Horoscope: ಈ ರಾಶಿಯವರು ಕೂಡಿಟ್ಟ ಹಣವನ್ನು ಕಳೆದುಕೊಳ್ಳಬೇಕಾದೀತು
ಆಗಸ್ಟ್ 22, 2024ರ ನಿಮ್ಮ ರಾಶಿಭವಿಷ್ಯ: ನಿಮ್ಮ ಮುಂದಾಲೋಚನೆಯು ಹೆಚ್ಚಿನ ಅನುಕೂಲವನ್ನು ಮಾಡಲಿದೆ. ಬೆಳಗಿನ ಜಾವ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಅನೇಕ ಆರೋಗ್ಯದ ಸಮಸ್ಯೆಗಳು ದೂರಾಗಲಿದೆ. ಮೂಲಧನವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ. ಸೂಕ್ಷ್ಮ ವಿಚಾರಗಳನ್ನು ಪಕ್ಷಪಾತವಿಲ್ಲದೇ ನಿರ್ಣಯಿಸಬೇಕಾಗುವುದು. ಹಾಗಾದರೆ ಆಗಸ್ಟ್ 22ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಸುಕರ್ಮ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:49 ಗಂಟೆ, ರಾಹು ಕಾಲ ಮಧ್ಯಾಹ್ನ 02:09 ರಿಂದ 03:43, ಯಮಘಂಡ ಕಾಲ ಬೆಳಿಗ್ಗೆ 06:21 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:28 ರಿಂದ 11:02ರ ವರೆಗೆ.
ಮೇಷ ರಾಶಿ: ನಿಮ್ಮ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡಿದೆ. ಇಂದು ನೀವು ಅತಿಥಿಗಳ ಕಡೆ ಗಮನ ಕೊಡದೆ ಅವರಿಗೆ ಬೇಸರ ಮಾಡುವಿರಿ. ಅತಿಯಾದ ಬಳಕೆಯಿಂದ ಸಂಬಂಧಗಳು ಹಳಸಬಹುದು. ಸಂಗಾತಿಯ ಮಾತನ್ನು ನೆರವೇರಿಸುವುದು ಕಷ್ಟವಾಗಬಹುದು. ನೀವು ಇಂದು ಅಧ್ಯಾತ್ಮದ ವಿಚಾರದಿಂದ ಪ್ರಭಾವಿತರಾಗಿರುವಿರಿ. ನಿಮ್ಮ ಆತುರದ ನಿರ್ಧಾರದಿಂದ ಕುಟುಂಬಕ್ಕೆ ಸಮಸ್ಯೆಯಾಗಬಹುದು. ಅತಿಯಾದ ಭೋಜನವು ನಿಮಗೆ ಸಂಕಷ್ಟವನ್ನು ಉಂಟುಮಾಡಬಹುದು. ಗಂಭೀರವಾದ ವಿಷಯವನ್ನು ಬಹಳ ಲಘುವಾಗಿ ತೆಗೆದುಕೊಳ್ಳುವಿರಿ. ನಿಮ್ಮ ಯೋಜನೆಯ ಸಂಪೂರ್ಣ ಚಿತ್ರಣ ದೊರೆತಮೇಲೆ ಕಾರ್ಯವನ್ನು ಆರಂಭಿಸಿ. ಅವಸರವಾಗಿ ಬೇಡ. ಸಂತಾನ ವಾರ್ತೆಯಿಂದ ಶುಭವಿದೆ. ಕಛೇರಿಯಲ್ಲಿ ಇಂದು ವಾದಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಸಾಲಬಾಧೆ ತಟ್ಟುವ ಸಾಧ್ಯತೆ ಇದೆ. ಅದನ್ನು ಸರಿ ಮಾಡಿಕೊಳ್ಳುವ ಮಾರ್ಗವೂ ಇದೆ. ಎಲ್ಲದಕ್ಕೂ ಪಲಾಯನ ಮಾಡದೇ ಎದುರಿಸುವ ಧೈರ್ಯ ಮಾಡಿ.
