Rashi Bhavishya: ಈ ರಾಶಿಯವರು ಇಂದು ತಾಳ್ಮೆಯಿಂದ ವ್ಯವಹಾರ ಮಾಡಿ

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ​ 29) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಈ ರಾಶಿಯವರು ಇಂದು ತಾಳ್ಮೆಯಿಂದ ವ್ಯವಹಾರ ಮಾಡಿ
ಜ್ಯೋತಿಷ್ಯ
Follow us
ವಿವೇಕ ಬಿರಾದಾರ
|

Updated on:May 29, 2023 | 7:56 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 29) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ಮೇಷ: ನಿಮಗೆ ಇಂದು ಪರಿಚಿತ ವ್ಯಕ್ತಿಯ ಸಹಾಯದಿಂದ ಸಾಲವನ್ನು ಮಾಡುವಿರಿ. ಇಂದು ನೀವು ಸರ್ಕಾರದಿಂದ ಗೌರವಿಸಲ್ಪಡುವ ಸಾಧ್ಯತೆಯಿದೆ. ಹಳೆಯ ಸ್ನೇಹಿತರು ಬೆಂಬಲಕ್ಕೆ ನಿಲ್ಲುತ್ತಾರೆ ಮತ್ತು ಸ್ನೇಹಿತರು ಸಹ ಹೆಚ್ಚಾಗುತ್ತಾರೆ. ಇಂದು ನಿಮ್ಮ ಹೆಂಡತಿಯಿಂದ ನೀವು ಉತ್ತಮ ಬೆಂಬಲವನ್ನು ಪಡೆಯಬಹುದು. ತಂದೆಯು ನಿಮಗೆ ಏನನ್ನಾದರೂ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುವರು. ಸ್ವೇಚ್ಛೆಯ ನಿಮ್ಮ ವರ್ತನೆಗಳು ಕೆಲವರಿಗೆ ಅಸಮಾಧಾನವನ್ನು ಕೊಡಬಹುದು. ತಾಳ್ಮೆಯಿಂದ ಇಂದಿನ ವ್ಯವಹಾರವನ್ನು ಮಾಡಿ.

ವೃಷಭ: ಇಂದು ನೀವು ಬಹಳ ಕಾರ್ಯದಲ್ಲಿ ಮಗ್ನರಾಗುವಿರಿ. ಯಾರನ್ನಾದರೂ ಅಳೆಯುವಾಗ ನಿಮಗೆ ಸರಿಯಾದ ನಿರ್ಧಾರವನ್ನು ಮಾಡಲು ಕಷ್ಟಮವಾದೀತು. ಪ್ರಯೋಜನವಿಲ್ಲದ ಕೆಲಸದಿಂದ ನೀವು ದೂರವಾಗುವಿರಿ. ನಿಮ್ಮ ಪ್ರೀತಿಯು ಹಿತವಾದ ಅನುಭವವನ್ನು ಕೊಡುವುದು. ನಿಮ್ಮ ಹೇಳಿಕೆಗೆ ಸ್ಪಷ್ಟನೆಯನ್ನು ಕೊಡುವಿರಿ. ಕಳೆದುಕೊಂಡ ವಸ್ತುವು ನಿಮಗೆ ಸಿಗಲಿದೆ. ಆಕಸ್ಮಿಕವಾಗಿ ನೀವು ಮೋಜಿನ ಬಲೆಗೆ ಸಿಲುಕಿಕೊಳ್ಳುವ ಸಂಭವವಿದೆ. ನಿಮ್ಮ ಸಂತೋಷವನ್ನು ಕಸಿದುಕೊಳ್ಳುವ ಮಾತುಗಳನ್ನು ನಿಮ್ಮವರು ಆಡಬಹುದು. ಕೇಳಿಸಿಕೊಂಡಿಲ್ಲ ಎಂಬ ಮನೋಭಾವವಿರಲಿ.

ಮಿಥುನ: ಇಂದು ನೀವು ಮಾಡಿದ ಖರ್ಚು ಸದುಪಯೋಗವಾಗಿದೆ ಎಂದುಕೊಳ್ಳುವುದು ಬೇಡ. ಅಗತ್ಯ ಖರ್ಚನ್ನು ಪ್ರಯತ್ನಪೂರ್ವಕವಾಗಿ ನಿಲ್ಲಿಬೇಕು. ದೈಹಿಕ ಖಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇದೆ‌.‌ ನಿಮ್ಮ ಮೇಲಿಟ್ಟ ನಂಬುಗೆಯನ್ನು ಹುಸಿಯಾಗಿಸಬೇಡಿ. ನಿಮ್ಮ ಸಾಮಾಜಿಕ ಚಟುವಟಿಕೆಗಳಿಗೆ ಅಡ್ಡಗಾಲು ಹಾಕಬಹುದು. ಸಂಗಾತಿಯನ್ನು ಅತಿಯಾಗಿ ಇಷ್ಟಪಡುವಿರಿ. ಅತಿಯಾದ ಕೆಲಸದ ಕಾರಣ ನಿಮಗಾದ ಮಾನಸಿಕ‌ ಒತ್ತಡಕ್ಕೆ ವಿಶ್ರಾಂತಿ ಅವಶ್ಯಕವಾದೀತು. ಸರ್ಕಾರಿ ಕೆಲಸದಲ್ಲಿ ಹಿನ್ನಡೆಯಾಗಲಿದೆ. ನಿಮ್ಮದಾಗಿದ್ದ ವಸ್ತುವನ್ನು ಜೋಪಾನ ಮಾಡಿಕೊಳ್ಳಿ.

ಕಟಕ: ಇಂದು ನೀವು ಮಕ್ಕಳ ವಿಚಾರವಾಗಿ ಮಾಡಿದ ಶ್ರಮವು ಇಂದು ಫಲಿಸುವುದು. ಮಕ್ಕಳಿಂದ ನಿಮಗೆ ಅವಶ್ಯಕವಾದ ಸಹಕಾರವು ದೊರೆಯುವುದು. ನೀವು ನಿಮ್ಮ ಭೋಗಕ್ಕೆ ಹೆಚ್ಚು ಹಣವನ್ನು ಖರ್ಚು ಮಾಡುವವರಿದ್ದೀರಿ‌. ನಿಮಗೆ ಆಗದವರು ನಿಮ್ಮನ್ನು ನೋಡಿ ಅಸೂಯೆ ಪಡಬಹುದು. ನಿಮ್ಮ ವಿದ್ಯಾಭ್ಯಾಸದ ಅವಧಿ ಮುಗಿದು ನೀವು ಬಹಳ ಸಂತೋಷದಲ್ಲಿ ಇರುವಿರಿ. ಮುಂದಿನ ಉದ್ಯೋಗದ ಕನಸೂ ನಿಮ್ಮ ಮುಂದಿದೆ. ಮನೆಯಲ್ಲಿ ನಿಮ್ಮ ವಿವಾಹಕ್ಕೆ ಬೇಕಾದ ತಯಾರಿಯನ್ನು ಮಾಡುತ್ತಿರುವರು. ಬಂಧುಗಳೂ ನಿಮ್ಮನ್ನು ಪ್ರಶಂಸೆ ಮಾಡುವರು‌. ಊರಿನಲ್ಲಿ ನಿಮಗೆ ಹೆಚ್ಚು ಗೌರವ ಸಿಗಲಿದೆ.

ಲೋಹಿತಶರ್ಮಾ – 8762924271

Published On - 7:54 am, Mon, 29 May 23

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