Weekly Horoscope:ಮೇ 28-ಜೂನ್ 3ರ ವರೆಗಿನ ಯಾವ ರಾಶಿಗೆ ಏನು ಫಲ? ಯಾವ ರಾಶಿಯವರಿಗೆ ಅದೃಷ್ಟ?

|

Updated on: May 28, 2023 | 4:10 PM

ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ವಾರ ಭವಿಷ್ಯವನ್ನು(Weekly horoscope) ಇಲ್ಲಿ ನೀಡಲಾಗಿದೆ. 2023ರ ಮೇ 28ರಿಂದ ಜೂನ್ 03ರವರೆಗಿನ ನಿಮ್ಮ ವಾರ ರಾಶಿಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳಿ.

Weekly Horoscope:ಮೇ 28-ಜೂನ್ 3ರ ವರೆಗಿನ ಯಾವ ರಾಶಿಗೆ ಏನು ಫಲ? ಯಾವ ರಾಶಿಯವರಿಗೆ ಅದೃಷ್ಟ?
ಪ್ರಾತಿನಿಧಿಕ ಚಿತ್ರ
Follow us on

ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ವಾರ ಭವಿಷ್ಯವನ್ನು(Weekly horoscope) ಇಲ್ಲಿ ನೀಡಲಾಗಿದೆ. 2023ರ ಮೇ 28ರಿಂದ ಜೂನ್ 03ರವರೆಗಿನ ನಿಮ್ಮ ವಾರ ರಾಶಿಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳಿ.

ಮೇಷ: ಈ ವಾರವು ಮೇ ತಿಂಗಳ ಐದನೇ ವಾರವಾಗಿದ್ದು ಗ್ರಹಗತಿಗಳಲ್ಲಿ ಸ್ವಲ್ಪ ಬದಲಾವಣೆ ಆಗಲಿದೆ. ನಿಮ್ಮ ರಾಶಿಯಲ್ಲೇ ಇರುವ ಗುರು ಹಾಗೂ ರಾಹುವು ಅಂದುಕೊಂಡ ಕಾರ್ಯವನ್ನು ಪೂರ್ಣವಾಗಿ ಸಫಲವಾಗಲು ಬಿಡರು. ದ್ವಿತೀಯದಲ್ಲಿ ಸೂರ್ಯನಿದ್ದು ಸೂರ್ಯ ತಂದೆಯ ವಿಚಾರದಲ್ಲಿ ಕೆಲವು ಬಿರುಸಿನ ಮಾತುಗಳೂ ನಡೆಯಬಹುದು. ಚತುರ್ಥದಲ್ಲಿ ಇರುವ ಶುಕ್ರನು ವಾಹನ ಹಾಗೂ ಸಂಗಾತಿಯಿಂದ ಸಹಾಯವನ್ನೂ ಕೊಡಿಸುವನು. ಚತುರ್ಥದಲ್ಲಿ ಕುಜನಿದ್ದು ನೀನಾಗಿದ್ದರಿಂದ ಮನೆಯಲ್ಲಿ ಸಣ್ಣ ವಿಚಾರಕ್ಕೂ ಕಲಹವಾಗಬಹುದು. ಏಕಾದಶದಲ್ಲಿ ಇರುವ ಶನಿಯು ನಿಮಗೆ ಶುಭಕರನಾಗಿ ಕರ್ಮವನ್ನೂ, ಹಣವನ್ನೂ ಸಕಾಲಕ್ಕೆ ಕೊಡಿಸುವನು.

