Horoscope: ಮಕ್ಕಳ ವರ್ತನೆ ಹಿಡಸದೇ ಇರುವುದು, ದುಡುಕುವುದು ಬೇಡ
13 ಫೆಬ್ರವರಿ 2025: ಗುರುವಾರದಂದು ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನೀವು ಗೆಲ್ಲಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುವುದು. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತವೆ. ಹಾಗಾದರೆ ಫೆಬ್ರವರಿ 13ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ಪ್ರತಿಪತ್ ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ ಯೋಗ : ಸೌಭಾಗ್ಯ, ಕರಣ : ಬವ, ಸೂರ್ಯೋದಯ – 06 – 58 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭಕಾಲ : ರಾಹು ಕಾಲ 14:14 – 15:41, ಯಮಘಂಡ ಕಾಲ 06:59 – 08:26, ಗುಳಿಕ ಕಾಲ 09:53 – 11:20.
ತುಲಾ ರಾಶಿ: ಇಂದು ನೀವು ಸಮೂಹವಾಗಿದ್ದು ಕಾರ್ಯವನ್ನು ಸಾಧಿಸುವಿರಿ. ನಿಮ್ಮನ್ನು ಬೇಡವೆಂದು ದೂರವಿಟ್ಟವರೇ ಇಂದು ನಿಮ್ಮ ಸಮೀಪ ಬಂದು ನಿಲ್ಲುವರು. ನೀವು ಇಂದು ಎಲ್ಲರ ಆಕರ್ಷಕ ಕೇಂದ್ರವಾಗಿ ಇರುವಿರಿ. ಧಾರ್ಮಿಕ ಸೇವೆಯಲ್ಲಿ ನೀವು ಭಾಗಿಗಳಾಗುವಿರಿ. ಭೂಮಿಯಿಂದ ಲಾಭವನ್ನು ಪಡೆಯುವ ಯೋಜನೆಯಿರಲಿ. ಮಕ್ಕಳ ವರ್ತನೆಯು ಹಿಡಸದೇ ಇರುವುದು. ಸಾಮಾಜಿಕ ಕಾರ್ಯದಲ್ಲಿ ನೋವನ್ನು ಮರೆಯುವಿರಿ. ಆದರೂ ಏನನ್ನೂ ಹೇಳದೇ ಇರುವಿರಿ. ಕಾರ್ಯದ ಬಗ್ಗೆ ಅತಿಯಾದ ಆಲೋಚನೆಯಿಂದ ತಲೆನೋವು ಬರಬಹುದು. ಪ್ರೀತಿಗಾಗಿ ಇಂದು ಹೆಚ್ಚು ಸಮಯವನ್ನು ಕೊಡುವಿರಿ. ನಿಮ್ಮ ಕುರಿತು ಕೆಲವು ಸತ್ಯಗಳು ಗೊತ್ತಾಗಲಿದೆ. ಉಗುರಿನಿಂದ ಆಗುವ ಕಾರ್ಯಕ್ಕೆ ಕೊಡಲಿ ಏಟು ತರುವುದು ಉಚಿತವಲ್ಲ. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ದುಡುಕಿ ಯಾವುದನ್ನೂ ಮಾಡುವುದು ಬೇಡ. ನಿಮಗಮ ಸ್ಥಿರಾಸ್ತಿಯ ಮಾರಾಟದಲ್ಲಿ ಏಕಮುಖವಾದ ಅಭಿಪ್ರಾಯ ಬೇಡ.
