Weekly Horoscope: ಆಗಸ್ಟ್​ 03 ರಿಂದ ಆಗಸ್ಟ್​ 10 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ

ಆಗಸ್ಟ್ ತಿಂಗಳ ಮೊದಲ ವಾರ 03-08-2025ರಿಂದ 10-08-2025ರವರೆಗೆ ಇರಲಿದೆ. ಕಾರ್ಯಭಾರವೇ ನಿಮ್ಮ ಮೇಲೆ ಬಿದ್ದರೂ ಒಂದೊಂದಾಗಿಯೇ ಭಾರವನ್ನು ಕಳೆದುಕೊಳ್ಳಬೇಕು. ಪ್ರೇಮದಲ್ಲಿ ದುಡುಕುವ ಸಂದರ್ಭ ಬರಲಿದ್ದು, ವಿವೇಕವನ್ನು ಬಿಡದೇ ಹೆಜ್ಜೆಯಿಡಿ. ಅತಿಯಾದ ಆಹಾರ ಸೇವೆಯನ್ನು ತಪ್ಪಿಸಿ. ಅನುಷ್ಠಾನ ನಿರತ ಗುರುವನ್ನು ದರ್ಶನಮಾಡಿ, ಆಶೀರ್ವಾದ ಪಡೆಯಿರಿ.

Weekly Horoscope: ಆಗಸ್ಟ್​ 03 ರಿಂದ ಆಗಸ್ಟ್​ 10 ರ ವರೆಗಿನ ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಜ್ಯೋತಿಷ್ಯ
Image Credit source: Pinterest
Updated By: ವಿವೇಕ ಬಿರಾದಾರ

Updated on: Aug 03, 2025 | 1:31 AM

ಆಗಸ್ಟ್ ತಿಂಗಳ ಮೊದಲ ವಾರ 03-08-2025ರಿಂದ 10-08-2025ರವರೆಗೆ ಇರಲಿದೆ. ಕಾರ್ಯಭಾರವೇ ನಿಮ್ಮ ಮೇಲೆ ಬಿದ್ದರೂ ಒಂದೊಂದಾಗಿಯೇ ಭಾರವನ್ನು ಕಳೆದುಕೊಳ್ಳಬೇಕು. ಪ್ರೇಮದಲ್ಲಿ ದುಡುಕುವ ಸಂದರ್ಭ ಬರಲಿದ್ದು, ವಿವೇಕವನ್ನು ಬಿಡದೇ ಹೆಜ್ಜೆಯಿಡಿ. ಅತಿಯಾದ ಆಹಾರ ಸೇವೆಯನ್ನು ತಪ್ಪಿಸಿ. ಅನುಷ್ಠಾನ ನಿರತ ಗುರುವನ್ನು ದರ್ಶನಮಾಡಿ, ಆಶೀರ್ವಾದ ಪಡೆಯಿರಿ.

ಮೇಷ ರಾಶಿ: ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ಮೊದಲ ರಾಶಿಯವರು ಮಾನಸಿಕವಾದ ಕೆಲವು ಹಿಂಜರಿಕೆಗೆ ಒಳಗಾಗಬಾರದು. ನಿಮ್ಮ ಸುತ್ತಲಿನ ಮಾತುಗಳನ್ನು ಕೇಳಿ ಆತಂಕ, ಗೊಂದಲಗಳನ್ನು ನಿಮ್ಮೊಳಗೇ ಸೃಷ್ಟಿಮಾಡಿಕೊಂಡು ಇರುವಿರಿ. ಯಾರ ಬಳಿಯಾದರೂ ಹೇಳಿ ಸರಿಮಾಡಿಕೊಳ್ಳಬಹುದು. ಆಪ್ತರನ್ನು ದೂರ ಮಾಡಿಕೊಂಡು ಸಂಕಟಪಡಬೇಕಾದೀತು. ಈ ವಾರ ವಿಶೇಷವಾಗಿ ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಎದ್ದು ಕಾಣುವುದು. ಅವರ ಮನೆಯವರಿಗೂ ಗೊತ್ತಾಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡಿ. ವಾಹನದ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಇರಲಿದೆ. ನೀವು ಸಮಯದ ನಿರೀಕ್ಷೆಯಲ್ಲಿ ಇರುವಿರಿ. ತಾಳ್ಮೆಯಿಂದ ಇದ್ದಷ್ಟೂ ನಿಮಗೆ ಹೆಚ್ಚು ಲಾಭವು ಸಿಗಲಿದೆ. ಅತಿಯಾಗಿ ಯಾರನ್ನೂ ನಂಬುವುದು ಬೇಡ.

