
ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಕೃಷ್ಣ ಪಕ್ಷದ ದ್ವಾದಶೀ ತಿಥಿ ಮಂಗಳವಾರ ಅಪೂರ್ಣ ಕಾರ್ಯ, ಪ್ರೇಮದಲ್ಲಿ ಬೇಸರ, ಖರ್ಚಿಗೆ ಅಡ್ಡಗಾಲು, ಸಾಲಕ್ಕೆ ಒತ್ತಾಯ, ಆಯತಪ್ಪಿ ಬೀಳುವುದು, ಉದ್ವೇಗದಲ್ಲಿ ವಾಗ್ವಾದ, ಇಷ್ಟವಿಲ್ಲದ ಮಾತುಕತೆ, ಹೂಡಿಕೆ ಪರಿಶೀಲನೆ ಇವೆಲ್ಲ ಇಂದಿನ ವಿಶೇಷ.
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ವೃಶ್ಚಿಕ, ಮಹಾನಕ್ಷತ್ರ : ಜ್ಯೇಷ್ಠಾ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ – 06 – 35 am, ಸೂರ್ಯಾಸ್ತ – 05 – 56 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:05 – 16:30, ಯಮಗಂಡ ಕಾಲ 09:25 – 10:50, ಗುಳಿಕ ಕಾಲ 12:15 – 13:40
ಅಂತರಂಗದ ಧ್ವನಿಯನ್ನು ಆಲಿಸುವ ಮನಃಸ್ಥಿತಿ ಇದ್ದರೆ ಅದೇ ಇಂದು ದಾರಿ ತೋರಿಸುತ್ತದೆ. ಕನಸು ಅಥವಾ ಯಾವುದಾದರೂ ಸಂಕೇತ ಅರ್ಥಪೂರ್ಣಗಿರುವುದು. ಮಕ್ಕಳ ಭವಿಷ್ಯಕ್ಕೆ ಸಂಪತ್ತು ಮಾಡುವ ಯೋಚನೆ ಬರುವುದು. ಸಾಮಾಜಿಕ ಕಾರ್ಯಗಳಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರುವುದು. ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬಬೇಕು ಎಂಬುದು ಗೊತ್ತಾಗದು. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ ಇರುವುದು. ಅತೃಪ್ತಿಕರ ದಿನವಾಗಿರಲಿದೆ. ಪತ್ನಿಯ ಅನವಶ್ಯಕ ಖರ್ಚಿಗೆ ಕಡಿವಾಣವನ್ನು ಹಾಕಬೇಕಾದೀತು. ಇದಕ್ಕಾಗಿ ಕೂಗಾಡಿಕೊಳ್ಳಬಹುದು. ಮಕ್ಕಳ ಬಗ್ಗೆ ನಿಮ್ಮ ಲಕ್ಷ್ಯವು ಇರಲಿ. ನಿಮ್ಮ ಇಂದಿನ ಕೆಲಸಗಳನ್ನು ಬಾಕಿ ಉಳಿಸಿಕೊಳ್ಳಬೇಡಿ. ಒತ್ತಡವು ಹೆಚ್ಚಾದೀತು. ಅಧ್ಯಾತ್ಮ, ಅಥವಾ ಅಂತಹ ಕಲೆಯಲ್ಲಿ ಮನಸ್ಸು ನೆಲೆಯೂರುತ್ತದೆ. ಖರ್ಚಿನಲ್ಲಿ ಸಂಯಮವನ್ನು ಅತಿ ಕಷ್ಟದಿಂದ ತಂದುಕೊಳ್ಳುವಿರಿ. ದಿನಾಂತ್ಯದೊಂದಿಗೆ ಮೃದುತನ ಮುಕ್ತಾಯ. ಉದ್ಯಮಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಬ್ಬರೇ ತೆಗೆದುಕೊಳ್ಳುವಿರಿ. ಹಳೆಯ ದೈಹಿಕ ಸಮಸ್ಯೆಯು ಪುನಃ ಕಾಣಿಸಿಕೊಳ್ಳುವುದು. ಉದ್ಯೋಗಸ್ಥ ಸ್ತ್ರೀಯರಿಗೆ ಸಮಾಧಾನವಿರದು.
