Daily Horoscope: ಮನಸ್ಸಿಲ್ಲದಿದ್ದರೂ ಸಂಗಾತಿಗಾಗಿ ಖರ್ಚು ಮಾಡಬೇಕಾಗುವುದು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 17, 2024 | 12:10 AM

17 ಡಿಸೆಂಬರ್​​ 2024: ಮಂಗಳವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ?ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಹಾಗಾದರೆ ಡಿಸೆಂಬರ್ 17ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಮನಸ್ಸಿಲ್ಲದಿದ್ದರೂ ಸಂಗಾತಿಗಾಗಿ ಖರ್ಚು ಮಾಡಬೇಕಾಗುವುದು
ಆಪ್ತರ ಮಧ್ಯೆ ವಾಗ್ವಾದ, ಸ್ಪರ್ಧಾತ್ಮಕ ವಿಚಾರಗಳಲ್ಲಿ ಸೋಲು
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದ್ವಿತೀಯಾ​​, ನಿತ್ಯನಕ್ಷತ್ರ: ಪುನರ್ವಸು, ಯೋಗ: ಬ್ರಹ್ಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:18 ರಿಂದ 06:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:41 ರಿಂದ 11:05 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 01:53 ರವರೆಗೆ.

ಮೇಷ ರಾಶಿ: ಮಹಾತ್ಮರ ಆಶೀರ್ವಾದ ನಿಮಗೆ ಅಕಸ್ಮಾತ್ ಸಿಕ್ಕಿ ಸಂತೋಷವಾಗುವುದು. ಇಂದು ಮನೆಯಿಂದ ದೂರವಿರಬೇಕಾದ ಸ್ಥಿತಿ ಬರುವುದು. ಪ್ರತಿಭಾವಂತರು ಜಾಣ್ಮೆಯಿಂದ ಹೆಸರು ಮಾಡುವರು. ನಿಮ್ಮ ಒತ್ತಡಗಳು ಎಂದಿಗಿಂತ ಕಡಿಮೆ ಇರಲಿದೆ. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವಂತೆ ನೋಡಿಕೊಳ್ಳುವಿರಿ. ಭೂಮಿಯ ಒಳಗೆ ಸಿಗುವ ವಸ್ತುಗಳಿಂದ ಲಾಭವನ್ನು ಪಡೆಯಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು. ಆಪ್ತರನ್ನು ಅನುಮಾನಿಸುವುದು ಬೇಡ. ನಿಮ್ಮ ಸಂಬಂಧಿಸದ ವಿಚಾರದಲ್ಲಿ ಮಧ್ಯಪ್ರವೇಶವನ್ನು ಮಾಡುವುದು ಬೇಡ. ನೂತನ ಗೃಹನಿರ್ಮಾಣವನ್ನು ಮಾಡಲು ಚಿಂತಿಸುವಿರಿ. ನಿಮಗೆ ಸಿಗಬೇಕಾದುದನ್ನು ಧೈರ್ಯದಿಂದ‌‌ ಕೇಳಿ ಪಡೆದುಕೊಳ್ಳಿ. ಯಾರಾದರೂ ಸಂಗಾತಿಯ ಬಗ್ಗೆ ಕಿವಿಚುಚ್ಚಬಹುದು. ಪಿತ್ರಾರ್ಜಿತ ಆಸ್ತಿಯನ್ನು ಸಹೋದರನಿಗೆ ನೀಡಿ ಮನೆಯಿಂದ ದೂರ ಇರುವಿರಿ.

ವೃಷಭ ರಾಶಿ: ಅನುಪಸ್ಥಿತಿಯಲ್ಲಿ ಆದ ಕಾರ್ಯಕ್ಕೆ ಬೇಸರವಾಗಲಿದೆ. ಇಂದು ಸ್ಥಿರಾಸ್ತಿಯ ಒಡೆತನ ನಿಮಗೆ ಸಿಗಬಹುದು. ಮನಸ್ಸಿಗೆ ಅಹಿತಕರ ಘಟನೆಗಳು ತೊಂದರೆಯನ್ನು ತರಬಹುದು. ಸ್ನೇಹಿತರು ಕೊಟ್ಟ ಹಣವನ್ನು ಪುನಃ ಕೇಳಿದ್ದು ನಿಮಗೆ ಅಪಮಾನವಾಗುವುದು. ಸಂತೋಷದಿಂದ ಮಾಡುವುದನ್ನು ಕಷ್ಟಪಟ್ಟು ಮಾಡುವಿರಿ. ಸಂಚಾರದಲ್ಲಿ ಅಪಘಾತಗಳು ಸಂಭವಿಸಬಹುದು. ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಚಾಲಾಯಿಸಿ. ಮಕ್ಕಳ ಜೊತೆ ವಿದೇಶ ಪ್ರವಾಸಕ್ಕೆ ತೆರಳುವಿರಿ. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಉದ್ಯೋಗದ ಬಗ್ಗೆ ಅನೇಕ ಸಲಹೆಗಳು ಬರಬಹುದು. ಎಲ್ಲವನ್ನೂ ಸಮಾಧಾನ ಚಿತ್ತದಿಂದ ಆಲಿಸಿ. ನಿಮ್ಮ ನೋವಿಗೆ ಯಾರೂ ಸ್ಪಂದಿಸದಿರುವುದು ನಿಮಗೆ ಬೇಸರವಾಗುವುದು. ಕಷ್ಟವಾದರೂ ಇಂದು ವೃತ್ತಿಯನ್ನು ಮಾಡುವಿರಿ. ಇಂದು ನಿಮ್ಮ ಸಾಮರ್ಥ್ಯದ ಮೇಲೆ ಪೂರ್ಣವಿಶ್ವಾಸವು ಇರದು. ತಂದೆ ಹಾಗೂ ತಾಯಿಗಳ ಆಶೀರ್ವಾದವೇ ನಿಮಗೆ ಬಲ.

