Nithya Bhavishya: ಈ ರಾಶಿಯವರ ಖಾತೆಗೆ ಇಂದು ಅನಧಿಕೃತ ಹಣ ಜಮಾ ಆಗಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 29) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nithya Bhavishya: ಈ ರಾಶಿಯವರ ಖಾತೆಗೆ ಇಂದು ಅನಧಿಕೃತ ಹಣ ಜಮಾ ಆಗಬಹುದು
ನಿತ್ಯಭವಿಷ್ಯ
Follow us
ವಿವೇಕ ಬಿರಾದಾರ
|

Updated on:May 29, 2023 | 8:12 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಮೇ 29 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ಪಂಚಾಂಗ: ಶಾಲಿವಾಹನ ಶಕೆ 1947, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಗಂಡ. ಕರಣ : ಕೌಲವ, ಸೂರ್ಯೋದಯ – 06-03, ಸೂರ್ಯಾಸ್ತ – 06-55. ರಾಹು ಕಾಲ 07:40 – 09:17, ಯಮಘಂಡ ಕಾಲ 10:53 – 12:30, ಗುಳಿಕ ಕಾಲ 14:06 – 15:43.

ಸಿಂಹ: ಇಂದು ನಿಮಗೆ ಬೆಳಗಿನಿಂದಲೇ ಮನಸ್ಸು ಅನ್ಯ ಆಲೋಚನೆಯಲ್ಲಿ ತೊಡಗಿದ್ದು ಮಾಡಬೇಕಾದ ಕೆಲಸವು ಹಿಂದುಳಿಯಬಹುದು. ನಿಮಗೆ ಪೋಷಕರ ಬೆಂಬಲವು ಪರೋಕ್ಷವಾಗಿ ಸಿಕ್ಕರೂ ಪ್ರತ್ಯಕ್ಷ ಬೆಂಬಲವನ್ನು ನೀವು ನಿರೀಕ್ಷಿಸುವಿರಿ. ಅಶಿಸ್ತಿನ ನಿಮ್ಮ ವರ್ತನೆಯು ಸಂಗಾತಿಗೆ ಕಿರಿಕಿರಿಯನ್ನು ಉಂಟುಮಾಡೀತು. ಅಸಹಜ ಘಟನೆಗಳು ನಿಮಗೆ ಕೋಪವನ್ನು ತರಿಸಬಹುದು. ನಿಮ್ಮ ಕೆಲಸಗಳೇ ಆಗದಿರುವಾಗ ಇನ್ನೊಬ್ಬರ ಕೆಲಸವನ್ನೂ ಮಾಡಿಕೊಡಬೇಕಾದೀತು. ಅನಧಿಕೃತ ಹಣವು ನಿಮ್ಮ ಖಾತೆಗೆ ಜಮಾ ಆಗಬಹುದು.

ಕನ್ಯಾ: ನಿರ್ದಯೆಯು ನಿಮ್ಮ ಸ್ವಭಾವವಲ್ಲದಿದ್ದರೂ ಸಂದರ್ಭವು ಅದನ್ನು ಸೃಷ್ಟಿಸುವುದು. ನಿಮ್ಮ ಭಾವನೆಗಳಿಗೆ ಸ್ಪಂದಿಸದೇ ಇರುವವರನ್ನು ನೀವು ದೂರಮಾಡಿಕೊಳ್ಳುವಿರಿ. ಇಂದು ನಿಮ್ಮ ತಂದೆ ಹಾಗೂ ತಾಯಿಯರ ಸಂತೋಷದಲ್ಲಿ ಭಾಗಿಯಾಗುವಿರಿ. ಹೆಂಡತಿಯ ನೋವಿಗೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವವರಿದ್ದೀರಿ. ಅನಗತ್ಯ ಖರ್ಚಿನ ನಡುವೆ ಸದುಪಯೋಗವಾಯಿತು ಎಂಬ ಸಂತೋಷವು ಇರಲಿದೆ. ನಿಮ್ಮ‌ ನಿಃಸ್ವಾರ್ಥ ಸೇವೆಗೆ ಬಹಳ ವಿಳಂಬವಾಗಿಯೂ ಗೌರವ ಸಿಕ್ಕಿರುವುದು ಸಂತಸದ‌ ವಿಚಾರವಾಗಿದೆ. ದ್ವಂದ್ವನೀತಿಯನ್ನು ನೀವು ಬಿಡುವುದಿಲ್ಲ.