ವಿಚಿತ್ರ ಆಲೋಚನೆ ಪ್ರಾಯೋಗಿಕವಾಗುತ್ತದೆ. ಸ್ನೇಹದಿಂದ ಲಾಭ. ತಂತ್ರಜ್ಞಾನ, ಹೊಸ ವಿಧಾನ ಅನುಕೂಲ. ಹಿರಿಯರ ಮೇಲಿನ ಪ್ರೀತಿಯಿಂದ ನೀವು ಸೇವೆ ಮಾಡುವಿರಿ. ನಿಮ್ಮ ಸ್ಥಾನದ ರಕ್ಷಣೆಗಾಗಿ ಇನ್ನೊಬ್ಬರ ಮೇಲೆ ಆರೋಪವನ್ನು ಮಾಡುವಿರಿ. ನಿಮ್ಮ ಸ್ಥಾನವನ್ನು ಕಾಪಾಡಿಕೊಳ್ಳಲು ಬೇರೆಯವರ ಮೇಲೆ ಗೂಬೆ ಕೂರಿಸುವಿರಿ. ಸಣ್ಣ ಕೆಲಸಗಳನ್ನು ಮಾಡಲು ನೀವು ಇಷ್ಟಪಡುವುದಿಲ್ಲ. ನಿಮ್ಮ ಸಂಕಟಕ್ಕೆ ಸ್ಪಂದಿಸಿದವರನ್ನು ಇಷ್ಟಪಡುವಿರಿ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಏಕಾಗ್ರತೆಯು ಇಲ್ಲವಾಗಬಹುದು. ನಕಾರಾತ್ಮಕ ಚಿಂತನೆಯನ್ನು ಕಡಿಮೆ ಮಾಡಿಕೊಳ್ಳಿ. ನೀವೇ ಆಯ್ಕೆ ಮಾಡಿಕೊಂಡ ಕೆಲಸದಲ್ಲಿ ಆಸಕ್ತಿಯು ಕಡಿಮೆ ಇರುವುದು. ಸ್ವಾತಂತ್ರ್ಯದ ಬಯಕೆ ಹೆಚ್ಚಾಗುತ್ತದೆ. ಆಪ್ತರ ಜೊತೆ ಸಂಜೆಯ ವೇಳೆ ಸಮಾಲೋಚನೆ ಮಾಡುವಿರಿ. ನಿಮ್ಮ ನಿರ್ಧಾರಗಳು ಬಲವಾದಂತೆ ಕಾರ್ಯಗಳಲ್ಲಿಯೂ ದೃಢತೆ ಇರಲಿ. ಸಿಕ್ಕ ಅಧಿಕಾರವನ್ನು ಸದುಪಯೋಗಪಡಿಸಿಕೊಳ್ಳುವಿರಿ. ಮುಂದಾಲೋಚನೆಗೂ ಸ್ವಲ್ಪ ಮಿತಿ ಇರಲಿ. ಉದ್ಯಮವು ಸಕ್ರಿಯವಾಗಿದ್ದು ವಿಸ್ತರಿಸುವ ಯೋಚನೆ ಮಾಡುವಿರಿ.
ಕರ್ತವ್ಯಭಾವನೆ ಇಂದು ಮುಂಚೂಣಿಗೆ ಬರುತ್ತದೆ. ಕೆಲಸದ ಒತ್ತಡ ಇದ್ದರೂ ಫಲದಲ್ಲಿ ಸ್ಪಷ್ಟತೆ ಸಿಕ್ಕಿರುತ್ತದೆ. ಹಣಕಾಸಿನಲ್ಲಿ ಸ್ಥಿರತೆ. ಹಣಕಾಸಿನ ವ್ಯವಹಾರದಿಂದ ನಿಮಗೆ ಅಪವಾದವು ಬರಬಹುದು. ತಮ್ಮ ಉದ್ಯಮವನ್ನು ಪ್ರಭಾವೀ ವ್ಯಕ್ತಿಗಳ ಸಹಾಯದಿಂದ ಜನಪ್ರಿಯ ಗೊಳಿಸಿಕೊಳ್ಳುವರು. ಎಲ್ಲವನ್ನೂ ನೀವೇ ಮಾಡಬೇಕು ಎನ್ನುವ ಮಾನಸಿಕತೆ ಬೇಡ. ಒಂಟಿತನವು ಇಷ್ಟವಾಗುವುದು. ಆರ್ಥಿಕ ವ್ಯವಹಾರದಲ್ಲಿ ನಿಮಗೆ ಕೆಲವು ಮಾತುಗಳು ಬರಬಹುದು. ಹಗುರವಾದ ಮಾತುಗಳಿಗೆ ಉತ್ತರಕೊಡುವುದು ಬೇಡ. ಕುಟುಂಬದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಗೌಪ್ಯವಾಗಿ ಇರುವುದು. ಸಿಟ್ಟನ್ನು ಯಾರದೋ ಮೇಲೆ ತೀರಿಸಿಕೊಂಡು ಸಮಾಧಾನಪಡುವಿರಿ. ಕುಟುಂಬದ ಜವಾಬ್ದಾರಿ ಮನಸ್ಸಿಗೆ ಭಾರವಾದರೂ ತೃಪ್ತಿ ಕೊಡುತ್ತದೆ. ಹಿತಶತ್ರುಗಳನ್ನು ಅವರಿಗೆ ಗೊತ್ತಾಗದಂತೆ ದೂರವಿರಿಸಿ. ಪಾಲುದಾರಿಕೆಯ ವ್ಯವಹಾರವು ನಿಮಗೆ ಸಾಕೆನಿಸುವುದು. ಬಿಟ್ಟು ಹೋದ ಪ್ರೇಮದ ಬಗ್ಗೆಯೇ ಹೆಚ್ಚು ಆಲೋಚನೆ ಮಾಡುತ್ತ ಇರುವಿರಿ. ಶತ್ರುಗಳಿಗೆ ತಿರುಗೇಟು ನೀಡಲು ಸಮಯ ಕಾಯುವಿರಿ.
ಹೊಸ ದಾರಿ ಕಾಣಿಸಿಕೊಳ್ಳುತ್ತದೆ. ಅಧ್ಯಯನ, ಪ್ರಯಾಣ, ತತ್ತ್ವಚಿಂತನೆಗೆ ಶುಭ. ಗುರುಸಮಾನ ವ್ಯಕ್ತಿಯಿಂದ ಸೂಚನೆ. ಹಳೆಯ ಪ್ರೀತಿಯಿಂದ ನಿಮಗೆ ಕಷ್ಟವಾದೀತು. ನೀವು ಅಂದುಕೊಂಡ ಕೆಲಸವು ಆಗದೇಹೋದೀತು. ಗೌರವಾದಿಗಳು ಸಿಕ್ಕಿ ಸಂತೋಪಡುವಿರಿ. ನೀವು ಅಂದುಕೊಂಡ ಹಾಗೆಯೇ ನಡೆಯದು. ನಿಮ್ಮ ಚರ ಹಾಗೂ ಸ್ಥಿರಾಸ್ತಿಗಳ ದಾಖಲೆಗಳನ್ನು ಜೋಪಾನವಾಗಿ ಇರಿಕೊಳ್ಳಿ. ಧಾರ್ಮಿಕ ಆಚರಣೆಗಳನ್ನು ಹೆಚ್ಚು ಮಾಡಲು ಮನಸ್ಸಾಗುವುದು. ನಿಮ್ಮ ವಾಹನವನ್ನು ಚಲಾಯಿಸಲು ಕಷ್ಟವಾದೀತು. ಹಿರಿಯರ ಮಾತನ್ನು ಧಿಕ್ಕರಿಸಿ ಹೋಗಲಾರಿರಿ. ನಿಮ್ಮವರು ನಿಮ್ಮ ದೋಷವನ್ನೇ ಹೆಚ್ಚು ಹೇಳುವರು. ಸಾಹಿತ್ಯಸಲ್ಲಿ ಆಸಕ್ತಿ ಇರುವವರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವರು. ಉತ್ಸಾಹ ಹೆಚ್ಚಾದರೂ ವಾಸ್ತವ ನೆಲೆಗೆ ಮರೆಯಬೇಡಿ. ಎಲ್ಲವನ್ನೂ ಬಾಹುಬಲದಿಂದ ಸಾಧಿಸುತ್ತೇನೆ ಎಂಬ ಹುಂಬುತನ ಬೇಡ. ಬುದ್ಧಿಯನ್ನು ಬಳಸಿ ಕೆಲಸವನ್ನು ಸರಳ ಮಾಡಿಕೊಳ್ಳಿ. ಇನ್ನೊಬ್ಬರ ಮೇಲಿನ ಅಸಮಾಧಾನವನ್ನು ನೀವು ಇಂದು ಅವರೆದುರು ಹೇಳುವಿರಿ.