ಇದನ್ನೂ ಓದಿ: Monthly Horoscope: ಈ ರಾಶಿಯವರಿಗೆ ಸಂತಾನ ಭಾಗ್ಯ, ಜೂನ್ ತಿಂಗಳ ನಿಮ್ಮ ರಾಶಿಭವಿಷ್ಯ ತಿಳಿಯಿರಿ

ವೃಷಭ ಮೇ ತಿಂಗಳ ಕೊನೆಯ ವಾರದಲ್ಲಿ ನಿಮ್ಮ ರಾಶಿಯಲ್ಲಿಯೇ ಸೂರ್ಯನಿದ್ದು ಮಾನಸಿಕ ಒತ್ತಡವನ್ನು ತರಿಸುವನು. ಏನು ಮಾಡಬೇಕೆಂದು ನಿಮಗೆ ತಿಳಿಯದೇ ಹೋದೀತು. ದ್ವಿತೀಯದಲ್ಲಿ ಶುಕ್ರನಿದ್ದು ಪ್ರಥಮಾಧಿಪತಿಯೂ ಷಷ್ಠಾಧಿಪತಿಯೂ ಆಗಿದ್ದಾನೆ. ಆತ ಹಣವನ್ನು ಸ್ವಲ್ಪ ಕೊಡುವನು. ಮುಂದೆ ತೃತೀಯದ ಕುಜನ ಜೊತೆ ಸಹಯೋಗವನ್ನು ಪಡೆದು ಪ್ರೇಮದಲ್ಲಿ ಆಸಕ್ತಿಯು ಬರುವಂತೆ ಮಾಡುವನು. ದಶಮದಲ್ಲಿ ಶನಿಯು ಇದ್ದು ಕರ್ಮದಲ್ಲಿ ನಿರಾಸಕ್ತಿಯನ್ನು ಕೊಡಿಸುವನು. ದ್ವಾದಶದಲ್ಲಿರುವ ಬುಧ, ಗುರು, ರಾಹುಗಳು ನಿಮ್ಮ ಹಣವನ್ನು ನಾನಾ ರೀತಿಯಲ್ಲಿ ಖರ್ಚಾಗುವಂತೆ ಮಾಡುವರು. ಷಷ್ಠದಲ್ಲಿ ಕೇತುವಿದ್ದು ಶತ್ರುಗಳ ಸುಳಿವನ್ನು ತಿಳಿಸುವನು.

ಮಿಥುನ: ಈ ವಾರದಲ್ಲಿ ಸ್ವಗೃಹದಲ್ಲಿ ಶುಕ್ರನಿದ್ದು ಸೌಂದರ್ಯಕ್ಕೆ, ದೇಹಕ್ಕೆ ಯಾವದೇ ತೊಂದರೆಗಳು ಆಗದಂತೆ ನೋಡಿಕೊಳ್ಳುವನು. ದ್ವಿತೀಯದಲ್ಲಿ ಕುಜನಿದ್ದು ಒರಟು ಮಾತಗಳನ್ನು ಸುಳ್ಳನ್ನು ಹೆಚ್ಚು ಆಡಿಸುವನು. ಪಂಚಮದಲ್ಲಿ ಕೇತುವಿದ್ದು ಬುದ್ಧಿಯು ಬೇಕಾದ ಸಮಯದಲ್ಲಿ ಸೂಚಿಸದೇ ಹೋಗುವುದು. ನವಮದಲ್ಲಿ ಶನಿಯು ಇದ್ದು ಹಿರಿಯ ವಿಚಾರದಲ್ಲಿ ಅನಾದರ ತೋರುವಿರಿ. ಏಕಾದಶದಲ್ಲಿ ಬುಧ, ಗುರು, ರಾಹುಗಳು ಇದ್ದು ನಿಮಗೆ ಅತಿಯಾದ ಶುಭವನ್ನೇ ಕೊಡುವರು. ಕೆಲಸದ ಸ್ಥಳದ ದಕ್ಷತೆಯನ್ನು ಉಂಟುಮಾಡುವರು. ದ್ವಾದಶದ ಸೂರ್ಯನಿಂದ ಸರ್ಕಾರದ ಕೆಲಸಗಳಲ್ಲಿ ಹಿನ್ನಡೆ ಆಗುವುದು.

