
ನವೆಂಬರ್ ತಿಂಗಳ ಎರಡನೇ ವಾರ 09-11-2025 ರಿಂದ 15-11-2025 ರವರೆಗೆ ಇರಲಿದೆ. ಗ್ರಹಗಳ ವಿಶೇಷ ಪರಿವರ್ತನೆ ಇಲ್ಲದೇ ಇದ್ದರೂ ಕೆಲವು ಬದಲಾವಣೆಗಳು ಜಾತಕದಲ್ಲಿ ಅಗಲಿವೆ. ದಶೆಯು ಬದಲಾವಣೆ ಆಗುವ ಸಂದರ್ಭ ಇದ್ದವರು ಅದಕ್ಕೆ ಸಂಧಿಶಾಂತಿಯನ್ನು ಮಾಡಿ ಭವಿಷ್ಯದಲ್ಲಿ ಆಗುವ ತೊಂದರೆಗಳನ್ನು ಪರಿಹಾರ ಅಥವಾ ಕಡಿಮೆ ಮಾಡಿಕೊಳ್ಳಬಹುದು. ಇದಕ್ಕೆ ದೈವವೇ ಸೂಚನೆ ಕೊಡಬೇಕಾದ ಕಾರಣ ಎಲ್ಲ ಗ್ರಹಗಳೂ ಏಕಾದಶ ಸ್ಥಾನದ ಫಲವನ್ನು ಕೊಟ್ಟು ಸಲಹಲಿ.
ಮೇಷ ರಾಶಿ: ನವೆಂಬರ್ ತಿಂಗಳ ಎರಡನೇ ವಾರ ತಮ್ಮನ್ನು ಯಾರನ್ನಾದರೂ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಕಾನೂನಿನ ಕ್ರಮದಲ್ಲಿ ನಿಮ್ಮ ಯೋಜನೆ ಇರಲಿ. ಹೂಡಿಕೆಯನ್ನು ಮಾಡಲು ಒತ್ತಡ ಬರಬಹುದು. ದುರಾಸೆಪಡದೆ ಬಂದಿದ್ದನ್ನು ಸುಮ್ಮನೇ ಸ್ವೀಕರಿಸಿ. ನಿಮಗೆ ತಿಳಿದ ವಿಚಾರವನ್ನು ಬೇರೆಯವರಿಗೆ ಯಾವುದೇ ನಿರೀಕ್ಷೆಯಿಲ್ಲದೆ ಹೇಳಿಕೊಡುವಿರಿ. ಮನಸ್ಸಿನಲ್ಲಿ ಸಂಯಮವಿರಲಿ. ವಾತಾವಣವು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಅನವಶ್ಯಕ ವಾದ ವಿವಾದ. ನಿಮ್ಮ ತಪ್ಪಿಗೆ ಬೇರೆಯವರನ್ನು ಬೆರಳು ಮಾಡುವಿರಿ. ಮಾತನಾಡುವಾಗ ಪೂರ್ಣ ಮಾಹಿತಿ ಇರಲಿ. ಯಾರನ್ನೂ ಸುಮ್ಮನೇ ದೂಷಿಸುವುದು ಬೇಡ.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಹೆಚ್ಚು ದಿನ ಅನ್ಯ ಸ್ಥಳದಲ್ಲಿ ನಿಮ್ಮ ವಾಸವು ಇರುವುದು. ಅನಾರೋಗ್ಯವನ್ನು ನಿರ್ಲಕ್ಷಿಸುವುದು ಬೇಡ. ಭೂಮಿಗೆ ಸಂಬಂಧಿತ ಕೆಲಸವನ್ನು ಪೂರ್ಣಮಾಡಿಕೊಳ್ಳುವಿರಿ. ಈ ವಾರ ಸಂಗಾತಿಯಿಂದ ಸಿಗುವ ಸುಖದಿಂದ ನೀವು ವಂಚಿತರು. ನಿಮ್ಮ ನಿರೀಕ್ಷೆಗಳು ಹುಸಿಯಾಗಬಹುದು. ವ್ಯಕ್ತಿಯ ಆಯ್ಕೆಯಲ್ಲಿ ನೀವು ಸೋಲುವಿರಿ. ನೀವು ಅಸಹಜವಾಗಿ ನಡೆದುಕೊಳ್ಳುವಿರಿ. ಬಹಳ ದಿನದಿಂದ ಅಂದುಕೊಂಡ ಸ್ಥಳಕ್ಕೆ ಹೋಗುವಿರಿ. ಈ ವಾರ ಸಾಧಿಸಲಾಗದ ಕೆಲಸಕ್ಕೆ ಹೆಚ್ಚು ಶ್ರಮವನ್ನು ಹಾಕುವಿರಿ. ಸ್ನೇಹ ಸಂಬಂಧಗಳನ್ನು ದೂರ ಮಾಡಿಕೊಳ್ಳುವಿರಿ. ಬೇಡದ ವಿಚಾರದ ಕಡೆ ಮನಸ್ಸು ಹೋಗುವುದು.
