Nitya Bhavishya: ಈ ಶುಭ ದಿನ ನಿಮ್ಮ ರಾಶಿ ಫಲ ಹೇಗಿದೆ? ಇಂದಿನ ನಿತ್ಯ ಭವಿಷ್ಯದಲ್ಲಿ ತಿಳಿಯಿರಿ
Daily Horoscope: ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ಇಂದಿನ (ಮೇ 29) ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದ್ದು, ಯಾವ ರಾಶಿಗೆ ಏನು ಫಲ ಎನ್ನುವುದನ್ನ ತಿಳಿದುಕೊಳ್ಳಿ
ಶುಭೋದಯ ಓದುಗರೇ… ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಪಂಚಾಂಗ: ಶಾಲಿವಾಹನ ಶಕೆ 1947, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಗಂಡ. ಕರಣ : ಕೌಲವ, ಸೂರ್ಯೋದಯ – 06-03 am, ಸೂರ್ಯಾಸ್ತ – 06-55 pm. ರಾಹು ಕಾಲ 07:40 – 09:17, ಯಮಘಂಡ ಕಾಲ 10:53 – 12:30, ಗುಳಿಕ ಕಾಲ 14:06 – 15:43.
ಇದನ್ನೂ ಓದಿ: Weekly Horoscope:ಮೇ 28-ಜೂನ್ 3ರ ವರೆಗಿನ ಯಾವ ರಾಶಿಗೆ ಏನು ಫಲ? ಯಾವ ರಾಶಿಯವರಿಗೆ ಅದೃಷ್ಟ?
ಮೇಷ: ನಿಮಗೆ ಇಂದು ಪರಿಚಿತ ವ್ಯಕ್ತಿಯ ಸಹಾಯದಿಂದ ಸಾಲವನ್ನು ಮಾಡುವಿರಿ. ಇಂದು ನೀವು ಸರ್ಕಾರದಿಂದ ಗೌರವಿಸಲ್ಪಡುವ ಸಾಧ್ಯತೆಯಿದೆ. ಹಳೆಯ ಸ್ನೇಹಿತರು ಬೆಂಬಲಕ್ಕೆ ನಿಲ್ಲುತ್ತಾರೆ ಮತ್ತು ಸ್ನೇಹಿತರು ಸಹ ಹೆಚ್ಚಾಗುತ್ತಾರೆ. ಇಂದು ನಿಮ್ಮ ಹೆಂಡತಿಯಿಂದ ನೀವು ಉತ್ತಮ ಬೆಂಬಲವನ್ನು ಪಡೆಯಬಹುದು. ತಂದೆಯು ನಿಮಗೆ ಏನನ್ನಾದರೂ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುವರು. ಸ್ವೇಚ್ಛೆಯ ನಿಮ್ಮ ವರ್ತನೆಗಳು ಕೆಲವರಿಗೆ ಅಸಮಾಧಾನವನ್ನು ಕೊಡಬಹುದು. ತಾಳ್ಮೆಯಿಂದ ಇಂದಿನ ವ್ಯವಹಾರವನ್ನು ಮಾಡಿ.
ವೃಷಭ: ಇಂದು ನೀವು ಬಹಳ ಕಾರ್ಯದಲ್ಲಿ ಮಗ್ನರಾಗುವಿರಿ. ಯಾರನ್ನಾದರೂ ಅಳೆಯುವಾಗ ನಿಮಗೆ ಸರಿಯಾದ ನಿರ್ಧಾರವನ್ನು ಮಾಡಲು ಕಷ್ಟಮವಾದೀತು. ಪ್ರಯೋಜನವಿಲ್ಲದ ಕೆಲಸದಿಂದ ನೀವು ದೂರವಾಗುವಿರಿ. ನಿಮ್ಮ ಪ್ರೀತಿಯು ಹಿತವಾದ ಅನುಭವವನ್ನು ಕೊಡುವುದು. ನಿಮ್ಮ ಹೇಳಿಕೆಗೆ ಸ್ಪಷ್ಟನೆಯನ್ನು ಕೊಡುವಿರಿ. ಕಳೆದುಕೊಂಡ ವಸ್ತುವು ನಿಮಗೆ ಸಿಗಲಿದೆ. ಆಕಸ್ಮಿಕವಾಗಿ ನೀವು ಮೋಜಿನ ಬಲೆಗೆ ಸಿಲುಕಿಕೊಳ್ಳುವ ಸಂಭವವಿದೆ. ನಿಮ್ಮ ಸಂತೋಷವನ್ನು ಕಸಿದುಕೊಳ್ಳುವ ಮಾತುಗಳನ್ನು ನಿಮ್ಮವರು ಆಡಬಹುದು. ಕೇಳಿಸಿಕೊಂಡಿಲ್ಲ ಎಂಬ ಮನೋಭಾವವಿರಲಿ.
