Nitya Bhavishya: ಈ ರಾಶಿಯವರು ಹೊಸ ಕೆಲಸಕ್ಕಾಗಿ ಮಾಡಲಾಗುತ್ತಿರುವ ಪ್ರಯತ್ನಗಳು ಶುಭ ನೀಡಲಿದೆ
ಇಂದಿನ (2023 ಮೇ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಶುಭೋದಯ ಓದುಗರೇ… ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ಪಂಚಾಂಗ: ಶಾಲಿವಾಹನ ಶಕೆ 1947, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ : ರೋಹಿಣೀ, ಮಾಸ : ಜ್ಯೇಷ್ಠ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ಸುಕರ್ಮ. ಕರಣ : ಗರಜ, ಸೂರ್ಯೋದಯ – 06-03 am, ಸೂರ್ಯಾಸ್ತ – 06-55 pm. ರಾಹು ಕಾಲ 03:43 – 05:19, ಯಮಘಂಡ ಕಾಲ 09:17 – 10:53, ಗುಳಿಕ ಕಾಲ 12:30 –02:06
ಮೇಷ: ಇಂದು ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಬಹುದು. ಇದು ನಿಮಗೆ ಬಹಳ ದಿನಗಳ ಅನಂತರದ ಸಂತೋಷ ನೀಡುವ ಸಂಗತಿಯಾಗಲಿದೆ. ಕುಟುಂಬದೊಂದಿಗೆ ಪ್ರಯಾಣದ ಸವಿಯನ್ನು ಸವಿಯುವಿರಿ. ನೀವು ಇಂದು ನಿಮ್ಮದೇ ಹೊಸ ಉದ್ಯೋಗವನ್ನು ಪ್ರಾರಂಭಿಸುವ ಯೋಚನೆ ಹುಟ್ಟಿಕೊಳ್ಳುವುದು. ಹಿರಿಯರಿಂದ ನಿಮಗೆ ಬರಬೇಕಾದ ಆಸ್ತಿಯು ಬರಬಹುದು. ದುಡುಕುತನ, ಮುಂಗೋಪಗಳೆಲ್ಲ ಕಡಿಮೆಯಾಗಲಿದೆ. ನೀವು ಬಂಧುಗಳ ಜೊತೆ ಬೆರೆಯುವುದು ಆಶ್ಚರ್ಯಕರವಾದೀತು. ಸಹೋದರರು ನಿಮ್ಮ ಕಷ್ಟದಲ್ಲಿ ಭಾಗಿಯಾಗುವರು.
ವೃಷಭ: ಇಂದು ಹಣಕಾಸಿನ ವಿಚಾರದಲ್ಲಿ ಮಾಡಿದ ಪ್ರಯತ್ನಗಳು ಸಫಲವಾಗುವುವು. ನೀವು ನಿಮ್ಮ ಮಕ್ಕಳ ವಿಚಾರದಲ್ಲಿ ತೆಗೆದುಕೊಂಡ ಜವಾಬ್ದಾರಿಗಳು ಮುಗಿಯುವುವು. ಕಲೆಗೆ ಸಂಬಂಧಿಸಿದವರಾಗಿದ್ದರೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವಿರಿ. ಯಾರ ಸಹಾಯವೂ ಇಲ್ಲದೇ ಹಣದ ಲಾಭವನ್ನು ಪಡೆಯುವಿರಿ. ನಿಮ್ಮ ವಿರೋಧಿಗಳನ್ನು ಮೀರಿ ನೀವು ಬೆಳೆಯುವಿರಿ. ತೆಗೆದುಕೊಂಡ ನಿರ್ಧಾರವನ್ನು ಸಡಿಲಿಸುವುದು ಬೇಡ. ಚಾಡಿ ಮಾತುಗಳಿಗೆ ಕಿವಿ ಕೊಡಬೇಡಬುದು. ಕಿರಿಯರ ಜೊತೆ ಪ್ರೀತಿಯಿಂದ ವ್ಯವಹರಿಸಿ. ಅನವಶ್ಯಕ ವಸ್ತುಗಳನ್ನು ಖರೀದಿಸಿ ದಂಡ ಮಾಡುವಿರಿ.
