಯ ವೃತ್ತಿಯಲ್ಲಿ ಚುರುಕುತನ ಬೇಕಾಗಬಹುದು. ಕುಟುಂಬದಲ್ಲಿ ಮಂಗಲ ಕಾರ್ಯಗಳು ನಡೆಯಬಹುದು. ಸಂಗಾತಿಯ ಮಾತನ್ನು ಆಲಿಸಿ, ಇಲ್ಲವಾದರೆ ಸಿಟ್ಟಾದಾರು. ಮಕ್ಕಳ ವಿದ್ಯಾಭ್ಯಾಸ ಚಿಂತೆ ಕಾಡಬಹುದು. ಕಛೇರಿಯಲ್ಲಿ ನಿಮ್ಮ ಕೆಲಸವು ವೇಗವಾಗಿ ಮುಗಿದು ಆರಾಮಾಗಿ ಇರುವಿರಿ. ಆಪ್ತರಿಂದ ನಿಮಗೆ ಉಡುಗೊರೆ ಸಿಗಬಹುದು. ತಾಯಿಯ ಜೊತೆ ಹರಟೆ ಹೊಡೆದು ಅವರ ಮನಸ್ಸನ್ನು ಹಗುರ ಮಾಡುವಿರಿ. ಸಂಗಾತಿಗೆ ನಿಮ್ಮಿಂದ ಪ್ರಿಯವಾದುದು ಸಿಗಬಹುದು. ಮನಸ್ಸಿನ ದ್ವಂದ್ವಗಳನ್ನು ಸರಿದೂಗಿಸುವ ಸಾಮರ್ಥ್ಯವನ್ನು ಹೊಂದುವಿರಿ. ಆರ್ಥಿಕವಾದ ಕೆಲವು ವಿಚಾರಗಳಲ್ಲಿ ಗೌಪ್ಯತೆಯನ್ನು ಇಟ್ಟುಕೊಳ್ಳುವಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಅನಿರೀಕ್ಷಿತವಾಗಿ ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು.
ವೃಶ್ಚಿಕ ರಾಶಿ :ಇಂದು ಸ್ನೇಹಿತರ ಜೊತೆ ಹೆಚ್ಚು ಕಾಲವನ್ನು ವ್ಯಯಿಸುವಿರಿ. ಬಹಳ ದಿನಗಳಿಂದ ಹೋಗಬೇಕು ಎಂದುಕೊಂಡ ಸ್ಥಳಗಳಿಗೆ ಹೋಗಿ ಬರುತ್ತೀರಿ. ಸಹೋದ್ಯೋಗಿಗಳಿಂದ ಕಛೇರಿಯಲ್ಲಿ ನಿಮಗೆ ಒತ್ತಡ
ಪರಿಸ್ಥಿತಿ ಬರಬಹುದು. ಇದನ್ನು ನೀವು ಸವಾಲಾಗಿ ಸ್ವೀಕರಿಸಿ ಸೈ ಎನಿಸಿಕೊಳ್ಳಲಿದ್ದೀರಿ. ಭೂಮಿಯ ವ್ಯವಹಾರವನ್ನು ಹೊಸದಾಗಿ ಆರಂಭಿಸುವಿರಿ. ನಿಮ್ಮ ಆಪ್ತವಲಯವು ಇನ್ನೂ ದೊಡ್ಡದಾಗಬಹುದು. ಭೂಮಿಯನ್ನು ಖರೀದಿಸಲು ಸ್ಥಳ ಪರಿಶೀಲನೆಗೆ ಹೋಗುವ ಸಾಧ್ಯತೆ ಇದೆ. ಯಾರಾದರೂ ಹಣಕಾಸಿನ ವಿಚಾರಕ್ಕೆ ಬಂದರೆ ಅಪಮಾನ ಮಾಡುವ ಸಾಧ್ಯತೆ ಇದೆ. ನಿಮ್ಮ ಇಂದಿನ ಕಾರ್ಯವನ್ನು ಉತ್ಸಾಹದಿಂದ ಮಾಡುವಿರಿ. ಯಾರನ್ನೂ ಅವಲಂಬಿಸುವ ಯೋಜನೆಯನ್ನು ನೀವು ಬಿಡುವಿರಿ. ಸಣ್ಣ ವಿವಾದಗಳು ಆಗಬಹುದು. ಅಲ್ಲಿಯೇ ಬಗೆಹರಿಸಿಕೊಳ್ಳಿ. ದೊಡ್ಡ ಮಾಡಿಕೊಳ್ಳುವುದು ಬೇಡ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನೀವು ಕೋಪವನ್ನು ನಿಯಂತ್ರಣ ಮಾಡಿಕೊಳ್ಳಬೇಕಾಗಬಹುದು.