ವೃಷಭ ರಾಶಿ: ಶುಕ್ರಾಧಿಪತ್ಯವಿರುವ ಈ ರಾಶಿಯವರಿಗೆ ಮೊದಲ ವಾರದಲ್ಲಿ ಆತ್ಮಾಭಿಮಾನ ಹೆಚ್ಚಾಗುವುದು. ಕೆಲವರು ಕೆಲಸ ಮಾಡಿಕೊಳ್ಳಲು ನಿಮ್ಮ ಮಾತಿನಿಂದ ಮನೆಕಟ್ಟುವರು. ಪುಣ್ಯಸ್ಥಳಕ್ಕೆ ಹೋಗುವ ಮನಸ್ಸಾಗುವುದು. ನಿಮ್ಮ ದಾರಿಯನ್ನು ನೀವು ಸುಗಮ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ನೀವು ಯಾರ ಸಹಕಾರವನ್ನೂ ಬಯಸದೇ ಇರುವಿರಿ. ವೈದ್ಯ ವೃತ್ತಿಯನ್ನು ಇಷ್ಟ ಪಡುವವರು ಯಶಸ್ಸನ್ನು ಗಳಿಸುವರು. ನಿಮಗೆ ಎಷ್ಟೋ ವಿಚಾರವನ್ನು ಕಲಿಯಬೇಕು ಎಂಬ ಆಸೆಯು ಅತಿಯಾಗಲಿದೆ. ಹೊಸ ಉದ್ಯೋಗಕ್ಕೆ ಪ್ರವೇಶ ಪಡೆಯುವಿರಿ. ನಿಮ್ಮ ಅನುಕೂಲವನ್ನು ನೋಡಿ ಖರ್ಚು ಮಾಡುವುದು ಉತ್ತಮ. ಯಾರಿಗಾದರೂ ನಿಮ್ಮ ವರ್ತನೆಯು ಇಷ್ಟವಾಗದೇ ಹೋಗಬಹುದು.

ಮಿಥುನ ರಾಶಿ: ಈ ತಿಂಗಳ ಮೊದಲನೇ ವಾರದಲ್ಲಿ ನಿಮಗೆ ಮಾತನಾಡಬೇಕಾದ ಸಂದರ್ಭ ಬರಲಿದ್ದು, ಏನು ಹೇಳಬೇಕು ಎಂಬ ಗಲಿಬಿಲಿ ಇರುವುದು. ನೀವು ಪಡೆದುಕೊಂಡ ವಿರಾಮವನ್ನು ಆನಂದದಿಂದ ಕಳೆಯುವಿರಿ. ಸ್ನೇಹಿತರ ಮೇಲೆ ನಿಮಗೆ ಶಂಕೆ ಉಂಟಾಗಬಹುದು. ಈ ವಾರ ನಿಮಗೆ ಸಿಕ್ಕ ಹಣದ ವಿಚಾರವನ್ನು ನೀವು ಯಾರ ಬಳಿಯೂ ಹೇಳುವುದು ಬೇಡ. ನಿಮ್ಮನ್ನು ನೋಡುವ ದೃಷ್ಟಿಯು ಬದಲಾಗುವುದು. ಭೂವ್ಯವಹಾರಕ್ಕೆ ಸಂಬಂಧಿಸಿದಂತೆ ಉನ್ನತ ಅಧಿಕಾರಿಗಳ ಸಹಾಯವನ್ನು ಪಡೆಯುವಿರಿ. ಒಂದಿಷ್ಟು ಕಾರ್ಯದಲ್ಲಿ ಒತ್ತಡವಿರಲಿದೆ. ನಿಮಗೆ ನಿಮ್ಮದೇ ಆದ ಬಳಗವು ಇರಲಿದ್ದು ಅವರ ಜೊತೆ ಸಮಯವನ್ನು ಕಳೆಯುವಿರಿ. ಈ ವಾರ ಸಂಗಾತಿ ಏನೇ ಅಂದರೂ ನಿಮ್ಮ ನಿರ್ಧಾರವನ್ನು ಬದಲಿಸಿಕೊಳ್ಳಲು ಹೋಗುವುದಿಲ್ಲ‌. ಆರೋಗ್ಯವು ಸರಿಯಾಗಲು ಸಮಯವನ್ನು ಕಾಯುತ್ತಿರುವಿರಿ.

ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಜಾಣತನದಲ್ಲಿ ಚುರುಕು ಹೆಚ್ಚು. ಒಳ ಮನಸ್ಸು ಹೇಳಿದಂತೆ ಕೇಳಿ ಬರುವ ಅಪಾಯವನ್ನು ತಪ್ಪಿಸಿಕೊಂಡು ನಿಶ್ಚಿಂತರಾಗುವಿರಿ. ಎಲ್ಲವೂ ವಿಧಿಯ ನಿಯಮದಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖವು ಹೆಚ್ಚಾಗುವುದು. ನಿಮ್ಮರನ್ನು ನೀವು ದೂರ ಮಾಡಿಕೊಳ್ಳುವಿರಿ. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನೀವು ನಿರಾಕರಿಸುವಿರಿ.‌ ಈ ವಾರ ಪ್ರೇಮವನ್ನು ನಿವೇದಿಸಲು ಸರಿಯಾದ ದಿನವನ್ನು ಕಾಯುವಿರಿ. ವಾಹನ ಚಾಲನೆಯಲ್ಲಿ ನುರಿತವರಾದರೂ ಕಾಲವು ಅದಾವುದನ್ನೂ ಕೇಳದು.‌ ನಿಮ್ಮ ನೇರ ನುಡಿಗಳು ಇನ್ನೊಬ್ಬರಿಗೆ ನೋವನ್ನು ಕೊಟ್ಟೀತು. ಒಂದೇ ಕೆಲಸವನ್ನು ಬಹಳ ದಿನಗಳ ವರೆಗೆ ಮಾಡುವಿರಿ. ಕೆಲವನ್ನು ಸುಮ್ಮನೇ ಮನಸ್ಸಿನಲ್ಲಿ ಅಂದುಕೊಂಡು ಕಾಲಹರಣವಾಗುವುದು.

ಸಿಂಹ ರಾಶಿ: ಮೊದಲ ವಾರದಲ್ಲಿ ನಿಮಗೆ ತಂದೆ ಹಾಗೂ ಸಹೋದರ ವಿಚಾರದಲ್ಲಿ ಕೋಪ. ಹಣಕಾಸಿನ ವಿಚಾರದಲ್ಲಿ ನಿಮಗೆ ಮೋಸವಾಗಲಿದ್ದು, ಅದರಲ್ಲೂ ನಿಮ್ಮವರೇ ಅದನ್ನು ಮಾಡಿದ್ದು ಎಂಬ ವದಂತಿಯು ನಿಮಗೆ ಸಹಿಸಲು ಅಸಾಧ್ಯವಾದುದಾಗಿದೆ. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಸಿಗಲಿದೆ. ಈ ವಾರದ ಕೊನೆಯಲ್ಲಿ ವಹಿಸಿಕೊಂಡ ಕಾಮಗಾರಿ ಪೂರ್ಣವಾಗುವುದು. ಯಾರಾದರೂ ಹುಳಿ ಹಿಂಡುವ ಕೆಲಸಕ್ಕೆ ಬರಬಹುದು. ಮಾತಿನ ನಿಯಂತ್ರಣವು ತಪ್ಪಿ‌ಹೋಗಲಿದೆ. ಪ್ರತ್ಯುತ್ತರದ ವಿಳಂಬಕ್ಕಾಗಿ ನೀವು ವ್ಯಥೆ ಪಡಬೇಕಾದೀತು. ನಿಮಗೆ ಧೈರ್ಯವನ್ನು ತುಂಬಲು ಸಂಗಾತಿಯ ಸಹಾಯವನ್ನು ಪಡೆಯಿರಿ. ಬಂಧುಗಳು ನಿಮ್ಮ ಮನೆಗೆ ಬರಲಿದ್ದಾರೆ. ನಿದ್ರಾಹೀನತೆಯಿಂದ ನಿಮಗೆ ಕೆಲವು ತೊಂದರೆಗಳು ಆಗಬಹುದು.

