Weekly Astrology in Kannada: ವಾರ ಭವಿಷ್ಯ: ಜು.​08 ರಿಂದ 14 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 06, 2024 | 5:55 PM

ಜುಲೈ ತಿಂಗಳ ಮೊದಲ ವಾರವು 08 ರಿಂದ 14 ರವರೆಗೆ ಇರಲಿದ್ದು, ಶುಭಾಶುಭಫಲಗಳು ನಿಮ್ಮ ಪಾಲಿಗಿವೆ. ಬುಧ ಹಾಗೂ ಶುಕ್ರರು ಸ್ಥಾನವನ್ನು ಬದಲಿಸಲಿದ್ದು ಕೆಲವು ರಾಶಿಯವರಿಗೆ ಶುಭವನ್ನೂ ಅಶುಭವನ್ನೂ ಮಿಶ್ರಫಲವನ್ನೂ ಕೊಡುವರು.

Weekly Astrology in Kannada: ವಾರ ಭವಿಷ್ಯ: ಜು.​08 ರಿಂದ 14 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ರಾಶಿ ಭವಿಷ್ಯ
Follow us on

ಜುಲೈ ತಿಂಗಳ ಮೊದಲ ವಾರವು 08 ರಿಂದ 14 ರವರೆಗೆ ಇರಲಿದ್ದು, ಶುಭಾಶುಭಫಲಗಳು ನಿಮ್ಮ ಪಾಲಿಗಿವೆ. ಬುಧ ಹಾಗೂ ಶುಕ್ರರು ಸ್ಥಾನವನ್ನು ಬದಲಿಸಲಿದ್ದು ಕೆಲವು ರಾಶಿಯವರಿಗೆ ಶುಭವನ್ನೂ ಅಶುಭವನ್ನೂ ಮಿಶ್ರಫಲವನ್ನೂ ಕೊಡುವರು.

ಮೇಷ ರಾಶಿ : ಜುಲೈ ತಿಂಗಳ ಎರಡನೇ ವಾರ ಈ ರಾಶಿಯವರಿಗೆ ಶುಭ. ರಾಶಿಯ ಅಧಿಪತಿಯಾದ ಕುಜನು ದ್ವಿತೀಯಸ್ಥಾನಕ್ಕೆ ಚಲಿಸುವನು. ಗುರುವಿನ ಜೊತೆ ಇರುವ ಕಾರಣ ಮಿತ್ರನ ಮನೆಯೂ ಆದ ಕಾರಣ ವಾಹನದಿಂದ ಶತ್ರುವಿನಿಂದ ಹಣ ಸಿಗುವ ಸಾಧ್ಯತೆ ಇದೆ. ಕರ್ಮಾಧಿಪತಿಯು ಏಕಾದಶದಲ್ಲಿ ಇರುವುದು ನಿಮ್ಮ ಕಾರ್ಯಕ್ಕೆ ಯಾವುದೇ ಅಡ್ಡಿ ಬಾರದು. ಆದರೆ ಹಿರಿಯರ ಮಾತುಗಳನ್ನು ಅನುಸರಿಸುವುದರಿಂದ ಗುರಿಯಿಂದ ವಿಚಲನಗೊಳ್ಳುವುದಿಲ್ಲ. ವ್ಯಾಪಾರವನ್ನು ಹೆಚ್ಚಿಸಲು ಹೊಸ ಪಾಲುದಾರರು ರೂಪುಗೊಳ್ಳುತ್ತಾರೆ. ಮಹಿಳೆಯರಿಗೆ ಆರೋಗ್ಯ ಸಮಸ್ಯೆಯು ಕಾಡುವುದು. ಇದರಿಂದಾಗಿ ಅವರು ಮಾನಸಿಕವಾಗಿ ತೊಂದರೆಗೊಳಗಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದವರು ಮಾತಿನ ಬಗ್ಗೆ ವಿಶೇಷ ಕಾಳಜಿ ವಹಿಸಿ.

