ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಶೂಲಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 25 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12: 44 ರಿಂದ 02:10ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 08:28 ರಿಂದ 09:54 ರವರೆಗೆ, ಗುಳಿಕ ಬೆಳಿಗ್ಗೆ 11:19 ರಿಂದ ಮಧ್ಯಾಹ್ನ 12:44 ರವರೆಗೆ.
ಮೇಷ ರಾಶಿ: ನೀವು ಯಾರಿಗೇ ಶತ್ರುವಂತೆ ಕಂಡರೂ ನಿಮ್ಮ ವೈಚಾರಿಕೆಯಲ್ಲಿ ಅದು ಸ್ಪಷ್ಟವಾಗಿ ಇರಲಿ. ಮಾತಿನ ಘರ್ಷಣೆಯನ್ನು ಮುಂದುವರಿಸಲು ನಿಮಗೆ ಇಷ್ಟವಾಗದು. ಬೆಂಕಿಯ ಸಹವಾಸ ಮಾಡಿಯೂ ಅವಘಡ ಆಗುವುದಿಲ್ಲವೆನ್ನಲಾಗದು. ಹೂಡಿಕೆಯನ್ನು ಇತರರ ಒತ್ತಾಯದ ಮೇಲೆ ಮಾಡಬೇಕಾದೀತು. ಮನೆಯ ಖರೀದಿಯ ಬಗ್ಗೆ ಆಲೋಚನೆಗಳು ಬರಲಿವೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು. ನೀವು ಇಂದು ಸೌಂದರ್ಯಕ್ಕೆ ಬೆಲೆ ಕೊಡುವಿರಿ. ನಿಮ್ಮ ಯಾವ ಭಾವವನ್ನೂ ಮನಸ್ಸಿನಲ್ಲಿ ಕಟ್ಟಿಹಾಕಲಾಗದು. ಅದು ಯಾವ ಸಮಯಕ್ಕೂ ಪ್ರಕಟವಾಗುವುದು. ನಿಮ್ಮಿಂದ ಉಪಕಾರವನ್ನು ಪಡೆದವರೇ ನಿಮ್ಮ ಶತ್ರಗಳಾದಾರು. ಸಂಗಾತಿಯು ನಿಮ್ಮನ್ನು ನಿರ್ಲಕ್ಷಿಸಬಹುದು. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಕಡಿಮೆ ಆಗಬಹುದು. ಮೃದುವಾದ ಮಾತು ನಿಮ್ಮ ಕೃತಕತೆಯಂತೆ ತೋರಿಸಬಹುದು. ನೀವೊಬ್ಬ ಸುಳ್ಳುಗಾರರೆನ್ನುವಂತೆ ಇತರರು ಬಿಂಬಿಸುವರು.
ವೃಷಭ ರಾಶಿ: ಉದ್ಯಮದಲ್ಲಿ ಖರ್ಚು ಬಂದಾಗ ಮನೋಬಲ ಸಡಿಲವಾಗುವುದು. ನಿಮ್ಮ ಖ್ಯಾತಿಯನ್ನು ಇತರರು ಸಹಿಸಲಾರರು. ದೂರಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ಇಂದು ನಿಮ್ಮ ಕೆಲಸವು ನೀವಂದುಕೊಂಡಷ್ಟು ಸುಲಭವಾಗಿ ಇರದು. ಸಾಮಾನ್ಯರಂತೆ ಕಾಣುವ ನಿಮಗೆ ಯಾವುದೇ ಆಡಂಬ ಇಷ್ಡವಾಗದು. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಸಿಗದು. ಕುಟುಂಬದ ಕೆಲವು ಸನ್ನಿವೇಶಗಳು ನಿಮಗೆ ಇಷ್ಟವಾಗದು. ಕೋಪವನ್ನು ಬಿಟ್ಟರೂ ಬಿಡಲಾಗದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಹೃದಯ ಕಲ್ಲಾದಷ್ಟೂ ವ್ಯಕ್ಯಿತ್ವಗಳು ದೂರಾಗಲಿವೆ. ನಿಮ್ಮ ಮನೋಬಲದ ಪ್ರದರ್ಶನವನ್ನು ತೋರಿಸಬೇಕಾದೀತು. ಸುಮ್ಮನೇ ವಾಗ್ವಾದವನ್ನು ಮಾಡಲು ಹೋಗಿ ಸಮಯವನ್ನು ಹಾಗೂ ಇತರರ ಸಮಯವನ್ನೂ ಹಾಳು ಮಾಡುವಿರಿ. ಹಲವರ ಕಾರಣದಿಂದ ನಿಮ್ಮ ಗುರಿಯು ಬದಲಾಗಬಹುದು.