ಮಿಥುನ ರಾಶಿ: ಮೂರನೇ ರಾಶಿಯವರಿಗೆ ಈ ವಾರ ಸಲ್ಲದ ಅಪವಾದವನ್ನು ಧೈರ್ಯದಿಂದ ಎದುರಿಸಲಾಗದು. ಬೇಸರಿಸದೇ ಮುನ್ನಡೆಯಿರಿ. ನಿಮ್ಮ ಬಗ್ಗೆ ಸ್ಪಷ್ಟತೆ ಇರಲಿ. ಉಸಿರಿಗೆ ಸಂಬಂಧಿಸಿದ ತೊಂದರೆ ಕಾಣಿಸಿಕೊಳ್ಳಬಹುದು. ವಿದ್ಯಾಭ್ಯಾಸದಲ್ಲಿ ಅತಂತ್ರ ಸ್ಥಿತಿಯನ್ನು ನೀವಾಗಿಯೇ ತಂದುಕೊಳ್ಳುವಿರಿ. ನಿಮಗೆ ಅತಿಥಿ ಸತ್ಕಾರವು ನಡೆಯಬಹುದು. ರಾಜಕೀಯದಿಂದ ಹೊರಬರಲು ಎಲ್ಲ ಕಡೆಯಿಂದ ಒತ್ತಡ. ಅನಿರೀಕ್ಷಿತ ಅಮೂಲ್ಯ ವಸ್ತುಗಳು ಪ್ರಾಪ್ತವಾಗುವುದು. ಈ ವಾರ ಹಠದ ಸ್ವಭಾವವು ವ್ಯವಸ್ಥೆಯನ್ನು ಹಾಳುಮಾಡೀತು. ಅಧಿಕ ಸಮಯದಲ್ಲಿ ಮೌನವಾಗಿಯೇ ಇರುವಿರಿ. ಯಾವುದೋ ಹತ್ತಾರು ವಿಚಾರದಲ್ಲಿ ನೀವು ಒತ್ತಡಕ್ಕೆ ಒಳಗಾಗುವಿರಿ. ನೇರ ಮಾತಿನಿಂದ ಬೇಸರವನ್ನು ಉಂಟುಮಾಡುವಿರಿ. ಸರಳವಾಗಿ ಇರಲು ಇಷ್ಟವಾಗದು.
ಕರ್ಕಾಟಕ ರಾಶಿ: ಈ ರಾಶಿಯವರಿಗೆ ಎರಡನೇ ವಾರ ಖರ್ಚು ಮಾಡುವ ಸಂದರ್ಭ ಬಂದರೂ ಅದು ತಪ್ಪಿ ಹೋಗುವುದು. ಸಂತೋಷಕ್ಕಾಗಿ ನೀವು ಕೆಲವನ್ನು ತ್ಯಾಗಮಾಡಬೇಕಾದೀತು. ಮಕ್ಕಳ ವಿಚಾರದಲ್ಲಿ ಅಧಿಕ ಬದಲಾವಣೆ ಇರಲಿದೆ. ಪ್ರೀತಿಯು ಸುಖಾಂತ್ಯ ಕಾಣಬಹುದು. ವ್ಯಾಪಾರಸ್ಥರು ಶ್ರಮದಿಂದ ಲಾಭವನ್ನು ಮಾಡಿಕೊಳ್ಳುವರು. ದೇಹದ ಸಮಸ್ಯೆಯನ್ನು ನೀವು ಯಾರ ಬಳಿಯೂ ಹೇಳದೇ ಗೌಪ್ಯವಾಗಿ ಇಟ್ಟಕೊಳ್ಳಿ. ನಿರ್ಲಕ್ಷ್ಯವು ನಿಮ್ಮ ಸ್ವಭಾವವಾದರೂ ಕೆಲವು ಸಂದರ್ಭಗಳಲ್ಲಿ ಅದನ್ನ ಬದಲಿಸಿಕೊಳ್ಳುವುದು ಉತ್ತಮ. ಈ ವಾರವಿಡೀ ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಏನಾದರೂ ಕಿರಿಕಿರಿ ಆಗಬಹುದು. ಪ್ರಭಾವಿ ವ್ಯಕ್ತಿಗಳ ಭೇಟಿಯು ಸಂತೋಷವನ್ನು ಕೊಡುವುದು. ಉದ್ವೇಗದಿಂದ ಏನನ್ನಾದರೂ ಹೇಳಲು ಹೋಗಿ ನಗೆಪಾಟಲಿಗೆ ಸಿಕ್ಕಿಕೊಳ್ಳುವಿರಿ.
