Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ

ಒಳಿತನ್ನು ಸ್ವಾಗತಿಸಿ, ಕೆಡಕನ್ನು ಎದುರಿಸುವುದೇ ಜೀವನ. ರಾಶಿ ಚಕ್ರಕ್ಕೆ ತಕ್ಕಂತೆ ವಿವಿಧ ರಾಶಿಗಳ ಇಂದಿನ (ಮೇ 29) ದಿನ ಭವಿಷ್ಯವನ್ನು ಇಲ್ಲಿ ನೀಡಲಾಗಿದ್ದು, ಈ ದಿನದ ರಾಶಿ ಭವಿಷ್ಯದಲ್ಲಿ ಧನಸ್ಸು, ಮಕರ, ಕುಂಭ, ಮೀನ  ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ ಎನ್ನುವುದನ್ನು ತಿಳಿದುಕೊಳ್ಳಿ.

Daily Horoscope: ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ ಭವಿಷ್ಯ
ಇಂದಿನ ರಾಶಿ ಭವಿಷ್ಯ
Follow us
ರಮೇಶ್ ಬಿ. ಜವಳಗೇರಾ
|

Updated on: May 29, 2023 | 8:11 AM

ಶುಭೋದಯ ಓದುಗರೇ… ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 29) ರಾಶಿ ಭವಿಷ್ಯದಲ್ಲಿ ಧನಸ್ಸು, ಮಕರ, ಕುಂಭ, ಮೀನ  ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ ಎನ್ನುವುದನ್ನು ತಿಳಿದುಕೊಳ್ಳಿ.

ಇದನ್ನೂ ಓದಿ: Nitya Bhavishya: ಈ ಶುಭ ದಿನ ನಿಮ್ಮ ರಾಶಿ ಫಲ ಹೇಗಿದೆ? ಇಂದಿನ ನಿತ್ಯ ಭವಿಷ್ಯದಲ್ಲಿ ತಿಳಿಯಿರಿ

ಪಂಚಾಂಗ: ಶಾಲಿವಾಹನ ಶಕೆ 1947, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಸೋಮ, ತಿಥಿ : ದಶಮೀ, ನಿತ್ಯನಕ್ಷತ್ರ : ಉತ್ತರಾಫಲ್ಗುಣೀ, ಯೋಗ : ಗಂಡ. ಕರಣ : ಕೌಲವ, ಸೂರ್ಯೋದಯ – 06-03 am, ಸೂರ್ಯಾಸ್ತ – 06-55 pm. ರಾಹು ಕಾಲ 07:40 – 09:17, ಯಮಘಂಡ ಕಾಲ 10:53 – 12:30, ಗುಳಿಕ ಕಾಲ 14:06 – 15:43.

ಧನಸ್ಸು: ನಿಮ್ಮ ಜ್ಞಾನದ ಬಗ್ಗೆ ನಿಮಗೇ ಹೆಮ್ಮಯಾಗಬಹುದು. ನಿಮ್ಮ ವಸ್ತುವನ್ನು ಯಾರಿಗಾದರೂ ಕೊಟ್ಟಬಿಡಿ. ಮತ್ತೆ ಅದರ ಬಗ್ಗೆ ಚಿಂತೆ ಬೇಡ. ಧಾರ್ಮಿಕ ಆಚರಣೆಗಳಲ್ಲಿ ಆಸಕ್ತಿಯ ಜೊತೆ ನೀವು ಸಂಪೂರ್ಣವಾಗಿ ಪಾಲ್ಗೊಳ್ಳುವಿರಿ. ನಿಮ್ಮ ಸುಕೃತವು ನಿಮ್ಮನ್ನು ಅನೇಕ ಅವಗಡಗಳಿಂದ ಕಾಪಾಡಲಿದೆ. ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸಿಕೊಳ್ಳುವುದು ಉತ್ತ ಲಮ ಎಂದು ಅನ್ನಿಸಬಹುದು. ನಿಮಗೆ ಶುಭವಾರ್ತೆ ಬರಲು ಸಂಜೆಯವರೆಗೆ ಕಾದಿರಿ. ಮಕ್ಕಳ‌ ಮೇಲೇ ಅತಿಯಾದ ಮೋಹವು ಅವರ ಭವಿಷ್ಯವನ್ನು ಹಾಳು ಮಾಡೀತು. ಅವರು ಅಂದುಕೊಂಡಿದ್ದನ್ನು ಸಾಧಿಸಲು ಬಿಡಿ. ಕಾಯಲು ದೇವರಿರುವಾಗ ನಿಮಗೇಕೆ ಆ ತೊಂದರೆ?

ಇದನ್ನೂ ಓದಿ: Weekly Horoscope:ಮೇ 28-ಜೂನ್ 3ರ ವರೆಗಿನ ಯಾವ ರಾಶಿಗೆ ಏನು ಫಲ? ಯಾವ ರಾಶಿಯವರಿಗೆ ಅದೃಷ್ಟ?

