AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today 03 August: ಇಂದು ಈ ರಾಶಿಯವರಿಗೆ ತಮ್ಮ ಮಾತು ಕೈಗೂಡಿದ ಸಂತಸ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಶ್ರಾವಣ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಭಾನುವಾರ ದೈವ ಸಹಾಯ, ಅಪೂರ್ಣ ಆಸೆ, ಸಹೋದರನಿಗೆ ಧನಸಹಾಯ, ವ್ಯಾಪಾರದ ನಿರ್ಲಕ್ಷ್ಯ, ನಿರಾಸಕ್ತಿಯಿಂದ ವಿಶ್ರಾಂತಿ ಇವೆಲ್ಲ ಇರಲಿದೆ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today 03 August: ಇಂದು ಈ ರಾಶಿಯವರಿಗೆ ತಮ್ಮ ಮಾತು ಕೈಗೂಡಿದ ಸಂತಸ
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Aug 03, 2025 | 1:48 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಭಾನು, ತಿಥಿ: ದಶಮೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ಶುಭ, ಕರಣ: ಬಾಲವ, ಸೂರ್ಯೋದಯ – 06 : 17 am, ಸೂರ್ಯಾಸ್ತ – 06 : 59 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 17:25 -18:59 ಗುಳಿಕ ಕಾಲ 15:49- 17:25 ಯಮಗಂಡ ಕಾಲ 12:39 – 17:25

ಮೇಷ ರಾಶಿ: ನೀವು ಕೂಡಿಟ್ಟ ಹಣದಿಂದ ನಿಮ್ಮ ವಿದ್ಯಾಭ್ಯಾಸಕ್ಕೆ ಸಣ್ಣ ಸಹಾಯವಾಗಲಿದೆ‌. ಮನೆಯ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಹಾಗೂ ಆತಂಕ ಇರುವುದು. ಇಂದು ಅನುಭವಿಗಳ ಜೊತೆ ನಿಮ್ಮ ಅನನುಭವದ ಸನ್ನಿವೇಶವನ್ನು ಹಂಚಿಕೊಳ್ಳುವಿರಿ. ಅದು ಬಾಲಿಶ ಎನಿಸುವುದು. ಸ್ಪರ್ಧೆಯಲ್ಲಿ ವಾಗ್ವಾದ ಮಾಡಿ ನಿಮ್ಮ ವ್ಯಕ್ತಿತ್ವನ್ನು ತೋರಿಸುವಿರಿ. ಕುಟುಂಬದ ಕಲಹದಲ್ಲಿ ನೀವು ಮೌನವಹಿಸುವಿರಿ. ನೀವು ಪಾಲುದಾರಿಕೆಯಲ್ಲಿ ಯಾರನ್ನೋ ಜೊತೆ ಮಾಡಿಕೊಂಡು ಹೋಗಬಹುದು. ವಾಹನದ ಸಂಚಾರದಲ್ಲಿ ಉದ್ವೇಗವನ್ನು ತಂದುಕೊಳ್ಳುವುದು ಬೇಡ. ಗೌರವಕ್ಕೆ ಧಕ್ಕೆ ಬರುವ ಸನ್ನಿವೇಶಗಳು ಬರಬಹುದು. ನಿಮ್ಮ ನಿಯಮಗಳೇ ನಿಮಗೆ ತೊಂದರೆಯನ್ನು ತಂದೀತು. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಮಾತು ಅಲ್ಪವಾಗಿದ್ದರೂ ಯೋಗ್ಯವಾದ ಮಾತುಗಳನ್ನು ಆಡುವಿರಿ. ಸಂಗಾತಿಯಿಂದ ಆಗುವ ಸಣ್ಣ ತಪ್ಪನ್ನು ಕ್ಷಮಿಸುವುದು ಯೋಗ್ಯವೇ. ವೃಷಭ ರಾಶಿ: ಅನಿರೀಕ್ಷಿತವಾಗಿ ಬಂದ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಬೇಕಾಗುವುದು. ಇಂದು ನಿಮಗೆ ಯಾರ ಸಹಾನುಭೂತಿಯೂ ಬೇಡವಾಗಬಹುದು. ನೀವು ಇತರರ ಸಲಹೆಯನ್ನು ಮಾತ್ರ ಅವಲಂಬಿಸಿದ್ದರೆ ಸಂಭಾವ್ಯ ಆರ್ಥಿಕ ನಷ್ಟಗಳ ಬಗ್ಗೆ ಜಾಗರೂಕರಾಗಿರಿ. ಗೊತ್ತಿಲ್ಲದೇ ನಿಮಗೆ ದೈವವೊಂದು ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಸಹಾಯ ಮಾಡುವುದು. ಸ್ಪರ್ಧಾತ್ಮಕ ವಿಚಾರದಲ್ಲಿ ನೀವು ಅಸಕ್ತಿ ತೋರಿಸಲಾರಿರಿ. ಸ್ನೇಹಿತರು ನಿಮಗೆ ತಪ್ಪು ದಾರಿಯನ್ನು ತೋರಿಸಬಹುದು. ಹೇಳಿಕೊಟ್ಟ ತಿಳಿವಳಿಕೆಯು ನಿಮಗೆ ಸಮಯಕ್ಕೆ ಬಾರದೇ ಹೋಗುವುದು. ಪ್ರಶಾಂತರಾಗಿರಲು ಯತ್ನಿಸಿದರೂ ಕೆಲವು ಸಂದರ್ಭಗಳಲ್ಲಿ ಉದ್ವೇಗವು ಪ್ರಕಡವಾಗಬಹುದು. ಸಂಬಂಧಗಳಲ್ಲಿ ಬಿರುಕು ಬರಬಹುದು. ನಿಮ್ಮ ಮನಸ್ಸು ಸಂದರ್ಭಕ್ಕೆ ಹೊಂದಿಕೊಳ್ಳುವಂತೆ ಅಣಿಗೊಳಿಸುವುದು ಒಳ್ಳೆಯದು. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ನಿಮ್ಮ ಅಸಹಜ ಸ್ವಭಾವವನ್ನು ಸರಿಮಾಡಿಕೊಳ್ಳುವುದು ಮುಖ್ಯ.

ಮಿಥುನ ರಾಶಿ: ಪ್ರಶಂಸೆಗಳು ನಿಮಗೆ ಅಪಾಯದಂತೆ ತೋರಬಹುದು. ನಿಮ್ಮ ಬಿಡುವಿನ ದಿನದಲ್ಲಿಯೂ ಕುಟುಂಬದವರ ಬಗ್ಗೆ ಕಾಳಜಿ ಇರದು. ಮನೆಯ ಹಿರಿಯರಿಂದ ಸಮಾಧಾನ ಇರುವುದು. ನೀವು ಇಂದು ಸಂಸ್ಥೆಯ ಮುಖ್ಯಸ್ಥಾನವನ್ನು ಅಲಂಕರಿಸಬಹುದು. ಸಾಮಾಜಿಕ ಸೇವಾ ಕಾರ್ಯದಲ್ಲಿ ಆಸಕ್ತಿ. ವೃತ್ತಿಯಲ್ಲಿ ಗೊಂದಲ ಒತ್ತಡಗಳನ್ನು ನೀವು ನಿಭಾಯಿಸಬೇಕಾಗುವುದು. ಮನಸ್ಸಿನಲ್ಲಿ ಸಾವಧಾನತೆ ಇರುವುದು ಬಹಳ ಮುಖ್ಯ. ನಿಮ್ಮಲ್ಲಿ ಹೇಳುವಷ್ಟು ಅಹಂ ಇಲ್ಲದಿದ್ದರೂ ನಿಮ್ಮನ್ನು ಅಹಂಕಾರಿ ಎನ್ನಬಹುದು. ನೀವು ಕಲಿತ ವಿದ್ಯೆಗೆ ಗೌರವವು ಸಿಗಬಹುದು. ಆಕಸ್ಮಿಕ ತಿರುವುಗಳು ನಿಮ್ಮನ್ನು ವಿಚಲಿತಗೊಳಿಸಬಹುದು. ನಿಮ್ಮ ಅನಾರೋಗ್ಯವು ಅನಾದರಗೊಳ್ಳುವುದು ಬೇಡ. ಹಳೆಯದನ್ನು ಮರೆತು ಹೊಸತನ್ನು ತಂದುಕೊಳ್ಳುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ಕಾನೂನಾತ್ಮಕ ವಿಚಾರಕ್ಕೆ ನಿಮ್ಮ ಒತ್ತು ಹೆಚ್ಚಿರುವುದು. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಿಂದ ಬೇಸರವಾಗಲಿದೆ.