ಮಿಥುನ: ಇಂದು ಕಲೆಗೆ ಸಂಬಂಧಿಸಿ ಮಾಡುತ್ತಿರುವ ಸುಖಾಂತ್ಯವಾಗುವುದು. ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಗೆ ಅವಕಾಶಗಳಿವೆ. ಪಾಲುದಾರರ ಜೊತೆಗಿನ ಒಪ್ಪಂದವು ಅಂತ್ಯವಾಗಬಹುದು. ಹಣದ ವಹಿವಾಟಿನಲ್ಲಿ ಮುನ್ನೆಚ್ಚರಿಕೆ ಅಗತ್ಯ. ಗೃಹ ನಿರ್ಮಾಣದ ಕಾರ್ಯದಲ್ಲಿ ನಿಮಗೆ ಹಣಕಾಸಿನ ತೊಂದರೆ ಎದುರಾದೀತು. ಸಾಲವು ಸಿಗದೇ ಹೋಗುವ ಸಾಧ್ಯತೆ ಇದೆ. ಕಛೇರಿಯಲ್ಲಿ ಸಹೋದ್ಯೋಗಿಯು ಕೊಡುವ ಎಲ್ಲ ಸಹಕಾರವನ್ನೂ ತೆಗೆದುಕೊಳ್ಳಿ.
ಕಟಕ: ಇಂದು, ಧನು ರಾಶಿಯವರು ಶಿಕ್ಷಣ ಸ್ಪರ್ಧೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಯಶಸ್ವಿಯಾಗುವ ನಿರೀಕ್ಷೆಯಿದೆ. ಆದರೆ ಇಂದು ನೀವು ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಹಣವನ್ನು ಹೂಡಿಕೆ ಮಾಡುವಾಗ ವಿಶೇಷ ಕಾಳಜಿ ವಹಿಸಿ. ಯಾವುದನ್ನು ಪರಿಶೀಲಿಸದೆ ಹೂಡಿಕೆ ಮಾಡಲು ಹೊರಟರೆ ದೊಡ್ಡ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಳ್ಳುವಿರಿ. ಕ್ರೆಡಿಟ್ ವಹಿವಾಟಿನಿಂದ ದೂರವಿರಿ. ಖಾಸಗಿ ಕಂಪನಿ ನೌಕರರಿಗೆ ವೇತನ ಹೆಚ್ಚುವುದು. ಮನೆ ಸದಸ್ಯರ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಸೌಹಾರ್ದತೆ ಮೂಡಲಿದೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗಿ. ಯಾವುದೇ ರೀತಿಯ ಹೊಗಳಿಕೆ ಅಥವಾ ತೆಗಳಿಕೆಗಳಿಗೆ ಕಿವಿ ಕೊಡದಿರಿ. ಮತ್ತೊಬ್ಬರ ಜೊತೆ ವಿನಾಕಾರಣ ವಾಗ್ವಾದ ಬೇಡ. ಕೆಲಸದಲ್ಲಿ ಗಮನವಿರಲಿ.
