Daily Horoscope: ಯಾರಾದರೂ ನಿಮ್ಮ ಭವಿಷ್ಯದ ಬಗ್ಗೆ ಹೇಳಿ ಅವಮಾನಿಸಬಹುದು

13 ಫೆಬ್ರವರಿ​ 2025: ಗುರುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ಬಗ್ಗೆ ಬಂದ ಆರೋಪವನ್ನು ಜಾಣ್ಮೆಯಿಂದ ಪರಿಹಿರಿಸಿಕೊಳ್ಳುವಿರಿ. ಪರರ ತಪ್ಪುಗಳನ್ನು ಹೆಚ್ಚು ಹುಡುಕುವುದು ಬೇಡ. ಹಾಗಾದರೆ ಫೆಬ್ರವರಿ 13 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಯಾರಾದರೂ ನಿಮ್ಮ ಭವಿಷ್ಯದ ಬಗ್ಗೆ ಹೇಳಿ ಅವಮಾನಿಸಬಹುದು
ಯಾರಾದರೂ ನಿಮ್ಮ ಭವಿಷ್ಯದ ಬಗ್ಗೆ ಹೇಳಿ ಅವಮಾನಿಸಬಹುದು
Edited By:

Updated on: Feb 13, 2025 | 12:10 AM

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಪ್ರತಿಪತ್ ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ ಯೋಗ : ಸೌಭಾಗ್ಯ, ಕರಣ : ಬವ, ಸೂರ್ಯೋದಯ – 06 – 58 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:14 – 15:41, ಯಮಘಂಡ ಕಾಲ 06:59 – 08:26, ಗುಳಿಕ ಕಾಲ 09:53 – 11:20.

ಮೇಷ ರಾಶಿ: ಇಂದು ಮನಸ್ಸಿಗೆ ವಿಶ್ರಾಂತಿ ಬೇಕೆನಿಸುವುದು. ಆದಾಯದ ಮೂಲವನ್ನು ನೀವು ಪ್ರಕಟಪಡಿಸುವುದು ಬೇಡ. ನಿಮ್ಮವರನ್ನೇ ವಶಪಡಿಸಿಕೊಂಡು ಆಟವಾಡಿಸುವರು. ಮನೆಯ ಧಾರ್ಮಿಕ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದುಕೊಂಡರೂ ಅದು ಅಸಾಧ್ಯ ಎನಿಸಬಹುದು. ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ಕೆಲವು ಗೆಲುವಿಗಾಗಿ ಸೋಲಬೇಕಾಗುತ್ತದೆ. ಹಿತಶತ್ರುಗಳನ್ನು ಅರಿಯುವಲ್ಲಿ ನಿಮಗೆ ಸೋಲಾಗುವುದು. ಹೊಸ ಯೋಜನೆಯನ್ನು ನಿರ್ವಹಿಸುವ ಅವಕಾಶವು ಸಿಗಲಿದೆ. ಯಾರಾದರೂ ನಿಮ್ಮ ಭವಿಷ್ಯದ ಬಗ್ಗೆ ಹೇಳಿ ಅವಮಾನಿಸಬಹುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ವಿಳಂಬವಾಗಿ ಬರುತ್ತದೆ ಎಂದುಕೊಂಡ ನಿಮ್ಮ ಹಣವು ಬೇಗ ಬರಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ವಿವಾಹಜೀವನವು ಅತ್ಯಂತ ಸುಖದಂತೆ ತೋರುವುದು. ಕೆಲವು ಅಭ್ಯಾಸವನ್ನು ನೀವು ಬಿಡಬೇಕೆಂದರೂ ಬಿಡಲಾಗದು. ಪುಣ್ಯಸ್ಥಳದ ದರ್ಶನವನ್ನು ಪೋಷಕರಿಗೆ ಮಾಡಿಸುವ ಚಿಂತನೆಯನ್ನು ನಡೆಸುವಿರಿ.

ವೃಷಭ ರಾಶಿ: ಅನಿರೀಕ್ಷಿತ ತಿರುವುಗಳು ಬಂದಾಗ ಅಪಘಾತವೇ ಆಗಬಹುದು. ಎಲ್ಲದಕ್ಕೂ ಸಿದ್ಧನಾಗಿದ್ದರೆ, ಪರಿಣಾಮ ಅತಿಯಾಗಿರದು. ದೇಹವನ್ನು ಸುದೃಢವಾಗಿಸಿಕೊಳ್ಳಲು ಪ್ರಯತ್ನಿಸಿ. ನಕಾರಾತ್ಮಕ ವಿಚಾರಗಳ ನಡೆಯೂ ನೀವು ಬಲವಾಗಿದ್ದರೆ ಅದು ವಿದ್ಯೆಯ ಕಾರಣದಿಂದ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ನಿಮ್ಮ ವ್ಯವಹಾರದಲ್ಲಿ ಅನ್ಯರ ಹಸ್ತಕ್ಷೇಪವನ್ನು ಸಹಿಸಲಾರಿರಿ. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಬಂಧುವನ್ನೇ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ನಂಬಿಕೆ ಕಡಮೆ ಆಗುವುದು. ಸಂಬಂಧದಲ್ಲಿ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಳ್ಳಬೇಡಿ. ಸಂಗಾತಿಯ ಜೊತೆ ವಾಯುವಿಹಾರದ ಸುಖವನ್ನು ಅನುಭವಿಸುವಿರಿ. ಯಾರಾದರೂ ಧನಸಹಾಯವನ್ನು ನಿಮ್ಮ ಬಳಿ ಕೇಳಬಹುದು. ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳಿ. ಶತ್ರುಗಳ ಕುತಂತ್ರವು ನಿಮಗೆ ಲಾಭವೇ ಆಗುವುದು. ಸಣ್ಣ ಪ್ರಮಾಣದ ವ್ಯವಹಾರಗಳನ್ನು ನಡೆಸುತ್ತಿರುವವರಿಗೆ ಅಲ್ಪ ಲಾಭಕ್ಕೆ ಖುಷಿಪಡಬೇಕಾದೀತು.