ಕಟಕ: ಈ ವಾರವು ನಿಮ್ಮ ರಾಶಿಯಲ್ಲಿಯೇ ದುರ್ಬಲನಾದ ಕುಜನಿದ್ದು ಭೂಮಿಗೆ ಸಂಬಂಧಿಸಿದ ವ್ಯವಹಾರವನ್ನು ಸದ್ಯ ಕೈ ಬಿಡುವುದು ಒಳ್ಳೆಯದು. ಇಟ್ಟಕೊಂಡರೂ ನಷ್ಟವನ್ನೇ ನೋಡಬೇಕಾದೀತು. ಚತುರ್ಥದಲ್ಲಿ ಕೇತುವಿರುವ ಕಾರಣ ಕುಟುಂಬದಲ್ಲಿ ರಗಳೆಗಳು ಆಗಬಹುದು. ಅಷ್ಟಮದಲ್ಲಿರುವ ಶನಿಯು ನಿಮ್ಮನ್ನು ಮಾನಸಿಕವಾಗಿ ದೃಢಗೊಳಿಸುವನು. ದಶಮದಲ್ಲಿರುವ ಬುಧ, ಗುರು, ರಾಹುಗಳು ಶಿಕ್ಷಕವೃತ್ತಿಯನ್ನು ಮಾಡುವವರಿಗೆ ಹೆಚ್ಚು ಅನುಕೂಲವನ್ನು ಮಾಡುವರು. ಅದಲ್ಲದೇ ತಂತ್ರಜ್ಞರಿಗೂ ಮನ್ನಣೆ, ಗೌರವಗಳನ್ನು ಕೊಡಿಸವರು. ಏಕಾದಶದಲ್ಲಿ ಸೂರ್ಯನಿದ್ದು ಸಂಪತ್ತಿನ ಆಗಮನಕ್ಕೆ ತಂದೆಯು ಸಹಾಯ‌ಮಾಡುವರು. ದ್ವಾದಶದಲ್ಲಿ ಶುಕ್ರನು ಇರುವುದರಿಂದ ಅನಗತ್ಯವಾದ ಭೋಗವಸ್ತುಗಳನ್ನು ಇಷ್ಟ ಪಡುವಿರಿ.

ಸಿಂಹ: ಈ ವಾರ ನವಮದಲ್ಲಿ ಗುರು, ಬುಧ, ರಾಹುಗಳು ಇದ್ದು ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಭಕ್ತಿಯಲ್ಲಿ ಕೊರತೆ ಇರುವುದು. ದಶಮದಲ್ಲಿ ಸೂರ್ಯನಿದ್ದು ವೃತ್ತಿಯಲ್ಲಿ ಹೆಚ್ಚು ತೊಡಗುವಂತೆ ಮಾಡುವನು. ಏಕಾದಶದಲ್ಲಿ ಏಕಾದಶದಲ್ಲಿ ಶುಕ್ರನಿದ್ದು ಭೋಗವಸ್ತುಗಳಿಂದ ಲಾಭವಾಗುವುದು. ದ್ವಾದಶದ ಕುಜನು ನಿಮಗೆ ಒಂದಿಷ್ಟು ಖರ್ಚನ್ನು ಮಾಡಿಸುವನು. ಭೂಮಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಈಗ ಕೈಹಾಕಬೇಡಿ. ತೃತೀಯದಲ್ಲಿ ಇರುವ ಕೇತುವು ಸಹೋದರರ ಜೊತೆ ಸಣ್ಣ ವೈಮನಸ್ಯವನ್ನು ಕೊಡಿಸುವನು. ಸಪ್ತಮದಲ್ಲಿ ಶನಿಯು ಇದ್ದು ಕಾರ್ಯಗಳು ಸೂಚಿಸದಂತೆ ಮಾಡುತ್ತಾನೆ.