ಕರ್ಕಾಟಕ ರಾಶಿ: ದಾಖಲೆಗಳ ತಯಾರಿಯಲ್ಲಿ ಇಂದಿನ ಸಮಯ ಕಳೆದುಹೋಗುವುದು. ರಾಜಕೀಯ ಪರಿವರ್ತನೆಯು ನಿಮ್ಮಲ್ಲಿ ಅಚ್ಚರಿ ತಂದೀತು. ಇಂದು ನಿಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗಿ ಬರಬಹುದು. ಕುಟುಂಬ ಸದಸ್ಯರ ಬಗ್ಗೆ ನಿಮಗಿದ್ದ ನಿರೀಕ್ಷೆಗಳು ಹುಸಿಯಾಗಬಹುದು. ಬಗ್ಗೆ ನಿಮಗೆ ಕೀಳು ಯೋಚನೆಗಳು ಬರಬಹುದು.‌ ಸಂಗಾತಿಯ ನೀರಸತೆಯಿಂದ ಕೋಪ ಬರಬಹುದು. ಅಪರಿಚಿತರ ಜೊತೆಗಿನ ಗುದ್ದಾಟ ಕಷ್ಟವಾದೀತು. ಬೇಕಾದುದನ್ನು ನೀವು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ‌ಕನಸನ್ನು ಕಂಡಿದ್ದು ಸತ್ಯವಾಗಬಹುದು ಎಂಬ ಆತಂಕವೂ ಉಂಟಾಗಬಹುದು. ಯಾರನ್ನೂ ಸಂದೇಹದಲ್ಲಿ ನೋಡುವುದು ಬೇಡ. ಸಂಗಾತಿಯ ಜೊತೆ ವಿಶ್ವಾಸವನ್ನು ಕಳೆದುಕೊಳ್ಳುವಿರಿ. ಉದ್ಯೋಗವೇ ನಿಮಗೆ ಸದ್ಯದ ನೆಮ್ಮದಿಯ ಸ್ಥಳವಾಗಿದೆ. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಹಲವಾರು ಅಭಿಪ್ರಾಯಗಳು ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದಂತೆ ಬರುವುದು. ಮಕ್ಕಳಿಗಾಗಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವಿರಿ.

ಸಿಂಹ ರಾಶಿ: ವಿವಾಹಕ್ಕೆ ಅಗತ್ಯವಿರುವ ಹಣವನ್ನು ಸಂಗ್ರಹ ಮಾಡುವಿರಿ. ಅಧಿಕಾರ ಮತ್ತು ಸಂಪತ್ತು ಪ್ರದರ್ಶನಕ್ಕೆ ಅಲ್ಲ ಎಂಬುದು ತಿಳಿಯುವುದು. ಇಂದು ಸಾಮಾಜಿಕ ಕೂಟಗಳಲ್ಲಿ ಭಾಗವಹಿಸಲು ಅವಕಾಶ ಸಿಗುವುದು. ನಿಮ್ಮ ಬಹಳ ದಿನದ ಆಸೆಯು ಪೂರ್ಣಗೊಳ್ಳುವ ಸಂದರ್ಭವು ಬರಬಹುದು. ನಿಮ್ಮ ಜೊತೆ ಮಾತನಾಡಲು ಯಾರಾದರೂ ಹಿಂಜರಿಯುವರು. ವಿಮರ್ಶಕರಿಗೆ ಅನೇಕ ಕಡೆಗಳಿಂದ ಆಹ್ವಾನ. ಅನವಶ್ಯಕ ಖರ್ಚಿಗೆ ನೀವು ಕಡಿವಾಣ ಹಾಕಲಿದ್ದೀರಿ. ಆರೋಗ್ಯವನ್ನು ದೃಢ ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತಿರುವಿರಿ. ಅಪರಿಚಿತರ ಪರಿಚಯವು ನಿಮ್ಮ ಉದ್ಯಮಕ್ಕೆ ಹೆಚ್ಚು ಪೂರಕವಾಗಲಿದೆ. ಮಕ್ಕಳಿಂದ ದೂರವಿರುವ ನಿಮಗೆ ಬೇಸರವಾದೀತು. ಉದ್ವೇಗದಿಂದ ಏನನ್ನಾದರೂ ಹೇಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಷ್ಠೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಸ್ವತಃ ‌ನಿಮಗೇ ಇಂದು ಸ್ವಾಭಿಮಾನದ ಅನುಭವವಾಗಲಿದೆ.