ಕನ್ಯಾ ರಾಶಿ: ಈ ವಾರ ದಾಂಪತ್ಯದ ಕಲಹಕ್ಕೆ ತಾರ್ಕಿಕ ಅಂತ್ಯ ಸಿಗಲಿದ್ದು, ಕೆಲವು ದಿನ ಮೌನ ಆವರಿಸುವುದು. ಪ್ರೇಮಪ್ರಕರಣವು ನಿಮಗೆ ದುಃಖಾಂತವಾಗುವುದು. ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ. ಗೆಲ್ಲುತ್ತೇನೆಂದು ಹೇಗಾದರೂ ಏನಾದರೂ ಮಾಡಲು ಹೊರಟರೆ ಇರುವ ಸ್ಥಾನದಿಂದ ಹೊರನಡೆಯಬೇಕಾಗುವುದು. ಮಕ್ಕಳಿಗಾಗಿ ನೀವು ಬದಲಾವಣೆಯನ್ನು ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನೀವು ಬಹಳ ಅನಾದರ ತೋರುವುರಿ. ವಿದ್ಯಾರ್ಥಿಗಳಿಂದ ಹೆಚ್ಚಿನ ನಿರೀಕ್ಷೆಯು ಇರಲಿದೆ. ನಿಮಗೆ ಬರುವ ಸಮಸ್ಯೆಗಳು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡಿಕೊಳ್ಳುವಿರಿ. ಆರೋಗ್ಯವು ನಿಮಗೆ ವರವಾಗಿದ್ದರೂ ಅದು ಕೆಲವು ದಿನ ತೊಂದರೆಯನ್ನು ಕೊಡುವುದು.

ತುಲಾ ರಾಶಿ: ಈ ವಾರ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುವುದು. ರಮ್ಯವಾದ ಸುಂದರವಾದ ವಸ್ತುಗಳ ಮಾರಾಟದಿಂದ ಲಾಭ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ಪಾಲಕರಿಗೆ ಆತಂಕವಾಗಬಹುದು. ಸ್ನೇಹಿತರಿಂದ ಉಡುಗೊರೆಗಳು ಸಿಗಬಹುದು. ತಾಯಿಯ ಪ್ರೀತಿಯು ನಿಮಗೆ ಹೆಚ್ಚು ಸಿಗುವುದು. ವಾಹನ ಚಾಲಕರಿಗೆ ಹೆಚ್ಚಿನ ಬೋನಸ್ ಪಡೆಯುವ ಅವಕಾಶ. ನಿಮ್ಮ ಕೋಪವನ್ನು ನಿಯಂತ್ರಣಕ್ಕೆ ತಂದುಕೊಳ್ಳುವಿರಿ. ನಿಮ್ಮ ನಡವಳಿಕೆಯಯನ್ನು ಸರಿಮಾಡಿಕೊಳ್ಳಲು ಪ್ರಯತ್ನಿಸುವಿರಿ. ಸಂಗಾತಿಯ ಜೊತೆ ಕಲಹವಾಡಿ ಅನಂತರ ಪಶ್ಚಾತ್ತಾಪಪಡುವಿರಿ‌. ನಿಮ್ಮ ಯೋಜನೆಯನ್ನು ಸರಿಯಾಗಿ ನಿರ್ವಹಿಸಲು ಕಷ್ಟವಾದೀತು. ನಿಮಗೆ ಸಮ್ಮಾನಗಳು ಸಿಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಶುಭ. ಕುಜನು ಏಕಾದಶ ಸ್ಥಾನಕ್ಕೆ ಬರಲಿದ್ದು ಭಯ ನಿವಾರಣೆ ಹಾಗೂ ಧೈರ್ಯವೃದ್ಧಿಯಾಗುವುದು. ಸಾಲಬಾಧೆಯಿಂದ ನಿಮಗೆ ನಿರಾಳತೆ ಉಂಟಾಗುವುದು. ನಿಮಗೆ ಸಹಾಯವನ್ನು ಕೇಳಲು ಮುಜುಗರವಾದೀತು. ವ್ಯಾಪಾರದ ಸಲುವಾಗಿ ದೂರಪ್ರಯಾಣವನ್ನು ಮಾಡಬೇಕಾಗಬಹುದು. ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಅಡೆತಡೆ ಎದುರಾಗುವುದು. ನೀವು ಒತ್ತಡ ಮಾಡಿಕೊಳ್ಳಬಾರದೆಂದು ಅಂದುಕೊಂಡಿದ್ದರೂ ಸಂದರ್ಭವು ಅದೇ ರೀತಿ ಬರುವುದು. ಉದ್ಯಮದಲ್ಲಿ ಹೊಸ ಮೈಲುಗಲ್ಲನ್ನು ಸೃಷ್ಟಿಸುವಿರಿ. ನಿಮ್ಮ ನೌಕರರು ನೀವು ಹೇಳಿದ ಕೆಲಸವನ್ನು ಸರಿಯಾಗಿ ಮಾಡದೇ ಇರಬಹುದು. ನಿಮ್ಮ ಮಾತನ್ನು ಜೊತೆಗಾರರು ಗಂಭೀರವಾಗಿ ಪರಿಗಣಿಸಲಾರರು. ಸುಬ್ರಹ್ಮಣ್ಯನ ಆರಾಧನೆಯನ್ನು ನೀವು ಮಾಡಿಕೊಂಡು ಮಾಡುತ್ತಿರುವ ಕೆಲಸದಲ್ಲಿ ಮುನ್ನಡೆಯಿರಿ.