ಇದನ್ನೂ ಓದಿ: Monthly Horoscope: ಈ ರಾಶಿಯವರಿಗೆ ಸಂತಾನ ಭಾಗ್ಯ, ಜೂನ್ ತಿಂಗಳ ನಿಮ್ಮ ರಾಶಿಭವಿಷ್ಯ ತಿಳಿಯಿರಿ
ಮಿಥುನ: ಇಂದು ನೀವು ಮಾಡಿದ ಖರ್ಚು ಸದುಪಯೋಗವಾಗಿದೆ ಎಂದುಕೊಳ್ಳುವುದು ಬೇಡ. ಅಗತ್ಯ ಖರ್ಚನ್ನು ಪ್ರಯತ್ನಪೂರ್ವಕವಾಗಿ ನಿಲ್ಲಿಬೇಕು. ದೈಹಿಕ ಖಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಮೇಲಿಟ್ಟ ನಂಬುಗೆಯನ್ನು ಹುಸಿಯಾಗಿಸಬೇಡಿ. ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಅಡ್ಡಗಾಲು ಹಾಕಬಹುದು. ಸಂಗಾತಿಯನ್ನು ಅತಿಯಾಗಿ ಇಷ್ಟಪಡುವಿರಿ. ಅತಿಯಾದ ಕೆಲಸದ ಕಾರಣ ನಿಮಗಾದ ಮಾನಸಿಕ ಒತ್ತಡಕ್ಕೆ ವಿಶ್ರಾಂತಿ ಅವಶ್ಯಕವಾದೀತು. ಸರ್ಕಾರಿ ಕೆಲಸದಲ್ಲಿ ಹಿನ್ನಡೆಯಾಗಲಿದೆ. ನಿಮ್ಮದಾಗಿದ್ದ ವಸ್ತುವನ್ನು ಜೋಪಾನ ಮಾಡಿಕೊಳ್ಳಿ.
ಕಟಕ: ಇಂದು ನೀವು ಮಕ್ಕಳ ವಿಚಾರವಾಗಿ ಮಾಡಿದ ಶ್ರಮವು ಇಂದು ಫಲಿಸುವುದು. ಮಕ್ಕಳಿಂದ ನಿಮಗೆ ಅವಶ್ಯಕವಾದ ಸಹಕಾರವು ದೊರೆಯುವುದು. ನೀವು ನಿಮ್ಮ ಭೋಗಕ್ಕೆ ಹೆಚ್ಚು ಹಣವನ್ನು ಖರ್ಚು ಮಾಡುವವರಿದ್ದೀರಿ. ನಿಮಗೆ ಆಗದವರು ನಿಮ್ಮನ್ನು ನೋಡಿ ಅಸೂಯೆ ಪಡಬಹುದು. ನಿಮ್ಮ ವಿದ್ಯಾಭ್ಯಾಸದ ಅವಧಿ ಮುಗಿದು ನೀವು ಬಹಳ ಸಂತೋಷದಲ್ಲಿ ಇರುವಿರಿ. ಮುಂದಿನ ಉದ್ಯೋಗದ ಕನಸೂ ನಿಮ್ಮ ಮುಂದಿದೆ. ಮನೆಯಲ್ಲಿ ನಿಮ್ಮ ವಿವಾಹಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿರುವರು. ಬಂಧುಗಳೂ ನಿಮ್ಮನ್ನು ಪ್ರಶಂಸೆ ಮಾಡುವರು. ಊರಿನಲ್ಲಿ ನಿಮಗೆ ಹೆಚ್ಚು ಗೌರವ ಸಿಗಲಿದೆ.