ಸಿಂಹ: ಇಂದು ನಿಮ್ಮ ಧೈರ್ಯ ಹೆಚ್ಚಾಗುವುದು. ವ್ಯವಹಾರವು ವೃದ್ಧಿಯಾದಂತೆ ತೋರುತ್ತದೆ. ನೀವು ಹೊಸ ಸಂಪರ್ಕಗಳಿಂದ ವ್ಯಾಪಾರದಲ್ಲಿ ಹೆಚ್ಚಿನ ಪ್ರಯೋಜನ ಪಡೆಯುವಿರಿ. ನಿಮ್ಮ ಬಂಧುಗಳಿಂದ ಗೌರವದ ನೀವು ಪಡೆಯುವಿರಿ. ಮಕ್ಕಳ ವಿವಾಹದ ವಿಚಾರದಲ್ಲಿ ಆತುರ ಬೇಡ. ನಿಮ್ಮ ಹೂಡಿಕೆಯಿಂದ ವ್ಯರ್ಥ ಓಡಾಟವಾಗಬಹುದು. ಯಾರ ಸಹಾಯ ಇಲ್ಲದೆ ಕೆಲಸ ಮುಗಿಸಿದ ತೃಪ್ತಿ ನಿಮ್ಮದಾಗುವುದು. ನಿಮ್ಮ ಆತ್ಮವಿಶ್ವಾಸವೂ ಅಧಿಕವಾಗುವುದು. ಆಸ್ತಿ ಖರೀದಿಗೆ ಕಾಲವು ಉತ್ತವವಾಗಿದ್ದರೂ ನಿಮಗೆ ಧೈರ್ಯವು ಸಾಲದೇ ಹೋದೀತು. ನಿಮಗೆ ಹಣದ ಸಹಾಯವು ತಾನಾಗಿಯೇ ಬರುವುದರಿಂದ ಇದ್ದ ಚಿಂತೆಯು ದೂರಾಗುವುದು.
ಕನ್ಯಾ: ಇಂದು ಹಣದ ವಿಷಯದಲ್ಲಿ ಅನುಕೂಲವಿದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿಯು ಬರಲಿದೆ. ನೀವು ಸಾಕಷ್ಟು ವಿರೋಧಿಗಳನ್ನು ಹೊಂದಿದ್ದರೂ ನಿಮ್ಮನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ಸ್ನೇಹಿತನ ಭೇಟಿಯಿಂದ ಮನಸ್ಸು ತುಂಬಾ ಸಂತೋಷವಾಗುವುದು. ಮನೆಯ ಶುಭ ಕಾರ್ಯಗಳಿಗೆ ಹಣವನ್ನು ಕೊಡುವಿರಿ. ಬಿದ್ದು ಶರೀರವನ್ನು ಗಾಯಮಾಡಿ ಕೊಳ್ಳುವಿರಿ. ಇಂದು ನಿಮ್ಮ ಪತ್ನಿಯು ನಿಮ್ಮ ಕಾರ್ಯಗಳಿಗೆ ಬೆಂಬಲ ನೀಡುವರು. ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುವರು. ಅವರ ಎಲ್ಲಾ ಸಹಕಾರಗಳನ್ನು ತೆಗೆದುಕೊಳ್ಳಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಬಹುದು.
ತುಲಾ: ಇಂದು ನೀವು ವೃತ್ತಿಪರವಾದ ಪ್ರತಿಷ್ಠೆಯ ಲಾಭವನ್ನು ಪಡೆಯುವಿರಿ. ನಿಮ್ಮ ಶತ್ರುಗಳ ಸಂಖ್ಯೆಯು ಇಂದು ಹೆಚ್ಚಾಗಬಹುದು. ರಾಜಕೀಯದಲ್ಲಿ ತೊಡಗಿರುವ ಜನರಿಗೆ ಒಳ್ಳೆಯ ಅನುಕೂಲವಿರಲಿದೆ. ಹೊಸ ಆದಾಯದ ಮೂಲಗಳನ್ನು ನಿರ್ಮಿಸಿಕೊಳ್ಳುವಿರಿ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿರಲಿದೆ. ಹಣದ ಅಪವ್ಯಯವು ಆಗದಂತೆ ನೋಡಿಕೊಳ್ಳಿ. ಮಾತಿನಲ್ಲಿ ಹಿಡಿತವಿದ್ದರೆ ನಿಮಗೆ ಇಂದು ಕ್ಷೇಮ. ತಪ್ಪಿದಲ್ಲಿ ಬಂಧುಗಳ ನಡುವೆ ಅಸಮಾಧಾನವು ಉಂಟಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ನಿಮ್ಮ ತಂತ್ರಗಾರಿಕೆಗೆ ಫಲಾದಾಯಕವಾಗಲಿದೆ.