ಧನು ರಾಶಿ: ಅಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ನಿಮಗೆ ಶುಭ. ವಿವಾಹಕ್ಕೆ ಸಂಬಂಧಿಸಿದಂತೆ ನೀವು ನಿಮಗೆ ಮಾತ್ರ ಗೊತ್ತಿರುವ ಇನ್ನೊಬ್ಬರ ರಹಸ್ಯವನ್ನು ಹೇಳುವಿರಿ. ಬಾಡಿಗೆ ಮನೆಯವರಾಗಿದ್ದರೆ ಮನೆಯನ್ನು ಬದಲಿಸುವಿರಿ. ಖರೀದಿಸಿದ ಭೂಮಿಯನ್ನು ಉದ್ಯೋಗಕ್ಕೆ ಬದಲಿಸುವ ಯೋಚನೆ ಬರುವುದು. ಭೂ ವ್ಯವಹಾರವನ್ನು ಮಾಡುವವರಿಗೆ ಹೆಚ್ಚು ಲಾಭವು ಸಿಗಲಿದೆ. ಕಡಿಮೆಯಾಗುತ್ತಿದ್ದ ಅನಾರೋಗ್ಯವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ಇಷ್ಟದವರು ನಿಮಗೆ ವಂಚನೆ ಮಾಡುವರು. ಮನೆಯ ಕೆಲಸದಲ್ಲಿ ನೀವು ಹೆಚ್ಚು ಆಸಕ್ತಿ ಉಳ್ಳವರಾಗುವಿರಿ. ಬಿದ್ದ ಕನಸು ವಾರವಿಡೀ ಭಯ ಹುಟ್ಟಿಸಬಹುದು.

ಮಕರ ರಾಶಿ: ಈ ವಾರ ನಿಮಗೆ ವೃತ್ತಿಯ ದೃಷ್ಟಿಯಿಂದ ಅಶುಭ. ನೀವೇ ಮಾಡಬೇಕೆಂದು ಹೊರಟ ಕೆಲಸದಲ್ಲಿ ಜಯ ಆಗಲಿದೆ. ಆದರೆ ಯಾರಿಂದಲೋ ಆಗಬೇಕಾದುದು ಆಗದು. ಸ್ತ್ರೀಯರಿಂದ ನಿಮಗೆ ವೃತ್ತಿಯಲ್ಲಿ ಅಸಹಕಾರ. ಹೊಸ ಬಂಧುಗಳ ಪರಿಚಯವು ನಿಮಗಾಗುವುದು. ನಕಾರಾತ್ಮಕ ಅಂಶವನ್ನು ನಿಮ್ಮೊಳಗೆ ತುಂಬುವ ಪ್ರಯತ್ನ ಮಾಡುವರು. ಧಾರ್ಮಿಕ ವಿಚಾರದಲ್ಲಿ ಆಸಕ್ತಿ ಉಂಟಾಗಬಹುದು. ಬಂಧುಗಳ ಮಧ್ಯವೇ ವಿವಾಹ ಸಂಬಂಧವು ಏರ್ಪಡಬಹುದು. ತಂದೆಯ ಆರೋಗ್ಯವನ್ನು ಸರಿಪಡಿಸಲು ನೀವು ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳುವಿರಿ. ನೀವು ಮನಸ್ಸಿಗೆ ನೆಮ್ಮದಿ ನೀಡುವ ಸ್ಥಳಗಳಿಗೆ ಹೋಗುವಿರಿ. ನಿಮ್ಮ‌ ಮಾತುಗಳು ಅಹಂಕಾರದಂತೆ ತೋರಬಹುದು. ನಿಮಗೆ ನಿರ್ದಿಷ್ಟ ವೇತನವನ್ನು ಪಡೆಯುವ ಹಂಬಲ.

