Monthly Horoscope: ಈ ರಾಶಿಯವರಿಗೆ ಸಂತಾನ ಭಾಗ್ಯ, ಜೂನ್ ತಿಂಗಳ ನಿಮ್ಮ ರಾಶಿಭವಿಷ್ಯ ತಿಳಿಯಿರಿ
ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ಮಾಸ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ. 2023ರ ಜೂನ್ ತಿಂಗಳಲ್ಲಿ ನಿಮ್ಮ ರಾಶಿಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳಿ.
ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ಮಾಸ ಭವಿಷ್ಯವನ್ನು(Monthly horoscope) ಇಲ್ಲಿ ನೀಡಲಾಗಿದೆ. 2023ರ ಜೂನ್ ತಿಂಗಳಲ್ಲಿ ನಿಮ್ಮ ರಾಶಿಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳಿ.
ಮೇಷ: ಜೂನ್ ತಿಂಗಳು ಮೇಷ ರಾಶಿಯವರಿಗೆ ಮಿಶ್ರಫಲ. ಶಿಕ್ಷಣದ ವಿಚಾರದಲ್ಲಿ ಉತ್ತಮ. ಕಛೇರಿಯಲ್ಲಿ ಹಿರಿಯರು ಮತ್ತು ಸಹೋದ್ಯೋಗಿಗಳ ಜೊತೆ ಸೌಹಾರ್ದವನ್ನು ಬೆಳೆಸಿಕೊಳ್ಳಿ. ಕೆಲಸದ ಸ್ಥಳದಲ್ಲಿ ಆಗುವ ಕೆಲವು ಬದಲಾವಣೆಗಳು ನಿಮ್ಮ ಗಮನಕ್ಕೆ ಬರಬಹುದು. ಸ್ವಂತ ಉದ್ಯೋಗ ಮಾಡುವವರು ಹೆಚ್ಚಿನ ಆದಾಯವನ್ನು ಪಡೆಯಬಹುದು. ಚತುರ್ಥದಲ್ಲಿರುವ ಶುಕ್ರನ ಉಪಸ್ಥಿತಿಯಿಂದ ವೈವಾಹಿಕ ಜೀವನವು ಚೆನ್ನಾಗಿರುವುದು. ಪತಿ ಪತ್ನಿಯರು ಅನ್ಯೋನ್ಯದಿಂದ ಬಾಳುವರು. ಈ ತಿಂಗಳು ನಿಮ್ಮ ಆರ್ಥಿಕ ವಿಚಾರವೂ ಉತ್ತಮವಾಗಿರಲಿದೆ. ಚತುರ್ಥದಲ್ಲಿ ಮತ್ತೆ ಕುಜ ಹಾಗು ಶುಕ್ರರ ಸಂಯೋಗವಾಗಲಿದೆ.
ವೃಷಭ: ಜೂನ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ. ಮನೆ ಅಥವಾ ವಾಹನವನ್ನು ಖರೀದಿಸುವ ಸಾಧ್ಯತೆ ಇದೆ. ನರಗಳ ತೊಂದರೆಗಳು ಕಾಣಿಸಿಕೊಳ್ಳಬಹುದು. ತಿಂಗಳ ಮಧ್ಯದಲ್ಲಿ ನಿಮ್ಮ ಸ್ನೇಹಿತನ ಬೆಂಬಲದಿಂದ ಹಣಕಾಸಿನ ಲಾಭವನ್ನು ಪಡೆಯುವಿರಿ. ಶಿಕ್ಷಣದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಮನಸ್ಸಿಟ್ಟು ಓದುವರು. ಇದರ ಪ್ರಯೋಜನವೂ ಅಧಿಕವಾಗಲಿದೆ. ವಿದೇಶದಲ್ಲಿ ನೀವು ಅಧ್ಯಯನ ಮಾಡಲು ಬಯಸುವುದು ಬೇಡ. ಪ್ರೇಮಿಗಳು ಪರಸ್ಪರ ಮಧುರ ಕ್ಷಣಗಳನ್ನು ಹಂಚಿಕೊಳ್ಳುವಿರಿ. ತೃತೀಯದ ಕುಜನು ನಿಮ್ಮ ಸಾಮರ್ಥ್ಯವನ್ನು ಪ್ರಕಟಿಸಿಯಾನು. ಅನಿರೀಕ್ಷಿತ ಸಂಪತ್ತು ನಿಮಗೆ ಸಿಗಬಹುದು.