ವೃಷಭ ರಾಶಿ : ರಾಶಿಚಕ್ರದ ಎರಡನೇ ರಾಶಿಗೆ ಜುಲೈ ತಿಂಗಳ ಎರಡನೇ ವಾರ ಮಿಶ್ರಫಲ.‌ ರಾಶಿಯ ಅಧಿಪತಿ ತೃತೀಯ ಸ್ಥಾನಕ್ಕೆ ಹೋಗಲಿದ್ದು ಕಲಾವಿದರಿಗೆ ಹಿನ್ನಡೆಯಾಗುವ ಸಂಭವವಿದೆ. ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸಲು ಸ್ವಲ್ಪ ಕಷ್ಟಪಡಬೇಕಾಗುತ್ತದೆ, ಕೆಲಸವಿದ್ದರೆ ಅದನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಕರ್ಮಾಧಿಪತಿಯು ಕರ್ಮಸ್ಥಾನದಲ್ಲಿ ಇರುವುದು ಶುಭವೇ. ಉತ್ತಮ‌ ಕೆಲಸವು ಸಿಗುವುದು. ಸಪ್ತಮಾಧಿಪತಿಯು ವ್ಯಯಾಧಿಪತಿಯೂ ಅಸದ ಕುಜನು ನಿಮ್ಮ ರಾಶಿಯಲ್ಲಿ ಇರುವುದು ಸಂಗಾತಿಂದ ಮಾನಸಿಕ ಆರ್ಥಿಕ ತೊಂದರೆಗಳು ಆಗುವುದು.‌ಉದ್ಯಮಿಗಳು ಈ ವಾರ ವ್ಯವಹಾರಗಳನ್ನು ಮಾಡಬಹುದು. ಈ ವಾರ ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಧಾರ್ಮಿಕ ಜನರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಮಿಥುನ ರಾಶಿ : ಜುಲೈ ತಿಂಗಳ ಎರಡನೇ ವಾರದಲ್ಲಿ ಮಿಶ್ರಫಲ. ರಾಶಿಯ ಅಧಿಪಿಯಾದ ಬುಧನು ದ್ವಿತೀಯದಲ್ಲಿ ಇರುವನು. ತಾಯಿಯ ಕಡೆಯಿಂದ ನಿಮಗೆ ಕೆಲಸಗಳು ಆಗುವುದು. ಐಷಾರಾಮಿ ವಸ್ತುಗಳ ವ್ಯಾಪಾರಿಗಳು ಈ ವಾರ ಲಾಭ ಪಡೆಯುವ ಸಾಧ್ಯತೆಯಿದೆ. ಅವರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸರಕುಗಳನ್ನು ಇಡಬೇಕು. ಮನೆಯ ಸೌಕರ್ಯಗಳು ಹೆಚ್ಚಾಗುವ ಸಾಧ್ಯತೆಯೂ ಇದೆ. ಸಂಗಾತಿಯ ಪ್ರೀತಿಯು ಕಡಿಮೆಯಾಗುವುದು. ಈ ವಾರ ವಾಹನ ಅಪಘಾತದ ಸಾಧ್ಯತೆ ಇದೆ. ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವುದು ಒಳ್ಳೆಯದು. ಬಹಳ ದಿನಗಳಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಕೆಲಸಗಳು ಈ ವಾರ ಸುಲಭವಾಗಿ ಜರುಗಲಿವೆ. ಗುರುಚರಿತ್ರೆಯನ್ನು ಓದುವ ಅಭ್ಯಾಸ ಇರಲಿ.

