
ಶುಕ್ರನು ಇನ್ನು ಕೆಲವು ದಿನಗಳಲ್ಲಿ ಕನ್ಯಾ ರಾಶಿಯನ್ನು ಪ್ರವೇಶಿಸುವನು. ಇದು ಬುಧನ ಆಧಿಪತ್ಯದ ರಾಶಿ. ಆದರೆ ಶುಕ್ರನಿಗೆ ದುರ್ಬಲ ರಾಶಿಯಾಗಿದೆ. ಕನ್ಯಾ ರಾಶಿಯ ಇಪ್ಪತ್ತೇಳನೇ ಅಂಶದಲ್ಲಿ ಶುಕ್ರನು ಅತ್ಯಂತ ಕ್ಷೀಣಬಲನಾಗಿರುವನು. ಈ ಸಂದರ್ಭದಲ್ಲಿ ತಾನು ಕೊಡಬೇಕಾದ ಫಲವನ್ನು ಕೊಡಲು ವಿಫಲನಾಗುತ್ತಾನೆ.
ಇದೇ ರಾಶಿಯನ್ನು ಶುಕ್ರನು ಪ್ರವೇಶಿಸುವ ಕಾರಣ ದೈಹಿಕ ಹಾಗು ಮಾನಸಿಕ ಸ್ವಾಸ್ಥ್ಯವು ಹಾಳಾಗುವುದು. ಕೇತುವೂ ಇದೇ ರಾಶಿಯಲ್ಲಿ ಸ್ಥಿತನಾದುದರಿಂದ ಅಧೈರ್ಯವು ಹೆಚ್ಚು ಕಾಣುವುದು.
ಈ ರಾಶಿಯವರಿಗೆ ಬರುವ ನಿಮ್ಮ ಸಂಪತ್ತು ಬಾರದೇ ಇರುವುದು. ನಿಮ್ಮ ಮಾತನ್ನು ಕೇಳಿಸುವುದು ಕಷ್ಟವಾಗುವುದು. ಇದಕ್ಕಾಗಿ ಅತಿಯಾಗಿ ಕೋಪಹೊಳ್ಳುವಿರಿ.
ಇದು ಶುಕ್ರನ ಉಚ್ಚರಾಶಿಯಾಗಿದೆ. ಈ ರಾಶಿಯ ಇಪ್ಪತ್ತೇಳನೇ ಅಂಶದಲ್ಲಿ ತನ್ನ ಪೂರ್ಣಫಲವನ್ನು ಈತ ಕೊಡುತ್ತಾನೆ. ಆದರೆ ಈಗ ನೀಚನಾದ ಕಾರಣ ಸಂಗಾತಿಯಿಂದ ತೊಂದರೆ. ಅನ್ಯ ಸ್ತ್ರೀಯರಿಂದ ಅಪಮಾನ, ಗುರು ಹಿರಿಯರಿಂದ ಸಲ್ಲದ ಮಾತುಗಳನ್ನು ಕೇಳಬೇಕಾಗುವುದು.
ಇದನ್ನೂ ಓದಿ: ಚಿನ್ನದ ಉಂಗುರವು ಈ 4 ರಾಶಿಯವರಿಗೆ ಭಾರೀ ಅದೃಷ್ಟವನ್ನು ತರುತ್ತದೆ!
ಈ ರಾಶಿಯು ಶುಕ್ರನ ರಾಶಿ. ಶುಕ್ರನಿಂದ ನವಮಸ್ಥಾನದ ರಾಶಿಯಾದರೂ ಅಶುಭಫಲವನ್ನು ಪಡೆಯಬೇಕಾಗುವುದು. ಕರ್ಮದಲ್ಲಿ ಅನಾಸಕ್ತಿ, ಧಾರ್ಮಿಕ ಕಾರ್ಯದಲ್ಲಿ ಅಶ್ರದ್ಧೆ, ಹಿರಿಯರ ಮೇಲೆ ಗೌರವವಿರದು, ಕಲಾವಿದರು ಸ್ವಲ್ಪ ಕಾಲ ತಟಸ್ಥವಾಗಿರಬೇಕಾದೀತು.
ಹೀಗೆ ಪ್ರತಿಕೂಲವೇ ಹೆಚ್ಚಿರುವ ಸಂದರ್ಭದಲ್ಲಿ ಭೋಗಕ್ಕೆ ಬೇಕಾದ ವಸ್ತಿಗಳನ್ನು ಖರೀದಿ ಮಾಡುವುದು ಉಚಿಯವಲ್ಲ. ಅನಂತರ ನಷ್ಟವನ್ನೂ ಕಾಣಬೇಕಾದೀತು. ಅಥವಾ ಅದಕ್ಕೋಸ್ಕರ ಸಂಪತ್ತನ್ನು ಕಳೆಯಬೇಕಾಗಬಹುದು. ಆದಷ್ಟು ಜಾಗರೂಕತೆಯ ಹೆಜ್ಜೆ ಇಟ್ಟು ಬರುವ ಸಂಕಟವನ್ನು ದಾಟಿದರೆ ಅನಂತರ ನಿಶ್ಚಿಂತೆಯಿಂದ ಇರಲು ಸಾಧ್ಯ.
-ಲೋಹಿತ ಹೆಬ್ಬಾರ್ – 8762924271