ಕುಂಭ ರಾಶಿ: ಹನ್ನೊಂದನೇ ರಾಶಿಯವರಿಗೆ ಹೆಣ್ಣು ಮಕ್ಕಳ ವಿಚಾರದಲ್ಲಿ ಪ್ರೀತಿ ಬೆಳೆಯುವುದು. ಚಂಚಲವಾದ ಮನಸ್ಸನ್ನು ನೀವು ನಿಯಂತ್ರಿಸಲು ನಾನಾ ವಿಧವಾದ ಕಸರತ್ತು ಮಾಡುವಿರಿ. ಉದ್ಯೋಗದ ಸ್ಥಳದಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸವನ್ನು ಮಾಡಲು ಕಷ್ಟವಾದೀತು. ಉನ್ನತ ಅಧಿಕಾರಕ್ಕೆ ಸೆಣೆಸಾಡುವ ಸ್ಥಿತಿಯು ಬರುವುರು. ಯಾರ ಮೌಲ್ಯಮಾಪನಕ್ಕೂ ನಿಮಗೆ ಅರ್ಹತೆ ಬರದು. ಸರ್ಕಾರದ ಕೆಲಸಕ್ಕಾಗಿ ಹಣ ಖರ್ಚಾಗುವುದು. ಸ್ನೇಹಿತರು ಅವರಿಗೆ ಅರಿವಿಲ್ಲದೇ ನಿಮ್ಮನ್ನು ತಪ್ಪು ದಾರಿಗೆ ಕರೆದೊಯ್ಯುವರು. ನಿಮ್ಮ ಬಳಿ ಹಣವಿದ್ದರೂ ನಿಮಗೆ ಬಳಕೆಗೆ ಬಾರದು.

ಮೀನ ರಾಶಿ: ಈ ವಾರ ಮಕ್ಕಳ‌ ಚಟುವಟಿಕೆಯ ಮೇಲೆ ನಿಮಗೆ ಅತಿಯಾದ ಮೋಹ ಇರಲಿದೆ. ದಾಂಪತ್ಯದಲ್ಲಿ ನೀವು ಸಂತೋಷವಾಗಿರಲು ಹೊಸ ಆಯಾಮವನ್ನು ಕಂಡುಕೊಳ್ಳುವಿರಿ.‌ ಕುಟುಂಬವನ್ನು ಸಂತೋಷದಿಂದ ಇಡುವಿರಿ. ಆಪ್ತರನ್ನು ಕಳೆದುಕೊಳ್ಳುವ ಭೀತಿ ಇರಲಿದೆ. ಉದ್ಯಮಕ್ಕೆ ಸಂಬಂಧಿಸಿದಂತೆ ತರಬೇತುದಾರರ ನಡುವೆ ನಿಮ್ಮ ಸಮಾಲೋಚನೆಗಳು ನಡೆಸುವಿರಿ. ಪಾಲುದಾರಿಕೆಯಲ್ಲಿ ಸೂಕ್ತ ವ್ಯಕ್ತಿಗಳನ್ನು ನೀವು ಜೊತೆ ಮಾಡಿಕೊಂಡು ಹೋಗುವಿರಿ. ಈ ವಾರ ಉತ್ತಮ ಸಂವಹನಕ್ಕೆ ಪ್ರಶಂಸೆ ಸಿಗುವುದು. ದೂರ ಪ್ರಯಾಣದ ಆಯಾಸ ಸುಲಭಕ್ಕೆ ದೂರಾಗದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಯಾರದೋ ತಪ್ಪಿಗೆ ನೀವು ಉತ್ತರಿಸಬೇಕಾಗಬಹುದು. ಶಿವಕವಚವನ್ನು ಪಠಣ ಮಾಡಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)