ಕರ್ಕ ರಾಶಿ : ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಶುಭ. ಗುರುವು ಏಕಾದಶದಲ್ಲಿ ಇದ್ದು ನಿಮ್ಮ ಇಚ್ಛೆಗಳನ್ನು ಪೂರ್ಣ ಮಾಡಿಸುವನು. ಜನರು ಈ ವಾರ ತಮ್ಮ ಕೆಲಸ ಮತ್ತು ತಂಡಕ್ಕೆ ಉತ್ತಮ ನಿರ್ದೇಶನಗಳನ್ನು ನೀಡುವುದಕ್ಕಾಗಿ ಕಛೇರಿಯಲ್ಲಿ ಅಧಿಕಾರಿಗಳಿಂದ ಪ್ರಶಂಸೆಯನ್ನು ಪಡೆಯುತ್ತಾರೆ. ನೀವು ಕೀಟನಾಶಕಗಳ ವ್ಯವಹಾರವನ್ನು ಮಾಡಿದರೆ. ಅವರು ಅದರಿಂದ ಹೊರಬರಬೇಕು. ಜನರೊ ಜೊತೆಗೆ ಬೆರೆಯಬೇಕು ಮತ್ತು ಸಂತೋಷವಾಗಿರಬೇಕು. ಈ ವಾರ ನಿಮ್ಮ ರಾಶಿಯಲ್ಲಿ ಬುಧ ಶುಕ್ರರು ಇರುವ ಕಾರಣ ಆರೋಗ್ಯದಲ್ಲಿ ಚೇತರಿಕೆ ಇರುವುದು. ಆದರೆ ಈ ವಾರದ ಮಧ್ಯದಲ್ಲಿ ವಿಶೇಷವಾಗಿ ಎಚ್ಚರಿಕೆ ಅಗತ್ಯ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ನಿಮ್ಮ ವೈಯಕ್ತಿಕ ಜೀವನದಲ್ಲಿ ನೀವು ಸಾರ್ವಜನಿಕ ಸಂಪರ್ಕಗಳ ಲಾಭವನ್ನು ಪಡೆಯಲಿದ್ದೀರಿ.

ಸಿಂಹ ರಾಶಿ : ಜುಲೈ ತಿಂಗಳಲ್ಲಿ ರಾಶಿ ಚಕ್ರದ ಐದನೇ ರಾಶಿಯವರಿಗೆ ಮಿಶ್ರಫಲ. ರಾಶಿಯ ಅಧಿಪತಿಯಾದ ಸೂರ್ಯನು ಏಕಾದಶಲ್ಲಿ ಇರುವನು. ಸರ್ಕಾರದ ಉದ್ಯೋಗಿಗಳಿಗೆ ಸ್ಥಾನ ಪ್ರಾಪ್ತಿ. ಉದ್ಯೋಗಿಗಳು ತಮ್ಮ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಅವರು ಮೇಲಧಿಕಾರಿಯ ಕೋಪವನ್ನು ಎದುರಿಸಬೇಕಾಗಬಹುದು. ವಾಹನ ವ್ಯಾಪಾರದಲ್ಲಿ ಈ ವಾರ ಲಾಭದ ಸಾಧ್ಯತೆ ಇದೆ. ಕುಟುಂಬದ ಪ್ರತಿಯೊಬ್ಬರನ್ನು ಗೌರವಿಸಿ ಮತ್ತು ತಂದೆಗೆ ಉಡುಗೊರೆಗಳನ್ನು ತಂದುಕೊಡಿ. ಕರ್ಮಸ್ಥಾನಧಿಪತಿಯು ದ್ವಾರದ ಇರುವುದು ಕಿರಿಕಿರಿ ಹೆಚ್ಚು ಮಾಡುವುದು. ಇದರಿಂದ ನಿಮ್ಮ ತಂದೆಗೆ ಸಂತೋಷಪಡುತ್ತಾರೆ ಮತ್ತು ಅವರು ಮನಃಪೂರ್ವಕವಾಗಿ ನಿಮ್ಮನ್ನು ಆಶೀರ್ವದಿಸುತ್ತಾರೆ. ಕಣ್ಣಿನ ತೊಂದರೆ ಕಾಣಿಸುವುದು.

ಕನ್ಯಾ ರಾಶಿ : ಈ ವಾರ ರಾಶಿಚಕ್ರದ ಆರನೇ ರಾಶಿಯವರಿಗೆ ಶುಭಫಲ. ರಾಶಿಯ ಅಧಿಪತಿಯಾದ ಬುಧನು ಏಕಾದಶದಲ್ಲಿ ಇರುವನು. ಕವಿಗಳು, ಶಿಲ್ಪಿಗಳಿಗೆ ಶುಭ. ಅವಕಾಶಗಳು, ಆದಾಯದ ಮೂಲಗಳು ಹೆಚ್ಚಾಗುವುದು. ಜನರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಇದರ ಪರಿಣಾಮವಾಗಿ ನೀವು ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸಬಹುದು. ನೀವು ತೊಂದರೆಗಳನ್ನು ತೊಡೆದುಹಾಕಲು ಬಯಸಿದರೆ. ಸಪ್ತಮದಲ್ಲಿ ರಾಹುವಿರುವುದು ಸಂಗಾತಿಯ ಬಗ್ಗೆ ವೈಮನಸ್ಯ ಬರುವುದು. ಅನಂತರ ನಿಮ್ಮ ಪ್ರೀತಿಪಾತ್ರರ ಜೊತೆ ಈ ಬಗ್ಗೆ ಚರ್ಚಿಸಿ. ಹಳೇ ರೋಗಗಳ ಬಗ್ಗೆ ಎಚ್ಚರವಿರಲಿ. ಕೇತುವು ನಿಮ್ಮ ಒತ್ತಡವನ್ನು ಹೆಚ್ಚು ಮಾಡುವನು.