ವೃಶ್ಚಿಕ ರಾಶಿ: ನಿಮ್ಮನ್ನು ಎಲ್ಲರೀತಿಯಿಂದ ರಕ್ಷಣೆ ಮಾಡಿಕೊಳ್ಳಬೇಕಿದೆ. ಬರಬೇಕಾದ ಹಣವು ಬಾರದೇ ಒತ್ತಡಕ್ಕೆ ಒಳಗಾಗುವಿರಿ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ. ಕಛೇರಿಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಇಷ್ಟವಿಲ್ಲದ ಕಡೆ ನೀವು ಎಂದೂ ಹೋಗಲಾರಿರಿ. ನಿಮ್ಮ ಉತ್ಸಾಹದ ಕೆಲಸವು ಇನ್ನೊಬ್ಬರಿಗೆ ಮಾದರಿಯಾದೀತು. ಧಾರ್ಮಿಕ ನಂಬಿಕೆಗೆಳು ಅಂತರಂಗಕ್ಕೆ ಪುಷ್ಟಿಯನ್ನು ಕೊಡುತ್ತವೆ. ನಿಮ್ಮ ನಿರ್ಲಕ್ಷ್ಯದ ಸ್ವಭಾವದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಬೇಸರದ ಸನ್ನಿವೇಶದಲ್ಲಿ ಕುಟುಂಬದ ಬಗ್ಗೆ ಗೊತ್ತಾಗುವುದು. ಕೆಲವು ಸಂಬಂಧಗಳನ್ನು ಬಿಟ್ಟುಕೊಡುವುದು ನಿಮಗೆ ಕಷ್ಟವಾದೀತು. ಬರುವ ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸುವುದು ಬೇಡ. ಹಿಂದೆ ಕೊಟ್ಟ ಸಾಲವು ಮರಳಿ ಬರುವ ನಿರೀಕ್ಷೆಯಲ್ಲಿ ಇರುವಿರಿ. ಸುಮ್ಮನೇ ವಾದ ಮಾಡುವ ಚಪಲವನ್ನು ಬಿಟ್ಟು ಸಹಜವಾಗಿ ಎಲ್ಲರ ಜೊತೆ ಮಾತನಾಡಿ. ದೈಹಿಕ ಕಾರ್ಯದಲ್ಲಿ ತೊಡಗಿದವರಿಗೆ ಹೆಚ್ಚು ಆದಾಯವು ಇರುವುದು. ಕಾರ್ಯಕ್ಕಾಗಿ ಹೆಚ್ಚು ಓಡಾಡಬೇಕಾಗುವುದು.
ಧನು ರಾಶಿ: ಯಾವುದನ್ನೇ ಆದರೂ ಋಜು ಮಾರ್ಗದಿಂದ ನಿಮ್ಮದಾಗಿಸಿಕೊಳ್ಳಿ. ನಿಮ್ಮ ಪ್ರೀತಿಪಾತ್ರರ ಸಾಂಗತ್ಯದಿಂದ ಖುಷಿಪಡುವಿರಿ. ಆರೋಗ್ಯವು ದುರ್ಬಲವಾಗಿದ್ದು, ಎಲ್ಲರಮೇಲೂ ಸಿಟ್ಟಾಗುವಿರಿ. ಪ್ರತಿಕೂಲ ವಾತಾವರಣವನ್ನು ನಿಭಾಯಿಸುವ ಕಲೆಯನ್ನು ಗೊತ್ತುಮಾಡಿಕೊಳ್ಳುವಿರಿ. ಸರಿಯಾದ ಉದ್ಯೋಗಕ್ಕೆ ಅಲೆಮಾರಿಗಳಂತೆ ಅಲೆಯಬೇಕಾಗುವುದು. ತಂದೆಯ ಕೆಲವು ವ್ಯವಹಾರವು ನಿಮಗೆ ಇಷ್ಟವಾಗದೇ ಅವರ ಮೇಲೆ ಮುನಿಸಿಕೊಳ್ಳುವಿರಿ. ರಾಜಕೀಯದಲ್ಲಿ ನಿಮ್ಮ ವರ್ಚಸ್ಸನ್ನು ಜೊತೆಗಿರುವವರು ಹೆಚ್ಚಿಸುವರು. ಕೆಲಸದ ಒತ್ತಡವು ಇಂದು ಅಧಿಕವಾಗಿ ಇರಲಿದೆ. ಅಹಂಕಾರದಿಂದ ನಿಮ್ಮ ವ್ಯಕ್ತಿತ್ವವನ್ನು ಹಾಳುಮಾಡಿಕೊಳ್ಳುವಿರಿ. ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿಡಬೇಕಾಗುವುದು. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಇದ್ದುಬಿಡುವಿರಿ. ಯಾರ ಒಳ್ಳೆಯ ಮಾತುಗಳೂ ನಿಮಗೆ ಉಪಯೋಗವಾಗದು. ಸಿಕ್ಕಿದ್ದರಲ್ಲಿ ಸಂತೋಷ ಪಡುವುದನ್ನ ನೀವು ಬೆಳೆಸಿಕೊಳ್ಳಬೇಕಾಗುವುದು.