ವೃಶ್ಚಿಕ: ಇಂದು ನೀವು ಜೀವನೋಪಾಯಕ್ಕೆ ತೋಚಿದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ. ನೀವು ಇಂದು ದೂರದ ಪ್ರವಾಸವನ್ನು ಯೋಜಿಸುತ್ತಿದ್ದರೆ, ನೀವು ಸಫಲರಾಗುವಿರಿ. ವೈವಾಹಿಕ ಜೀವನವು ಪರಸ್ಪರರ ಪ್ರೀತಿ ಮತ್ತು ನಂಬಿಕೆ ಬಲವಾಗಿರುತ್ತದೆ. ಹಳೆಯ ಸ್ನೇಹಿತನ ಬಗ್ಗೆ ಗೊಂದಲಗಳು ಬರಬಹುದು. ಹಿಡಿದ ಕಾರ್ಯವನ್ನು ಮುಗಿಸುವಂತಹ ಛಲಗಾರಿಕೆ ನಿಮಗೆ ಅವಶ್ಯಕ. ಇದು ನಿಮ್ಮ ಯಶಸ್ಸಿನ ಗುಟ್ಟೂ ಆಗಿದೆ. ಮಾತನಾಡುವ ಪೂರ್ವದಲ್ಲಿ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆಯೂ ಗಮನವಿರಲಿ. ಮತ್ತೊಬ್ಬರ ಮೇಲೆ ಅಧಿಕಾರವನ್ನು ಸ್ಥಾಪಿಸಲು ಹೋಗಬೇಡಿ. ಧನ ಮತ್ತು ಮಾನಗಳನ್ನು ಕಳೆದುಕೊಳ್ಳಬೇಕಾಗುವುದು.
ಧನುಸ್ಸು: ಇಂದು ನಿಮ್ಮ ಮಾತಿನ ಮೃದುತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು. ಇಂದು ಮಿತವಾದ ಆಹಾರವನ್ನು ಸೇವಿಸುವುದು ಉತ್ತಮ. ಇಂದು ನೀವು ಆರ್ಥಿಕ ವಿಷಯದಲ್ಲಿ ಯಶಸ್ಸನ್ನು ಗಳಿಸಿದರೂ ಮನೆಯಲ್ಲಿ ಅಲ್ಪ ಕಿರಿಕಿರಿಯನ್ನು ಅನುಭವಿಸುವಿರಿ. ನೀವು ಎಷ್ಟೇ ಚುರುಕಾಗಿ ಕೆಲಸ ಮಾಡಲು ಪ್ರಯತ್ನಿಸಿದರೂ ಕೆಲಸಗಳು ನಿಧಾನವಾಗಿ ಸಾಗುವುದು. ಇಂದು ನಿಮ್ಮ ಸಹನೆಯ ಪರೀಕ್ಷೆಯೂ ಆಗಬಹುದು. ಉತ್ತಮ ಫಲಿತಾಂಶ ಇದರಿಂದ ಹೊರಬರಲಿದೆ. ಇನ್ನೊಬ್ಬರಿಗೆ ಕೊಟ್ಟ ಹಣವು ಸಕಾಲಕ್ಕೆ ಬಾದೆ ನೀವೇ ಸಾಲಗಾರರಾಗುವ ಪ್ರಸಂಗವು ಬಂದರೂ ಬಂದೀತು.