ಮಿಥುನ ರಾಶಿ; ಮೋಹದಿಂದ ನಿಮ್ಮವರ ತಪ್ಪು ಕಾಣಿಸದು. ನಿಮ್ಮ ಸ್ವಭಾವದಲ್ಲಿ ಸ್ವಲ್ಪ ನಿಷ್ಠುರತೆಯು ಕಾಣಿಸುತ್ತದೆ. ವ್ಯವಹಾರದಲ್ಲಿ ನಿಮ್ಮ ನಿರ್ಧಾರಗಳೇ ಅಂತಿಮವಾಗುವುದು. ನೀವು ಇಂದು ಯಾವುದನ್ನೂ ತಕ್ಷಣ ಒಪ್ಪಿಕೊಳ್ಳುವುದಿಲ್ಲ. ಎಲ್ಲ ಕಾರ್ಯಗಳನ್ನು ಸಲೀಸಾಗಿ ಮಾಡುವ ಅನುಭವ ನಿಮ್ಮದಾಗಲಿದೆ. ಯಶಸ್ಸಿನ ಗುಟ್ಟನ್ನು ನೀವು ಯಾರಿಗೂ ಹೇಳಲಾರಿರಿ. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು. ಸರಳವಾದ ನಿಮ್ಮ ವ್ಯಕ್ತಿತ್ವಕ್ಕೆ ಯಾರೂ ಮನಸೋಲುವರು. ಕರ್ತವ್ಯವನ್ನು ನಿಷ್ಠೆಯಿಂದ ಮಾಡುವಿರಿ. ಗೆಳೆಯನನ್ನು ಆಪ್ತನನ್ನಾಗಿ ಮಾಡಿಕೊಳ್ಳುವಿರಿ. ಅಪೇಕ್ಷಿಸದಿದ್ದರೂ ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗುವುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ಯಾವುದನ್ನೇ ಆದರೂ ಉದ್ವೇಗದಿಂದ ನಿರಾಕರಿಸುವುದು ಬೇಡ. ಪ್ರೇಮಿಗಳು ಪರಸ್ಪರ ಒಪ್ಪಂದದಲ್ಲಿ ಇರುವರು.
ಕರ್ಕಾಟಕ ರಾಶಿ: ನಿಮ್ಮ ಉದ್ದೇಶ ಸ್ಪಷ್ಟವಾಗಿದ್ದರೆ ಯಾವ ಕ್ಷುಲ್ಲಕ ಮಾತಿಗೂ ಬೆಲೆ ಕೊಡಲಾರಿರಿ. ನಿಮ್ಮ ಹಣಕಾಸಿಗೆ ಹಲವು ವ್ಯವಹಾರ ಸೇರಿ ಗೊಂದಲವಾಗಿರುವುದು. ಕೊಡಬೇಕಾದವರ ಹಣವನ್ನು ಹಾಗೆಯೇ ಇಟ್ಟುಕೊಳ್ಳುವಿರಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಂಕೋಚವಾಗಬಹುದು. ನಿರಂತರ ಕೆಲಸದಿಂದ ಸಮಾಧಾನವು ಬೇಕಾಗುವುದು. ನಿಮ್ಮ ಕೆಲಸವನ್ನು ಪ್ರಸ್ತುತಿ ಮಾಡುವಲ್ಲಿ ಸೋಲುವ ಸಾಧ್ಯತೆ ಇದೆ. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ನಿಮ್ಮ ಸೌಂದರ್ಯಕ್ಕೆ ಆಕರ್ಷಿತರಾಗಿ ಮನಸೋಲಬಹುದು. ಇನ್ನೊಬ್ಬರ ಬಗ್ಗೆ ದೋಷವನ್ನೇ ಹುಡುಕುತ್ತ ಕುಳಿತುಕೊಳ್ಳುವ ಬದಲು ಗುಣಗಳನ್ನು ಸ್ವೀಕರಿಸಿ ಸಖ್ಯ ಮಾಡಿಕೊಳ್ಳುವುದು ಉತ್ತಮ. ಕೃತಜ್ಞತೆಯಿಂದ ನಿಮ್ಮವರನ್ನು ಸ್ಮರಿಸುವಿರಿ, ಗೌರವಿಸುವಿರಿ. ವರ್ತನೆಯಲ್ಲಿ ಆಗುವ ಬದಲಾವಣೆಯನ್ನು ಯಾರೂ ಊಹಿಸಲಾರರು. ಎಲ್ಲದರ ಮೇಲೂ ನಂಬಿಕೆಯನ್ನು ಕಳೆದುಕೊಳ್ಳುವಿರಿ.