ವೃಷಭ ರಾಶಿ: ಇಂದು ನಿಮಗೆ ಕೆಲವು ಕಾರ್ಯಗಳು ವ್ಯರ್ಥವೆನಿಸಬಹುದು. ಯಾರನ್ನೋ ಪ್ರಶಂಸಿಸಿದ ಮಾತ್ರ ನೀವು ಚಿಕ್ಕವರಾಗಲಾರಿರಿ. ಒಂದಾದ ಮೇಲೊಂತೆ ಬರುವ ಕೆಲಸಗಳು ನಿಮಗೆ ಇದ್ದ ಒತ್ತಡವಾಗಲಿದೆ. ಅನಗತ್ಯ ಓಡಾಟವನ್ನು ನಿಲ್ಲಿಸಿ. ಇದು ನಷ್ಟದ ಓಡಾಟವೇ ಆಗಲಿದೆ. ದೇಹವನ್ನು ನೀವು ದಂಡಿಸುವಿರಿ. ಅತಿಯಾದ ದಾಹದಿಂದ ನೀವು ಕಂಗೆಡುವಿರಿ. ಕಛೇರಿಯ ಘಟನೆಯನ್ನು ಮನೆಯಲ್ಲಿ ಹೇಳಿ ಅವರನ್ನು ಆತಂಕಕ್ಕೆ ತಳ್ಳುವವರಿದ್ದೀರಿ. ಸ್ನೇಹಿತರ ಸಹವಾಸದಿಂದ ಧನನಷ್ಟವು ಆಗಲಿದೆ. ಕುಚೋದ್ಯದ ಮನಃಸ್ಥಿತಿ ನಿಮಗೆ ಇಷ್ಡವಾಗದು. ಇದಕ್ಕೆ ಜಗಳವೂ ಆಗಬಹುದು. ಆದಷ್ಟು ತಾಳ್ಮೆಯಿಂದ ಇರುವುದು ಮುಖ್ಯ. ಕೆಲವು ವಿರೋಧವನ್ನು ನೀವು ಸಹಿಸಿಕೊಳ್ಳಲು ತಯಾರಿರಬೇಕು. ಅದರೂ ಅನಿವಾರ್ಯ ಎನಿಸೀತು. ಸನ್ನಿವೇಶವನ್ನು ಎದುರಿಸುವುದು ಕಷ್ಟವಾಗಲಾರದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಸಮಾಧಾನದ ಚಿತ್ತವು ಅನೇಕ ವಿಚಾರಕ್ಕೆ ಪೂರಕ.
ಮಿಥುನ ರಾಶಿ; ನಿಮ್ಮ ಆಲೋಚನೆಗಳಿಂದ ನಿಮಗೆ ಯೋಗ್ಯ ಸ್ಥಾನವು ಲಭಿಸುವುದು. ನಿರ್ಲಕ್ಷ್ಯವನ್ನು ಮಾಡದೇ ಕೆಲಸಗಳನ್ನು ಮಾಡಿ ಮುಗಿಸಿ. ಉತ್ಸಾಹಕ್ಕೆ ಭಂಗ ಬರುವ ಸನ್ನಿವೇಶವನ್ನು ನೀವು ಎದುರಿಸುವಿರಿ. ನೀವು ಇನ್ನೊಬ್ಬರ ಜೊತೆ ಮಾತನಾಡುವುದು ಇಷ್ಟವಾಗದು. ತುರ್ತು ಕಾರ್ಯದ ಕಾರಣ ಪ್ರಯಾಣ ಮಾಡಬೇಕಿದ್ದು ಅದರ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮುಂದಾಲೋಚನೆಯು ಹೆಚ್ಚಿನ ಅನುಕೂಲವನ್ನು ಮಾಡಲಿದೆ. ಬೆಳಗಿನ ಜಾವ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ, ನಿಮ್ಮ ಅನೇಕ ಆರೋಗ್ಯದ ಸಮಸ್ಯೆಗಳು ದೂರಾಗಲಿದೆ. ಮೂಲಧನವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ. ಸೂಕ್ಷ್ಮ ವಿಚಾರಗಳನ್ನು ಪಕ್ಷಪಾತವಿಲ್ಲದೇ ನಿರ್ಣಯಿಸಬೇಕಾಗುವುದು. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು. ಸ್ನೇಹಿತರ ಮಾತಿನಿಂದ ಹಣಕಾಸಿನ ವಿಚಾರ
ಕರ್ಕಾಟಕ ರಾಶಿ; ಎಲ್ಲದಕ್ಕೂ ಒಂದೇ ರೀತಿಯ ಪರಿಹಾರವಿಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗಬಹುದು. ನಿಮ್ಮ ಅಗತ್ಯದ ಹಣವನ್ನು ಪೂರೈಸಲು ಶ್ರಮಪಡುವಿರಿ. ನೂತನ ಉದ್ಯೋಗವನ್ನು ಅರಸುತ್ತಿರುವಿರಿ. ಈಗಾಗಲೇ ಉದ್ಯೋಗದಲ್ಲಿ ಇರುವವರು ವೇತನವನ್ನು ಹೆಚ್ಚಿಸಲು ವಿನಂತಿಸಲಿದ್ದೀರಿ. ನಿಮ್ಮದೇ ಆದ ವ್ಯಕ್ತಿತ್ವವು ನಿಮಗೆ ಗೌರವವನ್ನು ತರಿಸಬಹುದು. ದುರ್ಘಟನೆಯನ್ನು ಮನಸ್ಸಿನಿಂದ ಹೊರಹಾಕಲು ಕಷ್ಟವಾದೀತು. ಸಾಲವನ್ನು ಹಿಂಪಡೆಯುವ ಬಗ್ಗೆ ಗಂಭೀರವಾಗಿ ಆಲೋಚಿಸಿ. ಸಂತೋಷವನ್ನು ನೀವು ಯಾರ ಜೊತೆ ಹಂಚಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಸಂತೋಷ ನಿಂತಿದೆ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ತುಡಿತವಿದ್ದು ಮಾರ್ಗದರ್ಶನ ಹಾಗೂ ಸಹಾಯದ ಕೊರತೆ ಇರಲಿದೆ. ಯಾವುದನ್ನೂ ಅತಿಯಾಗಿ ಮಾಡಿಕೊಳ್ಳುವುದು ಬೇಡ. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ.