ತುಲಾ ರಾಶಿ : ಜುಲೈ ತಿಂಗಳಲ್ಲಿ ಈ ರಾಶಿಯವರಿಗೆ ಅಶುಭ. ಕರ್ಮಸ್ಥಾನದಲ್ಲಿ ಶುಕ್ರನು ಕಲಾಕಾರರಿಗೆ ಪ್ರೋತ್ಸಾಹ ಕೊಡಿಸುವನು. ಜನರು ಈ ವಾರ ಸೃಜನಾತ್ಮಕ ಕೆಲಸಕ್ಕೆ ಆದ್ಯತೆ ನೀಡಬೇಕಾಗುತ್ತದೆ. ಇಲ್ಲದಿದ್ದರೆ ನೀವು ಅಸಮಾಧಾನಗೊಳ್ಳಬಹುದು. ವ್ಯಾಪಾರ ವಿಷಯಗಳಲ್ಲಿ ಸ್ಪರ್ಧೆಯು ಹೆಚ್ಚು ಗೋಚರಿಸುತ್ತದೆ. ಆದರೆ ನೀವು ವಾರದ ಮಧ್ಯದಲ್ಲಿ ಸಾಲವನ್ನು ಸಹ ಪಡೆಯುವಿರಿ. ಪಂಚಮದಲ್ಲಿ ಶನಿಯು ದೇಹಪೀಡೆಯನ್ನೂ ಮಾನಸಿಕ ಒತ್ತಡವನ್ನೂ ಹೆಚತಚಿಸುವನು. ಈ ವಾರ ಬರವಣಿಗೆಯಲ್ಲಿ ಆಸಕ್ತಿ ಇರುವವರಿಗೆ ಅವಕಾಶ ಸಿಗುತ್ತದೆ. ಅವರ ಕೆಲಸವನ್ನು ಗೌರವಾನ್ವಿತ ಸ್ಥಳದಲ್ಲಿ ಪ್ರಕಟಿಸಬಹುದು. ಶತ್ರು ಬಾಧೆಯೂ ಇರದು. ಆರೋಗ್ಯವು ಚೇತರಿಕೆಯಾಗುವುದು.

ವೃಶ್ಚಿಕ ರಾಶಿ : ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಶುಭ. ಗುರುವುದು ಸಪ್ತಮದಲ್ಲಿ ಇದ್ದು ಎದುರಾದ ಕಷ್ಟವನ್ನು ನಿವಾರಿಸುವನು. ಸಂಗಾತಿಯ ಕಡೆಯಿಂದ ಕಿರಿಕಿರಿ ಎನಿಸಿದರೂ ಅದನ್ನು ತಾಳ್ಮೆಯಿಂದ ಎದುರಿಸಿ. ಜನರು ಉನ್ನತ ಸ್ಥಾನವನ್ನು ಪಡೆಯಲು ತಂಡ ಮತ್ತು ಮುಖ್ಯಸ್ಥರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕು. ಉತ್ತಮ ಕೆಲಸದಿಂದ ಮಾತ್ರ ಪ್ರಗತಿ ಸಾಧ್ಯ. ಉದ್ಯಮದಲ್ಲಿ ಮೇಲಧಿಕರಿಗಳ ಒತ್ತಡ, ನೌಕರರ ಅಸಡ್ಡೆಯಿಂದ ಬಹಳ ಸಂಕಟವಾಗುವುದು. ಎಲ್ಲರೂ ಒಗ್ಗಟ್ಟಾಗಿ, ಪರಸ್ಪರ ಶಕ್ತಿಯಾಗಿ ಸಹಕರಿಸುವುದು ಬಹಳ ಮುಖ್ಯ. ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯು ಕಾಣಿಸಿಕೊಳ್ಳಬಹುದು. ಅಜಾಗರೂಕತೆಯಿಂದ ದೂರವಿರಬೇಕು. ಈ ಬಾರಿ ಅಜಾಗರೂಕತೆಯಿಂದ ಮಾತ್ರ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.