ಆಳವಾದ ಆಲೋಚನೆಗಳು ಇಂದು ಪರಿಹಾರ ತರುತ್ತವೆ. ಗುಪ್ತ ವಿಷಯದಲ್ಲಿ ಎಚ್ಚರ. ಹೂಡಿಕೆಯಲ್ಲಿ ಆತುರ ಬೇಡ. ವಿನ್ಯಾಸದ ಜವಾಬ್ದಾರಿಯ ನಿಮ್ಮ ಹೆಗಲಿಗೆ ಬರುವುದು. ಮನೆ ಹಾಗೂ ಕಛೇರಿಯ ಎಲ್ಲ ಕಡೆಯಿಂದ ಒತ್ತಡವು ಇರಲಿದೆ. ಸಂಗಾತಿಯು ನಿಮಗೆ ಬೇಸರವಾಗಬೇಕೆಂದೇ ಮಾತನಾಡಬಹುದು. ಸ್ವಂತ ಉದ್ಯಮವನ್ನು ನಡೆಸುತ್ತಿದ್ದರೆ ನೌಕರರು ಹಾಗೂ ಅಧಿಕಾರಿಗಳ ನಡುವೆ ವೈಮನಸ್ಸು ಉಂಟಾಗಬಹುದು. ಕೆಲವು ಸಂದರ್ಭದಲ್ಲಿ ಎಲ್ಲವೂ ಗೊತ್ತಿದೆ ಎಂದು ತೋರಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ಆಪ್ತರ ಜೊತೆಗಿನ ಬಿಚ್ಚು ಮನಸ್ಸಿನ ಮಾತುಕತೆಯಿಂದ ನಿಮ್ಮ ಭಾರವಾದ ಮನಸ್ಸು ಹಗುರಾಗುವುದು. ನೀವು ಇಂದು ಸಿಟ್ಟು ಮಾಡಿಕೊಳ್ಳಬಹುದಾದ ಸನ್ನಿವೇಶಗಳು ಬಾರದು. ಮನಸ್ಸಿನ ಭಾರ ಕಡಿಮೆ ಮಾಡಲು ಏಕಾಂತದ ಮೌನ ಸಹಾಯಕ. ಒಳಗಿನ ಬಲವನ್ನು ಹೆಚ್ಚು ಮಾಡಿಕೊಳ್ಳಿ. ಮನೆಯ ಮಂಗಳಕಾರ್ಯಕ್ಕೆ ಆಸ್ಪದ ಕೊಡುವಿರಿ. ಇಂದು ಸ್ತ್ರೀಯಿಂದ ಸುಖವನ್ನು ಅನುಭವಿಸುವಿರಿ. ಯಾರಿಗೂ ಹೇಳದೇ ಎಲ್ಲಿಗಾದರೂ ಹೋಗಿ ಸುತ್ತಾಡಿ ಬರುವಿರಿ.
ಸಮತೋಲನ ಕಾಯುವ ಪ್ರಯತ್ನ ಫಲ ಕೊಡುತ್ತದೆ. ಸಂಬಂಧಗಳಲ್ಲಿ ಸ್ಪಷ್ಟ ಮಾತು ಅಗತ್ಯ. ಆರ್ಥಿಕ ತೊಂದರೆಯನ್ನು ನೀವು ಸಲೀಸಾಗಿ ಸರಿಮಾಡಿಕೊಳ್ಳುವಿರಿ. ಸಮಯ ಹಾಗೂ ಸಂದರ್ಭಗಳನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳ ಜೊತೆ ಹಂಚಿಕೊಳ್ಳಿ. ನಿಮ್ಮ ಬಳಕೆಯಾಗದ ಭೂಮಿಯಿಂದ ಮಾರಾಟ ಮಾಡಿ ಆದಾಯವನ್ನು ಪಡೆಯುವಿರಿ. ಹೂಡಿಕೆಯ ಕಡೆ ಅಧಿಕ ಆಲೋಚನೆ ಮಾಡುವಿರಿ. ಗೌಪ್ಯವಾಗಿ ನಿಮಗೆ ಹಣವು ಸಿಗಲಿದೆ. ಆರಂಭದ ಆಸಕ್ತಿ ಹೋಗುತ್ತ ಕಡಿಮೆಯಾಗಬಹುದು. ಸಮಯವನ್ನು ನೋಡಿ ನಿಮ್ಮ ವಿಚಾರವನ್ನು ಮೇಲಧಿಕಾರಿಗಳಿಗೆ ಹೇಳಿ. ಹಣಕಾಸಿನಲ್ಲಿ ಸಮಾಧಾನಕರ ಸ್ಥಿತಿ. ಕಲಾತ್ಮಕ ಚಟುವಟಿಕೆ ಮನಸ್ಸಿಗೆ ಹಗುರತನ ನೀಡುತ್ತದೆ. ಮನೆಯಲ್ಲಿ ಇದ್ದು ಕೆಲಸ ಮಾಡುವವರಿಗೆ ಬಂಧನದಂತೆ ಅನ್ನಿಸಬಹುದು. ದಾನದಿಂದ ನಿಮಗೆ ಹಲವರಿಂದ ಪ್ರಶಂಸೆಯು ಸಿಗುವುದು. ಆಭರಣಗಳನ್ನು ಖರೀದಿಸುವ ಇಚ್ಛೆ ಇದ್ದರೆ ಖರೀದಿಸಬಹುದು. ನಿಮ್ಮ ವಿವಾಹದ ಮಾತುಕತೆಯಿಂದ ನಿಮಗೆ ಖುಷಿ ಸಿಗುವುದು.