ಸಿಂಹ: ಇಂದು ನಿಮಗೆ ಬೆಳಗಿನಿಂದಲೇ ಮನಸ್ಸು ಅನ್ಯ ಆಲೋಚನೆಯಲ್ಲಿ ತೊಡಗಿದ್ದು ಮಾಡಬೇಕಾದ ಕೆಲಸವು ಹಿಂದುಳಿಯಬಹುದು. ನಿಮಗೆ ಪೋಷಕರ ಬೆಂಬಲವು ಪರೋಕ್ಷವಾಗಿ ಸಿಕ್ಕರೂ ಪ್ರತ್ಯಕ್ಷ ಬೆಂಬಲವನ್ನು ನೀವು ನಿರೀಕ್ಷಿಸುವಿರಿ. ಅಶಿಸ್ತಿನ ನಿಮ್ಮ ವರ್ತನೆಯು ಸಂಗಾತಿಗೆ ಕಿರಿಕಿರಿಯನ್ನು ಉಂಟುಮಾಡೀತು. ಅಸಹಜ ಘಟನೆಗಳು ನಿಮಗೆ ಕೋಪವನ್ನು ತರಿಸಬಹುದು. ನಿಮ್ಮ ಕೆಲಸಗಳೇ ಆಗದಿರುವಾಗ ಇನ್ನೊಬ್ಬರ ಕೆಲಸವನ್ನೂ ಮಾಡಿಕೊಡಬೇಕಾದೀತು. ಅನಧಿಕೃತ ಹಣವು ನಿಮ್ಮ ಖಾತೆಗ ಜಮಾ ಆಗಬಹುದು.
ಕನ್ಯಾ: ನಿರ್ದಯೆಯು ನಿಮ್ಮ ಸ್ವಭಾವವಲ್ಲದಿದ್ದರೂ ಸಂದರ್ಭವು ಅದನ್ನು ಸೃಷ್ಟಿಸುವುದು. ನಿಮ್ಮ ಭಾವನೆಗಳಿಗೆ ಸ್ಪಂದಿಸದೇ ಇರುವವರನ್ನು ನೀವು ದೂರಮಾಡಿಕೊಳ್ಳುವಿರಿ. ಇಂದು ನಿಮ್ಮ ತಂದೆ ಹಾಗೂ ತಾಯಿಯರ ಸಂತೋಷದಲ್ಲಿ ಭಾಗಿಯಾಗುವಿರಿ. ಹೆಂಡತಿಯ ನೋವಿಗೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವವರಿದ್ದೀರಿ. ಅನಗತ್ಯ ಖರ್ಚಿನ ನಡುವೆ ಸದುಪಯೋಗವಾಯಿತು ಎಂಬ ಸಂತೋಷವು ಇರಲಿದೆ. ನಿಮ್ಮ ನಿಃಸ್ವಾರ್ಥ ಸೇವೆಗೆ ಬಹಳ ವಿಳಂಬವಾಗಿಯೂ ಗೌರವ ಸಿಕ್ಕಿರುವುದು ಸಂತಸದ ವಿಚಾರವಾಗಿದೆ. ದ್ವಂದ್ವನೀತಿಯನ್ನು ನೀವು ಬಿಡುವುದಿಲ್ಲ.
ತುಲಾ: ಇಂದು ನೀವು ನಿಮಗೆ ಬರಬೇಕಾದ ವಸ್ತು, ಹಣ, ಅಧಿಕಾರದ ಬಗ್ಗೆ ಧೈರ್ಯವಾಗಿ ಮಾತನಾಡುವಿರಿ. ನಿಮ್ಮ ಕರ್ತವ್ಯಲೋಪವಿಲ್ಲದೇ ಮಾಡಿದ ಕೆಲಸದಿಂದ ನಿಮಗೆ ಈ ಧೈರ್ಯವು ಸಿದ್ಧವಾಗಿದೆ. ನೀವು ಇತರರಿಗೆ ಶುಭವನ್ನೇ ಬಯಸುವಿರಿ. ನಿಮ್ಮ ಬಳಿ ಬಂದು ಕೇಳಿದ ಸಹಾಯವನ್ನು ನೀವು ಯಾವ ಪೂರ್ವಾಗ್ರಹವೂ ಇಲ್ಲದೇ ಮಾಡುವಿರಿ. ಇಂದು ನಿಮಗೆ ನಿಮ್ಮಗುರುವಿನ ಬಗ್ಗೆ ಭಕ್ತಿಯು ಉಂಟಾಗಬಹುದು. ಇಂದು ನಿಮ್ಮ ಕುಟುಂಬದಲ್ಲಿ ಎದ್ದ ವೈಮನಸ್ಯದ ಬಿರುಗಾಳಿಯನ್ನು ಪ್ರಶಾಂತಗೊಳಿಸಲು ಸಮರ್ಥರಾಗುವಿರಿ. ದಾಂಪತ್ಯದಲ್ಲಿ ಇರುವ ಅನ್ಯೋನ್ಯತೆಯನ್ನು ಕಂಡು ಸ್ನೇಹಿತರಿಗೆ ಹೊಟ್ಟೆಕಿಚ್ಚು ಉಂಟಾಗಬಹುದು.