ಮಿಥುನ: ಈ ತಿಂಗಳು ಅವಿವಾಹಿತರಿಗೆ ಕಂಕಣ ಭಾಗ್ಯ ಬರಲಿದೆ. ದಾಂಪತ್ಯದಲ್ಲಿ ಪರಸ್ಪರ ವಿಶ್ವಾಸವು ಅಧಿಕವಾಗುವುದು. ನಿಮ್ಮ ವೈವಾಹಿಕ ಜೀವನವು ಆನಂದದಾಯಕವಾಗಿ ಇರುವುದು. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ತಿಂಗಳು. ಜ್ಞಾನಕಾರಕ ಗುರುವು ಏಕಾದಶದಲ್ಲಿದ್ದು ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುವನು. ಕುಟುಂಬದ ಸದಸ್ಯರ ನಡುವೆ ವಿವಾದಗಳು ನಡೆಯಬಹುದು. ಇದು ಮನೆಯ ವಾತಾವರಣವು ಕೆಡಿಸಬಹುದು. ಪ್ರೀತಿಗೆ ಯೋಗ್ಯರಾದ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುವಿರಿ. ಕುಜನು ದ್ವಿತೀಯದಲ್ಲಿದ್ದು ಕೆಲಸದಲ್ಲಿ ಉತ್ತಮ ಸಾಧ್ಯತೆಗಳು ಉಂಟಾಗಬಹುದು. ನಿರೀಕ್ಷಿತ ಯಶಸ್ಸು ಸಿಗುವ ಸಾಧ್ಯತೆ ಇದೆ. ದ್ವಿತೀಯಕ್ಕೆ ಈ ತಿಂಗಳು ಶುಕ್ರನ ಪ್ರವೇಶವಾಗಲಿದೆ. ಕುಜ ಹಾಗು ಶುಕ್ರರ ಸಂಯೋಗವು ನಿಮಗೆ ಅನೇಕ ಲಾಭವನ್ನು ತಂದುಕೊಡುವುದಾದರೂ ಕುಜನು ನೀಚನಾಗಿರುವುದರಿಂದ ಅದು ಸಿಗದೇ ಹೋದೀತು.
ಕರ್ಕಾಟಕ: ಈ ತಿಂಗಳು ನಿಮ್ಮ ಹಿರಿಯ ಅಧಿಕಾರಿಗಳ ಜೊತೆ ಸಾಮರಸ್ಯವನ್ನು ಇಟ್ಟುಕೊಳ್ಳುವುದು ಅನಿವಾರ್ಯ. ತಂದೆಯ ಆರೋಗ್ಯವನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳಿ. ನಿಮ್ಮ ಮಕ್ಕಳ ಕಾರಣದಿಂದದಾಗಿ ನೋವು ಉಂಟಾಗಬಹುದು. ಕುಜನು ನಿಮ್ಮದೇ ಮನೆಯಲ್ಲಿದ್ದು ಶುಕ್ರನೂ ಇದರ ಜೊತೆ ಸೇರುವನು. ವಾಹನ ವಿಚಾರದಲ್ಲಿ ಜಾಗರೂಕರಾಗಿರಿ. ಅಷ್ಟಮದ ಶನಿಯ ಕಾರಣ ಆಯುಷ್ಯವು ಚೆನ್ನಾಗಿರಲಿದೆ. ಆದರೆ ನೋವನ್ನು ಅನಿಭವಿಸಬೇಕಾದೀತು. ಚತುರ್ಥದಲ್ಲಿ ಕೇತುವು ಇದ್ದು ಕುಟುಂಬದಲ್ಲಿ ಹೊಂದಾಣಿಕೆ ಕಡಿಮೆಯಾದೀತು. ಶುಕ್ರನು ದ್ವಾದಶದಲ್ಲಿ ಇರುವ ಕಾರಣ ಭೋಗವಸ್ತುವಿನಿಂದ ಹಣವನ್ನು ಕಳೆದುಕೊಳ್ಳುವಿರಿ.