ಧನು ರಾಶಿ :ಇಂದು ನಿಮ್ಮ ನಿರ್ಲಕ್ಷ್ಯದಿಂದ ವ್ಯಾಪಾರದಲ್ಲಿ ವಂಚನೆ ಸಾಧ್ಯವಾದೀತು. ತೊಂದರೆಗಳಿಂದ ಮನಸ್ಸು ಕುಗ್ಗಬಹುದು. ಗೌಪ್ಯತೆಯನ್ನು ನೀವು ಕಾಪಾಡಿಕೊಳ್ಳಲಿದ್ದೀರಿ. ನೆರೆಹೊರೆಯವರು ನಿಮ್ಮ ಮನೆಗೆ ಬರಬಹುದು. ಸರ್ಕಾರಿ ಕೆಲಸ ಕೊನೆಯ ಹಂತದಲ್ಲಿ ನಿಂತಿದ್ದು ಮುಂದುವರಿಸುವ ಪ್ರಯತ್ನ ಮಾಡುವಿರಿ. ಕೋಪದಿಂದಲೇ ಎಲ್ಲದಕ್ಕೂ ಪರಿಹಾರ ಸಿಗದು. ಕೇವಲ ಮಾತಿನ ಆಧಾರದ ಮೇಲೆ ಯಾರನ್ನೂ ಅಳೆಯಬೇಡಿ. ಜೀವನ ನಿರ್ವಹಣೆಗೆ ಮತ್ತೊಂದು ವೃತ್ತಿಯನ್ನು ಆಶ್ರಯಿಸಬಹುದು. ಯಾರಿಂದಲಾದರೂ ಏನನ್ನಾದರೂ ಪಡೆಯುವಾಗ ವಿನಯವು ಇರಲಿ. ಅತಿಯಾದ ಆಲಸ್ಯದಿಂದ ಮನೆಯ ಕೆಲಸಗಳು ಹಾಗೆಯೇ ಉಳಿದುಕೊಳ್ಳಬಹುದು. ದೂರದ ಪ್ರಯಾಣವನ್ನು ಅಪೇಕ್ಷಿಸುವಿರಿ. ಧಾರ್ಮಿಕವಾದ ಚಿಂತನೆಯನ್ನು ನಡೆಸಬಹುದು. ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಬಹುದು. ಬಂಧುಗಳ ಎದುರು ಸ್ವಾಭಿಮಾನವನ್ನು ಇಟ್ಟುಕೊಳ್ಳುವಿರಿ.
ಮಕರ ರಾಶಿ :ಯಾವ ಸೋಲಿಗೂ ಹತಾಶರಾಗುವುದು ಬೇಡ. ಮರೆಯಲು ಬೇಕಾದ ಚಟುವಟಿಕೆಗಳನ್ನು ಮಾಡಿ. ಮನೆಯಿಂದ ದೂರ ಉದ್ಯೋಗದ ನಿಮಿತ್ತ ಇರಬೇಕಾಗಿ ಬರಬಹುದು. ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಿಸುವರು. ತಂದೆಯಿಂದ ಸಂಪತ್ತು ಸಿಗುವ ಸಾಧ್ಯತೆ ಇದೆ. ನಿರೀಕ್ಷೆಗೆ ತಕ್ಕ ಸಂಪತ್ತನ್ನು ಗಳಿಸುವಿರಿ. ಮೇಲಧಿಕಾರಿಗಳ ವಿಶ್ವಾಸವನ್ನು ಗಳಿಸುವ ಪ್ರಯತ್ನ ಮಾಡುವಿರಿ. ಸಾಲಬಾಧೆಯ ಭಯವು ಕಾಡುವುದು. ಎಲ್ಲರ ಪ್ರೀತಿಯನ್ನು ಗಳಿಸಲು ಸಾಧ್ಯವಾಗದು. ಪ್ರತಿಕೂಲ ಸಂದರ್ಭವನ್ನು ಸರಿಯಾಗಿ ನಿಭಾಯಿಸುವಿರಿ. ತೊಂದರೆಗಳು ಬರುವುದು ನಿಲ್ಲುವುದು. ಇರುವುದನ್ನು ಸರಿ ಮಾಡಿಕೊಳ್ಳುವ ಜವಾಬ್ದಾರಿಯು ನಿಮ್ಮ ಮೇಲಿದೆ. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ. ಕಾರ್ಯವನ್ನು ಹಾಳುಮಾಡಲು ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಬಹುದು.
