Horoscope: ದಿನಭವಿಷ್ಯ; ಈ ರಾಶಿಯವರು ಇಂದು ಯಾವುದಾದರೂ ಪ್ರಮುಖ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿಶ್ಚಿಂತರಾಗಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮಾರ್ಚ್ 31 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ; ಈ ರಾಶಿಯವರು ಇಂದು ಯಾವುದಾದರೂ ಪ್ರಮುಖ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿಶ್ಚಿಂತರಾಗಿ
ರಾಶಿಭವಿಷ್ಯ
Follow us
|

Updated on: Mar 31, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಮಾರ್ಚ್​​​​​ 31) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ಉತ್ತರಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಸಾಧ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 29 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಸಂಜೆ 05:12 ರಿಂದ 06:44ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:37 ರಿಂದ 02:08ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:40 ರಿಂದ 05:12ರ ವರೆಗೆ.

ಸಿಂಹ ರಾಶಿ: ನಿಮಗೆ ಇಂದು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಕಾಡಬಹುದು. ಇದಕ್ಕಾಗಿ ತಂದೆ ಮಕ್ಕಳ‌ ನಡುವೆ ಕಲಹವಾಗುವ ಸಾಧ್ಯತೆ ಇದೆ. ತಾಯಿಯ ಜೊತೆ ಭಾವನಾತ್ಮಕ ಮಾತುಗಳನ್ನು ಆಡುವಿರಿ. ನಿಮ್ಮ ವಿರೋಧಿಗಳು ನಿಮ್ಮ ಸಾಹಸವನ್ನು ಮೆಚ್ಚಬಹುದು. ನೀವು ಇಂದು ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಬೇಕು ಎಂದುಕೊಂಡವರು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು, ಅವರ ಸಾಧನೆಗಾಗಿ ಸಮ್ಮಾನಿಸಬಹುದು. ಸಿಕ್ಕ ಯಶಸ್ಸನ್ನು ಲಾಭವಾಗಿಸಿಕೊಳ್ಳುವಿರಿ. ಸಂಗಾತಿಯ ಪ್ರೀತಿಯು ನಿಮಗೆ ಅಚ್ಚರಿಯನ್ನು ಉಂಟುಮಾಡೀತು. ತೆಗಳಿಕೆಗಳನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ. ಬಂಧುಗಳ ಚರಾಸ್ತಿಯು ಸಿಗಬಹುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳ ಸಂಖ್ಯೆ ಹೆಚ್ಚಾಗುವುದು.‌ ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ನೆನಪಿಸಿಕೊಳ್ಳುವಿರಿ.

ಕನ್ಯಾ ರಾಶಿ: ನಿಮ್ಮಿಂದ ತೀರಿಸಲಾಗದಷ್ಟು ಸಾಲದ ಬಗ್ಗೆ ಆಸಕ್ತಿ ಬೇಡ. ಪೂರ್ಣ ವಿಶ್ವಾಸವಿದ್ದಾಗ ಮಾತ್ರ ಪಾಲುದಾರಿಕೆಯಲ್ಲಿ ಕೈಜೋಡಿಸಿ. ಇಲ್ಲವಾದರೆ ಭವಿಷ್ಯದಲ್ಲಿ ಕಷ್ಟವಾಗುವುದು. ಅನುಮಾನದಿಂದಲೇ‌ ಬದುಕಬೇಕಾಗುವುದು. ಈ ದಿನದ ಆರಂಭವು ನಿಮಗೆ ನಕಾರತ್ಮಕ ಮಾತಿನಿಂದ ಆರಂಭವಾಗಬಹುದು. ಇಂದು ಯಾವುದಾದರೂ ಪ್ರಮುಖ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಂಡು ನಿಶ್ಚಿಂತರಾಗಿ. ನಿಮ್ಮಿಂದ‌ ಕುಟುಂಬಕ್ಕೆ ಯಾವುದೇ ಸಲಹೆಯು ಇಲ್ಲದಂತೆ ಅನ್ನಿಸಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಬಂಧುಗಳ ಜೊತೆ ಆತ್ಮೀಯ ಒಡನಾಟ ಮಾಡುವಿರಿ. ಇನ್ನೊಬ್ಬರ ಅಹಂಕಾರಕ್ಕೆ ಸೊಪ್ಪು ಹಾಕುವುದು ಬೇಡ. ನಿರ್ಲಕ್ಷ್ಯದಿಂದ ಎಲ್ಲವೂ ಸಾಧ್ಯ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ. ಮಿತ್ರರನ್ನು ಅನುಮಾನದಿಂದ ಕಾಣಬೇಕಾಗುವುದು.