ಸಿಂಹ: ಈ ತಿಂಗಳು ವ್ಯಾಪಾರಸ್ಥರು ಉತ್ತಮ ಆದಾಯವನ್ನು ಗಳಿಸುವರು. ಸಪ್ತಮದಲ್ಲಿ ಶನಿ ಇರುವ ಕಾರಣ ಮನಸ್ಸು ಯಾವುದನ್ನು ಒಪ್ಪಿಕೊಳ್ಳುವುದಿಲ್ಲ. ನಿಮ್ಮ ಅನಿವಾರ್ಯತೆಗೆ ಕುಟುಂಬ ಸದಸ್ಯರು ಸಹಾಯ ಮಾಡುತ್ತಾರೆ. ಅಧ್ಯಯನದ ವಿಚಾರದಲ್ಲಿ ಮನಸ್ಸು ಚಂಚಲವಾಗಲಿದೆ. ಮನೆಯಲ್ಲಿ ಆತಂಕವಿದ್ದು ದೈವಜ್ಞರ ಸಹಾಯದಿಂದ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಮಕ್ಕಳ ವಿಚಾರದಲ್ಲಿ ನಿಮ್ಮ ನಿಮ್ಮ ಧೈರ್ಯವೂ ಮುಖ್ಯವಾಗಿರುವುದು. ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಉದ್ಯೋಗದಲ್ಲಿ ಕೌಶಲ್ಯದಿಂದ ಸಹೋದ್ಯೋಗಿಗಳ ಮೆಚ್ಚುಗೆಯನ್ನು ಗಳಿಸುವರು. ಉನ್ನತ ಅಧಿಕಾರಿಗಳ ಪ್ರೋತ್ಸಾಹವೂ ಲಭ್ಯ. ವ್ಯಾಪಾರ ಮಾಡುವವರು ಬಹಳ ಚಾಣಾಕ್ಷತನದಿಂದ ವ್ಯವಹರಿಸಬೇಕಾದೀತು. ಗೌರವಗಳು ಸಿಗುವ ಸಾಧ್ಯತೆ ಇದೆ.
ಕನ್ಯಾ: ಈ ತಿಂಗಳು ಸರ್ಕಾರಿ ಉದ್ಯೋಗಿಗಳಿಗೆ ಇದು ಉತ್ತಮ ತಿಂಗಳಾಗುವುದು. ಪದೋನ್ನತಿಯೂ ಸಿಗಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಮೈ ಮರೆತು ಏನನ್ನಾದರೂ ಹೇಳಿಬಿಡಬೇಡಿ. ನೀವು ಈ ತಿಂಗಳಲ್ಲಿ ಪ್ರಯಾಣವನ್ನು ಹೆಚ್ಚು ಮಾಡುವಿರಿ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಅದರ ಬಗ್ಗೆ ನಿರ್ಲಕ್ಷ್ಯ ಬೇಡ. ಹೊಸದಾಗಿ ವಿವಾಹವಾದವರು ಕುಟುಂಬ ಜೀವನಕ್ಕೆ ಒಗ್ಗಿಕೊಳ್ಳಲು ಶ್ರಮ ಪಡಬೇಕಾದೀತು. ಬಹಳ ಕೆಳಮಟ್ಟದಲ್ಲಿ ನೀವು ಅಪಮಾನವನ್ನು ಅನುಭವಿಸುವಿರಿ. ವಾಹನ ಖರೀದಿಯನ್ನು ಮಾಡುವಿರಿ. ವೃತ್ತಿಯಲ್ಲಿ ಸುಖವಿರಲಿದೆ. ತಂದೆಯಿಂದ ನಿಮಗೆ ಗೌರವವು ಪ್ರಾಪ್ತವಾಗುವುದು.