ಕುಂಭ ರಾಶಿ :ಸುಮ್ಮನೇ ಇಂದು ಯಾರದೋ ಮೇಲೆ ದ್ವೇಷವನ್ನು ಸಾಧಿಸುತ್ತ ಇರುವುದು ಬೇಡ. ಮನಸ್ಸು ಕೆಡುವುದು ಬಿಟ್ಟರೆ ಮತ್ತೇನೂ ಆಗದು. ಯಾರ ಮಾತನ್ನೂ ಕೇಳದೇ ಹಣ ಹೂಡಿಕೆ ಮಾಡಿ ಕಳೆದುಕಳ್ಳುವಿರಿ. ಸಂಬಂಧಗಳು ಹದ ತಪ್ಪಬಹುದು. ಇನ್ಮೊಬ್ಬರಿಗೆ ಕೊಡುವ ಹಿಂಸೆಯಿಂದ ಸುಖಪಡುವಿರಿ. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಗೆ ಸಿಕ್ಕಿಕೊಳ್ಳಬಹುದು. ಮಾನಸಿಕವಾಗಿ ಹಿಂಜರಿಕೆ ಇರಲಿದೆ. ಆಪ್ತರ ಮಾತು ನಿಮ್ಮನ್ನು ಚೇತರಿಸಿಕೊಳ್ಳಲು ಸಹಾಯ ಮಾಡಬಹುದು. ಚಟಗಳಿಂದ ಒಂದಿಷ್ಟು ಸಮಯ ಹಾಗೂ ಹಣವನ್ನು ವ್ಯರ್ಥ ಮಾಡಿಕೊಳ್ಳಲಿದ್ದೀರಿ. ಭವಿಷ್ಯದ ಕುರಿತು ಆಲೋಚಿಸುವುದು ಉತ್ತಮ. ಉತ್ತಮವಾದುದನ್ನು ಪಡೆಯಲು ಪ್ರಯತ್ನಿಸಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ನಿಮ್ಮ ಬಗೆಗಿನ ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ.
ಮೀನ ರಾಶಿ :ನೀವು ಬೇಕಾಗಿರುವುದನ್ನು ಮಾಡುವುದಕ್ಕಿಂತ ಬೇರೆಯದನ್ನೇ ಮಾಡುವಿರಿ. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಸರಿಯಾದ ಕೆಲಸವನ್ನು ಕೊಡಿ. ಸಂಗಾತಿಯ ಜೊತೆ ಸ್ವಲ್ಪ ಕಾಲ ಕಳೆಯಿರಿ. ಆತ್ಮವಿಶ್ವಾಸವನ್ನು ಬೆಳಸಿಕೊಂಡ ನಿಮಗೆ ಸದಾ ಸಂತೋಷವು ಇರಲಿದೆ. ಮನೋರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಮಕ್ಕಳ ಮೇಲೆ ಸಿಟ್ಟಾದಂತೆ ನಟಿಸಿ ಅವರನ್ನು ನಿಯಂತ್ರಿಸುವಿರಿ. ನಿಮ್ಮ ಇಷ್ಟ ಮಿತ್ರರ ಜೊತೆ ಮಾತಕತೆ ನಡೆಸುವಿರಿ. ಸ್ನೇಹಿತರ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಲು ಬಯಸುವಿರಿ. ಎಲ್ಲದರ ಬಗ್ಗೆಯೂ ಋಣಾತ್ಮಕ ಭಾವವನ್ನು ಇಟ್ಟುಕೊಂಡು ಕೊರಗುವುದು ನಿರ್ಥಕ. ವ್ಯವಹಾರದಲ್ಲಿ ಅಷ್ಟಾಗಿ ತೊಡಗಿಕೊಳ್ಳುವ ಮನಸ್ಸಿರದು. ಬಂಧುಗಳ ಭೇಟಿಯು ಖುಷಿ ಕೊಡಬಹುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ. ಎಲ್ಲವನ್ನೂ ಏಕಕಾಲಕ್ಕೆ ಸರಿ ಮಾಡಲು ಆಗದು.
-ಲೋಹಿತ ಹೆಬ್ಬಾರ್-8762924271 (what’s app only)