Horoscope: ಈ ರಾಶಿಯವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಒದಗಿಬರಲಿವೆ

ನೀವು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ಡಿಸೆಂಬರ್​ 17: ಗೊಂದಲದಲ್ಲಿ ನೀವು ಇರಬೇಕಾದೀತು. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗುವುದು. ನಿಮ್ಮವರನ್ನು ನೀವು ಬಿಟ್ಟಕೊಡಲು ಇಷ್ಟಪಡುವುದಿಲ್ಲ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ಹೆಚ್ಚು ಖುಷಿಕೊಡುವುದು. ಹಾಗಾದರೆ ಡಿಸೆಂಬರ್​ 15ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಈ ರಾಶಿಯವರಿಗೆ ಹೆಚ್ಚು ಹೆಚ್ಚು ಅವಕಾಶಗಳು ಒದಗಿಬರಲಿವೆ
ಈ ರಾಶಿಯವರಿಗೆ ಹೆಚ್ಚು ಅವಕಾಶಗಳು ಒದಗಿಬರಲಿವೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 17, 2024 | 12:12 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶಿರ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದ್ವಿತೀಯಾ​​, ನಿತ್ಯನಕ್ಷತ್ರ: ಪುನರ್ವಸು, ಯೋಗ: ಬ್ರಹ್ಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 52 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 05 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:18 ರಿಂದ 06:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:41 ರಿಂದ 11:05 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 01:53 ರವರೆಗೆ.

ತುಲಾ ರಾಶಿ: ಯಾರದೋ ಮೆಚ್ಚುಗೆಗಾಗಿ ಮಾಡುವ ಕೆಲಸವು ವ್ಯರ್ಥವಾಗುವುದು. ಸ್ಪರ್ಧಾತ್ಮಕ ವಿಚಾರಗಳಲ್ಲಿ ನಿಮಗೆ ಸೋಲಾಗಬಹುದು. ಆಪ್ತರ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಬೆನ್ನಿನ‌ ನೋವಿನಿಂದ ಸಂಕಟಪಡುವಿರಿ. ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ನೀವು ಹಣದ ಸುಳಿವನ್ನು ಪಡೆದು ಪ್ರಪಾತಕ್ಕೆ ಬೀಳುವಿರಿ. ಯಾವುದೋ ಆಲೋಚನೆಯಲ್ಲಿ ನೀವು ಮುಳುಗಿ ಕಾರ್ಯವನ್ನು ಅಸ್ತವ್ಯಸ್ತ ಮಾಡಿಕೊಳ್ಳುವಿರಿ. ಸರ್ಕಾರದ ಕಾರ್ಯವು ಬಹಳ ದಿನಗಳಿಂದ ಹಾಗೆಯೇ ಉಳಿದಿದ್ದು ನಿಮಗೆ ಇದರಿಂದ ಬೇಸರವಾಗುವುದು. ನಿಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಹಿಂಜರಿಯುವಿರಿ. ಸ್ತ್ರೀಯರು ನೂತನ ವಸ್ತುಗಳನ್ನು ಖರೀದಿಸಿ ಸಂತೋಷಪಡುವರು. ನಿಮ್ಮ ಅಕ್ಕಪಕ್ಕದವರ ಮೇಲೆ‌ಅಲ ಸದಭಿಪ್ರಾಯವು ಇರದು. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಅಹಂಕಾರವು ಬರುವುದು.

ವೃಶ್ಚಿಕ ರಾಶಿ: ಮೈ ಮರೆತು ಕೆಲವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ನಿಮ್ಮ ಗೃಹ ನಿರ್ಮಾಣಕ್ಕೆ ಯಾರಿಂದಲಾದರೂ ಸಹಕಾರ ಸಿಗಲಿದೆ. ಎಷ್ಟೋ ವರ್ಷಗಳ ಅನಂತರದ ಸ್ನೇಹಮಿಲನ ನಿಮಗೆ ಆಹ್ಲಾದವನ್ನು ತರುವುದು. ಇಂದು ನಿಮಗೆ ದಾನದಲ್ಲಿ ಮನಸ್ಸಾಗುವುದು. ಕೆಲವರ ಮಾತು ಶಾಪವಾದರೂ ವರವಾಗಬಹುದು. ಉದ್ವೇಗದಲ್ಲಿ ಏನನ್ನಾದರೂ ಹೇಳುವಿರಿ. ಖುಷಿಗೆ ಅನೇಕ ಅವಕಾಶಗಳಿದ್ದರೂ ನೀವು ಅದೆಲ್ಲವನ್ನೂ ಬಿಟ್ಟು ನಕಾರಾತ್ಮಕವಾಗಿ ಯೋಚಿಸುವಿರಿ. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು. ಚರಾಸ್ತಿಯು ನಿಮಗೆ ಗೊತ್ತಾಗದಂತೆ ನಿಮ್ಮ ಕೈತಪ್ಪಿ ಹೋಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯು ಕಷ್ಟವೆನಿಸುವಂತೆ ಆಗುವುದು. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ.

ಧನು ರಾಶಿ: ನಿಮ್ಮ ಬಗ್ಗೆ ಅನಪೇಕ್ಷಿತ ಮಾತುಗಳು ಕಿವಿಗೆ ಬೀಳುವುದು. ಅನಿರೀಕ್ಷಿತ ವಿಚಾರಗಳನ್ನು ಎದುರಿಸುವುದು ನಿಮಗೆ ಕಷ್ಟವಾದೀತು. ಉದ್ಯೋಗದಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇದ್ದು, ಮನೆಯಿಂದ ದೂರವಿರಬೇಕಾದೀತು. ಇಷ್ಟಾರ್ಥವು ನಿನಗೆ ಸಿದ್ಧಿಯಾಗುವ ಬಗ್ಗೆ ನಿಮಗೆ ಅನುಮಾನವಿರಲಿದೆ. ಕೋಪಗೊಂಡ ಸಂಗಾತಿಯನ್ನು ನೀವು ಸಮಾಧನಾ ಮಾಡಬೇಕಾದೀತು. ಅತಿಯಾದ ಆತ್ಮವಿಶ್ವಾಸವು ನಿಮ್ಮ ಕಾರ್ಯವನ್ನು ಹಾಳುಮಾಡಬಹುದು. ವ್ಯವಸ್ಥೆ ವ್ಯವಹಾರದಿಂದ ಚುರುಕುತನದ ಅವಶ್ಯಕತೆ ಇರುವುದು. ನಿಮ್ಮ‌ ಮಾತು ನೇರವಾಗಿಯೂ ಸ್ಪಷ್ಟವಾಗಿಯೂ ಇರಲಿ.‌ ಮನೆಯನ್ನು ಬದಲಿಸುವಿರಿ. ನೀವು ನಿಮ್ಮನ್ನೇ ಪ್ರಶಂಸಿಸಿಕೊಳ್ಳುವುದು ಸರಿ ಕಾಣಿಸದು. ಮಕ್ಕಳ ವಿಚಾರದಲ್ಲಿ ನೀವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ. ಗೌಪ್ಯ ಸಂಗತಿಯನ್ನು ನೀವು ಇನ್ನೊಬ್ಬರಿಗೆ ಹೇಳುಬಿಡುವಿರಿ.