ಮಿಥುನ ರಾಶಿ: ನೀವು ಊಹಿಸಿದಷ್ಟು ಸಹಕಾರವನ್ನು ಯಾರಿಂದಲೂ ಪಡೆಯಲಾಗದು. ನಿಮ್ಮ ಮಾತುಗಳು ವಿಶ್ವಾಸಕ್ಕೆ ಯೋಗ್ಯವಾಗದೇ ಇರಬಹುದು. ಅಭಿವೃದ್ಧಿಗೆ ಅವಕಾಶವಿದ್ದರೂ ನಿಮಗೆ ಹಿನ್ನಡೆಯಂತೆ ಎಲ್ಲವೂ ಭಾಸವಾಗುವುದು. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಹಾಸ್ಯಪ್ರಜ್ಞೆ ಕೆಲವರಿಗೆ ಇಷ್ಟವಾಗದು. ದೇಹವು ಅಧಿಕ ಶ್ರಮದಿಂದ ಆಯಾಸಗೊಳ್ಳುವುದು. ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಎನಿಸುವುದು. ಉದ್ವೇಗಕ್ಕೆ ಒಳಗಾಗುವ ಸಂದರ್ಭವು ನಿಮ್ಮನ್ನು ಕುಗ್ಗಿಸುವುದು. ಅತಿಯಾದ ಪ್ರೀತಿಯೂ ನಿಮಗೆ ಮುಳುವಾದೀತು. ಶ್ರಮಕ್ಕೆ ತಕ್ಕ ಫಲವು ಲಭಿಸಿಲ್ಲ ಎಂದು ನಿಮ್ಮ ಮನಸ್ಸಿಗೆ ಗಾಢವಾಗಿ ತಿಳಿಯುವುದು. ಅತಿಯಾಗಿ ಯಾವುದನ್ನು ಮಾಡಲು ಹೋಗುವುದು ಬೇಡ. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ನಿಮ್ಮ ತಮಾಷೆಯು ಇಷ್ಟವಾಗದೇ ಇರಬಹುದು. ಸಂಗಾತಿಯ ಮನೋಭಾವವು ನಿಮಗೆ ಇಂದು ಸರಿ ಹೊಂದದು. ಸಮಯಕ್ಕೆ ಯಾವುದನ್ನೂ ಸರಿಯಗಿ ಮಾಡಲಾಗದು. ವ್ಯವಹಾರದಲ್ಲಿ ನೀವು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂಬ ಭಾವವು ಆಗಾಗ ಬರುವುದು.

ಕರ್ಕಾಟಕ ರಾಶಿ: ಇಂದಿನ ಬೇಸರವನ್ನು ಹೊರಹಾಕಲು ಸರಿಯಾದ ಸ್ಥಳ, ವ್ಯಕ್ತಿಗಳು ಸಿಗಲಾರರು. ಭೂಮಿಯ ಖರೀದಿಯ ಬಗ್ಗೆ ನಿಮಗೆ ಆಸಕ್ತಿಯು ಅಷ್ಟಾಗಿ ಇರದು. ಕಳ್ಳತನದ ಆರೋಪವನ್ನು ಎದುರಿಸಬೇಕಾಗಬಹುದು. ದಾಖಲಾತಿಗಾಗಿ ಓಡಾಟವನ್ನು ಮಾಡಬೇಕಾದೀತು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ಇಂದು ತುರ್ತಾಗಿ ಬೇಕಾಗಿರುವ ಹಣವನ್ನು ಹೊಂದಿಸಲು ನಿಮಗೆ ಕಷ್ಟವಾಗುವುದು. ಫಲಿತಾಂಶದ ಕುತೂಹಲವು ನಿಮ್ಮ ಮನಸ್ಸಿನ ವೇಗವನ್ನು ಹೆಚ್ಚಿಸುವುದು. ಕೃಷಿಗೆ ಸಂಬಂಧಿಸಿದಂತೆ ಹೊಸ ಕಲ್ಪನೆಯನ್ನು ಇಟ್ಟುಕೊಳ್ಳುವಿರಿ. ಕಛೇರಿಯ ಕಾರ್ಯದಿಂದ ಆಯಾಸವಾಗಬಹುದು. ನಿಮ್ಮ ನಿರುದ್ಯೋಗವು ಚಿಂತೆಯಾಗಿ ನಿಮ್ಮ ಬಗ್ಗೆಯೇ ನಿಮಗೆ ನಕಾರಾತ್ಮಕ ಭಾವ ಮೂಡುವುದು. ಮುಳುವ ದೋಣಿಗೆ ಹುಲ್ಲುಕಡ್ಡಿಯೂ ಆಸರೆಯಾದೀತು. ಯಾವುದೋ ಆಲೋಚನೆಯಲ್ಲಿ ಮುಳುಗಿರುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ.