ಧನು ರಾಶಿ : ಜುಲೈ ತಿಂಗಳ ಎರಡನೇ ವಾರ ಈ ರಾಶಿಯವರಿಗೆ ಅಶುಭ. ಗುರುವು ಷಷ್ಠದಲ್ಲಿ ಇರುವುದು ಅಪಮಾನ, ರೋಗಬಾಧೆಗಳಿಂದ ಹತಾಶರಾಗುವಿರಿ. ಈ ಸಮಯದಲ್ಲಿ ನೀವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ತಂದೆಯ ವ್ಯವಹಾರದಲ್ಲಿ ಉದ್ವಿಗ್ನತೆ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು.‌ ನೀವು ವ್ಯಾಪಾರಕ್ಕಾಗಿ ತಂದೆಯ ಹಣವನ್ನು ಬಳಸದಿದ್ದರೆ ಅದು ಉತ್ತಮವಾಗಿರುತ್ತದೆ. ಕರ್ಮಸ್ಥಾನಾಧಿಪತಿಯು ಅಷ್ಟಮದಲ್ಲಿ ಇರುವುದು ನಿಮ್ಮ ದುರ್ಬಲ ಸ್ಥಿತಿಗೆ ಕಾರಣ. ಸಹನೆಯೇ ಮುಖ್ಯವಾಗಿ ಸದ್ಯ ಬೇಕಾಗಿರುವ ಭಾವ. ಏಕೆಂದರೆ ಅದು ವಿವಾದವನ್ನು ಇನ್ನಷ್ಟು ಹೆಚ್ಚಿಸಬಹುದು. ಹಿತಶತ್ರುಗಳಿಂದ ಆಗಾಗ ಕಿರಿಕಿರಿ ಇರಲಿದೆ. ಗುರುವಿನ ಆಶೀರ್ವಾದ ಪಡೆಯಿರಿ.

ಮಕರ ರಾಶಿ : ಜುಲೈ ತಿಂಗಳ ಮೂರನೇ ವಾರ ರಾಶಿಚಕ್ರದ ಹತ್ತನೇ ರಾಶಿಯವರಿಗೆ ಶುಭ. ಸಪ್ತದಲ್ಲಿ ಶುಕ್ರ ಹಾಗೂ ಬುಧರು ಅವಿವಾಹಿತರಿಗೆ ವಿವಾಹಭಾಗ್ಯವನ್ನು ಕೊಡುವರು. ಉದ್ಯೋಗದಲ್ಲಿ ಪ್ರಗತಿಯೂ ಆಗಲಿದೆ. ದೂರಸಂಪರ್ಕ ವ್ಯವಹಾರ ಮಾಡುವ ಉದ್ಯಮಿಗಳು ಈ ಬಾರಿ ಸ್ವಲ್ಪ ನಿರಾಸೆಯನ್ನು ಎದುರಿಸಬೇಕಾಗುತ್ತದೆ. ಸರ್ಕಾರದ ಕಾರ್ಯದಲ್ಲಿ ಹಿನ್ನಡೆಯಾಗಲಿದೆ. ಪ್ರೇಮವಾಗುವ ಸಂಭವವು ಇರುವುದು. ಮಕ್ಕಳ ವಿಚಾರವನ್ನು ಹಂಚಿಕೊಳ್ಳುವ ಅವಕಾಶವಿರುವುದು. ಇಷ್ಟವಿಲ್ಲದ ಕಾರ್ಯಕ್ಕೆ ನಿಮಗೆ ಒತ್ತಾಯ ಮಾಡಬಹುದು. ನಯವಾಗಿ ಅದನ್ನು ತಳ್ಳಿಹಾಕಿ. ಯಾವುದಕ್ಕೂ ಹೆದರದೇ ಧೈರ್ಯದಿಂದ ಕೆಲಸವನ್ನು ಮಾಡುವಿರಿ.