ಕನ್ಯಾ ರಾಶಿ: ಮನೆಗೆ ಬೇಕಾದ ಅಲಂಕಾರದ ಉಪಕರಣಗಳನ್ನು ಖರೀದಿಸುವಿರಿ. ಮಕ್ಕಳ ಅನಾರೋಗ್ಯದ ಕಾರಣ ಅವರ ಜೊತೆ ಇರಬೇಕಾಗುವುದು. ನಿಮ್ಮ ಯೋಜನೆಗಳು ಎಲ್ಲವೂ ಬದಲಾಗುವುದು. ಇಂದು ನಿಮ್ಮ ಕೋಪವನ್ನು ಮನೆಯವರು ನೋಡುವರು. ನಿಮ್ಮ ವರ್ತನೆಯು ಬಹಳ ಬೇಸರ ತರಿಸಬಹುದು. ಲಲಿತಕಲೆಯ ಬಗ್ಗೆ ಕಲಿಕೆಯ ಆಸಕ್ತಿ ಬರುವುದು‌ ಸಂಗಾತಿಯ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ನಿಮ್ಮ ಭಾವನೆಗಳನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ವ್ಯಕ್ತಿಯ ಬಳಿ ಹೊರಹಾಕಿ. ಸಣ್ಣ ವಿಚಾರಕ್ಕೂ ಕೋಪಗೊಳ್ಳುವಿರಿ. ಸಾಮಾಜಿಕ‌ ಕಾರ್ಯದಲ್ಲಿ ತೊಡಗಿಕೊಳ್ಳಲು ಒತ್ತಾಯ ಬರಬಹುದು. ವ್ಯಾಪರವು ಮಧ್ಯಮಗತಿಯಲ್ಲಿ ಇರುವುದು. ಕೇಳಿಕೊಂಡರೆ ನಿಮಗೆ ಆಗಬೇಕಾದ ಕೆಲಸವು ಆಗುವುದು. ಅತಿಯಾದ ಕೋಪದಿಂದ ನಿಮ್ಮ ವ್ಯವಹಾರವು ಬುಡಮೇಲಾದೀತು. ನಿಮ್ಮನ್ನು ಹಾಸ್ಯ ಮಾಡುವುದು ನಿಮಗೆ ಹಿಡಿಸದಾಗುವುದು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ಯಾವುದೇ ತೊಂದರೆಯನ್ನು ತೆಗೆದುಕೊಳ್ಳುವುದು ನಿಮಗೆ ಆಗದು.

ತುಲಾ ರಾಶಿ: ಸ್ಥಳಾಂತರವಾಗಲು ಸರಿಯಾದ ಸ್ಥಳ ಸಿಗದು‌. ಚಾಣಾಕ್ಷತನದಿಂದ ಗಿಟ್ಟಿಸಿಕೊಂಡ ಅಧಿಕಾರವು ಸಮಯಮಿತಿಯಲ್ಲಿ ಇರುತ್ತದೆ ಎಂಬ ಜ್ಞಾನವೂ ಅವಶ್ಯಕ. ಆದರೂ ನಿಮ್ಮ ಯೋಚನೆಗಳನ್ನು ನೀವು ಬದಲಿಸುವುದಿಲ್ಲ. ದೇವಸಾನ್ನಿಧ್ಯದ ವೃಕ್ಷದಿಂದ ಬೀಳುವ ಸಾಧ್ಯತೆ ಇದೆ.@ ಮಕ್ಕಳಿಗಾಗಿ ನೀವು ಪರಿವರ್ತನೆಯಾಗುವಿರಿ. ಲೆಕ್ಕಾಚಾರ ವಿಚಾರಗಳು ನಿಮ್ಮ ತಲೆಗೆ ಹೋಗದು. ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಅಭ್ಯಾಸ ಮಾಡಬೇಕಾದೀತು. ನಿಮಗೆ ಬರುವ ಸಮಸ್ಯೆಗಳು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡುವಿರಿ. ಸರ್ಕಾರಿ ಕಾರ್ಯಗಳಿಗಾಗಿ ಓಡಾಟ ಮಾಡಬೇಕಾಗುವುದು. ದಾಂಪತ್ಯದಲ್ಲಿ ಸುಖವು ಮಧ್ಯಮದಲ್ಲಿ ಇರಲಿದೆ. ನಿಮಗೆ ಒದಗುವ ಅನೇಕ ಸಂಕಟಗಳನ್ನು ಅದು ದೂರ ಮಾಡೀತು. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಕೆಲವನ್ನು ನೀವು ಬಿಟ್ಟುಕೊಡುವುದೇ ಸೂಕ್ತ. ನಿಮ್ಮದಲ್ಲ ಎಂಬ ನಿರ್ಧಾರವನ್ನು ಮಾಡಿ ಸುಮ್ಮನಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು.