ಮಕರ: ಈ ಮೊದಲೇ ನೀವು ನಿಲ್ಲಿಸಿದ ಯಾ ಕೆಲಸವು ಇಂದು ಪೂರ್ಣವಾಗುವುದು. ಕಚೇರಿಯಲ್ಲಿ ನೀವು ಅಧೀನ ಕಾರ್ಮಿಕರಿಂದ ಒತ್ತಡವನ್ನು ಅನುಭವಿಸುವಿರಿ. ಸಣ್ಣ ಸಣ್ಣ ವಿಷಯಗಳನ್ನು ತಪ್ಪಿಸುವುದು ಒಳ್ಳೆಯದು. ನಿಮಗಿಂದು ಶುಭ ದಿನವಾಗಿದೆ. ಆತ್ಮೀಯರೆಂದು ನಂಬಿ ಆಸ್ತಿ ಖರೀದಿಗೆ ಯತ್ನಿಸಿದ್ದೀರೆ ಅವರಿಂದಲೇ ವಂಚನೆ ಆಗಬಹುದು. ಸಾಧ್ಯವಾದಲ್ಲಿ ಪಾಲುದಾರಿಕೆಯ ಒಪ್ಪಂದವನ್ನು ರದ್ದು ಪಡಿಸಿಕೊಳ್ಳಿ. ಮುಂದೆ ನಿಮ್ಮ ಹಣಕ್ಕೆ ತೊಂದರೆ ಬರಲಿದೆ. ಭೂ ವ್ಯವಹಾರದಲ್ಲಿ ಕೈ ಹಾಕಲು ಹೋಗಲೇಬೇಡಿ. ಹೊಸದಾಗಿ ವೃತ್ತಿಗೆ ಸೇರಿದ ಯುವಕರಿಗೆ ವೃತ್ತಿಯಲ್ಲಿ ಗೊಂದಲ ಕಾಡಬಹುದು.
ಕುಂಭ: ಇಂದು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ. ಹಳೆಯ ಸ್ನೇಹಿತರಿಂದ ನಿಮಗೆ ಸಹಾಯ ಸಿಗಲಿದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತೆಗೆದುಕೊಳ್ಳವುದು ಬೇಡ. ಇಲ್ಲದಿದ್ದರೆ ನೀವು ದೊಡ್ಡ ಅನಾರೋಗ್ಯವನ್ನು ಎದುರಿಸಬೇಕಾಗಬಹುದು. ನೀವು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ವಾಹನವನ್ನು ಬಳಸುವುವಾಗ ಮುನ್ನೆಚ್ಚರಿಕೆ ಇರಲಿ. ಅವಸರದಲ್ಲಿ ತೆಗೆದುಕೊಂಡ ನಿರ್ಧಾರಗಳು ಮುಂದೆ ಅದೇ ಇರಬಹುದು. ಸ್ಪಷ್ಟವಾಗಿ ಕೈಗೊಳ್ಳಲಿರುವ ಕಾರ್ಯಗಳು ಹೊಸ ಸ್ವರೂಪವನ್ನು ಪಡೆಯಲಿವೆ. ಸರ್ಕಾರಿ ನೌಕರರಿಗೆ ಅದರಲ್ಲೂ ಉನ್ನತಾಧಿಕಾರಿಗಳಿಗೆ ಪದೋನ್ನತಿ ಆಗಬಹುದುದು.
ಮೀನ: ಇಂದು ಹೊಸ ಕೆಲಸಕ್ಕಾಗಿ ಮಾಡಲಾಗುತ್ತಿರುವ ಪ್ರಯತ್ನಗಳು ಶುಭವಾಗಲಿದೆ. ನೀವು ಯಾವುದೇ ಸಂದರ್ಭದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಇಲ್ಲವಾದರೆ ನಷ್ಟವಾಗಬಹುದು. ಕೆಲಸ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಮಗೆ ಮುಖ್ಯ. ಮಾನಸಿಕ ಚಂಚಲತೆ ವಿಪರೀತವಾಗುವುದರಿಂದ ಅದನ್ನು ಹತೋಟಿಯಲ್ಲಿಡುವಿರಿ. ನೆರೆಹೊರೆಯವರ ಜೊತೆ ಸೌಹಾರ್ದವಿರಲಿ ಬಾಂಧವ್ಯವಿರಲಿ. ಯಾರದೋ ಉಪಕಾರಕ್ಕಾಗಿ ನೀವು ವೃಥಾ ತಿರುಗಾಡುವಿರಿ.
ಲೋಹಿತಶರ್ಮಾ – 8762924271 (what’s app only)