ವೃಶ್ಚಿಕ: ಮನಸ್ತಾಪಗಳು ನಿಮಗೆ ಇಂದು ಅಧಿಕವಾಗಬಹುದು. ಎಲ್ಲವೂ ಗೊಂದಲವಾಗಿ ಯಾವದೇ ನಿರ್ಧಾರವನ್ನು ತೆಗೆದುಕೊಳ್ಳಲು ವಿಲವಿಲನೆ ಒದ್ದಾಡಬಹುದು. ಅಕಾರಣ ದುಃಖವು ನಿಮಗೆ ಅರ್ಥವಾಗದೇ ಎಲ್ಲರ ಮೇಲೂ ಸಿಟ್ಟುಗೊಳ್ಳಬಹುದು. ವ್ಯವಹಾರದ ಅಭಿವೃದ್ಧಿಗೆ ಮಾಡಿದ ಪ್ರಯತ್ನಗಳು ಫಲಪ್ರದವಾಗಿಲ್ಲ ಎಂಬ ಕೊರಗು ಮತ್ತೊಂದೆಡೆ ಬಾಧಿಸುವುದು. ನಿಮ್ಮ ಅಸಹಾಯಕ ಸ್ಥಿತಿಯನ್ನು ಕಂಡು ಸ್ನೇಹಿತರು ಸಾಂತ್ವ ಮಾಡಿಯಾರು. ಎಲ್ಲವೂ ನಿಮ್ಮ ವಿರುದ್ಧವಿದ್ದಂತೆ ಅನ್ನಿಸುವುದು. ದೇವಸೇನೆಯ ನಾಯಕನಾದ ಕುಜನನ್ನು ಸ್ತೋತ್ರ ಮಾಡಿ. ನಿಮ್ಮನ್ನೂ ಆತ ಮುನ್ನಡೆಸುವನು.
ಧನಸ್ಸು: ನಿಮ್ಮ ಜ್ಞಾನದ ಬಗ್ಗೆ ನಿಮಗೇ ಹೆಮ್ಮಯಾಗಬಹುದು. ನಿಮ್ಮ ವಸ್ತುವನ್ನು ಯಾರಿಗಾದರೂ ಕೊಟ್ಟಬಿಡಿ. ಮತ್ತೆ ಅದರ ಬಗ್ಗೆ ಚಿಂತೆ ಬೇಡ. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯ ಜೊತೆ ನೀವು ಸಂಪೂರ್ಣವಾಗಿ ಪಾಲ್ಗೊಳ್ಳುವಿರಿ. ನಿಮ್ಮ ಸುಕೃತವು ನಿಮ್ಮನ್ನು ಅನೇಕ ಅವಗಡಗಳಿಂದ ಕಾಪಾಡಲಿದೆ. ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಿಕೊಳ್ಳುವುದು ಉತ್ತ ಲಮ ಎಂದು ಅನ್ನಿಸಬಹುದು. ನಿಮಗೆ ಶುಭವಾರ್ತೆ ಬರಲು ಸಂಜೆಯವರೆಗೆ ಕಾದಿರಿ. ಮಕ್ಕಳ ಮೇಲೇ ಅತಿಯಾದ ಮೋಹವು ಅವರ ಭವಿಷ್ಯವನ್ನು ಹಾಳು ಮಾಡೀತು. ಅವರು ಅಂದುಕೊಂಡಿದ್ದನ್ನು ಸಾಧಿಸಲು ಬಿಡಿ. ಕಾಯಲು ದೇವರಿರುವಾಗ ನಿಮಗೇಕೆ ಆ ತೊಂದರೆ?