ಮಕರ ರಾಶಿ: ಮಕ್ಕಳು ನಂಬಿಕೆಯನ್ನು ಉಳಿಸಿಕೊಳ್ಳುವರು. ವೃತ್ತಿಯಲ್ಲಿ ಒತ್ತಡವು ಹಲವು ದಿನಗಳ ಅನಂತರ ಹೆಚ್ಚಿರಲಿದೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಸದಭಿಪ್ರಾಯವು ಇರುವುದು. ವೈವಾಹಿಕ ಜೀವನದಲ್ಲಿ ಏರಿಳಿತವು ಆರಂಭವಾಗಬಹದು. ಸಂಗಾತಿ ಮೇಲಿನ ಸಿಟ್ಟನ್ನು ಬೇರೆ ಕಡೆ ಹೊರಹಾಕುವಿರಿ. ಕೆಲಸದಲ್ಲಿ ಮತ್ತೆ ಮತ್ತೆ ತೊಂದರೆ ಎದುರಾದರೆ ಅದನ್ನು ಕೈ ಬಿಡುವುದು ಸೂಕ್ತ. ಮನೆಯ ಕಾರ್ಯದಲ್ಲಿ ಮಂದಗತಿ, ಆಮೇಲೆ ಮಾಡಿದರಾಯಿತು ಎಂಬ ಭಾವ ಇರಲಿದೆ. ನೆಚ್ಚಿನ ವ್ಯಕ್ತಿಗಳಿಂದ ಪ್ರಭಾವಿತರಾಗಿರುವಿರಿ. ರಾಜಕೀಯ ನಾಯಕರಿಂದ ಒತ್ತಾಯದ ಬೆಂಬಲವು ಸಿಗಲಿದೆ. ಸಾಲ ಕೊಟ್ಟವರು ನಿಮ್ಮನ್ನು ಶತ್ರುಗಳಂತೆ ಕಾಣುವರು. ಮಾಡಿದ ಉಪಕಾರಕ್ಕೆ ಕೃತಜ್ಞತೆಯಾಗಿ ಉಡುಗೊರೆ ಸಿಗಲಿದೆ. ನಿಮ್ಮ ಕಾರ್ಯವನ್ನು ಕೆಲವು ಸಹೋದ್ಯೋಗಿಗಳು ಟೀಕಿಸಬಹುದು. ಕುಹಕ ಮಾತುಗಳನ್ನೂ ಆಡಬಹುದು. ಸಂಗಾತಿಯು ನಿಮ್ಮ ಮಾತನ್ನು ಅಲ್ಲಗಳೆಯುವಿರಿ. ಸ್ವಪ್ರತಿಷ್ಠೆಯನ್ನು ಎಲ್ಲರೆದುರು ತೋರಿಸಿದರೆ ಅಪಮಾನ. ಧಾರ್ಮಿಕ ಸ್ಥಳಗಳ ಭೇಟಿಯು ನಿಮಗೆ ಸಾಕಷ್ಟು ನೆಮ್ಮದಿನ್ನು ಕೊಡುವುದು.