ಸಿಂಹ ರಾಶಿ: ಐದನೇ ರಾಶಿಗೆ ಎರಡನೇ ವಾರ ಅನಿರೀಕ್ಷಿತ ಹಣದ ಆಗಮನದಿಂದ ಕೊಡಬೇಕಾದವರಿಗೆ ಕೊಟ್ಟು ಮುಗಿಸಿ. ಎಂದಿಗಿಂತ ವ್ಯಾಪಾರದಲ್ಲಿ ಹಿನ್ನಡೆ ಇರಲಿದೆ. ಚಿಂತೆಯೂ ಒಂದೇ ಸಮನೆ ನಿಮ್ಮ ಕಾರ್ಯಕ್ಕೆ ಅಡ್ಡಿಯಾಗುವುದು. ಪಾಲುದಾರಿಕೆಯಲ್ಲಿ ನಿಮಗೆ ಹೊಂದಾಣಿಕೆಯ ಕೊರತೆ ಆಗಬಹುದು. ಅನಿರೀಕ್ಷಿತ ವೆಚ್ಚವನ್ನು ಮಾಡಬೇಕಾಗಬಹುದು. ಪ್ರಯಾಣದಲ್ಲಿ ತೊಂದರೆಗಳು ಬಂದರೂ ತಲುಪಬೇಕಾದ ಸ್ಥಳಕ್ಕೆ ಹೋಗುವಿರಿ. ಸರ್ಕಾರಿ ನೌಕರರು ಅಧಿಕಾರಿಗಳಿಂದ ಸಮಸ್ಯೆಯನ್ನು ಎದುರಿಸಬೇಕಾದೀತು. ಈ ವಾರ ಮಾನಸಿಕ ಒತ್ತಡಗಳು ನಿಮ್ಮ ಕೆಲಸವನ್ನು ಹಾಳುಮಾಡುವುದು. ಸಂಗಾತಿಯ ಮೌನದಿಂದ ನಿಮಗೆ ಆತಂಕ ಹುಟ್ಟಬಹುದು.ಪ್ರೇಮವು ಬಿಟ್ಟರೂ ಬಿಡದ ಮಾಯೆಯಾಗಲಿದೆ.
