
12-10-2025ರಿಂದ 18-10-2025ರವರಗೆ ಅಕ್ಟೋಬರ್ ಎರಡನೇ ವಾರವಾಗಿದ್ದು, ಉದ್ಯೋಗದಲ್ಲಿ ಯಶಸ್ಸು ಅಪಯಶಸ್ಸು, ಶ್ರಮ ಹೆಚ್ಚು, ಫಲ ಕಡಿಮೆ, ಕೆಲವೊಮ್ಮೆ ಶ್ರಮ ಕಡಿಮೆ ಫಲ ಅಧಿಕ ಇದೂ ಇರಲಿದೆ. ಅವರವರ ದಶೆಯು ಆ ಸಮಯದಲ್ಲಿ ಫಲಕೊಡುವ ಕಾರಣ ಅದು ಹಾಗೆ. ನಿಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರಿಯಲಿ. ಫಲ ಕೊಡುವ ಕಾಲಕ್ಕೆ ಉತ್ತಮ ಫಲವನ್ನೇ ಅದು ಕೊಡಲಿದೆ.
ಮೇಷ ರಾಶಿ :
ಅಕ್ಟೋಬರ್ ತಿಂಗಳ ಈ ವಾರ ಕರ್ಮಾಧಿಪತಿ ದ್ವಾದಶದಲ್ಲಿ ಇದ್ದು ಉದ್ಯೋಗದಲ್ಲಿ ಮಂದಗತಿಯಾಗಲಿದೆ. ಮಾಡಿದ ಕೆಲಸಗಳು ವ್ಯರ್ಥವಾಗುವುದು. ಹೊಸ ಅವಕಾಶಗಳು ಎದುರಾಗುತ್ತವೆ. ಹಿರಿಯರಿಂದ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಹೊಸ ಯೋಜನೆಗಳಲ್ಲಿ ಭಾಗವಹಿಸಲು ಅವಕಾಶ ದೊರೆಯುವುದು. ಆತ್ಮವಿಶ್ವಾಸದಿಂದ ಕೆಲಸ ಮಾಡಿದರೆ ಯಶಸ್ಸು ಖಚಿತ. ಕೆಲಸವನ್ನು ಪ್ರೀತಿಸಿ ಮಾಡಿ, ಫಲವಿಲ್ಲದೇ ಇದ್ದರೂ ಅನುಭವ ನಿಮ್ಮದಾಗಲಿದೆ.
ವೃಷಭ ರಾಶಿ :
ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಕರ್ಮಾಧಿಪತಿ ಏಕಾದಶಲ್ಲಿ ಇದ್ದು ಉತ್ಸಾಹವನ್ನು ಕೊಡಿಸುವನು. ಉದ್ಯೋಗವನ್ನು ಎಂಜೋಯ್ ಮಾಡುವಿರಿ. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಸಮಯ. ಹಣಕಾಸು ವಿಷಯಗಳಲ್ಲಿ ಜಾಗರೂಕತಡ ಇರಲಿ. ಸಹನೆ ಮತ್ತು ಶಾಂತಿಗಳು ನಿಮ್ಮನ್ನು ಕಾಪಾಡಲಿವೆ.
ಮಿಥುನ ರಾಶಿ :
ಬುಧನ ಆಧಿಪತ್ಯದ ಈ ರಾಶಿಯವರಿಗೆ ಈ ವಾರ ಕರ್ಮಾಧಿಪತಿ ದ್ವಿತೀಯಕ್ಕೆ ಬರಲಿದ್ದು ಉದ್ಯೋಗ ಮಾಡುವ ಉತ್ಸಾಹ ಹೆಚ್ಚಾಗುವುದು. ಯಾವುದಾದರೂ ಹೊಸ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ಸಂವಹನ ಕೌಶಲ್ಯದಿಂದ ಉತ್ತಮ ಪ್ರಗತಿ. ಹೊಸ ಕಲಿಕೆ ಅಥವಾ ತರಬೇತಿ ಅವಕಾಶ ಸಿಗಬಹುದು. ಕೆಲಸದ ಒತ್ತಡ ಹೆಚ್ಚಾದರೂ ಫಲಿತಾಂಶ ತೃಪ್ತಿಕರವಾಗಿರುತ್ತದೆ. ಯಾವುದಾದರೂ ಆಡಳಿತದ ಪದಾಧಿಕಾರವೂ ಸಿಗಲಿದೆ.