ಕುಂಭ ರಾಶಿ; ಆರ್ಥಿಕ ಸಂಸ್ಥೆಗಳು ಸಾಲ ಕೊಡುವುದಾಗಿ ಪೀಡಿಸಬಹುದು. ಹೂಡಿಕೆಯ ನಷ್ಟವು ನಿಮಗೆ ಬಹಳ ಕಳವಳವನ್ನು ಮಾಡೀತು. ಪಾಲುದಾರಿಕೆಯಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ಪೂರ್ಣ ಸಹಮತವಿರದು. ಅನಿಶ್ಚಿತ ಪ್ರೇಮದಿಂದ ಕಹಿ. ಅಪಘಾತದ ಸುದ್ದಿಯಿಂದ ನೀವು ಖಿನ್ನರಾಗುವಿರಿ. ನೀವು ಅತಿಯಾದ ಆತ್ಮವಿಶ್ವಾಸದಲ್ಲಿ ಕೆಲವೊಂದನ್ನು ಕಳೆದುಕೊಳ್ಳುವಿರಿ. ಬೇಕಾದುದನ್ನು ಪಡೆಯಲು ಮುನ್ನುಗ್ಗುವ ಮಾನಸಿಕತೆಯನ್ನು ಬೆಳೆಸಿಕೊಳ್ಳುವಿರಿ. ಕುಟುಂಬದ ಸದಸ್ಯರು ನಿಮ್ಮ ಸಮಸ್ಯೆಯನ್ನು ಸರಿಮಾಡಿಕೊಳ್ಳಲು ಸಹಕರಿಸಬಹುದು. ಹಳೆಯ ಮನೆಯ ದುರಸ್ತಿಗೆ ಹಣವನ್ನು ಖರ್ಚು ಮಾಡುವಿರಿ. ಯಾವುದರ ಆಳವಾದರೂ ಇಳಿದ ಮೇಲೇ ಗೊತ್ತಾಗುವುದು. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ. ದೂರದರ್ಶಿತ್ವದಿಂದ ಆಗುವ ಲಾಭದ ಮನವರಿಕೆ ಆಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಂಧುಗಳ ಸಹಕಾರ ಇಂದು ಲಭ್ಯವಾಗುವುದು.
ಮೀನ ರಾಶಿ: ರಾಜಕೀಯದಲ್ಲಿ ಆಸಕ್ತಿ ಇರುವವರಿಗೆ ಮಾರ್ಗದರ್ಶನ ಸರಿಯಾಗಿ ಸಿಗಲಿದೆ. ಆರ್ಥಿಕ ವ್ಯವಹಾರಕ್ಕಾಗಿ ದಿನವಿಡೀ ಸುತ್ತಾಡಬೇಕಾಗುವುದು. ಬಿಳಿಯ ಬಟ್ಟೆಯಲ್ಲಿ ಬಿದ್ದ ಕಪ್ಪು ಚುಕ್ಕೆಯನ್ನು ಅಳಿಸುವುದು ಅಷ್ಟು ಸುಲಭವಲ್ಲ. ನೀವು ಗೆಲ್ಲಲು ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕಾಗುವುದು. ಇಂದು ನೀವಾಡುವ ಮಾತಿನ ಮೇಲೆ ನಿಮ್ಮ ಕಾರ್ಯಗಳು ನಿಂತವೆ. ಓಡಾಡಕ್ಕೆ ನಿಮಗೆ ವಾಹನದ ಅನುಕೂಲತೆಯೂ ಆಗುವುದು. ರಕ್ಷಣೆಯ ವಿಭಾಗದಲ್ಲಿ ಅಧಿಕ ಒತ್ತಡವಿರಲಿದೆ. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ನೀವು ಹಣಕಾಸನ್ನು ಉಳಿಸಲು ನಾನಾಪ್ರಕಾರವಾಗಿ ಯೋಚಿಸುವಿರಿ. ಸರಳವಾಗಿರಲು ನಿಮಗೆ ಸಾಧ್ಯವಾಗುವುದು. ಸಮಯಕ್ಕೆ ಸರಿಯಾಗಿ ಕೆಲಸ ಮಾಡದೇ ಮೇಲಧಿಕಾರಿಗಳು ಏನಾದರೂ ಹೇಳಿಯಾರು.