ಕನ್ಯಾ ರಾಶಿ: ನೆವೆಂಬರ್ ನ ಎರಡನೇ ವಾರ ಈ ರಾಶಿಯವರಿಗೆ ದೇಹಾಲಸ್ಯವು ಕಾರ್ಯವನ್ನು ವೇಗದಲ್ಲಿ ಮುನ್ನಡೆಸಲು ಬಿಡದು. ಅತಿಯಾದ ಚಿಂತೆಯು ನಿಮ್ಮ ಜೊತೆಗಿರುವವರ ಮನಸ್ಸನ್ನೂ ಹಾಳು ಮಾಡುವುದು. ಉದ್ಯೋಗದ ಬದಲಾವಣೆ ಆಗಲಿದ್ದು ಕಾರಣವನ್ನು ಮಾತ್ರ ಹೇಳಲಾರಿರಿ. ನಿಮ್ಮ ನಿಯಮಗಳನ್ನು ನೀವೇ ಭಂಗ ಮಾಡಿಕೊಳ್ಳುವಿರಿ. ಎಚ್ಚರಿಕೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ. ಅಳುಕಿನಿಂದ ಇರುವಿರಿ. ಕೈಗೊಂಡ ಪ್ರವಾಸದಲ್ಲಿ ನಿಮಗೆ ತೃಪ್ತಿ ಸಿಗದು. ವೈದ್ಯ ವೃತ್ತಿಯಲ್ಲಿ ಒತ್ತಡವು ಅಧಿಕವಾಗಿ ಬರಬಹುದು. ಯಾರದ್ದೋ ಮೂಲಕ ನೀವು ಶತ್ರುಗಳ ಯೋಜನೆಯನ್ನು ತಿಳಿಯುವಿರಿ. ಈ ವಾರ ನಿಮಗೇ ಸಹನೆಯಿಂದ ಆಗುವ ಲಾಭವು ಅನುಭವಕ್ಕೆ ಬರಬಹುದು. ಮಕ್ಕಳು ನಿಮ್ಮ ಮಾತನ್ನು ಕೇಳದೇ ತಮಗೆ ತೋಚಿದಂತೆ ನಡೆದುಕೊಳ್ಳುವುದು ನಿಮಗೆ ಇಷ್ಟವಾಗದು.
ತುಲಾ ರಾಶಿ: ಶುಕ್ರನು ಅಧಿಪತಿಯಾದ ಈ ರಾಶಿಯವರಿಗೆ ಈ ವಾರ ಸಜ್ಜನರ ಸಹವಾಸವು ಸಿಗುವುದು. ಸಾಮಾಜಿಕ ಕೆಲಸಗಳು ನಿಮ್ಮನ್ನು ಹುಡುಕಿಕೊಂಡು ಬರುವುದು. ವ್ಯವಹಾರದಲ್ಲಿ ಊಹಿಸಿದ್ದಕ್ಕಿಂತ ಹೆಚ್ಚಿನ ಲಾಭವು ಸಿಗುವುದು. ಆಸ್ತಿಯ ಕಲಹವನ್ನು ನ್ಯಾಯಾಲಯಕ್ಕೆ ತಡಗೆದುಕೊಂಡು ಹೋಗುವಿರಿ. ವಿನಾಕಾರಣ ಯಾರ ಮೇಲಾದರೂ ಅಧಿಕಾರವನ್ನು ಚಲಾಯಿಸುವಿರಿ. ಹಣಕಾಸಿನ ವ್ಯವಹಾರವು ಪಾರದರ್ಶಕವಾಗಿ ಇರಲಿ. ಈ ವಾರ ಸಂಗಾತಿಯಿಂದ ನಿಮಗೆ ನೂತನ ವಸ್ತ್ರಗಳು ಬರಬಹುದು. ನಿಮ್ಮ ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಕೆಲಸದಲ್ಲಿ ಪ್ರಾಮಾಣಿಕತೆ ಕಡಿಮೆ ಆದಂತೆ ತೋರಬಹುದು. ಪಾಲುದಾರಿಕೆಯಿಂದ ಹೊರಬರವುದು ಉತ್ತಮ ಎನಿಸುವುದು.
ವೃಶ್ಚಿಕ ರಾಶಿ: ಈ ರಾಶಿಯವರಿಗೆ ಎರಡನೇ ವಾರ ಸಹೋದ್ಯೋಗಿಗಳ ಬಗ್ಗೆ ನಿಮಗೆ ಆಗಾಗ ಅಸಮಾಧಾನ ಉಂಟಾಗುವುದು. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವ ಇಚ್ಛೆ ಇರಲಿದೆ. ಬಂಧುಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವರು. ವ್ಯಾಪಾರವು ಲಾಭಾಂಶವನ್ನು ಹೆಚ್ಚು ಪಡೆಯುವುದು. ಈ ವಾರ ಹುಡುಗಾಟದ ಬುದ್ಧಿಯಿಂದ ಕೆಲವು ವಿಚಾರಗಳು ನಿಮಗೆ ಗೊತ್ತಾಗದೇ ಹೋಗವುದು. ಕಾರ್ಯದಲ್ಲಿ ಮುನ್ನಡೆಯಿದ್ದರೂ ಲಾಭವಾದರೂ ನಿಮ್ಮ ಬಗ್ಗೆ ಸದಭಿಪ್ರಾಯವು ಇರದು. ಆಪ್ತರ ಜೊತೆ ಮಾಡಿದ ಸಮಾಲೋಚನೆಯಿಂದ ಮನಸ್ಸಿಗೆ ಸಂತೋಷ ಸಿಗುವುದು. ಸ್ಥಳ ಬದಲಾವಣೆಯಿಂದ ಹೊಂದಿಕೊಳ್ಳುವುದು ವಾರವಿಡೀ ಕಷ್ಟವಾದೀತು. ಆಕಸ್ಮಿಕವಾದ ವಿಷಯದಿಂದ ನಿಮಗೆ ದುಃಖವಾಗುವುದು. ವಿದ್ಯಾಭ್ಯಾಸದ ಕಾರಣಕ್ಕೆ ಪ್ರಯಾಣ ಮಾಡುವಸನ್ನಿವೇಶವು ಬರುವುದು.