ಸೇವೆ ಅಥವಾ ಸಹಾಯದಿಂದ ಮನಸ್ಸು ತುಂಬುತ್ತದೆ. ಒಂದು ಸರಳ ನಿರ್ಧಾರ ಭಾರ ಕಡಿಮೆ ಮಾಡುತ್ತದೆ. ಅಪರಿಚಿತ ಕರೆಗಳಿಂದ ನಿಮಗೆ ಭಯವಾಗಬಹುದು. ನಿಮಗೆ ನಿರೀಕ್ಷಿತ ಉದ್ಯೋಗವು ಸಿಗದೇ ಇರುವುದು ನಿಮ್ಮನ್ನು ಖಿನ್ನಗೊಳಿಸೀತು. ನಿಮಗೆ ನಿರೀಕ್ಷಿತ ಉದ್ಯೋಗವು ಸಿಕ್ಕುವ ಸೂಚನೆ ಬರಲಿದೆ. ಬಂಧುಗಳ ವಂಚನೆಯೇ ನಿಮ್ಮ ತಲೆಯನ್ನು ಸುತ್ತಬಹುದು. ಸಾಲವು ಮುಗಿಯುತು ಎಂದುಕೊಳ್ಳುತ್ತಿದ್ದಂತೆ ಇನ್ನೊಂದು ಆರಂಭವಾಗಬಹುದು. ಬಂಧುಗಳಿಂದ ನೀವು ನಿರ್ಲಕ್ಷ್ಯಕ್ಕೆ ಒಳಗಾಗುವಿರಿ. ದಾಂಪತ್ಯದಲ್ಲಿ ನೀವು ಸುಖವನ್ನು ಕಾಣುವಿರಿ. ಹೊಸ ಕಾರ್ಯಗಳನ್ನು ಒಮ್ಮೆಲೇ ಆರಂಭಿಸುವುದು ಬೇಡ. ವಿವರಗಳ ಮೇಲೆ ಗಮನ ಇಂದು ಯಶಸ್ಸಿನ ಕೀಲಿ. ಆರೋಗ್ಯದ ಕಡೆ ಸ್ವಲ್ಪ ಕಾಳಜಿ ಅಗತ್ಯ. ಇಷ್ಟು ದಿನ ನಿರ್ವಹಿಸುತ್ತಿದ್ದ ಜವಾಬ್ದಾರಿಗಳನ್ನು ಇಂದು ನಿರ್ವಹಿಸಲು ಕಷ್ಟವಾದೀತು. ಬಂಧುಗಳ ಕಡೆಯಿಂದ ನಿಮಗೆ ಅಶುಭ ಸುದ್ದಿಯು ಬರಬಹುದು. ನಿಮಗೆ ಬೇಕಾದ ವಸ್ತುವೊಂದನ್ನು ನೀವು ಕಳೆದುಕೊಳ್ಳುವಿರಿ. ಕಾರ್ಯದಲ್ಲಿ ಎಲ್ಲಿಯೂ ತಪ್ಪಾಗದಂತೆ ನೋಡಿಕೊಳ್ಳಿ.
