AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ರಾಹುಕಾಲದಲ್ಲಿ ದುರ್ಗಾ ದೇವಿಯನ್ನು ಈ ರೀತಿ ಪೂಜಿಸಿ; ಪ್ರಯೋಜನ ಸಾಕಷ್ಟಿವೆ

ಡಾ. ಬಸವರಾಜ್ ಗುರೂಜಿಯವರು ರಾಹುಕಾಲದಲ್ಲಿ ದುರ್ಗಾ ಪೂಜೆಯ ಮಹತ್ವವನ್ನು ತಿಳಿಸಿದ್ದಾರೆ. ರಾಹುಗ್ರಹದ ಅಧಿದೇವತೆ ದುರ್ಗಾ ದೇವಿ ಆಗಿದ್ದು, ಈ ಅವಧಿಯಲ್ಲಿ ನಿಂಬೆ ದೀಪ ಹಚ್ಚಿ ಪೂಜಿಸುವುದರಿಂದ ಸಂಕಲ್ಪಗಳು ಬೇಗ ಈಡೇರುತ್ತವೆ. ಮಂಗಳವಾರದ ರಾಹುಕಾಲದಲ್ಲಿ ಮಾಡುವ ಈ ಪೂಜೆಯು ವಿವಾಹ, ಆರೋಗ್ಯ ಮತ್ತು ಸಾಲಮುಕ್ತಿಗೆ ಸಹಕಾರಿ ಎಂದು ಹೇಳಲಾಗುತ್ತದೆ.

Daily Devotional: ರಾಹುಕಾಲದಲ್ಲಿ ದುರ್ಗಾ ದೇವಿಯನ್ನು ಈ ರೀತಿ ಪೂಜಿಸಿ; ಪ್ರಯೋಜನ ಸಾಕಷ್ಟಿವೆ
ರಾಹು ಮತ್ತು ದುರ್ಗಾ ದೇವಿ
ಅಕ್ಷತಾ ವರ್ಕಾಡಿ
|

Updated on: Oct 12, 2025 | 12:58 PM

Share

ಇತಿಹಾಸ ಮತ್ತು ಪುರಾಣಗಳಲ್ಲಿ ಉಲ್ಲೇಖಿತವಾದ ಒಂದು ಅದ್ಭುತ ಕಾಲವೆಂದರೆ ಅದು ರಾಹುಕಾಲ. ರಾಹುಕಾಲವು ಯಾವುದೇ ಶುಭಕಾರ್ಯಗಳಿಗೆ ಅಶುಭ ಎಂದು ಸಾಮಾನ್ಯವಾಗಿ ಹೇಳಲಾಗಿದ್ದರೂ, ಸಂಕಲ್ಪಗಳು, ಕಾಮನೆಗಳು ಮತ್ತು ಆಸೆ-ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಇದು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. ಆದ್ದರಿಂದ ರಾಹುಕಾಲದಲ್ಲಿ ದುರ್ಗಾ ಪೂಜೆ ಮಾಡುವುದರಿಂದ ಏನು ಪ್ರಯೋಜನ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ.

ಗುರೂಜಿಯವರು ಹೇಳವಂತೆ, ರಾಹುವಿಗೂ ಮತ್ತು ದುರ್ಗಾ ದೇವಿಗೆ ಏನು ಸಂಬಂಧ ಎಂದು ಅನೇಕರು ಕೇಳಬಹುದು. ವಾಸ್ತವವಾಗಿ, ರಾಹು ಗ್ರಹದ ಅಧಿದೇವತೆ ಸಾಕ್ಷಾತ್ ದುರ್ಗಾ ದೇವಿ. ರಾಹುವಿನ ದೇಹದಲ್ಲಿ ವಿಷವಿದ್ದರೂ, ಅದರ ಬಾಲದಲ್ಲಿ ಅಮೃತವಿರುತ್ತದೆ ಎಂಬ ನಂಬಿಕೆ ಇದೆ. ಈ ವಿಶಿಷ್ಟ ಗುಣವು ದುರ್ಗಾ ದೇವಿಯ ಶಕ್ತಿಯನ್ನು ಪ್ರತಿನಿಧಿಸುತ್ತದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ರಾಹು ದೋಷದಿಂದ ಬಳಲುತ್ತಿರುವವರು ಅಥವಾ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬಯಸುವವರು ಸಾಮಾನ್ಯವಾಗಿ ಮಂಗಳವಾರ ಮತ್ತು ಶುಕ್ರವಾರದ ರಾಹುಕಾಲದಲ್ಲಿ ನಿಂಬೆಹಣ್ಣಿನ ದೀಪಗಳನ್ನು ಹಚ್ಚುವ ಪದ್ಧತಿಯನ್ನು ಅನುಸರಿಸುತ್ತಾರೆ. ಈ ಪೂಜೆಯು ನಿರ್ದಿಷ್ಟವಾಗಿ ಸಂಕಲ್ಪಗಳ ನೆರವೇರಿಕೆ, ವಿವಾಹದ ಸಿದ್ಧಿ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಮಾಡಲಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

