AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಕನಸಿನಲ್ಲಿ ಅಥವಾ ದಾರಿಯಲ್ಲಿ ಕಪ್ಪು ಬೆಕ್ಕು ಕಂಡರೆ ಏನರ್ಥ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಪ್ರಾಣಿಗಳು ನೀಡುವ ಶಕುನಗಳಲ್ಲಿ ಕಪ್ಪು ಬೆಕ್ಕಿನ ದರ್ಶನ ವಿಶೇಷ ಸ್ಥಾನ ಪಡೆದಿದೆ. ಸಾಮಾನ್ಯವಾಗಿ ಅಶುಭವೆಂದು ಭಾವಿಸುವ ಕಪ್ಪು ಬೆಕ್ಕು ಕನಸಿನಲ್ಲಿ, ದಾರಿಯಲ್ಲಿ ಅಥವಾ ಅಡ್ಡಲಾಗಿ ಕಂಡರೆ ಅದು ಶುಭ ಸೂಚಕವಾಗಿದೆ. ಆರ್ಥಿಕ ವೃದ್ಧಿ, ಆರೋಗ್ಯ ಸುಧಾರಣೆ, ಶತ್ರು ಮಿತ್ರರಾಗುವಿಕೆ ಮತ್ತು ಉದ್ಯೋಗದಲ್ಲಿ ಪ್ರಗತಿಯನ್ನು ಇದು ಸೂಚಿಸುತ್ತದೆ ಎಂದು ಡಾ. ಬಸವರಾಜ್ ಗುರೂಜಿ ತಿಳಿಸಿದ್ದಾರೆ.

Daily Devotional: ಕನಸಿನಲ್ಲಿ ಅಥವಾ ದಾರಿಯಲ್ಲಿ ಕಪ್ಪು ಬೆಕ್ಕು ಕಂಡರೆ ಏನರ್ಥ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಕಪ್ಪು ಬೆಕ್ಕು
ಅಕ್ಷತಾ ವರ್ಕಾಡಿ
|

Updated on:Oct 12, 2025 | 11:52 AM

Share

ಕನಸಿನಲ್ಲಿ ಅಥವಾ ದಾರಿಯಲ್ಲಿ ಕಪ್ಪು ಬೆಕ್ಕು ಬಂದರೆ ಏನರ್ಥ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಹಲ್ಲಿ, ಹಸು, ಹಾವು, ಬೆಕ್ಕು ಮುಂತಾದ ಪ್ರಾಣಿಗಳು ಶುಭ ಅಥವಾ ಅಶುಭ ಸೂಚನೆಗಳನ್ನು ನೀಡುತ್ತವೆ ಎಂದು ನಂಬಲಾಗುತ್ತದೆ. ಉದಾಹರಣೆಗೆ, ಮನೆಯಲ್ಲಿ ಕಟ್ಟಿಹಾಕಿದ ಹಸು ಜೋರಾಗಿ ಅರಚಿದರೆ ಹಿಂದಿನ ಕಾಲದಲ್ಲಿ ಮನೆಗೆ ಬರುವ ದೊಡ್ಡ ಕಂಟಕವನ್ನು ಸೂಚಿಸುತ್ತಿತ್ತು ಎಂದು ಹೇಳಲಾಗುತ್ತದೆ. ಅಂತೆಯೇ, ಪ್ರಯಾಣಕ್ಕೆ ಹೊರಟಾಗ ಬೆಕ್ಕು ಅಡ್ಡ ಬರುವುದು ಅಶುಭವೆಂದು ಅನೇಕರು ಪರಿಗಣಿಸುತ್ತಾರೆ. ಅದರಲ್ಲೂ ಎಡದಿಂದ ಬಲಕ್ಕೆ ಬೆಕ್ಕು ಅಡ್ಡ ಹೋದರೆ ಪ್ರಯಾಣವನ್ನು ಮುಂದೂಡುತ್ತಾರೆ.