ಗೌರವ ಸ್ವತಃ ನಿಮ್ಮತ್ತ ಬರುತ್ತದೆ. ಪ್ರದರ್ಶನದ ಮತಿಗಿಂತ ಸ್ಥಿರತೆ ಮುಖ್ಯ. ಕೆಲಸದಲ್ಲಿ ಹಿರಿಯರಿಂದ ಗಮನ. ಮನೆಯ ಕಾರ್ಯಕ್ಕೆ ನಿಮ್ಮವರ ವಿರೋಧ ಬರಬಹುದು. ಇನ್ನೊಬ್ಬರಿಂದ ಪ್ರೇರಿತರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗುವಿರಿ. ಆರ್ಥಿಕತೆಯ ಮೇಲೆ ನಿಮಗೆ ಮೋಹವು ಕಡಿಮೆ ಆಗಬಹುದು. ಸಂತಾನಕ್ಕೆ ಸಂಬಂಧಿಸಿದಂತೆ ದಂಪತಿಗಳ ನಡುವೆ ಟೀಕೆಗಳು ನಡೆಯುವುದು. ದಣಿದು ಕಾರ್ಯವನ್ನು ಮಾಡುವುದು ಬೇಡ. ನಿಮ್ಮ ಇಷ್ಟದವರನ್ನು ಭೇಟಿಯಾಗಿ ಕೆಲವು ಸಮಯ ಸಂತೋಷದಿಂದ ಕಳೆಯುವಿರಿ. ಯಾರಂದಲೋ ಪ್ರೇರಿತರಾದ ನಿಮಗೆ ಸಾಮಾಜಿಕ ಕಾರ್ಯವು ಹಿಡಿಸುವುದು. ಸಂಪತ್ತಿನ ಮೇಲೆ ನಿಮಗೆ ಮೋಹವು ಕಡಿಮೆ ಇರುವುದು. ವಂಚಿಸಿದವರಿಗೆ ಪ್ರತಿವಂಚನೆಯನ್ನು ಮಾಡಲು ಸಮಯವನ್ನು ನಿರೀಕ್ಷಿಸುತ್ತಿರುವಿರಿ. ಅಹಂಕಾರ ತಪ್ಪಿಸಿದರೆ ಲಾಭ. ಒಂದು ಸಣ್ಣ ಪ್ರಶಂಸೆ ದಿನ ನಿಮ್ಮದಾಗಲಿದೆ. ಆಶಿಸ್ತಿನ ಕೆಲಸಕ್ಕೆ ಹಿರಿಯರು ನಿಂದಿಸಬಹುದು. ಅಪರಿಚಿತ ವ್ಯಕ್ತಿಗಳು ದೂರವಾಣಿಯ ಮೂಲಕ ಪದೆ ಪದೆ ಪೀಡಿಸಬಹುದು.
ಒಳ ಮನಸ್ಸು ಇಂದು ಸರಿಯಾದ ಮಾರ್ಗದರ್ಶಕವಾಗುತ್ತವೆ. ಮನೆ, ತಾಯಿ, ನೆನಪುಗಳು ಪ್ರಮುಖ. ಹಣಕಾಸಿನಲ್ಲಿ ಜಾಗ್ರತೆ ಮಾಡಿಕೊಳ್ಳಿ. ನಿಮ್ಮ ಕಾರ್ಯಕ್ಕೆ ಹೆಚ್ಚಿನ ವೇತನವು ಸಿಗಬಹುದು. ಅನಗತ್ಯ ಖರ್ಚನ್ನು ಮಾಡಬೇಕಾಗಬಹುದು. ನಿಮ್ಮ ಭಿನ್ನಾಭಿಪ್ರಾಯಗಳು ನಿಮ್ಮಲ್ಲಿ ಭಿನ್ನತೆ ಬಾರದಿರಲಿ. ನಿಮ್ಮ ಮಾತಿನಿಂದ ಇತರರಿಗೆ ನೋವಾಗುವುದು. ನೀವು ಅಶಿಸ್ತಿನ ಸ್ವಭಾವವನ್ನು ಬದಲಾಯಿಸಿಕೊಳ್ಳಬೇಕು. ವೇತನವನ್ನು ಹೆಚ್ಚಿಸಲು ಅಧಿಕಾರಿಗಳನ್ನು ಕೇಳಿಕೊಳ್ಳುವಿರಿ. ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲು ಒಂದು ಅವಕಾಶ ಸಿಗಲಿದೆ. ದೂರದ ಬಂಧುಗಳ ಭೇಟಿಯಿಂದ ನಿಮಗೆ ಸಂತೋಷವಾಗುವುದು. ಮನಸ್ಸಿಗೆ ಹಿತವಾದ ನಿರ್ಧಾರ ಕೈಗೊಳ್ಳುವ ದಿನ. ಇದು ರಾತ್ರಿ ನೆಮ್ಮದಿಯ ವಿಶ್ರಾಂತಿ ಕೊಡುತ್ತದೆ. ಶತ್ರುಗಳನ್ನು ತಿಳಿದುಕೊಳ್ಳುವ ಅಸಕ್ತಿಯು ಇರಲಿದೆ. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳುವಿರಿ. ಇಂದಿನ ನಿಮ್ಮ ಕಾರ್ಯಕ್ಕೆ ಸಮಯದ ಮಿತಿಯನ್ನು ಅವಶ್ಯಕ. ಅಹಂಕಾರದಿಂದ ಬೀಗುವುದು ಬೇಡ. ನಿಮ್ಮ ಸಮಾಧಾನದ ಚಿತ್ತವನ್ನು ಯಾರಾದರೂ ಕೆಡಿಸಬಹುದು.