ಸಿಂಹ ರಾಶಿ: ಆದಾಯದ ಮೂಲಗಳು ಹೆಚ್ಚಾಗುತ್ತವೆ. ಆದರೆ ಅದನ್ನು ಸರಿಯಾಗಿ ಹೊಂದಿಸಿಕೊಂಡು ಹೋಗುವ ಮನಃಸ್ಥಿತಿ ಪರಿಸ್ಥಿತಿಗಳನ್ನು ನೀವು ತಂದುಕೊಳ್ಳುವಿರಿ. ನಿಮ್ಮ ಗಮನಾಗಮನವನ್ನು ಯಾರಾದರೂ ತಿಳಿದುಕೊಳ್ಳುತ್ತಿರಬಹುದು. ಕುಟುಂಬದ ಚಿಂತೆಯಿಂದ ಆರೋಗ್ಯವನ್ನು ಹಾಳುಮಾಡಿಕೊಳ್ಳುವಿರಿ. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಎಲ್ಲ ಒಳ್ಳೆಯದಕ್ಕೂ ನೀವೇ ತಂದೆ ಎನ್ನುವ ಭಾವ ನಿಮ್ಮಲ್ಲಿ ಮೂಡಬಹುದು. ಎಲ್ಲ ಕಡೆಯಿಂದ ನಿಮಗೆ ಅನುಕೂಲವಾಗಬೇಕು ಎಂದುಕೊಳ್ಳುವುದು ಬೇಡ. ಅನಿಶ್ಚಿತತೆಯು ನಿಮ್ಮ ಮೇಲೆ ದಟ್ಟವಾದ ಪ್ರಭಾವವನ್ನು ಬೀರಬಹುದು. ಕುಟುಂಬದಲ್ಲಿ ಪರಸ್ಪರ ಪ್ರೀತಿಯು ತೋರುವುದು. ಪ್ರಯಾಣದಿಂದ ಪ್ರಯಾಸವಾಗಲಿದೆ. ಹೊಸ ವ್ಯವಹಾರದ ಬಗ್ಗೆ ನಿಮಗೆ ಆಪ್ತರ ಸಲಹೆಯು ಸಿಗಲಿದೆ. ಮಕ್ಕಳ ಸ್ವಭಾವವು ಇಷ್ಟವಾಗದೇ ಹೋಗುವುದು. ಎಂತಹ ಸಿದ್ಧತೆ ಇದ್ದರೂ ಅಂತಿಮ ಕ್ಷಣ ನಿಮ್ಮನ್ನು ಹಾದಿತಪ್ಪಿಸಬಹುದು. ನಿಮ್ಮ ಪೂರ್ವ ನಿರ್ಧಾರವನ್ನು ಬದಲಿಸಿಕೊಳ್ಳಬೇಕಾದೀತು.
ಕನ್ಯಾ ರಾಶಿ: ಪೂರ್ವಾರ್ಜಿತ ಆಸ್ತಿಗಳನ್ನು ಪರಿಶೀಲಿಸುವಿರಿ. ಭೂ ಭಾಗವಾಗಿದೆ ಕಳೆದುಕೊಳ್ಳುವ ಸ್ಥಿತಿ ಬರಬಹುದು. ನೀವು ಉದ್ಯೋಗ ಬದಲಾವಣೆಯ ನಿರೀಕ್ಷೆಯಲ್ಲಿದ್ದರೆ, ನೀವು ಬಹಳ ದಿನಗಳ ಅನಂತರ ವಿವಿಧ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಹೊಸ ಉದ್ಯೋಗವನ್ನು ಆರಂಭಿಸಲು ತೀವ್ರತೆಯು ಇರಲಿದೆ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ. ನಿಮ್ಮ ಮಕ್ಕಳ ಬಾಂಧವ್ಯದಿಂದೆ ನಿಮಗೆ ಅಗಲಿಕೆ ಕಷ್ಟವಾದೀತು. ಸಹೋದ್ಯೋಗಿಗಳನ್ನು ಅನೌಪಚಾರಿಕವಾಗಿ ಭೇಟಿಯಾಗುವಿರಿ. ಸಾಲವನ್ನು ಪಡೆಯದೇ ಇದ್ದರೂ ಕೆಲವು ಋಣದಿಂದ ಮುಕ್ತರಾಗಲು ಕೆಲಸ ಮಾಡಬೇಕು. ಸೋಮಾರಿತನದಿಂದ ಕೆಲಸವನ್ನು ಮುಂದೂಡುವಿರಿ. ಸ್ಥಾನಮಾನವನ್ನು ಕಳೆದುಕೊಳ್ಳುವ ಸನ್ನಿವೇಶವು ಬರಬಹುದು. ಹೊಸ ಮನೆಗೆ ಸ್ಥಳಾಂತರ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿಯನ್ನು ಅನುಭವಿಸುವಿರಿ. ಸಂಪತ್ತಿನ ಬಗ್ಗೆ ನಿಮಗೆ ಆಸಕ್ತಿಯು ಇರದು. ಸಂಗಾತಿಯು ನಿಮ್ಮಿಂದ ಏನನ್ನೋ ಮುಚ್ಚಿಡುತ್ತಾರೆ ಎಂದು ಅನ್ನಿಸಬಹುದು.