ಕನ್ಯಾ: ಈ ವಾರದಲ್ಲಿ ಕೇತುವು ದ್ವಿತೀಯದಲ್ಲಿ ಇರುವನು. ನಿಮ್ಮ ಸಂಪತ್ತು ನಿಮಗೆ ಸಿಗುವುದು ಸುಲಭವಿಲ್ಲ. ಷಷ್ಠದಲ್ಲಿ ಶನಿಯು ಇದ್ದಾನೆ. ಆರೋಗ್ಯವು ಸುಧಾರಿಸುವಂತೆ ಮಾಡುವನು. ಅಷ್ಟಮದಲ್ಲಿ ಶುಭಗ್ರಹರಾದ ಬುಧ ಹಾಗೂ ಗುರುವಿದ್ದರೂ ಪ್ರಯೋಜನವಾಗದು. ಸ್ಥಾನವೂ ಮತ್ತು ಅಶುಭ ಗ್ರಹವಾದ ರಾಹುವಿನ‌ ಸಂಯೋಗದಿಂದ ಹಿನ್ನಡೆಯಾಗಲಿದೆ. ಅಂದುಕೊಂಡ ಕಾರ್ಯವು ಮುಂದುವರಿಯದು. ನವಮದಲ್ಲಿ ಸೂರ್ಯನಿದ್ದು ಧಾರ್ಮಿಕ ಕೆಲಸಗಳನ್ನು ಹೆಚ್ಚು ಮಾಡುವಿರಿ. ದಶಮದಲ್ಲಿ ಶುಕ್ರನು ನಿಮ್ಮ ವೃತ್ತಿಗೆ ಪುಷ್ಟಿಯನ್ನು ನೀಡುವನು.‌ ಹೆಚ್ಚಿನ ಜವಾಬ್ದಾರಿಯು ಬರುವಂತೆ ಮಾಡುವನು.

ತುಲಾ: ಈ ವಾರ ನಿಮಗೆ ಗುರುಬಲ ಇದೆ. ನಿಮ್ಮದೇ ರಾಶಿಯಲ್ಲಿರುವ ಕೇತುವಿನಿಂದ ದೇಹಕ್ಕೆ ಆಗಾಗ ನೋವಾಗಬಹುದು.‌ ಸಪ್ತಮದಲ್ಲಿ ಗುರುವಿರುವ ಕಾರಣ ಮನಸ್ಸಿಗೆ ನೆಮ್ಮದಿ, ಚಿಂತಿತ ಕೆಲಸದಲ್ಲಿ ಯಶಸ್ಸು ಎಲ್ಲವೂ ಆಗಿ ನಿಶ್ಚಿಂತೆಯಿಂದ ಕೆಲಸಗಳನ್ನು ಮಾಡಬಹುದು. ನೂತನ ಕಾರ್ಯವನ್ನೂ ಆರಂಭಸಲಿದ್ದೀರಿ. ಅಲ್ಲಿಯೇ ಬುಧ ಹಾಗೂ ರಾಹು ಕೂಡ ಇರುವುದರಿಂದ ಕೆಡುಕಿನ ಭಾಗವು ಕಡಿಮೆಯಾಗಲಿದೆ. ಅಷ್ಟಮದಲ್ಲಿ ಸೂರ್ಯನಿದ್ದು ದಾಂಪತ್ಯದಲ್ಲಿ ಕಲಹವಾಗುವಂತೆ ಮಾಡುವನು. ನವಮದಲ್ಲಿ ಶುಕ್ರನಿದ್ದು ಶುಭಕಾರ್ಯದಲ್ಲಿ ಭಾಗಿಯಾಗುವಿರಿ. ದಶಮದಲ್ಲಿ ಕುಜನಿದ್ದ ಕಾರಣ ಹೆಚ್ಚು ಶ್ರಮದ ಕೆಲಸಗಳು ಬರಬಹುದು. ಬಲವನ್ನು ಹೆಚ್ಚು ಹಾಕಬೇಕಾದೀತು.