ಮಾತಿನ ಶಕ್ತಿ ಇಂದು ಫಲ ಕೊಡುತ್ತದೆ. ಸಂದೇಶ, ಕರೆ, ಅಥವಾ ಬರವಣಿಗೆ ಮೂಲಕ ಅವಕಾಶ. ನಿಮ್ಮಿಂದ ಉಪಕಾರ ಪಡೆದವರು ಕೃತಜ್ಞತೆ ಸಲ್ಲಿಸಬಹುದು. ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಅಗತ್ಯ. ನ್ಯಾಯಾಲಯದ ವಿಚಾರವನ್ನು ಬೇಗ ಮುಗಿಸಿಕೊಳ್ಳಲು ಪ್ರಯತ್ನಿಸುವಿರಿ. ಭೋಗವಸ್ತುಗಳ ಖರೀದಿಯನ್ನು ಹೆಚ್ಚು ಮಾಡುವಿರಿ. ನಿಮ್ಮ ಉದ್ದೇಶವನ್ನು ಸಾಕಾರಗೊಳಿಸುವತ್ತ ಸಾಗುವಿರಿ. ನಿಮ್ಮ ಶಕ್ತಿಗೆ ಯೋಗ್ಯ ಕಾರ್ಯವನ್ನು ಮಾಡಿ. ನಿರ್ಮಾಣದ ಕಾರ್ಯಗಳು ಕುಂಟಿತವಾಗಬಹುದು. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡವು ಬಂದು ಮುತ್ತಿಕೊಂಡು ದಿಕ್ಕು ತೋಚದಂತೆ ಆಗುವುದು. ನಿಮ್ಮ ಮಾತಿನ ಹಾಸ್ಯವು ಇನ್ನೊಬ್ಬರಿಗೆ ಬೇಸರವಾಗುವುದು. ಏಕಾಗ್ರತೆ ಕೊರತೆಯಾಗಬಹುದು. ಕೆಲವರ ಜೊತೆ ನಡೆಸುವ ಅಚ್ಚರಿಯ ಸಂಭಾಷಣೆ ದಿಕ್ಕು ತೋರಿಸುತ್ತದೆ. ಸ್ಥಳದ ವ್ಯತ್ಯಾಸದಿಂದ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ. ಉದ್ಯೋಗದ ಕಾರಣ ಪ್ರಯಾಣ ಮಾಡುವ ಸನ್ನಿವೇಶವು ಬರಲಿದೆ. ನಿಷ್ಠುರ ಮಾತುಗಳನ್ನು ಆಡುವುದು ಬೇಡ.