ತುಲಾ : ಈ ತಿಂಗಳು ನಿಮಗೆ ಹೊಸ ಜವಾಬ್ದಾರಿಯು ಬರುವ ಸಾಧ್ಯತೆ ಇದೆ. ನೀವು ಯಾರನ್ನಾದರೂ ಪ್ರೇಮಿಸಿದ್ದರೆ, ಅವರ ಪ್ರೀತಿಯನ್ನು ಗೆಲ್ಲುವಿರಿ. ಸಂತಾನ ಭಾಗ್ಯದ ಶುಭವಾರ್ತೆ ಬರಲಿದೆ. ಅನಾರೋಗ್ಯದ ಕಾರಣ ನೀವು ದುರ್ಬಲರಾಗುವುದು ಬೇಡ. ಎದುರಿಸುವ ಮಾನಸಿಕತೆಯನ್ನು ಬೆಳೆಸಿಕೊಳ್ಳಿ. ವಿವಾದ ಮಾಡುವುದು ಬೇಡ ಎಂದಿದ್ದರೂ ಸಂದರ್ಭವು ಸೃಷ್ಟಿಯಾಗಬಹುದು. ವಿವಾಹದ ಅನಂತರ ಆರ್ಥಿಕ ಸ್ಥಿತಿ ಹದ ತಪ್ಪಿದೆ ಎಂದು ಅನ್ನಿಸಬಹುದು. ಸಾಮಾನ್ಯರೂಪದ ಸ್ತ್ರೀ ಅಥವಾ ಪುರುಷನ ಜೊತೆ ವಿವಾಹವಾಗುವುದು. ನವಮದ ಶುಕ್ರನು ನಿಮಗೆ ಬರಬೇಕಾದ ಸಂಪತ್ತನ್ನು ಕೊಡಿಸುವನು. ಪಂಚಮದ ಶನಿಯು ನಿಮಗೆ ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯವಿದ್ದೀತು.
ವೃಶ್ಚಿಕ: ನಿಮ್ಮ ಜೀವನದಲ್ಲಿ ಐಷಾರಾಮ ಹೆಚ್ಚಿಸಲು ನೀವು ಸಾಕಷ್ಟು ಗಮನ ಹರಿಸುತ್ತೀರಿ. ಅಪಾರ್ಟ್ಮೆಂಟ್ ಮಾರಾಟ ಒಪ್ಪಂದ ಅಥವಾ ಆಸ್ತಿ ಖರೀದಿ ವ್ಯವಹಾರದಲ್ಲಿ ನೀವು ಲಾಭ ಗಳಿಸಬಹುದು. ಹೊಸ ಮನೆಯ ನಿಮ್ಮ ಆಸೆ ಈಡೇರುವ ಸಾಧ್ಯತೆ ಇದೆ. ನಿಮ್ಮ ಒಡಹುಟ್ಟಿದವರ ಸಹಾಯದಿಂದಾಗಿ ನೀವು ಕುಟುಂಬ ಸೌಕರ್ಯದ ಆನಂದವನ್ನು ಮತ್ತು ಸುರಕ್ಷಿತ ಯಶಸ್ಸನ್ನು ಅನುಭವಿಸುವಿರಿ. ಏಕಾಗ್ರತೆ ರೂಪುಗೊಳ್ಳುತ್ತದೆ. ಪರಿಶ್ರಮದಲ್ಲಿ ಸಡಿಲಿಕೆ ಬೇಡ. ನಿಮ್ಮ ಪ್ರಯತ್ನವೂ ಎಂದಿನಂತೆ ಇರಲಿ. ಆರ್ಥಿಕ ಸ್ಥಿತಿಯು ಬಹಳ ಕುಗ್ಗಿದ್ದು ಏನಾದರೂ ಮಾಡಬೇಕು ಎನ್ನುವ ತುಡಿತ ಇರುವುದು. ಷಷ್ಠದ ಗುರುವಿನಿಂದ ನೀವು ಬಚಾವಾಗಲು ಗುರುಚರಿತ್ರೀಯನ್ನು ಪಠಿಸಿ.