ವೃಶ್ಚಿಕ: ವಾರ ಶನಿಯು ನಾಲ್ಕನೇ ಮನೆಯಲ್ಲಿ ಇದ್ದು ಹೆಚ್ಚ ಸಂತೋಷದ ವಾತಾವರಣವು ಮನೆಯಲ್ಲಿ ಇರದು. ಎಲ್ಲರಲ್ಲಿಯೂ ಗಾಂಭೀರ್ಯವೇ ಇರುವುದು. ಷಷ್ಠದಲ್ಲಿ ಗುರು ಹಾಗೂ ಬುಧರಿದ್ದು ಬಲಿಷ್ಠ ಶತ್ರುವನ್ನೇ ಎದುರು ಹಾಕಿಕೊಂಡಿರುವಿರಿ. ಸುಬ್ರಹ್ಮಣ್ಯನ ಸ್ಮರಣೆ ಮಾಡಿದರೆ ಶತ್ರುವಿನ ತೊಂದರೆ ಕಡಿಮೆಯಾದೀತು. ಸಪ್ತಮದಲ್ಲಿ ಸೂರ್ಯನಿರುವುದರಿಂದ ಪತ್ನಿಯ ಜೊತೆ ಕಲಹವಾಗಬಹುದು. ವಿನಾಕಾರಣ ಸಿಟ್ಟುಗೊಳ್ಳುವಿರಿ. ಅಷ್ಟಮದಲ್ಲಿ ಶುಕ್ರನಿದ್ದು ಪತ್ನಿಯ ಆರೋಗ್ಯವು ಚೆನ್ನಾಗಿರುವಂತೆ ನೋಡಿಕೊಳ್ಳಿ. ಔಷಧೋಪಚಾರದಿಂದ ರೋಗವು ಕಡಿಮೆ ಆದೀತು. ನವಮದಲ್ಲಿ ಕುಜನಿರುವುದರಿಂದ ಶ್ರದ್ಧೆಯಿಂದ ಅಲ್ಲದಿದ್ದರೂ ಕರ್ತವ್ಯದ ದೃಷ್ಟಿಯಿಂದ‌ ಕೆಲಸವನ್ನು ಮಾಡುವಿರಿ.

ಧನಸ್ಸು: ಈ ವಾರ ತೃತೀಯದಲ್ಲಿ ಶನಿಯು ಇದ್ದು ನಿಮ್ಮ ಸಾಮರ್ಥ್ಯವು ವಿಳಂಬವಾಗಿ ಪ್ರಕಟವಾಗುವುದು. ಪಂಚಮಾಧಿಪತಿಯು ಅಷ್ಟಮದಲ್ಲಿ ಇರುವುದರಿಂದ ಮಕ್ಕಳು ವಿಚಾರದಲ್ಲಿ ತೊಂದರೆಯಾಗುವುದು ಅಥವಾ ನಿಮಗೂ ಮಕ್ಕಳಿಗೂ ವಾಗ್ವಾದ ನಡೆಯಬಹುದು. ಸಪ್ತಮಾಧಿಪತಿಯೂ ದಶಮಾಧಿಪತಿಯೂ ಆದ ಬುಧನು ಪಂಚಮದಲ್ಲಿ ಇರುವನು. ಬುದ್ಧಿವಂತಳಾದ ಪತ್ನಿಯು ಸಿಗಬಹುದು. ಪಂಚಮದಲ್ಲಿ ಗುರುವಿರುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸವನ್ನು ಮಾಡುವರು. ದಾಂಪತ್ಯದಲ್ಲಿ ಅನ್ಯೋನ್ಯತೆ ಇರಲಿದೆ. ಏಕಾದಶದ ಕೇತುವು ಲಾಭವನ್ನು ತಂದು ಕೊಟ್ಟರೂ ಮಾರ್ಗವು ಸರಿಯಾಗಿರದು.