ವೃಶ್ಚಿಕ ರಾಶಿ: ಅನ್ಯರಿಗೆ ಗೊಂದಲ ತರಿಸಿ ನೀವು ಏನೂ ಗೊತ್ತಿಲ್ಲದಂತೆ ಇರುವಿರಿ. ನಿಮ್ಮ ಸಾಧನೆಯನ್ನು ಹಂಚಿಕೊಳ್ಳುವಿರಿ‌. ಯೋಗ್ಯ ಪುರಸ್ಕಾರ, ಮಾತುಗಳು ಸಿಗಲಿವೆ. ಇಂದು ನಿಮಗೆ ಅತ್ಯಾಕರ್ಷಕ ಅವಕಾಶಗಳು ಅನಿರೀಕ್ಷಿತವಾಗಿ ಸಿಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂತೋಷವು ಬೇಕೆನಿಸುವುದು. ಆರ್ಥಿಕತೆಯನ್ನು ಖರ್ಚಿನ ಮೂಲಕ ಬಂಧುಗಳಿಗೆ ತಿಳಿಸುವಿರಿ. ದುಡುಕಿನ ಕಾರ್ಯಗಳಿಂದ ಸಂಕಟವಾದೀತು. ಮಾತಿನ ನಿಯಂತ್ರಣ ತಪ್ಪಿ‌ ಇನ್ನೊಬ್ಬರಿಂದ ಅಪಮಾನವನ್ನು ಎದುರಿಸಿಬೇಕಾದೀತು. ಎಲ್ಲವೂ ವಿಳಂಬವಾಗುವುದು ಎಂಬ ವ್ಯಥೆಯು ಬಾಧಿಸಬಹುದು. ಹಿರಿಯರನ್ನು ನೀವು ಅಗೌರವದಿಂದ‌‌ ಕಾಣುವಿರಿ. ಸಂಪತ್ತನ್ನು ಸಂಪಾದಿಸಲು ವಿಧವಾದ ಯೋಜನೆಯನ್ನು ಮಾಡುವಿರಿ. ಚರಾಸ್ತಿಯನ್ನು ರಕ್ಷಿಸಿಕೊಳ್ಳುವುದು ಕಷ್ಟವಾದೀತು. ಅಪವಾದವನ್ನು ನೀವು ಎದುರಿಸಲು ಹಿಂಜರಿಯಬಹುದು. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಮತ್ತೆ ಮತ್ತೆ ಬರುವ ಅನಾರೋಗ್ಯಕ್ಕೆ ಮದ್ದಿನ ಅವಶ್ಯಕತೆ ಇದೆ.