ಧನು ರಾಶಿ: ಗುರುವಿನ ಆಧಿಪತ್ಯದ ಈ ರಾಶಿಯವರು ಎಲ್ಲರಿಂದ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುವಿರಿ. ಮಂಗಲ ಕಾರ್ಯಗಳಿಂದ ನೆಮ್ಮದಿ ಪ್ರಾಪ್ತಿ. ಮಿತ್ರನ ನಂಬಿಕೆಯನ್ನು ಕಳೆದುಕೊಂಡು, ಆದ ನಷ್ಟಕ್ಕೆ ದುಃಖಿಸುವಿರಿ. ಸ್ಥಿರಾಸ್ತಿಯನ್ನು ವ್ಯವಹಾರ ಜ್ಞಾನದ ಕೊರತೆಯಿಂದ ಕಳೆದುಕೊಳ್ಳಬಹುದು. ಬಂಧುಗಳ ನಡುವೆ ಪರಸ್ಪರ ಸೌಹಾರ್ದವು ವೃದ್ಧಿ. ಸಹೋದರರ ನಡುವೆ ಆರ್ಥಿಕ ಸಂಬಂಧವು ಉತ್ತಮವಾಗಿ ಇರುವುದಿಲ್ಲ. ವಿವಾಹಕ್ಕೆ ಅನ್ವೇಷಣೆ ಆರಂಭವಾಗಲಿದೆ. ಪ್ರೀತಿಯಿಂದ ಕೊಟ್ಟ ವಸ್ತುವನ್ನು ಮತ್ತೆ ಕೊಡುವುದು ಬೇಡ. ಸಂಗಾತಿಯ ಜೊತೆ ಸಣ್ಣ ವಿವಾಚಾರಕ್ಕೂ ಜಗಳವಾಡುವಿರಿ. ಯಥಾರ್ಥವಾಗಿ ಎಲ್ಲವನ್ನೂ ತಿಳಿದುಕೊಳ್ಳುವುದು ಒಳ್ಳೆಯದು. ಏಕಾಂತವು ಹೆಚ್ಚು ರುಚಿಸುವುದು.
ಮಕರ ರಾಶಿ: ಎರಡನೇ ವಾರದಲ್ಲಿ ನಿಮಗೆ ಆದಾಯವು ಕಡಿಮೆಯಾಗಿ ಬಹಳ ಆತಂಕವಾಗಲಿದೆ. ಸ್ನೇಹಿತರು ನಿಮ್ಮನ್ನು ಅಪಮಾನ ಮಾಡಲಿದ್ದಾರೆ. ನ್ಯಾಯಾಲಯದ ವಿಷಯದಲ್ಲಿ ನಿಮ್ಮ ಊಹೆಯು ಸರಿಯಾಗದು. ಮನೆಯಲ್ಲಿ ಮಕ್ಕಳು ನಿಮ್ಮನ್ನು ಲೆಕ್ಕಕ್ಕೆ ತೆಗದುಕೊಳ್ಳದೇ ಹೋಗಬಹುದು. ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಿನ್ನಡೆಯಾಗಲಿದೆ. ಹೆಚ್ಚಿನ ವಿಚಾರಗಳನ್ನು ನಕರಾತ್ಮಕವಾಗಿಯೇ ಚಿಂತಿಸುವಿರಿ. ದೂರ ಪ್ರಯಾಣವು ನಿಮಗೆ ಅನಿವಾರ್ಯವಾದೀತು. ಈ ವಾರ ಸ್ವಂತ ವಾಹನದಿಂದ ನೀವು ಲಾಭವನ್ನು ಗಳಿಸುವಿರಿ. ನಿಮಗೆ ಜೊತೆಗೆ ಯಾರೂ ಇಲ್ಲ ಎಂಬ ಅನಾಥಪ್ರಜ್ಞೆಯು ಕಾಡುವುದು. ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಇಷ್ಟವಿಲ್ಲದಿದ್ದರೂ ಅನಿವಾರ್ಯ ಸ್ಥಿತಿ.
ಕುಂಭ ರಾಶಿ: ಈ ವಾರ ಪ್ರವಾಸದಲ್ಲಿ ಇರುವ ನಿಮಗೆ ಮಾನಸಿಕ ಚಿಂತೆ ಕಾಡಬಹುದು. ಮನೆಯ ಬಗ್ಗೆಯೆರ ಹೆಚ್ಚು ಯೋಚಿಸುವಿರಿ. ಗೌಪ್ಯವಾಗಿ ನಿಮ್ಮ ಅಂತರಂಗವನ್ನು ತಿಳಿದುಕೊಳ್ಳಲು ಶತ್ರುಗಳು ಪ್ರಯತ್ನಿಸುವರು. ಮಾತಿನ ಮೇಲೆ ನೀವು ಹಿಡಿತವನ್ನು ಸಾಧಿಸಬೇಕಾದೀತು. ಕಲಾವಿದರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವರು. ಅತಿಯಾದ ಒತ್ತಡದಿಂದ ಮಾಡುವ ಕೆಲಸದಿಂದ ಆರೋಗ್ಯದ ಮೇಲೆ ಪರಿಣಾಮ ಬೀರವುದು. ಸಾಹಿತ್ಯದಲ್ಲಿ ಈ ವಾರ ಮನಸ್ಸು ರತಿಯನ್ನು ಪಡೆಯುವುದು.
ಮೀನ ರಾಶಿ: ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ವ್ಯಾಪಾರದಲ್ಲಿ ಲಾಭ ಮಾಡಲು ಛಲ ಬಿಡದ ಪ್ರಯತ್ನವು ನಡೆಯುವುದು. ಧಾರ್ಮಿಕ ಕಾರ್ಯದಲ್ಲಿ ಅಧಿಕ ಆಸಕ್ತಿ ಬರುವುದು. ನಿಮಗೆ ಮಾತನಾಡಲು ಒತ್ತಾಯ ಮಾಡಲಿದ್ದು, ತಪ್ಪಿಸಿಕೊಂಡು ಓಡಾಡುವಿರಿ. ಕುಟುಂಬದ ಸಮಸ್ಯೆಗೆ ಧಾರ್ಮಿಕ ಕಾರ್ಯವನ್ನು ಮಾಡಿ ಪರಿಹಾರವನ್ನು ಮಾಡಿಕೊಳ್ಳಲು ಇಚ್ಛಿಸುವಿರಿ. ನೀವು ಅಂದುಕೊಂಡಂತೆ ಆಗಿದ್ದು ಖುಷಿಯಿಂದ ಇರುವಿರಿ. ವಾಹನ ಖರೀದಿಯ ಆಲೋಚನೆಯನ್ನು ಸದ್ಯ ಕೈ ಬಿಡುವಿರಿ. ವಿದ್ಯಾಭ್ಯಾಸದ ಬಗ್ಗೆ ಅನಾದರ ಬರಬಹುದು. ಯಾರಿಂದಲಾದರೂ ನಿಮಗೆ ಹಿತವಚನದ ಅವಶ್ಯಕತೆ ಇರುವುದು. ಸ್ತ್ರೀಯರಿಂದ ಸಹಾಯವನ್ನು ಪಡೆಯುವಿರಿ. ಈ ವಾರ ಬರಬೇಕಾದ ಹಣವನ್ನು ನೀವೇ ಮತ್ತೆ ಮತ್ತೆ ಹೋಗಿ ಪಡೆಯಿರಿ.
ಲೋಹಿತ ಹೆಬ್ಬಾರ್ – 8762924271 (what’s app only)