ತುಲಾ ರಾಶಿ: ನಿಮ್ಮ ಇಂದಿನ ನಡೆಯಲ್ಲಿ ಒಂದೊಂದು ಅಭಿಪ್ರಾಯವು ಒಬ್ಬೊಬ್ಬರಿಂದ ಬರುವುದು. ಹೊಸ ಪ್ರೇಮವು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ನೀವು ಯಾರ ಅಸಹಕಾರವನ್ನೂ ಗಂಭೀರವಾಗಿ ಪರಿಗಣಸದೇ ನಿಮ್ಮಷ್ಟಕ್ಕೆ ನೀವು ಕಾರ್ಯವನ್ನು ಮುಂದುವರಿಸುವಿರಿ. ನಿಮ್ಮ ಇಚ್ಛೆಯನ್ನು ಅನ್ಯರ ಮೂಲಕ ಪೂರ್ಣ ಮಾಡಿಕೊಳ್ಳುವಿರಿ. ರಂಗಭೂಮಿಗೆ ಸಂಬಂಧಿಸಿದ ಕೆಲವು ಪ್ರಮುಖ ಅವಕಾಶಗಳು ಆಸಕ್ತರಿಗೆ ಸಿಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಲಾವಿದರ ಜೊತೆ ನಿಮ್ಮ ನಂಟು ಬೆಳೆಯಬಹುದು. ನಿದ್ರೆಯಿಲ್ಲದೇ ಚಿಂತೆ ಆರಂಭವಾಗುವುದು. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ಸುಮ್ಮನೇ ಬೇಡದ ವಿಚಾರದ ಬಗ್ಗೆ ಚರ್ಚಿಸಿ ಸಮಯವನ್ನು ಹಾಳು ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಒಳ್ಳೆಯದಲ್ಲ. ಹಿತಶತ್ರುಗಳ ಬಗ್ಗೆ ಎಚ್ಚರಿಕೆ ಅವಶ್ಯಕ. ರಾಜಕೀಯದಲ್ಲಿ ಆದ ಬದಲಾವಣೆಯು ನಮಗೆ ಹಿಡಿಸದೇಹೋಗಬಹುದು. ಸಿಟ್ಟಿನಿಂದ ಏನನ್ನಾದರೂ ಮಾತನಾಡುವುದು ಬೇಡ. ಇಂದು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯವಾಗಿರುವುದು. ನಿಮ್ಮ ಆದಾಯದ ಮೂಲಗಳಿಂದ ಆದಾಯವು ಕಡಿಮೆಯಾಗಬಹುದು. ಆತುರದಲ್ಲಿ ಯಾವುದೇ ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡುವುದು ಬೇಡ. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಸಂತಾನದ ಬಗ್ಗೆ ನಿಮಗೆ ಅತಿಯಾದ ಆಸೆಯಾಗುವುದು. ಆಪ್ತರ ವಿಯೋಗವು ನಿಮ್ಮನ್ನು ಕುಗ್ಗಿಸಬಹುದು. ಅಧಿಕ ಖರ್ಚಿನಂತೆ ಕಾಣುವ ವ್ಯವಹಾರವನ್ನು ನೀವು ಬಿಡುವಿರಿ. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಕಳೆದ ವಸ್ತುವನ್ನು ಯಾರದೋ ಮೂಲಕ ಪಡೆದುಕೊಳ್ಳುವಿರಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!