ಮಕರ: ನೀವು ಇಂದು ಬೆಲೆಬಾಳುವ ಅಮೂಲ್ಯವಾದ ವಸ್ತುಗಳನ್ನು ಖರೀದಿಸುವಿರಿ. ಇದು ನಿಮ್ಮ ನಿರೀಕ್ಷೆಯನ್ನು ದಾಟಿ ಮುಂದೆ ಹೋಗುವುದು. ಯಾರದೋ ಒತ್ತಾಯಕ್ಕೆ ಮಣಿದು ಅವರ ಜೊತೆ ಪ್ರಯಾಣ ಮಾಡುವಿರಿ. ತಾಯಿಯ ಬಂಧುಗಳ ಜೊತೆ ಇಂದು ಹೆಚ್ಚು ಸಮಯವನ್ನು ಕಳೆಯುವಿರಿ. ಸಹೋದರರ ಸಹಭಾಗಿತ್ವದಲ್ಲಿ ಹೊಸ ಉದ್ಯಮವನ್ನು ಆರಂಭಿಸಬಹುದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ಸಿಕ್ಕೇ ಸಿಗುತ್ತದೆ. ಈ ಕೂಡಲೇ ಅದು ಸಿಗಬೇಕು ಎನ್ನುವ ಅತಿಯಾಸೆಯನ್ನು ಬಿಡುವುದು ಒಳ್ಳೆಯದು. ನಿಮ್ಮ ನಿಶ್ಚಿತ ಬುದ್ಧಿಯಂತೆ ನಿಮ್ಮ ಕೆಲಸಗಳನ್ನು ಮಾಡಿ ಮುಗಿಸುವಿರಿ.
ಕುಂಭ: ಇಂದು ನೀವು ನಿಮ್ಮ ಅನುಭವ ಹಾಗೂ ಬುದ್ಧಿವಂತಿಕೆಯ ಕಾರಣದಿಂದ ಉದ್ಯೋಗದಲ್ಲಿ ಹೊಸ ಬದಲಾವಣೆಗಳನ್ನು ಮಾಡುವಿರಿ. ಹೂಡಿಕೆಯಿಂದ ಉಪಯೋಗವಾಗುವಂತೆ ಹಣವನ್ನು ಹೂಡಿರಿ. ನಿಮ್ಮ ಚೌಕಟ್ಟನ್ನು ಬಿಟ್ಟು ವರ್ತಿಸುವುದು ಬೇಡ. ಇಂದು ನಿಮಗಾದ ವಿಶ್ವಾಸದ್ರೋಹವು ನಿಮ್ಮನ್ನು ಸಿಟ್ಟಿಗೇಳಿಸೀತು. ಅದನ್ನೇ ದ್ವೇಷವನ್ನಾಗಿ ಮಾಡಿಕೊಂಡು ಸಲ್ಲದ್ದನ್ನು ಮಾಡುವಿರಿ. ಭೋಗವಸ್ತುವಿನಿಂದ ಸಂತೋಷಪಡುವಿರಿ. ಇಂದಿನ ನಿಮ್ಮ ಸಣ್ಣ ಓಡಾಟವೂ ಕಾರ್ಯವನ್ನು ಮಾಡಿಸುವುದು. ಹಳೆಯ ಸ್ನೇಹಿತನು ನಿಮ್ಮನ್ನು ಭೇಟಿಯಾಗಲು ಇಚ್ಛಿಸುವನು.
ಮೀನ: ಇಂದು ನಿಮ್ಮ ಅಪೂರ್ಣ ಕಾರ್ಯಗಳೇ ತಲೆಯಲ್ಲಿ ಗಿರಕಿ ಹೊಡೆಯುತ್ತಿರುವುದು. ಪೂರ್ಣವಾಗವ ತನಕ ಸಮಾಧನಾವೇ ಇರದು. ನಿಮ್ಮ ಮಗಳ ಮೇಲೆ ಸಂಪತ್ತಿನ ವಿಚಾರವಾಗಿ ಅಪವಾದಗಳು ಬರಬಹುದು. ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ನೀವು ಓಡಾಟಮಾಡಬೇಕಾದೀತು. ಹಣವನ್ನೂ ಈ ವಿಚಾರಕ್ಕೆ ಖರ್ಚು ಮಾಡುವಿರಿ. ಸಂತೋಷದಿಂದ ಎಲ್ಲರ ಜೊತೆ ಒಡನಾಡುವಿರಿ. ಸಂಬಂಧಗಳಿಗೆ ಬೆಲೆಯನ್ನು ಕೊಡಬೇಕು ಎಂದು ಅನ್ನಿಸಬಹುದು. ಸಾಮಾಜಿಕ ಗೌರವವನ್ನು ಪಡೆಯುವುದರಿಂದ ನಿಮಗೆ ಆತ್ಮವಿಶ್ವಾಸ ಹೆಚ್ಚಾಗುವುದು. ಕುಟುಂಬದ ಜೊತೆ ಸಂತೋಷದಲ್ಲಿ ಭಾಗಿಯಾಗುವಿರಿ.
ಲೇಖನ-ಲೋಹಿತಶರ್ಮಾ
Published On - 7:58 am, Mon, 29 May 23