ಮಂಗಳವಾರದಂದು, ವಿಶೇಷವಾಗಿ ಮಧ್ಯಾಹ್ನ 3:00 ರಿಂದ 4:30 ರ ನಡುವಿನ ರಾಹುಕಾಲದಲ್ಲಿ ದುರ್ಗಾ ದೇವಿಯನ್ನು ಪೂಜಿಸುವುದು ಹೆಚ್ಚು ಫಲಪ್ರದವಾಗಿದೆ. ಈ ಸಮಯದಲ್ಲಿ ನಿಂಬೆಹಣ್ಣಿನ ದೀಪಗಳನ್ನು ಹಚ್ಚಿ, ದುರ್ಗಾ ಸ್ತೋತ್ರ, ದುರ್ಗಾ ಸಪ್ತಶತಿ, ಅಥವಾ ದುರ್ಗಾ ಅಷ್ಟೋತ್ತರವನ್ನು ಪಠಿಸಬಹುದು. ದೀಪಗಳನ್ನು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಸ್ಥಾಪಿಸಿ ಪೂಜಿಸಬಹುದು. ದುರ್ಗಾ ದೇವಿ ರಾಹು ಗ್ರಹದ ಅಧಿದೇವತೆಯಾಗಿರುವುದರಿಂದ, ಈ ಪೂಜೆಯು ಬೇಗನೆ ಸಂಕಲ್ಪಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ, ದುರ್ಗಾ ದೇವಿ ಸಾಕ್ಷಾತ್ ಶ್ರೀಕೃಷ್ಣನ ಸಹೋದರಿ ಎಂಬ ಪ್ರತೀತಿಯೂ ಇದೆ. ವಿಷ್ಣುವಿನ ಅವತಾರಗಳಲ್ಲಿ ಅಷ್ಟಮಿ ಮತ್ತು ನವಮಿ ತಿಥಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ.

ಇದನ್ನೂ ಓದಿ: ಓಡುತ್ತಿರುವ ಏಳು ಕುದುರೆಗಳ ಫೋಟೋ ಮನೆಯಲ್ಲಿ ಇಡುವುದು ಶುಭವೇ? ವಾಸ್ತು ತಜ್ಞರ ಸಲಹೆ ಇಲ್ಲಿದೆ

ಮಂಗಳವಾರದ ರಾಹುಕಾಲದಲ್ಲಿ ಸತತ ಒಂಬತ್ತು ಮಂಗಳವಾರ ನಿಂಬೆಹಣ್ಣಿನ ದೀಪಗಳನ್ನು ಹಚ್ಚಿ ಪ್ರಾರ್ಥನೆ ಮಾಡಿಕೊಂಡರೆ, ಸಾಲ ನಿವಾರಣೆ, ಅನಾರೋಗ್ಯ ದೂರವಾಗುವುದು ಮತ್ತು ಎಲ್ಲಾ ಸಂಕಲ್ಪಗಳು ಈಡೇರುತ್ತವೆ. ಈ ಒಂಬತ್ತು ಮಂಗಳವಾರಗಳಲ್ಲಿ ಐದು ಬತ್ತಿಗಳನ್ನು ಬಳಸಿ ನಿಂಬೆಹಣ್ಣಿನ ದೀಪಗಳನ್ನು ಹಚ್ಚುವುದು ಬಹಳ ಶುಭಕರ. ದೇವಿಯ ವಿಗ್ರಹದ ಮುಂದೆ ದೀಪಗಳನ್ನು ಇಟ್ಟು, ದೇವಿ ನೋಡುವಂತೆ ಹಚ್ಚಬೇಕು. ದೀಪಕ್ಕೆ ಸ್ವಲ್ಪ ಅರಿಶಿನ ಮತ್ತು ಕುಂಕುಮವನ್ನು ಹಾಕಿ, ಅರಿಶಿನದ ಹೂವುಗಳಾದ ದಾಸವಾಳ ಅಥವಾ ಸೇವಂತಿಗೆಯನ್ನು ಅರ್ಪಿಸುವುದರಿಂದ ಇನ್ನಷ್ಟು ಹೆಚ್ಚು ಫಲ ಸಿಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ.

ದುರ್ಗಾ ದೇವಿಯ ಪೂಜೆಯನ್ನು ಸಾಮಾನ್ಯವಾಗಿ ಅಮಾವಾಸ್ಯೆ, ಹುಣ್ಣಿಮೆ, ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಂದು ಮಾಡಲಾಗುತ್ತದೆ. ಆದರೆ ಮಂಗಳವಾರದಂದು ಅಮಾವಾಸ್ಯೆ ಬಂದರೆ, ಅದು ಅತ್ಯಂತ ಶುಭದಾಯಕವೆಂದು ಪರಿಗಣಿಸಲಾಗುತ್ತದೆ. ಮಂಗಳವಾರದ ರಾಹುಕಾಲದಲ್ಲಿ ದುರ್ಗಾ ದೇವಿಗೆ ನಿಂಬೆಹಣ್ಣಿನ ದೀಪ ಹಚ್ಚುವುದರಿಂದ ಎಲ್ಲಾ ಸಂಕಲ್ಪಗಳು ನೆರವೇರುತ್ತವೆ. ಸತತ ಒಂಬತ್ತು ಮಂಗಳವಾರ ಈ ಪೂಜೆಯನ್ನು ಮಾಡುವುದರಿಂದ ಅತ್ಯಂತ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