ಇದನ್ನೂ ಓದಿ: ನೀಚಸ್ಥಾನದಲ್ಲಿ ಸೂರ್ಯ, ವೃತ್ತಿಯಲ್ಲಿ ಹಿನ್ನಡೆ; ಈವಾರದ ಭವಿಷ್ಯ ಇಲ್ಲಿದೆ
ಕರ್ಕಾಟಕ ರಾಶಿ :
ಚಂದ್ರಾಧಿಪತ್ಯದ ಈ ರಾಶಿಯವರಿಗೆ ಈ ವಾರ ಕರ್ಮಾಧಿಪತಿ ಕುಜ ನಾಲ್ಕನೇ ರಾಶಿಯಲ್ಲಿ ಇದ್ದು ಉದ್ಯೋಗದ ನಿಮಿತ್ತ ಮನೆಯಲ್ಲಿ ಕಲಹ ಸಾಧ್ಯತೆ. ಸಹೋದರರ ಜೊತೆ ವೈಮನಸ್ಸು ಉಂಟಾಗುವುದು. ಆಫೀಸ್‌ನಲ್ಲಿ ಅಲ್ಪ ಅಡಚಣೆಗಳು ಎದುರಾಗಬಹುದು, ಆದರೆ ಅಂತಿಮವಾಗಿ ಕೆಲಸ ನಿಮ್ಮ ಕೈಗೆ ಬರುತ್ತದೆ. ಹಳೆಯ ಯೋಜನೆಗಳಲ್ಲಿ ಯಶಸ್ಸಿನ ಲಕ್ಷಣ. ನಿಮ್ಮ ಮನಸ್ಸು ಸ್ಥಿರವಾಗಿರಲಿ. ಯಂತ್ರಗಳ ಜೊತೆ ಕೆಲಸ ಅಥವಾ ವಿನ್ಯಾಸಕಾರರಿಗೆ ಒತ್ತಡಗಳು ಹೆಚ್ಚು.
ಸಿಂಹ ರಾಶಿ :
ಈ ರಾಶಿಯವರಿಗೆ ಕರ್ಮಾಧಿಪತಿ ಶುಕ್ರ ದ್ವಿತೀಯದಲ್ಲಿ ನೀಚನಾಗಿದ್ದು ನಿಮ್ಮ ಕಾರ್ಯದಿಂದ ಬೋನಸ್ ಇತ್ಯಾದಿಗಳು ಸಿಗುವುದಿದ್ದರೂ ಅದು ತಪ್ಪಿಹೋಗುವ ಕಾಲ. ಆದರೆ ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಶ್ಲಾಘನೆ ಸಿಗುತ್ತದೆ. ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಹಾಗಿದ್ದರೂ ಆರ್ಥಿಕವಾಗಿ ಸಬಲತೆ ಸಿಗದ ಕಾರಣ ಉದ್ಯೋಗ ಬದಲಾವಣೆ ಯೋಚನೆ ಬರಲಿದೆ.
ಕನ್ಯಾ ರಾಶಿ ;
ಅಕ್ಟೋಬರ್ ತಿಂಗಳ ಈ ವಾರ ಕರ್ಮಾಧಿಪತಿ ದ್ವಿತೀಯದಲ್ಲಿದ್ದು ಸಂವಹನದ ಉದ್ಯೋಗಕ್ಕೆ ಒಳ್ಳೆಯ ಅವಕಾಶ. ಮಾಧ್ಯಮದಲ್ಲಿ ಕೆಲಸ ಮಾಡುವವರು ಅಥವಾ ಗ್ರಾಹಕ ಸೇವೆಯಲ್ಲಿ ಇರುವವರಿಗೆ, ಅಂತಹ ಆಸಕ್ತಿ ಇರುವವರಿಗೆ ಅವಕಾಶ ಸಿಗಲಿದೆ. ವಿಶ್ಲೇಷಣಾತ್ಮಕ ಮನೋಭಾವದಿಂದ ಕೆಲಸ ಮಾಡಿ. ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಹಣಕಾಸು ದೃಷ್ಟಿಯಿಂದ ಒಳ್ಳೆಯ ವಾರ. ಹೊಸ ಯೋಜನೆಗಳ ಆರಂಭಕ್ಕೆ ಸಮಯ ಅನುಕೂಲ.
ತುಲಾ ರಾಶಿ :
ಶುಕ್ರನ ಆಧಿಪತ್ಯದ ಈ ರಾಶಿಯವರಿಗೆ ಕರ್ಮ ಕಾರಕನಾದ ಶನಿ ಷಷ್ಠದಲ್ಲಿದ್ದಾನೆ. ನೀರು ಅಥವಾ ದ್ರವೋತ್ಪಾದನೆಯಲ್ಲಿ ಕಾರ್ಯ ಹೆಚ್ಚಿರುವುದು. ಪೈಪೋಟಿ ಬೆಳೆಯುವುದು. ವಿದೇಶದ ವ್ಯಾಪರಕ್ಕೆ ಅವಕಾಶವನ್ನು ತೆರೆದುಕೊಳ್ಳಿ. ನೀವು ಮಾಡಿದ ಕಷ್ಟಕ್ಕೆ ಈ ವಾರ ಫಲ ಸಿಗುತ್ತದೆ. ಹಳೆಯ ಪ್ರಯತ್ನಗಳು ಫಲಪ್ರದವಾಗುತ್ತವೆ. ಹಿರಿಯರ ಸಲಹೆ ಪಾಲಿಸಿದರೆ ಲಾಭ. ಶಾಂತ ಮನಸ್ಸಿದ್ದರೆ ಯಶಸ್ಸು ತಾನಾಗಿಯೇ ಪ್ರಾಪ್ತವಾಗಲಿದೆ.
ಇದನ್ನೂ ಓದಿ: ರಾಹುಕಾಲದಲ್ಲಿ ದುರ್ಗಾ ದೇವಿಯನ್ನು ಈ ರೀತಿ ಪೂಜಿಸಿ; ಪ್ರಯೋಜನ ಸಾಕಷ್ಟಿವೆ
ವೃಶ್ಚಿಕ ರಾಶಿ :
ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಕರ್ಮಾಧಿಪತಿ ಸೂರ್ಯ ದ್ವಾದಶಕ್ಕೆ ಬರಲಿದ್ದು ಉದ್ಯೋಗದಲ್ಲಿ ಆಲಸ್ಯ, ಕಾರ್ಯದಲ್ಲಿ ವಿಳಂಬ, ಅಧಿಕಸರಿಗಳಿಂದ ಕಿರಿಕಿರಿ. ವೈದ್ಯ ಸೇವೆಯನ್ನು ಮಾಡುವವರು ಅಪಕೀರ್ತಿಗೂ ಒಳಗಾಗಬೇಕಾಗುವುದು. ಉದ್ಯೋಗದಲ್ಲಿ ಹೊಸ ದಿಕ್ಕು ಕಾಣದಾಗದು. ಹಿರಿಯರಿಂದ ಸಲಹೆಗಳನ್ನು ಪಡೆಸುಕೊಳ್ಳಿ. ವೃತ್ತಿಜೀವನದಲ್ಲಿ ಪ್ರಗತಿಯಾಗಲು ಕೆಲವು ಘಟನೆಗಳು ಬರುತ್ತವೆ. ಅದನ್ನು ಪಾಠವಾಗಿ ಸ್ವೀಕರಿಸಿ.
ಧನು ರಾಶಿ :
ಗುರುವಿನ ಆಧಿಪತ್ಯದ ಈ ರಾಶಿಗೆ ಈ ವಾರ ಕರ್ಮಾಧಿಪತಿ ಏಕಾದಶಲ್ಲಿ ಇದ್ದಾನೆ. ಭಾಷಣಕಾರರಿಗೆ ಬೋಧನೆ ಮಾಡುವವರಿಗೆ, ನ್ಯಾಯಾಲಯದಲ್ಲಿ ವಾದ ಮಾಡುವವರಿಗೆ ಉತ್ತಮ ಅವಕಾಶ. ಸಾಹಿತ್ಯ ಕ್ಷೇತ್ರ ಇದ್ದರೆ ಹೊಸ ಕೃತಿಗಳ ರಚನೆಗೆ ಪುಷ್ಟಿ. ಹೊಸ ಕಲಿಕೆ ಮತ್ತು ಪ್ರಯಾಣಕ್ಕೆ ಅನುಕೂಲವಾದ ವಾರ. ವಿದೇಶಿ ಸಂಪರ್ಕವೇ ಈ ವಾರದ ವಿಶೇಷ ಲಾಭ. ಉತ್ಸಾಹದಿಂದ ಕೆಲಸ ಮಾಡಿದರೆ ಸಾಧನೆ ಖಚಿತ. ಆರೋಗ್ಯದ ಕಡೆ ಗಮನ ಅಗತ್ಯ.