ಇದನ್ನೂ ಓದಿ: ಈ ರಾಶಿಯವರಿಗೆ ಸಂತಾನ ಭಾಗ್ಯ, ಜೂನ್ ತಿಂಗಳ ನಿಮ್ಮ ರಾಶಿಭವಿಷ್ಯ ತಿಳಿಯಿರಿ

ತುಲಾ: ಇಂದು ನೀವು ನಿಮಗೆ ಬರಬೇಕಾದ ವಸ್ತು, ಹಣ, ಅಧಿಕಾರದ ಬಗ್ಗೆ ಧೈರ್ಯವಾಗಿ ಮಾತನಾಡುವಿರಿ. ನಿಮ್ಮ ಕರ್ತವ್ಯಲೋಪವಿಲ್ಲದೇ ಮಾಡಿದ ಕೆಲಸದಿಂದ ನಿಮಗೆ ಈ ಧೈರ್ಯವು ಸಿದ್ಧವಾಗಿದೆ‌. ನೀವು ಇತರರಿಗೆ ಶುಭವನ್ನೇ ಬಯಸುವಿರಿ. ನಿಮ್ಮ ಬಳಿ ಬಂದು ಕೇಳಿದ ಸಹಾಯವನ್ನು ನೀವು ಯಾವ ಪೂರ್ವಾಗ್ರಹವೂ ಇಲ್ಲದೇ ಮಾಡುವಿರಿ. ಇಂದು ನಿಮಗೆ ನಿಮ್ಮ ಗುರುವಿನ ಬಗ್ಗೆ ಭಕ್ತಿಯು ಉಂಟಾಗಬಹುದು. ಇಂದು ನಿಮ್ಮ ಕುಟುಂಬದಲ್ಲಿ ಎದ್ದ ವೈಮನಸ್ಯದ ಬಿರುಗಾಳಿಯನ್ನು ಪ್ರಶಾಂತಗೊಳಿಸಲು ಸಮರ್ಥರಾಗುವಿರಿ. ದಾಂಪತ್ಯದಲ್ಲಿ ಇರುವ ಅನ್ಯೋನ್ಯತೆಯನ್ನು ಕಂಡು ಸ್ನೇಹಿತರಿಗೆ ಹೊಟ್ಟೆಕಿಚ್ಚು ಉಂಟಾಗಬಹುದು.

ವೃಶ್ಚಿಕ: ಮನಸ್ತಾಪಗಳು ನಿಮಗೆ ಇಂದು ಅಧಿಕವಾಗಬಹುದು. ಎಲ್ಲವೂ ಗೊಂದಲವಾಗಿ ಯಾವದೇ ನಿರ್ಧಾರವನ್ನು ತೆಗೆದುಕೊಳ್ಳಲು ವಿಲವಿಲನೆ ಒದ್ದಾಡಬಹುದು. ಅಕಾರಣ ದುಃಖವು ನಿಮಗೆ ಅರ್ಥವಾಗದೇ ಎಲ್ಲರ ಮೇಲೂ ಸಿಟ್ಟುಗೊಳ್ಳಬಹುದು. ವ್ಯವಹಾರದ ಅಭಿವೃದ್ಧಿಗೆ ಮಾಡಿದ ಪ್ರಯತ್ನಗಳು ಫಲಪ್ರದವಾಗಿಲ್ಲ ಎಂಬ ಕೊರಗು ಮತ್ತೊಂದೆಡೆ ಬಾಧಿಸುವುದು. ನಿಮ್ಮ ಅಸಹಾಯಕ ಸ್ಥಿತಿಯನ್ನು ಕಂಡು ಸ್ನೇಹಿತರು ಸಾಂತ್ವ ಮಾಡಿಯಾರು. ಎಲ್ಲವೂ ನಿಮ್ಮ ವಿರುದ್ಧವಿದ್ದಂತೆ ಅನ್ನಿಸುವುದು. ದೇವಸೇನೆಯ ನಾಯಕನಾದ ಕುಜನನ್ನು ಸ್ತೋತ್ರ ಮಾಡಿ. ನಿಮ್ಮನ್ನೂ ಆತ ಮುನ್ನಡೆಸುವನು.

Published On - 8:11 am, Mon, 29 May 23

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