ಸಿಂಹ ರಾಶಿ: ಅನಿರೀಕ್ಷಿತ ಆರ್ಥಿಕ ಲಾಭವು ನಿಮ್ಮ ಮನಸ್ಸನ್ನು ಚಂಚಲಗೊಳಿಸಬಹುದು. ನಿಮ್ಮ ಯೋಜನೆಯನ್ನು ಪ್ರಯೋಗಕ್ಕೆ ತರಲು ಪೂರ್ಣ ಯಶಸ್ಸನ್ನು ಪಡೆಯಲಾರಿರಿ. ಮನಸ್ಸಿನಿಂದ ನೀವು ಕೆಲವು ವಿಚಾರವನ್ನು ತೆಗೆದುಹಾಕುವುದು ಉತ್ತಮ. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ಅಪನಂಬಿಕೆಯಿಂದ ನಿಮಗೆ ತೊಂದರೆ ಆಗಬಹುದು. ವಸತಿ ಸ್ಥಾನವನ್ನು ಬದಲಿಸಬೇಕಾದೀತು. ಯಾರನ್ನೋ ನೋಡಿ ಹೊಟ್ಟಿ ಉರಿ ಮಾಡಿಕೊಳ್ಳುವುದು ಬೇಡ. ಸ್ಪರ್ಧಾತ್ಮಕ ವಿಚಾರದಲ್ಲಿ ಸೋಲುವ ಸಂಭವವಿದೆ. ನಿಮ್ಮ ಅಂತರಂಗವನ್ನು ವ್ಯಕ್ತಪಡಿಸಲು ನಿಮಗೆ ಸೂಕ್ತ ಸಮಯವು ಲಭ್ಯವಾಗದೇ ಇರಬಹುದು. ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳುವ ನೇರದಲ್ಲಿ ಕಾರ್ಯವಿರುವುದು. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಬಹಳ ದಿನಗಳ ಅನಂತರ ನ್ಯಾಯಾಲಯದಿಂದ ಸಿಕ್ಕ ಜಯವು ಸಂತಸವನ್ನು ಉಂಟುಮಾಡುವುದು. ಬಡ್ತಿಯ ನಿರೀಕ್ಷೆ ಹುಸಿಯಾಗುವುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ಬೇಕು.

ಕನ್ಯಾ ರಾಶಿ: ನೀವು ಇಂದು ಕೌಟುಂಬಿಕವಾದ ವಿಚಾರದ ಬಗ್ಗೆ ಸಂಗಾತಿಯ ಜೊತೆ ಮಾತನಾಡದೇ ಇರುವುದು ಲೇಸು. ಕುಟುಂಬಕ್ಕಾಗಿ ಬಿಡುವು ಮಾಡಿಕೊಳ್ಳಿ. ನಿಮ್ಮ ಕೆಲವು ಆಸೆಗಳನ್ನು ಪೂರೈಸಿಕೊಳ್ಳುವಿರಿ. ಸಮಾಜವು ನಿಮ್ಮ ಸಾಧನೆಯನ್ನು ಗುರುತಿಸುವ ಅಪೇಕ್ಷೆ ಇರುವುದು. ನಿಮಗೆ ಗೊತ್ತಿರುವ ವಿಚಾರವನ್ನು ಇತರರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಬಗ್ಗೆ ಬಂದ ಆರೋಪವನ್ನು ಜಾಣ್ಮೆಯಿಂದ ಪರಿಹಿರಿಸಿಕೊಳ್ಳುವಿರಿ. ಪರರ ತಪ್ಪುಗಳನ್ನು ಹೆಚ್ಚು ಹುಡುಕುವುದು ಬೇಡ. ನಿಮ್ಮ ಉದ್ಯಮಕ್ಕೆ ಹೆಚ್ಚಿನ ಸಮಯವನ್ನು ಕೊಡುವುದು ಅಗತ್ಯ. ಸುಳ್ಳನ್ನೇ ಸತ್ಯವೆಂದು ನಂಬುವಿರಿ. ಅನಿರೀಕ್ಷಿತ ಪ್ರಯಾಣ ಸಾಧ್ಯತೆ ಇದೆ. ನಿಮ್ಮ ಕೆಲವು ಅಸಂಬದ್ಧ ವ್ಯವಸ್ಥೆಯನ್ನು ನೀವು ಸರಿ ಮಾಡಿಕೊಳ್ಳಬೇಕಾಗುವುದು. ಹೊಸ ವಸ್ತುವಿನ ಖರೀದಿಯಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು.