Nov Weekly Career Horoscope: ಈ ರಾಶಿಯವರಿಗೆ ಉದ್ಯೋಗದಲ್ಲಿ ಮಹತ್ವದ ಬದಲಾವಣೆ
ಉದ್ಯೋಗ ವಾರ ಭವಿಷ್ಯ: ನವೆಂಬರ್ ಮೊದಲ ವಾರದ ಉದ್ಯೋಗ ಭವಿಷ್ಯವು ಎಲ್ಲಾ ರಾಶಿಗಳಿಗೆ ವೃತ್ತಿಜೀವನದ ಮಾರ್ಗದರ್ಶನ ನೀಡುತ್ತದೆ. ಈ ವಾರದಲ್ಲಿ, ಹಲವು ರಾಶಿಗಳಿಗೆ ಹೊಸ ಅವಕಾಶಗಳು, ಬಡ್ತಿ, ಆರ್ಥಿಕ ಲಾಭಗಳು ಇರಬಹುದು. ಸವಾಲುಗಳನ್ನು ಎದುರಿಸಲು ತಾಳ್ಮೆ ಮತ್ತು ವಿವೇಚನೆ ಅಗತ್ಯ. ಹಿರಿಯರ ಸಲಹೆ, ಸಮಯದ ನಿರ್ವಹಣೆ ಮತ್ತು ಸೂಕ್ತ ಬಣ್ಣಗಳ ಆಯ್ಕೆ ಯಶಸ್ಸಿಗೆ ನೆರವಾಗುವುದು.

09-12-2025ರಿಂದ 16-11-2025ರವರಗೆ ನವೆಂಬರ್ ಮೊದಲ ವಾರವಾಗಿದ್ದು ಉದ್ಯೋಗವನ್ನು (weekly career horoscope) ಅತಿಯಾದ ನಿರೀಕ್ಷೆಯಿಂದ ಮುನ್ನಡೆಸಲಾಗದು. ವ್ಯಕ್ತಿಗತವಾದ ಅಂಶಗಳು ಇಲ್ಲಿ ಕಡಿಮೆ ಇದ್ದು, ಹಲವು ವಿಭಾಗಗಳು ಸೇರಿ ಒಂದಾಗುವ ಕಾರಣ ಕಲ್ಪನೆ ಪೂರ್ಣವಾಗಿ ಸಾಕಾರವಾಗದೇ ಇರಬಹುದು. ಕಾಲಕ್ರಮೇಣ ಇದು ಸಾಧ್ಯ. ಭವಿಷ್ಯದಲ್ಲಿ ದೃಷ್ಟಿ ಇಟ್ಟು ವರ್ತಮಾನವನ್ನು ಸರಿಯಾಗಿ ನಿರ್ವಹಿಸಬೇಕು. ಎಲ್ಲರಿಗೂ ಶುಭವಾಗಲಿ.
ಮೇಷ ರಾಶಿ :
ರಾಶಿ ಚಕ್ರದ ಮೊದಲ ರಾಶಿಯವರಿಗೆ ಈ ವಾರ ಕೆಲವು ಹೊಣೆಗಾರಿಕೆಗಳು ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ. ಪ್ರಾರಂಭದಲ್ಲಿ ಬಹಳ ಹೊರೆ ಎನಿಸುವುದು. ಅದಕ್ಕೆ ತಕ್ಕ ವೇತನವೂ ಸಿಕ್ಕಾಗ ಸಮಾಧಾನವಾಗಲಿದೆ. ಈ ವಾರ ನಿಮ್ಮ ನಾಯಕತ್ವದ ಸಾಮರ್ಥ್ಯದಿಂದ ಎಲ್ಲವನ್ನು ಯಶಸ್ವಿಯಾಗಿ ಪೂರ್ಣಮಾಡುಬಿರಿ ಯಾರಿಗಾದರೂ. ಉದ್ಯೋಗ ಬದಲಾವಣೆ ಯೋಚನೆ ಇದ್ದರೆ, ಈ ವಾರ ಸಂದರ್ಶನ ಅಥವಾ ಹೊಸ ಅವಕಾಶ ದೊರೆಯುವ ಲಕ್ಷಣಗಳಿವೆ. ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ಹಿರಿಯರ ಸಲಹೆ ಪಡೆದು ಕ್ರಮವಹಿಸಿ. ಸಂದರ್ಶನಕ್ಕೆ ಕೆಂಪು ಬಣ್ಣ ಬಟ್ಟೆ ಅಥವಾ ಅದೇ ಹೆಚ್ಚಿರುವ ಬಟ್ಟೆಯನ್ನು ಧರಿಸಿ ಶುಕ್ರವಾರ ಹೋಗಿ.
ವೃಷಭ ರಾಶಿ :
ಶುಕ್ರನ ಆಧಿಪತ್ಯದ ಈ ರಾಶಿಯವರಿಗೆ ಎರಡನೇ ವಾರ ನಿಮ್ಮ ಪರಿಶ್ರಮಕ್ಕೆ ಈ ವಾರ ಸ್ಪಷ್ಟ ಫಲ ದೊರೆಯುತ್ತದೆ. ಹಣಕಾಸು ವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಉನ್ನತಿ ಸಾಧ್ಯಗುವುದು. ಕಾರ್ಯದ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಬೆಂಬಲ ಸಿಗುತ್ತದೆ. ಪ್ರಯತ್ನ ಮತ್ತು ತಾಳ್ಮೆ ಎರಡೂ ನಿಮಗೆ ಫಲ ತರುತ್ತವೆ. ಸಮಯವನ್ನು ಸರಿಯಾಗಿ ಯೋಜಿಸಿ. ವ್ಯರ್ಥವಾದ ವಾಗ್ವಾದಿಂದ ದೂರವಿರಿ. ನಿಮಗೆ ಅತ್ಯಂತ ಮಹತ್ತ್ವದ ಎನಿಸಿದಂದು ಹಸಿರು ಬಣ್ಣದ ಬಟ್ಟೆಯನ್ನು ಧರಿಸಿ. ಮಂಗಳವಾರ ವಿಶೇಷ ಘಟನೆ ನಡೆಯುವ ದಿನವಾಗಿರಲಿದೆ.
ಮಿಥುನ ರಾಶಿ :
ನವೆಂಬರ್ ತಿಂಗಳ ಈ ವಾರದಲ್ಲಿ ನಿಮಗೆ ವೃತ್ತಿಯ ನಾನಾ ಕೌಶಲ್ಯಗಳನ್ನು ಕಲಿಯಲು ಅವಕಾಶ ಸೃಷ್ಟಿಯಾಗುವುದು. ತರಬೇತಿಯನ್ನು ಉತ್ಸಾಹದಿಂದ ಭವಿಷ್ಯವನ್ನು ಮನದಲ್ಲಿ ಇರಿಸಿಕೊಂಡು ಕಲಿಯಿರಿ. ಈ ವಾರ ಕೆಲಸದಲ್ಲಿ ಸಣ್ಣ ಸವಾಲುಗಳಿದ್ದರೂ ನಿಮ್ಮ ಬುದ್ಧಿವಂತಿಕೆ ನಿಮಗೆ ಬೆಂಬಲವಾಗುತ್ತದೆ. ಯಾವುದಾದರೂ ಒತ್ತಡದ ಎನಿಸಿದರೆ ಇಷ್ಟವಾದ ಪ್ರದೇಶ, ಜನರ ಜೊತೆ ಮಾತು ಹೀಗೆ ನೆಚ್ಚಿನ ವಿಷಯದಲ್ಲಿ ಸಮಯ ಕಳೆದು ಅನಂತರ ಮುಂದುವರಿಸಿ. ಬಿಳಿಯ ಬಣ್ಣವನ್ನು ಈ ವಾರ ಹೆಚ್ಚು ಬಳಸಿ. ಬಿಳಿಯ ಬಣ್ಣದ ವಸ್ತುಗಳು ನಿಮ್ಮ ಬಳಿ ಇರಲಿ. ಗುರುವಾರ ವಿಶೇಷ ಕಾರ್ಯವನ್ನು ಹಮ್ಮಿಕೊಳ್ಳಿ.
ಕರ್ಕಾಟಕ ರಾಶಿ :
ಈ ವಾರ ನಾಲ್ಕನೇ ರಾಶಿಯವರಿಗೆ ಆರ್ಥಿಕವಾಗಿ ಲಾಭದಾಯಕ ವಾರ. ಹಳೆಯ ಯೋಜನೆಗಳು ಲಾಭ ಕೊಡುವುವು. ಕೆಲಸದ ಸ್ಥಳದಲ್ಲಿ ಹೊಸ ಪರಿಚಯಗಳು ನಿಮ್ಮ ವೃತ್ತಿಜೀವನಕ್ಕೆ ಸಹಾಯ ಮಾಡಲಿದೆ. ಸ್ವಯಂ ಉದ್ಯೋಗಿಗಳಿಗಂತೂ ಹೇಳಿ ಮಾಡಿಸಿದ ವಾರ. ಹೊಸ ಕೆಲಸ ಪ್ರಾರಂಭಿಸುವ ಮೊದಲು ಪೂರ್ಣ ಯೋಜನೆ ಮಾಡಿ. ಕಾರ್ಯದ ಸಫಲತೆಗೆ ಬಿಳಿಯ ಬಣ್ಣವೇ ಉತ್ತಮ. ಸೋಮವಾರ ಯೋಜನೆಗೆ ಚಾಲನೆ ನೀಡಿ.
ಸಿಂಹ ರಾಶಿ :
ಸೂರ್ಯನ ಆಧಿಪತ್ಯದ ಈ ರಾಶಿಯವರಿಗೆ ಒತ್ತಡದ ಕೆಲಸದ ನಡುವೆಯೂ ಉನ್ನತಿಯ ಸಂತೋಷದ ವಾರ್ತೆ ಇರುವುದು. ನಿಮ್ಮ ಕಠಿಣ ಪರಿಶ್ರಮವನ್ನು ಹೆಚ್ಚು ಜನರು ಗುರುತಿಸುತ್ತಾರೆ. ಆಡಳಿತಾತ್ಮಕ ಕಾರ್ಯಕ್ಕೆ ಒತ್ತು ಅಧಿಕ. ಅಹಂಕಾರದಿಂದ ದೂರವಿದ್ದು ಆಗಬೇಕಾದ ಕಾರ್ಯದ ಕಡೆಗೆ ಗಮನವಿರಲಿ. ಅರಿಶಿನ ನಿಮಗೆ ಮಂಗಲದಾಯಕ. ಸೂರ್ಯನ ಬಲವಿರುವ ಭಾನುವಾರ ಶ್ರೇಷ್ಠ.
ಕನ್ಯಾ ರಾಶಿ :
ನವೆಂಬರ್ ತಿಂಗಳ ಈ ವಾರ ವೃತ್ತಿಜೀವನದಲ್ಲಿ ನಿಖರತೆ ಅತ್ಯಗತ್ಯ. ಅಂದಾಜಿನ ಮಾತನ್ನು ನೀವು ಹೇಳಲೇಬಾರದು. ನೀವು ಮಾಡಿದ ಪ್ರಯತ್ನಕ್ಕೆ ವಿಳಂಬವಾದರೂ ಫಲ ಸಿಗುತ್ತದೆ. ಕೆಲಸದ ಸಮಯ ನಿರ್ವಹಣೆ ಮುಖ್ಯ. ನಿಮಗೆ ವಹಿಸಿದ ಅನ್ಯರ ಯೋಜನೆಯ ಮೇಲೂ ಶ್ರದ್ಧೆ ಇಡಿ. ಚಿಕ್ಕ ತಪ್ಪುಗಳಿಗೂ ಗಮನಬೇಕು. ಅವು ನಿಮಗೆ ಮಹತ್ತ್ವದ ದೊಡ್ಡ ಪರಿಣಾಮವನ್ನು ನೀಡುವುದು. ಹೆಚ್ಚು ವರ್ಣಗಳಿರುವ ವಸ್ತ್ರಧಾರಣೆ ಮಾಡಿ. ಬುಧವಾರ ನಿಮಗೆ ಹಿತಕರವಾಗಿದೆ.
ತುಲಾ ರಾಶಿ :
ಎರಡನೇ ರಾಶಿಯವರಿಗೆ ಈ ವಾರ ಸೃಜನಾತ್ಮಕ ವೃತ್ತಿಯವರಿಗೆ ಅದ್ಭುತ ವಾರ. ಕಲೆ, ಮಾಧ್ಯಮ, ವಿನ್ಯಾಸ ಕ್ಷೇತ್ರದವರು ಬೇರೆ ಬೇರೆ ಅವಕಾಶಗಳನ್ನು ಪಡೆಯುತ್ತಾರೆ. ಯೋಜನೆಗಳಲ್ಲಿ ನಿಮ್ಮ ಕ್ರಿಯಾಶೀಲತೆ ತೋರಿಸಿ. ಸ್ವಂತ ಹಣವನ್ನು ಎಲ್ಲಿಯೂ ಬಳಸದೇ ಮಾಡುವುದು ಗೊತ್ತಿರಲಿ. ದೊಡ್ಡ ಹೂಡಿಕೆಯನ್ನು ಮುಂದೂಡಿ, ಯೋಜನೆಗೆ ಮೊದಲು ಚರ್ಚೆ ಮಾಡಿ. ಬಿಳಿ ಮಿಶ್ರಿತ ಕೆಂಪು ಬಣ್ಣ, ಶುಕ್ರವಾರ ಎರಡೂ ನಿಮಗೆ ಪೂರಕ.
ವೃಶ್ಚಿಕ ರಾಶಿ :
ಕುಜನು ಅಧಿಪತಿಯಾದ ಈ ರಾಶಿಯವರಿಗೆ ಪರಿಚಿತರಾದ ನಿಮ್ಮ ಹಿರಿಯರ ಸಹಾಯದಿಂದ ವೃತ್ತಿಯಲ್ಲಿ ದೊಡ್ಡ ಬದಲಾವಣೆ ಸಾಧ್ಯ. ಯೋಜನೆಯ ಕಾರಣಕ್ಕೆ ಸ್ಥಳಂತರಕ್ಕೆ ಹೋಗುವಿರಿ. ನಿಮ್ಮ ಕಾರಣದಿಂದ ಕೆಲ ಸಹೋದ್ಯೋಗಳಿಗೆ ಈರ್ಷೆ ಉಂಟಾಗುವುದು. ನಿಮ್ಮ ಯೋಜನೆಗಳನ್ನು ಎಲ್ಲರಿಗೂ ಹಂಚಿಕೊಳ್ಳಬೇಡಿ ಮತ್ತು ವಿಶೇಷ ಎನ್ನುವಂತೆ ತೋರಿಸಿಕೊಳ್ಳುವುದೂ ಬೇಡ. ರಕ್ತದ ಕೆಂಪು ಬಣ್ಣ ಹಾಗೂ ಮಂಗಳವಾರದ ಕುಜನ ಪ್ರಾಬಲ್ಯದಲ್ಲಿ ಮನೋವಾಂಛೆ ಈಡೇರಬಹುದು.
ಧನು ರಾಶಿ :
ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ಈ ವಾರ ಹೊಸ ವ್ಯವಹಾರಿಗಳಿಗೆ ಒಡಂಬಡಿಕೆ ಸಾಧ್ಯತೆ. ಸರ್ಕಾರಿ ಕೆಲಸದಲ್ಲಿ ಇರುವವರು ಹೊಸ ಹೊಣೆಗಾರಿಕೆಯಿಂದ ಮುಂದುವರಿಯಬೇಕಾಗುವುದು. ಪತ್ರ ವ್ಯವಹಾರಗಳು ನಿಮ್ಮ ಕಾರ್ಯಕ್ಕೆ ಸಾಕ್ಷಿಗಳು. ವೃತ್ತಿಜೀವನದಲ್ಲಿ ಸ್ಥಿರತೆ ಪಡೆಯುವ ಹಂತ. ನೀರ ಉತ್ಪನ್ನಗಳಿಗೆ ಬೇಡಿಕೆ ಅತಿಯಾಗಿ ಬರಲಿದೆ. ಸಕಾರಾತ್ಮಕ ಬದಲಾವಣೆ ಬೇಕಾದರೆ ಹಳದಿ ಬಣ್ಣದ ವಸ್ತುಗಳನ್ನು ಬಳಸಿ. ಗುರುವಾರ ಒಳ್ಳೆಯ ಯಶಸ್ಸು ಸಿಗಲಿದೆ.
ಮಕರ ರಾಶಿ :
ನವೆಂಬರ್ ನ ಈ ವಾರ ಪರಿಶ್ರಮ ಮತ್ತು ಕೌಶಲ್ಯದಿಂದ ಪ್ರಗತಿ ಇರುವುದು. ಉದ್ಯೋಗದಲ್ಲಿ ಉಂಟಾದ ಸಮಸ್ಯೆಗಳು ನಿಧಾನವಾಗಿ ಪರಿಹಾರವಾಗುತ್ತವೆ. ಸಹವಾಸದಿಂದ ವೃತ್ತಿಯಲ್ಲಿ ಆಲಸ್ಯ ಮೈಗೂಡಲಿದೆ. ಎಲ್ಲರಂತೆ ನೀವೂ ಆಗುವಿರಿ. ಹಣವು ನಿಮಗೆ ನೇರವಾಗಿ ಸಿಗದೆ ಇರುವ ಕಾರಣ ಸ್ವಲ್ಪ ಕಿರಿಕಿರಿಯಾಗುವುದು. ಧೈರ್ಯ ಕಳೆದುಕೊಳ್ಳಬೇಡಿ. ನಿಧಾನವಾಗಿ ಫಲ ಸಿಗುತ್ತದೆ. ಕಡುಗಪ್ಪು ಅಥವಾ ಕಡುನೀಲಿ ಬಣ್ಣ ಉತ್ತಮ. ಶುಕ್ರವಾರ ಶುಭವನ್ನು ನಿರೀಕ್ಷಿಸಬಹುದು.
ಕುಂಭ ರಾಶಿ :
ಈ ತಿಂಗಳ ಎರಡನೇ ರಾಶಿಯವರಿಗೆ ವ್ಯವಹಾರವನ್ನು ಆರಂಭ ಮಾಡಲು ಇದು ಅನುಕೂಲ ಕಾಲ. ಹೊಸ ವ್ಯಕ್ತಿಗಳ ಜೊತೆಗೆ ಉದ್ಯಮವನ್ನು ಹಂಚಿಕೊಂಡು ಸಹಾಯ ಪಡೆಯುವಿರಿ. ಸಂಪರ್ಕಗಳಿಂದ ಧನ ಸಹಾಯ ಸಿಗಬಹುದು. ತಂತ್ರಜ್ಞರು ಕೆಲಸದ ಬದಲಾವಣೆಯನ್ನು ಯೋಚಿಸುತ್ತಿದ್ದರೆ ಈ ವಾರ ಸರಿಯಾದ ಸಮಯ. ಅನಿವಾರ್ಯತೆಯನ್ನು ಗಮನಿಸಿ ಮುಂದುವರಿಯಿರಿ. ನೀಲಿಯೂ ಇರುವ ವಸ್ತುಗಳ ಬಳಕೆ ಮಾಡಿ. ಮಂಗಳವಾರ ಯಾವುದಾದರೂ ಹಳೆಯ ಕಾರ್ಯಕ್ಕೆ ಶುಭಫಲ.
ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರಿಂದ 15ರ ತನಕ ವಾರಭವಿಷ್ಯ
ಮೀನ ರಾಶಿ :
ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ಕೇಳದೇ ಇದ್ದರೂ ನಿಮಗೆ ಸಹೋದ್ಯೋಗಿಗಳ ಸಹಕಾರದಿಂದ ಕೆಲಸ ಸುಲಭವಾಗುತ್ತದೆ. ಅನ್ಯರಿಂದ ಕಲಿತ ಕಲಿಕೆಗಳು ವೃತ್ತಿಜೀವನದಲ್ಲಿ ಸಹಾಯಕ. ಹಣಕಾಸು ಸ್ಥಿರತೆಯಿಂದ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ನಿಮ್ಮ ವೃತ್ತಿಯು ಸ್ಪಷ್ಟವಾಗಲಿದೆ. ಯಾವುದೇ ಉದ್ವೇಗಕ್ಕೆ ಒಳಗಾಗದೇ ಬುದ್ಧಿ ಹಾಗೂ ಮನಸ್ಸು ನಿರ್ಮಲವಾಗಿರಿಸಿ. ಶುಭ್ರವಾದ ವಸ್ತ್ರದ ಧಾರಣೆ ಮಾಡಿ. ಗುರುವಾರ ವೃತ್ತಿಯ ಮಹತ್ಕಾರ್ಯ ಸಂಭಿಸುವುದು.
– ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