ಮಕರ ರಾಶಿ: ಆರ್ಥಿಕ ನಷ್ಟವನ್ನು ಭರಿಸಿಕೊಳ್ಳಲು ಅನ್ಯ ಉಪಾಯವನ್ನು ಹೂಡುವಿರಿ. ಹೊಸ ಕಾರ್ಯವನ್ನು ಮಾಡುವುದು ನಿಮಗೆ ಕಷ್ಟವಾಗಬಹುದು. ಕಛೇರಿಯಲ್ಲಿ ಸ್ತ್ರೀಯರಿಂದ ಅಪಮಾನವಾಗಬಹುದು. ನಿಮ್ಮ ತಪ್ಪುಗಳು ನಿಮಗೆ ಗೊತ್ತಾಗದೇ ಇನ್ನೊಬ್ಬರು ತಿಳಿಸಬೇಕಾಗುವುದು. ಅನಿವಾರ್ಯವಾಗಿ ಸಣ್ಣ ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ಮಂಗಲ ಕಾರ್ಯಕ್ಕೆ ಬಹಳ ಸಿದ್ಧತೆಯನ್ನು ಮಾಡುವಿರಿ. ಪ್ರಯಾಣದ ಆಯಾಸವು ನಿಮ್ಮನ್ನು ವಿಶ್ರಾಂತಿಗೆ ಕಳುಹಿಸಬಹುದು. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಬಹಳ ಚಿಂತೆಯಿಂದ ಇರುವಿರಿ. ಇಂದು ನಿಮಗೆ ಕುಟುಂಬದ ಜೊತೆ ಇರುವುದು ಖುಷಿ ಕೊಡದು. ಆರ್ಥಿಕತೆಯ ವಿಚಾರದಲ್ಲಿ ನೀವು ನಿಷ್ಠುರತೆ ಇರಲಿದೆ. ಸಂಗಾತಿಯ ಬೇಸರವನ್ನು ಸಾಂತ್ವನ ಮಾಡಿ ಬಗೆಹರಿಸುವಿರಿ. ಆಕಸ್ಮಿಕವಾಗಿ ಅಸದ ಧನಲಾಭವನ್ನು ಬಿಟ್ಟುಕೊಡುವಿರಿ. ನಿಮ್ಮ ಅಳತೆಯನ್ನು ಮೀರದೇ ಚೌಕಟ್ಟಿನಲ್ಲಿರಿ. ವೈದ್ಯರ ಸಲಹೆಯನ್ನು ಕ್ರಮವರಿತು ಪಾಲಿಸಬೇಕು.

ಕುಂಭ ರಾಶಿ: ಇಂದು ಹಣದ ಹಂಚಿಕೆಯಲ್ಲಿ ನಿಮಗೆ ಕಲಹವಾಗುವುದು. ಕಾರ್ಯದಲ್ಲಿ ಒತ್ತಡವು ಒಮ್ಮೆಲೆ ಅಧಿಕವಾಗಿ ಬಂದು ದಿಕ್ಕು ಕಾಣದಗಬಹುದು. ನಿಮ್ಮವರನ್ನು ಕಂಡು ನೀವು ಅಸೂಯೆಪಡುವಿರಿ. ನಿಮ್ಮೆದುರು ಅಸಭ್ಯವಾಗಿ ಯಾರಾದರೂ ವರ್ತಿಸಿದರೆ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬೇಡ. ಆಹಾರವು ನಿಮಗೆ ರುಚಿಸದೇ ಹೋಗುವುದು. ಮಕ್ಕಳಿಗೆ ಜೊತೆ ಇದ್ದು ಕಲಿಕೆಗೆ ಬೇಕಾದ ಸಹಾಯವನ್ನು ಮಾಡುವಿರಿ. ದೂರ ಪ್ರಯಾಣದಿಂದ ಆರೋಗ್ಯವು ಹದಗೆಡಬಹುದು. ಕಾರ್ಯದ ಆರಂಭದಲ್ಲಿ ಒತ್ತಡವು ಹೆಚ್ಚು ಇರುವುದು. ನಿಮ್ಮ ಇಂದಿನ ಖರ್ಚಿಗೆ ಕಡಿವಾಣ ಹಾಕುವುದು ಅಸಾಧ್ಯವಾಗಬಹುದು. ದುರ್ಬಲರ ಮೇಲೆ ನೀವು ಸಿಟ್ಟಾಗುವಿರಿ. ಯಾವುದೇ ಕಾರ್ಯಕ್ಕೂ ನೀವು ಮುನ್ನುಗ್ಗುವುದು ಇಷ್ಟವಾಗದು. ವ್ಯವಹಾರದಲ್ಲಿ ನೀವು ಸರಿಯಾಗಿ ಇರದೇ ಇರುವುದು ನಿಮಗೆ ಕಷ್ಟವಾಗಬಹುದು. ಇಂದಿನ ಕಾರ್ಯವು ನಿಮ್ಮ ಸಮಯವನ್ನು ಹಾಳುಮಾಡುವುದು. ಏನನ್ನಾದರೂ ಮಾಡಬೇಕು ಎಂಬ ಮಹತ್ತರವಾದ ಯೋಜನೆಯನ್ನು ಮುಂದೂಡುವಿರಿ.