ಮಿಥುನ ರಾಶಿ: ಪ್ರತಿಫಲಾಪೇಕ್ಷೆ ಇಲ್ಲದೇ ನಿಮ್ಮವರಿಗೆ ಧನಸಹಾಯವನ್ನು ಮಾಡುವಿರಿ. ಅಪ್ರಾಮಾಣಿಕತೆಯಿಂದ ಆದ ಲಾಭವು ಸದ್ಯಕ್ಕೆ ಸಂತೋಷವನ್ನು ಕೊಡುವುದು. ಪಾಲುದಾರಿಕೆಯಲ್ಲಿ ನಿಮಗೆ ಸೂಕ್ತ ವ್ಯಕ್ತಿಗಳ ಕೊರತೆ ಕಾಣಿಸುವುದು. ವಿದೇಶೀಯ ವ್ಯವಹಾರದ ಮಾರ್ಗವು ನಿಮಗೆ ತೆರೆದುಕೊಳ್ಳುವುದು. ಸಹೋದ್ಯೋಗಿಗಳ ಸಹಾಕಾರವು ನೀವು ನಿರೀಕ್ಷಿಸಿದಂತೆ ಸಿಗಲಿದೆ. ನಿಮ್ಮ ಶ್ರಮದಿಂದ ಎಣಿಸಿದಷ್ಟು ಲಾಭವು ಆಗುವುದು. ಲಾಭದ ಮುಂದೆ ಆಯಾಸವು ನಗಣ್ಯವಾಗಲಿದೆ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಅಧ್ಯಾತ್ಮದ ಮಾನಸಿಕೆ ನಿಮ್ಮೊಳಗೆ ರೂಪತಾಳುವುದು. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಕೇಳಿ ಸರಿ ಮಾಡಿಕೊಳ್ಳಿ. ನೀವು ಕುಟುಂಬದ ಬಗ್ಗೆ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿಯಾಗುವುದು. ಹೊಸ ಸಂಬಂಧದಲ್ಲಿ ನಿಮಗೆ ಆಸಕ್ತಿಯು ಹೆಚ್ಚಿರುವುದು. ಗಣ್ಯರ ಭೇಟಿಯು ಸಂತೋಷವನ್ನು ನೀಡುವುದು. ತಂದೆಯಿಂದ ನಿಮ್ಮ ವ್ಯವಹಾರಗಳಿಗೆ ಸಹಕಾರ, ಸಹಾಯ ದೊರೆಯುತ್ತದೆ.

ಕರ್ಕಾಟಕ ರಾಶಿ: ಅಲ್ಪ ಸಮಯವನ್ನು ಸಮಾಜದ ಕಾರ್ಯಕ್ಕೆ ಕೊಡಬೇಕೆನಿಸುವುದು. ಅನ್ಯರ ದೋಷವನ್ನೇ ಹುಡುಕುತ್ತ ಇರುವುದು ಸರಿಯಾಗದು. ಸಂಗಾತಿಗಾಗಿ ಮನಸ್ಸಿಲ್ಲದಿದ್ದರೂ ಖರ್ಚು ಮಾಡಬೇಕಾಗುವುದು. ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ಬಂಧುಗಳ ಸಹಾಯವನ್ನು ಕೇಳುವಿರಿ. ವ್ಯಾಪಾರದಲ್ಲಿ ಅನುಕೂಲತೆ ಇದ್ದರೂ ಉದರ ಪೀಡಿಯು ನಿಮ್ಮ ವ್ಯಾಪಾರದ ಉತ್ಸಾಹವನ್ನು ಕಡಿಮೆ ಮಾಡುವುದು. ನಿಮ್ಮ ಅಭಿಪ್ರಾಯವು ಸ್ಪಷ್ಟವಾಗಿ ಇರಲಿ. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಇನ್ನೊಬ್ಬರನ್ನು ನೂಕಿ ಆಳ ನೋಡುವ ಜಾಯಮಾನ ಬೇಡ. ಯಾರನ್ನಾದರೂ ಪ್ರೀತಿಸುವ ಮನಸ್ಸಾಗುವುದು. ಮನೆಯ ಜವಾಬ್ದಾರಿಯನ್ನು ಅನಿವಾರ್ಯವಾಗಿ ತೆಗೆದುಕೊಳ್ಳಬೇಕಾಗುವುದು. ನಿಮ್ಮ ವಸ್ತುಗಳು ಇಲ್ಕವಾಗಿದ್ದು ನಿಮಗೆ ಗೊತ್ತಾಗದೇಹೋಗುವುದು. ವಿವಾಹ ಸಮಾರಂಭಗಳಿಗೆ ಕುಟುಂಬದ ಜೊತೆ ಹೋಗುವಿರಿ. ಉದ್ಯೋಗದಲ್ಲಿ ತಾಂತ್ರಿಕ ಪರಿಣತರಿಗೆ ಹೆಚ್ಚಿನ ಸ್ಥಾನ ದೊರೆತು ಸಂತಸವಾಗುತ್ತದೆ.