ಆದರೆ, ಈ ಸಾಮಾನ್ಯ ನಂಬಿಕೆಗಿಂತ ವಿಭಿನ್ನವಾಗಿ, ಕಪ್ಪು ಬೆಕ್ಕಿನ ದರ್ಶನವು ಮಹತ್ತರವಾದ ಶುಭ ಫಲಗಳನ್ನು ನೀಡುತ್ತದೆ ಎಂದು ಶಕುನ ಶಾಸ್ತ್ರ ಹೇಳುತ್ತದೆ. ಕಪ್ಪು ಬೆಕ್ಕು ಅಡ್ಡ ಬಂದಾಗ, ಅದನ್ನು ನೋಡಿದಾಗ, ಅಥವಾ ಕನಸಿನಲ್ಲಿ ಕಂಡಾಗ, ಇದು ಶುಭ ಸೂಚನೆಯಾಗಿದೆ. ಇದು ಅದೃಷ್ಟವನ್ನು ತರಲಿದ್ದು, ಒಳ್ಳೆಯ ಸಮಯ ಬರಲಿದೆ ಎಂಬುದರ ಸಂಕೇತವಾಗಿದೆ ಎಂದು ಗುರೂಜಿ ತಿಳಿಸಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಕಪ್ಪು ಬೆಕ್ಕು ಕಾಣಿಸಿಕೊಂಡರೆ, ಕೆಲವೇ ದಿನಗಳಲ್ಲಿ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ದೀರ್ಘಕಾಲದಿಂದ ಬಾರದ ಹಣ, ಬಾಕಿ ಇರುವ ಬಿಲ್‌ಗಳು, ಅಥವಾ ಉದ್ಯೋಗದಲ್ಲಿ ಬರಬೇಕಾಗಿದ್ದ ಅರಿಯರ್ಸ್ (ಬಾಕಿ ವೇತನ) ಕೈ ಸೇರುವ ಸಾಧ್ಯತೆ ಇರುತ್ತದೆ. ಇದು ಆರ್ಥಿಕವಾಗಿ ಶುಭಕರವಾದ ಬದಲಾವಣೆಗಳನ್ನು ತರುತ್ತದೆ ಮತ್ತು ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಕಪ್ಪು ಬೆಕ್ಕು ಕಾಣಿಸಿಕೊಂಡ 21 ದಿನಗಳ ಒಳಗಾಗಿ ಅದೃಷ್ಟ ಕೂಡಿಬರುತ್ತದೆ ಎಂಬ ನಂಬಿಕೆಯೂ ಇದೆ.

ಇದನ್ನೂ ಓದಿ: ಓಡುತ್ತಿರುವ ಏಳು ಕುದುರೆಗಳ ಫೋಟೋ ಮನೆಯಲ್ಲಿ ಇಡುವುದು ಶುಭವೇ? ವಾಸ್ತು ತಜ್ಞರ ಸಲಹೆ ಇಲ್ಲಿದೆ

ಇದಲ್ಲದೆ, ಕಪ್ಪು ಬೆಕ್ಕು ಕಂಡರೆ ಹಲವಾರು ಮಂಗಳಕರ ಫಲಗಳು ದೊರೆಯಬಹುದು. ಆರೋಗ್ಯದಲ್ಲಿ ಚೇತರಿಕೆ, ಶತ್ರುಗಳು ಮಿತ್ರರಾಗುವುದು, ಮತ್ತು ಉದ್ಯೋಗದಲ್ಲಿ ಸ್ಥಾನಪಲ್ಲಟ ಅಥವಾ ಬಡ್ತಿಯಂತಹ ಧನಾತ್ಮಕ ಬದಲಾವಣೆಗಳು ಸಂಭವಿಸಬಹುದು.

ಕೆಲವರಿಗೆ ಮನೆಯ ಯೋಗ, ಹೊಸ ವಾಹನ ಪ್ರಾಪ್ತಿ, ಅಥವಾ ಉತ್ತಮ ಪ್ರಯಾಣ ಯೋಗವೂ ಲಭಿಸಬಹುದು. ಕಪ್ಪು ಬೆಕ್ಕು ಕಾಣಿಸಿಕೊಂಡಾಗ ಯಾವುದೇ ಸಂಕೋಚವಿಲ್ಲದೆ ತಮ್ಮ ಪ್ರಯಾಣವನ್ನು ಮುಂದುವರಿಸುವುದು ಅಥವಾ ಕೆಲಸವನ್ನು ಆರಂಭಿಸುವುದು ಉತ್ತಮ. ಇಂತಹ ಶುಭ ಸೂಚನೆಯನ್ನು ಕಂಡಾಗ, “ಓಂ ನಮೋ ಭಗವತೇ ವಾಸುದೇವಾಯ” ಅಥವಾ “ಓಂ ಕೃಷ್ಣಾಯ ನಮಃ” ಎಂಬ ಮಂತ್ರಗಳನ್ನು ಮೂರು ಬಾರಿ ಜಪಿಸುವುದರಿಂದ ಅದೃಷ್ಟವು ತಕ್ಷಣವೇ ಕೂಡಿಬರುತ್ತದೆ ಎಂದು ಹೇಳಲಾಗುತ್ತದೆ. ಈ ಎಲ್ಲ ನಂಬಿಕೆಗಳು ನಮ್ಮ ಜೀವನದಲ್ಲಿ ಧನಾತ್ಮಕ ಚಿಂತನೆಗಳನ್ನು ಹೆಚ್ಚಿಸುತ್ತವೆ ಎಂದು ಗುರೂಜಿ ವಿವರಿಸಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:52 am, Sun, 12 October 25