ಮೀನ ರಾಶಿ: ಪದಾಧಿಕಾರವನ್ನು ಚಲಾಯಿಸುವುದು ಸೂಕ್ತವಲ್ಲ. ಕೆಲವಷ್ಟನ್ನು ಗಮನಿಸಿದರೆ ಸಾಕು. ಇಂದು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗಬಹುದು. ವಾಹನ ಖರೀದಿಗೆ ಮನೆಯಲ್ಲಿ ಮನಸ್ಸು ಮಾಡುವುದಿಲ್ಲ. ಹತ್ತಾರು ವಿಚಾರವು ನಿಮ್ಮ ತಲೆಯಲ್ಲಿ ಓಡುವುದು. ಗೊಂದಲದಲ್ಲಿ ನೀವು ಇರಬೇಕಾದೀತು. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗುವುದು. ನಿಮ್ಮವರನ್ನು ನೀವು ಬಿಟ್ಟಕೊಡಲು ಇಷ್ಟಪಡುವುದಿಲ್ಲ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ಹೆಚ್ಚು ಖುಷಿಕೊಡುವುದು. ಇನ್ನೊಬ್ಬರನ್ನು ಹಾಸ್ಯ ಮಾಡುತ್ತ ಇಂದಿನ ಹೆಚ್ಚು ಸಮಯವನ್ನು ಕಳೆಯುವಿರಿ. ಸಂಗಾತಿಯ ಕೆಲವು ಮಾತುಗಳು ನಿಮಗೆ ಸರಿ ಎನಿಸದು. ಶುಭ ಸುದ್ದಿಯ ನಿರೀಕ್ಷೆಯಲ್ಲಿ ನೀವು ಇರುವಿರಿ. ಯಾರ ಮಾತನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು.

‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
‘ಯುಐ’ ಸಿನಿಮಾ ಪ್ರೀ-ರಿಲೀಸ್ ಇವೆಂಟ್​: ಇಲ್ಲಿದೆ ಲೈವ್ ವಿಡಿಯೋ
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹೊಸ ಹೋಸ್ಟ್ ನನ್ನಂತೆ ನಡೆಸಿಕೊಡುತ್ತಾರೋ ಇಲ್ಲವೋ ಬೇರೆ ವಿಚಾರ: ಸುದೀಪ್
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನು ಬಲಪಡಿಸುತ್ತೇವೆ: ಸಚಿವ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ಎತ್ತಿನ ಜನ್ಮದಿನ ಆಚರಣೆ: ಕೇಕ್ ಕತ್ತರಿಸಿ..ಊರಿಗೆಲ್ಲ ಊಟ ಹಾಕಿಸಿದ ರೈತ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ನ್ಯಾಯಾಲಯದಿಂದ ಪುನಃ ಆಸ್ಪತ್ರೆಗೆ ವಾಪಸ್ಸು ಹೋದ ದರ್ಶನ್ ತೂಗುದೀಪ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಕುಮಾರ ಬಂಗಾರಪ್ಪ ಸೊರಬದಲ್ಲಿ ಬಿಜೆಪಿ ಸೊರಗುವಂತೆ ಮಾಡಿದ್ದಾರೆ: ರೇಣುಕಾಚಾರ್ಯ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಭವ್ಯಾ, ಐಶ್ವರ್ಯಾ; ದೊಡ್ಮನೆಯಲ್ಲಿ ಗದ್ದಲ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ದರ್ಶನ್ ಮೇಲಿನ ಅಭಿಮಾನ ಹೆಚ್ಚಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಅಭಿಮಾನಿ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ
ವೇತನ ನೀಡದಿದ್ದಕ್ಕೆ ಬ್ಯಾನರ್ ಕಂಬ ಏರಿದ ಕಾರ್ಮಿಕ