ಸಿಂಹ ರಾಶಿ: ಯಾರಿಂದಲೋ ನಿಮ್ಮಲ್ಲಿರುವ ಹೊಸ ವ್ಯಕ್ತಿತ್ವದ ಪರಿಚಯವಾಗಬಹುದು. ಅಪರಿಚಿತರ ಮಾತಿಗೆ ಮನಸೋಲುವಿರಿ. ಪ್ರೀತಿ ಶುರುವಾಗಬಹುದು. ನಿಮ್ಮ ಕಾರ್ಯವು ಸಫಲವಾಗಲು ಶ್ರಮ ಅಗತ್ಯ. ನೌಕರರು ನಿಮ್ಮ‌ಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ರಾಜಕೀಯದ ಬಲದಿಂದ ಕಾನೂನಿನ ಸಮರವು ನಿಮ್ಮ ಪರವಾಗಬಹುದು. ವಾಹನ ಚಲಾಯಿಸುವಾಗ ಜಾಗರೂಕತೆ ಮುಖ್ಯ. ಪರಪುರುಷರಿಂದ ಏನಾದರೂ ತೊಂದರೆಗಳು ಆಗಬಹುದು. ಕಾರ್ಯದಲ್ಲಿ ಗೊಂದಲವನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಅವರ ಮಾತಿಗೆ ಕಿವಿಯಾಗಿ. ಸಂಗಾತಿಯ ಮೇಲೆ ದ್ವೇಷದ‌ ಬುದ್ಧಿಯು ಬರಬಹುದು. ಮುಂಗೋಪವನ್ನು ಕಡಿಮೆ ಮಾಡಿಕೊಂಡರೂ ನಿಯಂತ್ರಣದಲ್ಲಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು.

ಕನ್ಯಾ ರಾಶಿ: ಯಾರನ್ನೋ ನೋಯಿಸಿ ಅನಂತರ ಸಂಕಟಪಡುವಿರಿ. ಸಂಗಾತಿಯನ್ನು ಸಂಭಾಳಿಸಲು ಸೋಲಾಗಬಹುದು. ಶತ್ರುಗಳು ನಿಮ್ಮ ವಿರುದ್ಧ ಮಾಡುವ ತಂತ್ರಗಳು ನಿಮಗೆ ಪೂರಕವಾಗಿಯೇ ಬರುವುದು. ಮೇಲಧಿಕಾರಿಗಳ ಜೊತೆ ದೂರ ಪ್ರಯಾಣವನ್ನು ಮಾಡಬೇಕಾಗುವುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಬಂಧುಗಳು ನಿಮ್ಮ‌ ಬಗ್ಗೆ ಸಲ್ಲದ ಅಭಿಪ್ರಾಯವನ್ನು ಹೇಳಿಯಾರು. ಯಾರ ಮೇಲೂ ಪಕ್ಷಪಾತ ಮಡುವುದು ಬೇಡ. ವ್ಯಾಪಾರದಲ್ಲಿ ಹಿನ್ನಡೆಯಾಗಲಿದ್ದು ಮಾನಸಿಕವಾಗಿ ಕುಗ್ಗುವಿರಿ. ಪುಣ್ಯಸ್ಥಳಗಳಿಗೆ ನೀವು ಹೋಗಬೇಕಾಗುವುದು. ದೂರ ಪ್ರಯಾಣವು ನಿಮ್ಮ ಆರೋಗ್ಯದ ಮೇಲೆ‌ ಪರಿಣಾಮ ಬೀರಬಹುದು. ಸಂಗಾತಿಯ ಎದುರು ಇಂದು ಮೌನವಾಗಿರುವಿರಿ. ಸಹೋದ್ಯೋಗಿಗಳ ಜೊತೆ ವಾಗ್ವಾದ ನಡೆಯುವುದು.