ಧನು : ನಿಮ್ಮ ವೈವಾಹಿಕ ಜೀವನವು ಉತ್ತಮವಾಗಿರಲಿದೆ. ಸಪ್ತಮಾಧಿಪತಿಯು ಪಂಚಮದಲ್ಲಿ ಗುರುವಿನ ಜೊತೆ ಇರುವನು. ಮಕ್ಕಳಲ್ಲಿ ಜ್ಞಾನಾರ್ಜನೆಯ ಮನಸ್ಸು ಬರಬಹುದು. ಪತ್ನಿಯ ಮಾತನ್ನು ಅನಿವಾರ್ಯವಾಗಿ ಕೇಳಬೇಕಾದೀತು. ತಿಂಗಳ ಮಧ್ಯದಿಂದ ವಾಹನ ವಿಷಯದಲ್ಲಿ ಎಚ್ಚರ ಅವಶ್ಯಕ. ಅಷ್ಟಮಕ್ಕೆ ಶುಕ್ರ ಮತ್ತು ಮಂಗಳನ ಉಪಸ್ಥಿತಿಯು ಹತ್ತಿರ ಸಂಬಂಧಗಳ ಬಳಕೆಯು ಅಧಿಕವಾದಂತೆ ತೋರುತ್ತದೆ. ಷಷ್ಠದ ಸೂರ್ಯನಿಂದ ತಂದೆಯ ವಿಚಾರದಲ್ಲಿ ಕಿರಿಕಿರಿಯಾಗಬಹುದು ಈ ತಿಂಗಳು. ನಿಮ್ಮ ನಡುವೆ ಸಾಮರಸ್ಯದ ಕೊರತೆ ಎದ್ದು ತೋರಬಹುದು. ಬಂದ ಅವಕಾಶಗಳನ್ನು ದೂರ ಮಾಡಿಕೊಳ್ಳಬೇಡಿ.
ಮಕರ: ಈ ತಿಂಗಳು ಮಧ್ಯಮ ಲಾಭ ಗಳಿಸುವ ಸಾಧ್ಯತೆ ಇದೆ. ಸಪ್ತಮದಲ್ಲಿ ಕುಜನಿದ್ದು ಆತನು ನೀಚನಾಗಿದ್ದಾನೆ. ಜೊತೆಗೆ ಶುಕ್ರನ ಸಂಯೋಗವೂ ಆಗುವುದು. ಭೂಮಿಯು ಲಾಭವಾದರೂ ಪ್ರಶಸ್ತವಾದುದು ಆಗಿರುವುದಿಲ್ಲ. ಅಷ್ಟಮಾಧಿಪತಿಯು ಪಂಚಮದಲ್ಲಿದ್ದು ತಂದೆ ಹಾಗೂ ಮಕ್ಕಳ ನಡುವೆ ಸಂಬಂಧಗಳು ಚೆನ್ನಾಗಿ ಆಗುವುದು. ಕೆಲಸದಲ್ಲಿ ಹಿನ್ನಡೆ, ಕೆಲಸದಲ್ಲಿ ಚಾಂಚಲ್ಯವು ಬರಲಿದೆ. ದಶಮದ ಕೇತುವು ಇದೆಲ್ಲವನ್ನು ಮಾಡಿಸುವನು. ದ್ವಾದಶಾಧಿಪತಿಯೂ ದ್ವಿತೀಯಾಧಿಪತಿಯೂ ಆದ ಗುರುವು ಚತುರ್ಥದಲ್ಲಿರುವನು. ಕುಟುಂಬಕ್ಕಾಗಿ ಹೆಚ್ಚು ಶ್ರಮ ಪಡುವಿರಿ. ಕುಟುಂಬದ ಜನರಿಗೆ ಸಹಾಯವಾಗುವಂತೆ ಮಾಡುವಿರಿ.
ಕುಂಭ : ಈ ತಿಂಗಳು ಕೆಲಸದಲ್ಲಿ ಹೆಚ್ಚು ಗೊಂದಲವೇ ಕಾಣಿಸಬಹುದು. ಹಿರಿಯ ಅಧಿಕಾರಿಗಳ ಜೊತೆ ತಗ್ಗಿ ಬಗ್ಗಿ ಮಾತನಾಡಿ ಕೆಲಸವನ್ನು ಸಾಧಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಉನ್ನತ ಶಿಕ್ಷಣಕ್ಕೆ ಸರಕಾರ ಸೀಟನ್ನು ನಿರೀಕ್ಷಿಸುತ್ತಿದ್ದರೆ ನಿಮಗೆ ಸಿಗಲಿದೆ. ದಾಂಪತ್ಯದಲ್ಲಿ ಈ ತಿಂಗಳ ಮಧ್ಯದಿಂದ ಹೆಚ್ಚು ಕಲಹಗಳು ಆಗಬಹುದು. ಸಣ್ಣ ವಿಚಾರಗಳೂ ದೊಡ್ಡದಾಗುವ ಸಾಧ್ಯತೆ ಇದೆ. ಮನೆಯಿಂದ ಹೆಚ್ಚು ದಿನ ಹೊರಗೆ ವಸತಿ ಮಾಡುವ ಸಾಧ್ಯತೆ ಇದೆ. ಸಪ್ತಮಾಧಿತಿಯು ಪಂಚಮಕ್ಕೆ ಬರಲಿದ್ದು ಮಕ್ಕಳ ಕುರಿತು ದಂಪತಿಗಳು ಆಲೋಚಿಸುವರು. ಬಂಧುಗಳನ್ನು ಈ ತಿಂಗಳು ನೀವು ಕಳೆದುಕೊಳ್ಳುವಿರಿ. ನವಮಾಧಿಪತಿಯೂ ಚತುರ್ಥಾಧಿಪತಿಯೂ ಷಷ್ಠಕ್ಕೆ ಬರಲಿದ್ದು ಆರೋಗ್ಯದಲ್ಲಿ ತೊಂದರೆ, ಔಷಧಿಗಳು ಸರಿಯಾಗಿ ಕೆಲಸ ಮಾಡದೇ ಹೋಗಬಹುದು.
ಮೀನ: ಈ ತಿಂಗಳು ಈ ರಾಶಿಯವರಿಗೆ ವಿವಿಧ ರೀತಿಯ ಲಾಭವನ್ನು ಮಾಡಿಕೊಳ್ಳುವರು. ಆರೋಗ್ಯಕ್ಕೆ ಸಂಬಂಧಿಸಿದಂತೆ ಆಹಾರವನ್ನು ನಿಯಮಿತವಾಗಿ ಬಳಸುವುದು ಒಳ್ಳೆಯದು. ನೀವು ಪುಣ್ಯ ಸ್ಥಳಗಳಿಗೆ ಹೋಗುವಿರಿ. ಆದಾಯದ ಹೊಸ ಮೂಲಗಳು ಸಿಕ್ಕರೂ ಆದಾಯವು ಅಂದುಕೊಂಡಷ್ಟು ಆಗದು. ಬರಬೇಕಾದ ಹಣವನ್ನು ವಿವಿಧ ಮೂಲಗಳಿಂದ ಹೇಳಿಸಿ ಬರುವಂತೆ ಮಾಡಿಕೊಳ್ಳುವಿರಿ. ದ್ವಿತೀಯ ಹಾಗೂ ನವಮಾಧಿಪತಿಯಾದ ಕುಜನು ನೀಚನಾಗಿ ಪಂಚಮದಲ್ಲಿ ಇರುವನು. ಪುತ್ರರಿಂದ ಮನ್ನಣೆಯು ಸಿಗಬಹುದು. ಭೂಮಿ ಅಥವಾ ವಾಹನ ಖರೀದಿಗೆ ಮಕ್ಕಳು ಸಹಾಯ ಮಾಡುವರು. ಚತುರ್ಥ ಮತ್ತು ಸಪ್ತಮಾಧಿಪತಿಯಾದ ಬುಧನು ತೃತೀಯಕ್ಕೆ ಬರಲಿದ್ದು ಸಹೋದರ ಸಹಾಯದಿಂದ ವಿವಾಹದ ಮಾತುಕತೆಗಳು ನಡೆಯಬಹುದು. ಮನೆಯಲ್ಲಿ ಸಹೋದರನ ಮಾತಿಗೆ ಬೆಲೆ ಕೊಡುವರು. ಸಾಡೇಸಾಥ್ ನ ಪ್ರಭಾವವು ಕಡಿಮೆಯಾಗಲು ಪ್ರತಿ ಶನಿವಾರದಂದು ರುದ್ರಾಭಿಷೇಕ ಮಾಡಿಸಿ.
ಲೇಖನ -ಲೋಹಿತಶರ್ಮಾ, ಇಡುವಾಣಿ