ಮಕರ ರಾಶಿ :
ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಕರ್ಮಾಧಿಪತಿ ನವಮದಲ್ಲಿ ಇದ್ದಾನೆ. ಅದೃಷ್ಟವಿದ್ದರೂ ಅದು ಫಲಿಸದೇ ಇರುವುದು ಅಥವಾ ಅಲ್ಪ ಫಲವನ್ನು ಮಾತ್ರ ಕೊಡಲಿರುವುದು ನಿಮ್ಮ ದೌರ್ಭಾಗ್ಯವೇ ಸರಿ. ಉನ್ನತ ಸ್ಥಾನ ಹಾಗೂ ಉತ್ತಮ ಆದಾಯ, ಭಡ್ತಿ ಎಲ್ಲವೂ ಸಿಗುವ ಯೋಗವಿದ್ದರೂ ಅದನ್ನು ಅನುಭವಿಸುವ ಹಾಗಿಲ್ಲ. ನೋಡುತ್ತಲೇ ಎಲ್ಲವೂ ತಪ್ಪಿಹೋಗುವುದು. ಉದ್ವೇಗಕ್ಕೆ ಒಳಗಾಗದೇ ನಿಯತ್ತಿನಿಂದ ನಿಯಮಿತ ಶಿಸ್ತನ್ನು ಕಾಪಾಡಿಕೊಳ್ಳಿ.
ಕುಂಭ ರಾಶಿ ;
ಶನಿಯ ಆಧಿಪತ್ಯದ ಈ ರಾಶಿಗೆ ಈ ವಾರ ಕರ್ಮಾಧಿಪತಿ ಕುಜನು ನವಮದಲ್ಲಿದ್ದಾನೆ. ಸಾಪ್ಟ್ ವೇರ್ ಉದ್ಯೋಗಿಗಳಿಗೆ ಉನ್ನತ ಸ್ಥಾನ ಸಿಕ್ಕರೂ ಕೆಲವರಿಗೆ ಉದ್ಯೋಗದಿಂದ ಮುಕ್ತಿಯ ಸಾಧ್ಯತೆ ಇದೆ. ಸೃಜನಾತ್ಮಕ ಚಿಂತನೆಗಳಿಂದ ಇರುವಲ್ಲಿಯೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಹಳೆಯ ತಪ್ಪುಗಳನ್ನು ಸರಿಪಡಿಸಲು ಸಮಯ. ಸಹೋದ್ಯೋಗಿಗಳಿಂದ ಸಹಕಾರ ಸಿಗುತ್ತದೆ ಎಂಬ ನಂಬಿಕೆ ಬೇಡ.
ಇದನ್ನೂ ಓದಿ: ಕಾರ್ತಿಕ ಮಾಸದಲ್ಲಿ ದೀಪ ದಾನ ಮಾಡುವುದು ಯಾಕೆ? ಮಹತ್ವವನ್ನು ತಿಳಿಯಿರಿ
ಮೀನ ರಾಶಿ :
ರಾಶಿ ಚಕ್ರದ ಕೊನೆಯ ರಾಶಿಗೆ ಈ ವಾರ ಕರ್ಮಾಧಿಪತಿ ಪಂಚಮದಲ್ಲಿದ್ದು ಆಲಸ್ಯವಿದ್ದರೂ ಯಾರದಾರೂ ಒತ್ತಡದಿಂದ ಚುರುಕು ಬರಲಿದೆ. ನಿಮ್ಮ ಒಳನೋಟ ಮತ್ತು ಸಹಾನುಭೂತಿ ಕೆಲಸದಲ್ಲಿ ಬೆಳಕಾಗುತ್ತದೆ. ಮನಸ್ಸು ಶಾಂತವಾಗಿರಲಿ. ಉನ್ನತಿ ಅಥವಾ ಹೊಸ ಅವಕಾಶಗಳು ಎದುರಾಗುವುದು. ಈ ವಾರ ಯಾವುದಾದರೂ ಒಂದು ರೀತಿಯಲ್ಲಿ ಧನ ಲಾಭವೂ ಸಾಧ್ಯ.
– ಲೋಹಿತ ಹೆಬ್ಬಾರ್ – 8762924271 (what’s app only)