ಕುಂಭ ರಾಶಿ : ಈ ರಾಶಿಯವರಿಗೆ ಜುಲೈ ತಿಂಗಳಲ್ಲಿ ಮಿಶ್ರಫಲ. ಕರ್ಮಸ್ಥಾಮಾಧಿಪತಿಯು ಷಷ್ಠದಲ್ಲಿ ಇದ್ದುದು ಸ್ತ್ರೀಯರಿಂದ ದ್ವೇಷವನ್ನು ಕಟ್ಟಿಕೊಳ್ಳುವಿರಿ. ಕೆಲಸಗಳು ಉನ್ನತ ಅಧಿಕಾರಿಗಳ ಕಣ್ಗಾವಲಿನಲ್ಲಿದ್ದು, ಯಾವುದೇ ದೋಷ ಬಾರದಂತೆ ತಮ್ಮ ಎಲ್ಲ ಕೆಲಸಗಳನ್ನು ಜಾಗರೂಕತೆಯಿಂದ ಮಾಡಬೇಕು. ಗಂಭೀರ ಮಾತು ಜನರನ್ನು ಆಕರ್ಷಿಸುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ವಾಹನ ಸೌಖ್ಯವು ಸಿಗಲಿದೆ. ತಾಯಿಯ ಆಶೀರ್ವಾದವನ್ನು ಪಡೆಯುವಿರಿ. ಸಣ್ಣಪುಟ್ಟ ಖಾಯಿಲೆಯಲ್ಲೂ ಜಾಗೃತರಾಗಿರಬೇಕು. ಯಾವುದಾದರೂ ಅಪವಾದವು ಸುತ್ತಿಕೊಳ್ಳಬಹುದು. ಸೇವಾ ಮನೋಭಾವದಿಂದ ಕಾರ್ಯವನ್ನು ಮಾಡುವಿರಿ.

ಮೀನ ರಾಶಿ : ಜುಲೈ ತಿಂಗಳ ಎರಡನೇ ವಾರದಲ್ಲಿ ಈ ರಾಶಿಯವರಿಗೆ ಅಶುಭ. ಗುರುವಿನ ಬಲವು ಇಲ್ಲದಿರುವುದು ಮೊದಲ ಹಿನ್ನಡೆಗೆ ಕಾರಣ. ರಾಶಿಯಲ್ಲಿ ರಾಹುವು ಬೇಡದ ಚಿಂತನೆಗಳನ್ನು ಹೆಚ್ಚಿಸುವನು. ಜವಾಬ್ದಾರಿಗಳ ಹೊರೆ ಮತ್ತು ಸೋಮಾರಿತನವು ನಿಮಗೆ ಕೆಲಸವನ್ನು ಮಾಡಲು ಬಿಡುವುದಿಲ್ಲ, ಯೋಜನೆಯೊಂದಿಗೆ ನೀವು ಸೋಮಾರಿತನವನ್ನು ಬಿಟ್ಟು ಮುನ್ನಡೆಯುವ ಮೂಲಕ ಯಶಸ್ಸನ್ನು ಪಡೆಯುತ್ತೀರಿ. ದೊಡ್ಡ ವ್ಯವಹಾರಗಳ ಸಾಧ್ಯತೆಯಿದೆ. ವೈವಾಹಿಕ ವಿಚಾರದಲ್ಲಿ ನಿಮಗೆ ಪೂರ್ಣ ಸಹಕಾರ ಸಿಗದು. ಕುಟುಂಬದಲ್ಲಿ ಸಂಗಾತಿಯಿಂದ ಮತ್ತು ಹತ್ತಿರದ ಸ್ನೇಹಿತರಿಂದ ಬೆಂಬಲವನ್ನು ಪಡೆಯಲಾಗುತ್ತದೆ. ಸಂಗಾತಿಯನ್ನು ನೀವೇ ಆಯ್ಕೆ ಮಾಡಿಕೊಳ್ಳುವಿರಿ. ಹಿರಿಯರ ಮಾರ್ಗದರ್ಶನ ನಿಮ್ಮನ್ನು ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯುತ್ತದೆ.

-ಲೋಹಿತ ಹೆಬ್ಬಾರ್ – 8762924271 (what’s app only)