ನಂಬಿಕೆ ಮತ್ತು ಸಹನೆ ಇಂದು ನಿಮ್ಮ ಆಭರಣ. ಹಣಕಾಸಿನ ವಿಚಾರದಲ್ಲಿ ನಿಧಾನವಾದರೂ ಸುರಕ್ಷಿತ ಹೆಜ್ಜೆ ಸೂಕ್ತ. ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು. ದೈವಭಕ್ತಿಯಿಂದ ನೀವು ನೆಮ್ಮದಿ ಕಾಣಲು ಸಾಧ್ಯ. ಇಂದು ಹೆಚ್ಚು ಮಾನಸಿಕ ಒತ್ತಡವು ಇರದಿದ್ದರೂ ಕೆಲಸವು ಬಹಳ ಇರಲಿದೆ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಲಿ. ಮನಸ್ಸಿನ ಚಾಂಚಲ್ಯವನ್ನು ನಿಲ್ಲಿಸಲಾಗದು. ದೂಷಪೂರಿತ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇಂದು ಹೆಚ್ಚು ಮಾನಸಿಕ ಒತ್ತಡವು ಇರದಿದ್ದರೂ ಅಧಿಕ ಕಾರ್ಯವು ಇರಲಿದೆ. ಇಷ್ಟವಿಲ್ಲದ ಕೆಲಸವನ್ನು ಮಾಡಲು ಯಾರು ಒತ್ತಾಯಿಸಿದರೂ ಮಾಡುವುದಿಲ್ಲ. ನಿಮ್ಮ ಸ್ವಭಾವವು ಕೆಲವರಿಗೆ ಇಷ್ಟವಾಗದೇ ಹೋಗುವುದು. ಕುಟುಂಬದ ಒಬ್ಬರ ಮಾತು ಆಲೋಚನೆ ಬದಲಿಸಬಹುದು. ದಿನಾಂತ್ಯದಲ್ಲಿ ನೆಮ್ಮದಿ ಅನುಭವ. ಯಾರ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ಸಾಗುವಿರಿ. ವೃತ್ತಿಯಲ್ಲಿ ಬದಲಾವಣೆ ಬೇಕು ಎನಿಸುವುದು. ಅಪರಿಚಿತರು ನಿಮಗೆ ಕೆಲವು ತೊಂದರೆಯನ್ನು ಕೊಡಬಹುದು.
ಇಂದು ನಿಮ್ಮೊಳಗಿನ ತೀರ್ಮಾನಶಕ್ತಿ ತೀಕ್ಷ್ಣವಾಗಿರುತ್ತದೆ. ಒಂದು ವಿಳಂಬವೇ ದೊಡ್ಡ ತಪ್ಪನ್ನು ತಪ್ಪಿಸಬಹುದು. ಉದ್ಯೋಗ ಬದಲಾವಣೆಯು ನಿಮಗೆ ಕಿರಿಕಿರಿ ಎನಿಸಬಹುದು. ನಿಮ್ಮ ಅನುಮಾನದ ಕಾರಣದಿಂದ ಸಂಗಾತಿಯನ್ನು ದ್ವೇಷಿಸುವಿರಿ. ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುವುದು. ಮಕ್ಕಳ ವಿಚಾರದಲ್ಲಿ ಮಾನಸಿಕ ಹಿಂಸೆಯು ಆಗಲಿದೆ. ಒಂದೇ ಕಾರ್ಯವನ್ನು ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವಿರಿ. ಕೆಲಸದಲ್ಲಿ ಧೈರ್ಯ ಬೇಕು, ಆದರೆ ಕೋಪ ಬೇಡ. ಸಂಜೆ ವೇಳೆಗೆ ಸಣ್ಣ ಜಯ ಮನಸ್ಸಿಗೆ ದೊಡ್ಡ ಉತ್ಸಾಹ ನೀಡುತ್ತದೆ. ದುರಭ್ಯಾಸಕ್ಕೆ ಅವಕಾಶಗಳು ಬರಲಿದ್ದು ಆಲೋಚಿಸಿ ಮುಂದುವರಿಯಿರಿ. ನಿಮ್ಮ ವರ್ತನೆಯನ್ನು ಕಂಡು ಯಾರಾದರೂ ನಕ್ಕಾರು. ನಿಮ್ಮ ವೇಷಭೂಷಣದ ಬಗ್ಗೆ ಟೀಕಿಸುವರು. ಯಾವುದನ್ನೂ ನೀವು ಮನಸ್ಸಿಗೆ ತೆಗೆದುಕೊಳ್ಳದೇ ನಿಶ್ಚಿಂತೆಯಿಂದ ಇರುವಿರಿ. ಆರ್ಥಿಕತೆಯನ್ನು ಬಲಪಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ.
-ಲೋಹಿತ ಹೆಬ್ಬಾರ್ – 8762924271 (what’s app only)