
ಸೂರ್ಯನು ಸದ್ಯ ಧನು ರಾಶಿಯ ಪೂರ್ವಾಷಾಢಾ ನಕ್ಷದಲ್ಲಿ ಇದ್ದು ಉತ್ತರಾಷಾಢಾ ನಕ್ಷತ್ರಕ್ಕೆ ಹೋಗುವನು. ಶುಕ್ರನ ಆಧಿಪತ್ಯದಿಂದ ತನ್ನ ಆಧಿಪತ್ಯಕ್ಕೆ ಹೋಗುವನು. ಉತ್ತಮ ಸ್ಥಿತಿಯಲ್ಲಿ ಇರುವ ಕಾರಣ ಫಲವೂ ಉತ್ತಮವಾಗಿರಲಿದೆ. ಸೂರ್ಯನು ಯಾವೆಲ್ಲ ರಾಶಿಗೆ ಶುಭವನ್ನು ಕೊಡುವನು ಎನ್ನುವುದನ್ನು ನೋಡಬಹುದು. ಮುಖ್ಯವಾಗಿ, ಆತ್ಮವಿಶ್ವಾಸ, ಆರೋಗ್ಯ, ಸರ್ಕಾರಿ ಕಾರ್ಯ, ಸಂಪತ್ತು, ತಂದೆಗೆ ಸಂಧಿಸಿದ ಕಾರ್ಯಗಳು ಅಗುವ ಕಾರಣ ಸೂರ್ಯಾನುಗ್ರಹ ಬೇಕಾಗುತ್ತದೆ. ಗುರುವಿನ ದೃಷ್ಟಿಯೂ ಇನ್ನಷ್ಟು ಪುಷ್ಟಿಯನ್ನು ನೀಡುತ್ತದೆ.
ಸರ್ಕಾರ ಅಥವಾ ಧಾರ್ಮಿಕ ಕ್ಷೇತ್ರದಲ್ಲಿ ಬೆಳವಣಿಗೆ. ಹಂತ ಹಂತವಾಗಿ ಆದಾಯ ಹೆಚ್ಚಳ. ಅತಿವ್ಯಯ ತಪ್ಪಿಸಿ
ಭೂಮಿ ಅಥವಾ ಮನೆ, ಕಚೇರಿ, ಜಾಗ ಖರೀದಿ ಮಾಡುವಿರಿ. ಆರೋಗ್ಯದಲ್ಲಿ ತೊಡೆ, ಸೊಂಟದ ಬಗ್ಗೆ ಜಾಗ್ರತೆ ಬೇಕು. ವಿದ್ಯಾಭ್ಯಾಸದಲ್ಲಿ ಹೊಸ ವಿಷಯಗಳಿಗೆ ಒತ್ತು, ಪರೀಕ್ಷೆಯಲ್ಲಿ ಯಶಸ್ಸು ಆತ್ಮವಿಶ್ವಾಸದಿಂದ ಧೈರ್ಯ, ನಿರ್ಧಾರದಲ್ಲಿ ಸ್ಪಷ್ಟತೆ ಸಿಗಕಿದೆ.
ಸಂಘಟನೆ, ಮಾರ್ಗದರ್ಶನ, ತರಬೇತಿಯ ಉದ್ಯೋಗದಿಂದ ಲಾಭ. ಹಣಕಾಸಿಗೆ ಸಂಬಂಧಿಸದಂತೆ ಆದಾಯದಲ್ಲಿ ಸ್ಥಿರತೆ. ಭೂಮಿಯ ದಾಖಲೆ ಪರಿಶೀಲನೆ ಅಗತ್ಯ, ಲಾಭವೂ ಸಾಧ್ಯ. ಆರೋಗ್ಯ ರಕ್ಷಣೆಗೆ ವ್ಯಾಯಾಮ, ಆಹಾರ ಸಮತೋಲನವಿರಲಿ.
ವಿದ್ಯಾಭ್ಯಾಸದಲ್ಲಿ ಹಳೆಯ ವಿಚಾರಗಳು ಗಟ್ಟಿಯಾಗಲಿದೆ. ಆತ್ಮವಿಶ್ವಾಸ ಬೆಳವಣಿಗೆಯಾಗಿ ನಿರ್ಧಾರದಲ್ಲಿ ಸ್ಪಷ್ಟತೆ, ಪ್ರಶಂಸೆ ಪ್ರಾಪ್ತಿ.
ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಅವಕಾಶ. ಹಣಕಾಸು ಸ್ಥಿರವಾಗುವ ಕಾರಣ ಮನಸ್ಸೂ ಸ್ಥಿರವಾಗಲಿದೆ. ಕೃಷಿ ಭೂಮಿ ಮತ್ತು ಮನೆ ಖರೀದಿಗೆ ಯಶಸ್ಸಿನ ಹೆಜ್ಜೆ.ಆರೋಗ್ಯದಲ್ಲಿ ಉಷ್ಣತೆ, ಸೊಂಟ, ಹೆಗಲು ನೋವಾಗಲಿದ್ದು ಜಾಗ್ರತೆ ಬೇಕು. ವಿದ್ಯಾಭ್ಯಾಸದಲ್ಲಿ ಪರೀಕ್ಷೆ ಫಲಕಾರಿಯಾಗಲಿದೆ.
ಆತ್ಮವಿಶ್ವಾಸವಿದ್ದರೆ ಸಾಮಾಜಿಕ ಗೌರವದಿಂದ ತೃಪ್ತಿ.
ಉದ್ಯೋಗದಲ್ಲಿ ನಾಯಕತ್ವ, ಹೊಣೆಗಾರಿಕೆಯನ್ನು ಯಶಸ್ವಿಯಾಗಿ ಪೂರ್ಣಮಾಡುವಿರಿ. ಹಣಕಾಸಿನಲ್ಲಿ ಹಂತ ಹಂತವಾಗಿ ವೃದ್ಧಿಯಿಂದ ನೆಮ್ಮದಿ ನಿಮ್ಮದು. ಚರಾಸ್ತಿಯ ಖರೀದಿಯನ್ನು ಮಾಡಲು ಒತ್ತಡ ಬರಲಿದೆ. ಆರೋಗ್ಯದಲ್ಲಿ ಉಷ್ಣತೆ, ರಕ್ತದೊತ್ತಡ ಅಧಿಕವಗಲಿದ್ದು, ಆಹಾರದ ಬಗ್ಗೆ ಜಾಗ್ರತೆ ಇರಲಿ. ವಿದ್ಯಾಭ್ಯಾಸದಲ್ಲಿ ಅಧ್ಯಯನ ಸುಸಂಪನ್ನವಗಲಿದೆ.
ಆತ್ಮವಿಶ್ವಾಸವಿದ್ದು ಧೈರ್ಯ, ಒತ್ತಡವಿಲ್ಲದೇ ಎಲ್ಲವನ್ನೂ ಸಾಧಿಸುವಿರಿ.
– ಲೋಹಿತ್ ಹೆಬ್ಬಾರ್