ಮಕರ: ಈ ವಾರ ದ್ವಿತೀಯದಲ್ಲಿ ಶನಿ ಇದ್ದು ನಿಮ್ಮ ಮಾತಗಳಿಗೆ ಬೆಲೆಯನ್ನು ಕಡಿಮೆ‌ ಮಾಡುವನು.‌ ಉತ್ತಮ ವಿಚಾರಗಳೇ ಆದರೂ ಕೇಳುವ ಮನಃಸ್ಥಿತಿ‌ ಇರದು. ಚತುರ್ಥದಲ್ಲಿ ಗುರು, ಬುಧ, ರಾಹುಗಳು ಮನೆಯಲ್ಲಿ ಸ್ವಲ್ಪಮಟ್ಟಿನ ಸಂತೋಷವನ್ನು ಕೊಡುವುವು. ಬಂಧುಗಳ ಆಗಮನವು ಆಗಾಗ ಆಗುವುದು. ಪಂಚಮದಲ್ಲಿ ಸೂರ್ಯನಿದ್ದು ನಿಮಗೆ ಕಾಲಕ್ಕೆ ತಕ್ಕಂತೆ ಸ್ಫುರಣೆ ಮಾಡಿಸುವನು. ಷಷ್ಠಸ್ಥಾನದಲ್ಲಿ ಶುಕ್ರನಿರುವ ಕಾರಣ ಸ್ತ್ರೀಯರ ಶತ್ರುವನ್ನು ಇಟ್ಟುಕೊಳ್ಳುವ ಸಾಧ್ಯತೆ ಇದೆ. ಸಪ್ತಮದಲ್ಲಿ ಕುಜನಿದ್ದುದರಿಂದ ವಿವಾಹವು ವಿಳಂಬವಾಗಬಹುದು. ಮೃತ್ಯುಂಜಯನ ಆರಾಧನೆಯನ್ನು ಮಾಡಿ.

ಕುಂಭ: ಇದು ಮೇ ತಿಂಗಳ ಕೊನೆಯ ವಾರವಾಗಿದ್ದು ತೃತೀಯಲ್ಲಿ ಗುರು, ರಾಹು, ಬುಧರಿರುವರು. ಸಾಮರ್ಥ್ಯವು ತಿಳಿಯಲು ಸಮಯ ಬೇಕಾದೀತು. ಷಷ್ಠದಲ್ಲಿ ಕುಜನಿರುವನು. ಶತ್ರುಬಾಧೆಯಿಂದ ಮುಕ್ತಿಕೊಡಿಸುವನು‌. ಸಂಪತ್ತು ಕನ್ನಡಿಯ ಗಂಟಿನಂತೆ ಆದೀತು. ಪಂಚಮದಲ್ಲಿ ಶುಕ್ರನಿದ್ದು ಮಗಳಿಂದ ಸಂತೋಷವು ಸಿಗಲಿದೆ. ದಶಮದಲ್ಲಿ ಕೇತುವಿರುವದರಿಂದ ಕಾರ್ಯದಲ್ಲಿ ನೆಮ್ಮದಿಯ ಕೊರತೆ ಇರಲಿದೆ. ನಿಮ್ಮ ಮನೆಯಲ್ಲಿ ಶನಿಯಿದ್ದು ದೇಹಾಲಸ್ಯವು ಹೆಚ್ಚಿರಲಿದೆ. ಹನುಮಾನ್ ಚಾಲಿಸ್ ಮಾಡಿ.

ಮೀನ: ಈ ತಿಂಗಳ ಐದನೆಯ ವಾರ ದ್ವಿತೀಯದಲ್ಲಿ ಗುರು, ಬುಧ, ರಾಹುವಿದ್ದು ಬರಬೇಕಾದ ಸಂಪತ್ತು ಅಲ್ಪ ಪ್ರಮಾಣದಲ್ಲಿ ಬರಲಿದೆ. ತೃತೀಯದಲ್ಲಿ ಸೂರ್ಯನಿದ್ದು ಸಹೋದರ ನಡುವೆ ಹೊಂದಾಣಿಕೆ ಇರಲಿದೆ. ಚತುರ್ಥದಲ್ಲಿ ಶುಕ್ರನಿದ್ದು ಸುಂದರ ಮನೆಯ ನಿರ್ಮಾಣವನ್ನು ಮಾಡಿಕೊಳ್ಳುವಿರಿ. ಪಂಚಮದಲ್ಲಿ ಕುಜನಿದ್ದು ಪ್ರತಿಭೆಗೆ ಹಿನ್ನಡೆಯಾಗಲಿದೆ. ಅಷ್ಟಮದಲ್ಲಿ ಕೇತುವಿನ ಉಪಸ್ಥಿತಿಯು ಇರಲಿದ್ದು ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ‌.

ಲೇಖನ-ಲೋಹಿತಶರ್ಮಾ