ಮಕರ: ನೀವು ಇಂದು ಬೆಲೆಬಾಳುವ ಅಮೂಲ್ಯವಾದ ವಸ್ತುಗಳನ್ನು ಖರೀದಿಸುವಿರಿ. ಇದು ನಿಮ್ಮ ನಿರೀಕ್ಷೆಯನ್ನು ದಾಟಿ ಮುಂದೆ ಹೋಗುವುದು. ಯಾರದೋ ಒತ್ತಾಯಕ್ಕೆ ಮಣಿದು ಅವರ ಜೊತೆ ಪ್ರಯಾಣ ಮಾಡುವಿರಿ. ತಾಯಿಯ ಬಂಧುಗಳ ಜೊತೆ ಇಂದು ಹೆಚ್ಚು ಸಮಯವನ್ನು ಕಳೆಯುವಿರಿ. ಸಹೋದರರ ಸಹಭಾಗಿತ್ವದಲ್ಲಿ ಹೊಸ ಉದ್ಯಮವನ್ನು ಆರಂಭಿಸಬಹುದು. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಫಲವು ಸಿಕ್ಕೇ ಸಿಗುತ್ತದೆ. ಈ ಕೂಡಲೇ ಅದು ಸಿಗಬೇಕು ಎನ್ನುವ ಅತಿಯಾಸೆಯನ್ನು ಬಿಡುವುದು ಒಳ್ಳೆಯದು. ನಿಮ್ಮ ನಿಶ್ಚಿತ ಬುದ್ಧಿಯಂತೆ ನಿಮ್ಮ‌ ಕೆಲಸಗಳನ್ನು ಮಾಡಿ ಮುಗಿಸುವಿರಿ.

ಕುಂಭ: ಇಂದು ನೀವು ನಿಮ್ಮ ಅನುಭವ ಹಾಗೂ ಬುದ್ಧಿವಂತಿಕೆಯ ಕಾರಣದಿಂದ ಉದ್ಯೋಗದಲ್ಲಿ ಹೊಸ ಬದಲಾವಣೆಗಳನ್ನು ಮಾಡುವಿರಿ. ಹೂಡಿಕೆಯಿಂದ ಉಪಯೋಗವಾಗುವಂತೆ ಹಣವನ್ನು ಹೂಡಿರಿ. ನಿಮ್ಮ ಚೌಕಟ್ಟನ್ನು ಬಿಟ್ಟು ವರ್ತಿಸುವುದು ಬೇಡ. ಇಂದು ನಿಮಗಾದ ವಿಶ್ವಾಸದ್ರೋಹವು ನಿಮ್ಮನ್ನು ಸಿಟ್ಟಿಗೇಳಿಸೀತು. ಅದನ್ನೇ ದ್ವೇಷವನ್ನಾಗಿ ಮಾಡಿಕೊಂಡು ಸಲ್ಲದ್ದನ್ನು ಮಾಡುವಿರಿ. ಭೋಗವಸ್ತುವಿನಿಂದ ಸಂತೋಷಪಡುವಿರಿ. ಇಂದಿನ ನಿಮ್ಮ ಸಣ್ಣ ಓಡಾಟವೂ ಕಾರ್ಯವನ್ನು ಮಾಡಿಸುವುದು. ಹಳೆಯ ಸ್ನೇಹಿತನು ನಿಮ್ಮನ್ನು ಭೇಟಿಯಾಗಲು ಇಚ್ಛಿಸುವನು.

ಇದನ್ನೂ ಓದಿ: Monthly Horoscope: ಈ ರಾಶಿಯವರಿಗೆ ಸಂತಾನ ಭಾಗ್ಯ, ಜೂನ್ ತಿಂಗಳ ನಿಮ್ಮ ರಾಶಿಭವಿಷ್ಯ ತಿಳಿಯಿರಿ

ಮೀನ: ಇಂದು ನಿಮ್ಮ ಅಪೂರ್ಣ ಕಾರ್ಯಗಳೇ ತಲೆಯಲ್ಲಿ ಗಿರಕಿ ಹೊಡೆಯುತ್ತಿರುವುದು. ಪೂರ್ಣವಾಗವ ತನಕ ಸಮಾಧನಾವೇ ಇರದು. ನಿಮ್ಮ ಮಗಳ‌ ಮೇಲೆ ಸಂಪತ್ತಿನ‌ ವಿಚಾರವಾಗಿ ಅಪವಾದಗಳು ಬರಬಹುದು. ಅದನ್ನು ಸುಳ್ಳು ಎಂದು ಸಾಬೀತುಪಡಿಸಲು ನೀವು ಓಡಾಟ‌ಮಾಡಬೇಕಾದೀತು. ಹಣವನ್ನೂ ಈ ವಿಚಾರಕ್ಕೆ ಖರ್ಚು ಮಾಡುವಿರಿ. ಸಂತೋಷದಿಂದ ಎಲ್ಲರ ಜೊತೆ ಒಡನಾಡುವಿರಿ. ಸಂಬಂಧಗಳಿಗೆ ಬೆಲೆಯನ್ನು ಕೊಡಬೇಕು ಎಂದು ಅನ್ನಿಸಬಹುದು. ಸಾಮಾಜಿಕ ಗೌರವವನ್ನು ಪಡೆಯುವುದರಿಂದ ನಿಮಗೆ ಆತ್ಮವಿಶ್ವಾಸ ಹೆಚ್ಚಾಗುವುದು. ಕುಟುಂಬದ ಜೊತೆ ಸಂತೋಷದಲ್ಲಿ ಭಾಗಿಯಾಗುವಿರಿ.

ಲೇಖನ-ಲೋಹಿತಶರ್ಮಾ 

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