ಧನು ರಾಶಿ: ಕೃಷಿಗೆ ಸಂಬಂಧಿಸಿದ ಸಣ್ಣ ಜಾಗವನ್ನು ಖರೀದಿಸುವಿರಿ. ರಸಹೀನವಾದ ಆಹಾರವನ್ನು ಸೇವಿಸುವಿರಿ. ಕಾನೂನಿನಿಂದ ಜಯ ಗಳಿಸುವ ಉತ್ಸಾಹವು ಇಂದು ನಿರುತ್ಸಾಹದಲ್ಲಿ ಕೊನೆಯಾಗಲಿದೆ. ಇಂದು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ಒತ್ತಡ ಹೆಚ್ಚಿರುವುದು. ನಿಮ್ಮ ಪೋಷಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೆಚ್ಚಗಳು ಹೆಚ್ಚಾಗಬಹುದು. ನಿಮ್ಮ ಮಧ್ಯಸ್ತಿಕೆಯಲ್ಲಿ ಮುಖ್ಯ ವಿಚಾರಗಳು ತೀರ್ಮಾನವಾಗುವುದು. ಇಂದು ನೀವು ಬಹಳ ದಿನಗಳಿಂದ ವಾಸವಾಗಿದ್ದ ಮನೆಯನ್ನು ಬದಲಾಯಿಸುವ ಯೋಚನೆ ಮಾಡುವಿರಿ. ನಿಮಗೆ ಬೇಕಾಗಿರುವವರಿಗೆ ನೀವು ನಿಮ್ಮ ವಸ್ತುವನ್ನು ಕೊಡುವಿರಿ. ನಿಮ್ಮ ಸಹಾಯವನ್ನು ಮರೆತಿರುವವರ ಮೇಲೆ ಬೇಸರಗೊಳ್ಳುವಿರಿ. ಸಂಗಾತಿಯ ನಡುವೆ ಹಣದ ವಿಚಾರಕ್ಕೆ ಕಲಹವಾಗಬಹುದು. ಬೇಕಾದಷ್ಟು ಮಾತ್ರ ಮಾತನಾಡಿ, ಆದರೆ ಏನೋ ಹೇಳಿ ಭಾವನೆಯನ್ನು ಹಾಳು ಮಾಡುವುದು ಬೇಡ. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು.

ಮಕರ ರಾಶಿ: ದುರಭ್ಯಾಸದಿಂದ ಅನಾರೋಗ್ಯ ಕಾಡುವುದು. ಆಕರ್ಷಣೆಯಿಂದ ನೀವು ವಿಚಲಿತರಾಗುವಿರಿ. ನೀವು ಎಲ್ಲದಕ್ಕೂ ಅನುಕೂಲ ಯೋಗವನ್ನು ನೋಡುತ್ತ ಕುಳಿತಿರಲು ಆಗದು. ಕೆಲಸವನ್ನು ಆರಂಭಿಸಿ. ನಿಮಗೆ ಬೇಕಾದ ಹಣವನ್ನು ಹೊಂದಿಸಲು ಸೂಕ್ತ ವ್ಯಕ್ತಿಗಳ ಅನ್ವೇಷಣೆ ಮಾಡವಿರಿ. ಕೆಲಸ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದನ್ನು ಖಚಿತಪಡಿಸಿಕೊಳ್ಳಿ. ಅಕಾರಣವಾಗಿ ನೀವು ಉತ್ಸಾಹವನ್ನು ಕಳೆದುಕೊಳ್ಳುವುದು ಸರಿಯಲ್ಲ. ಸಾಲ ಕೊಟ್ಟವರ ಬಗ್ಗೆ ಕೃತಜ್ಞತೆ ಇರಲಿ. ಉನ್ನತ ಅಧಿಕಾರಿಗಳ ಸಹಾಯವನ್ನು ನೀವು ಅನಿವಾರ್ಯವಾಗಿ ಕೇಳಬೇಕಾದೀತು. ಧಾರ್ಮಿಕ‌ವಾದ ನಂಬಿಕೆಯನ್ನು ನೀವು ಬಿಡುವುದಿಲ್ಲ. ದೈವಾನುಕೂಲಕ್ಕೆ ನಿಮ್ಮ ಪ್ರಯತ್ನವೂ ಇರಲಿ. ಸಿಕ್ಕಿದ್ದನ್ನು ಅನುಭವಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಮುಖ್ಯ. ನಿಮ್ಮ ನಮ್ರತೆಯೇ ನಿಮಗೆ ಕಂಟಕವಾದೀತು. ದ್ವೇಷವನ್ನು ಬೆಳೆಸಿಕೊಳ್ಳುವುದು ಅವಾಸ್ತವವೆನಿಸಬಹುದು ನಿಮಗೆ. ಸಹೋದರರ ಬಗೆಗಿನ ನಿಮ್ಮ ನಿಲುವು ಸರಿ ಇರದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು.

ಕುಂಭ ರಾಶಿ: ಅತಿಥಿಗಳ ಆಗಮನದಿಂದ ನಿಮಗೆ ದಿಗಿಲಾಗುವ ಸಾಧ್ಯತೆ. ಇಂದು ನಿಮ್ಮ ವೃತ್ತಿಕ್ಷೇತ್ರದಲ್ಲಿ ನೀವು ಕಲಹಕ್ಕೆ ದಾರಿ ಮಾಡಿಕೊಡುವಿರಿ. ನಿಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರುವುದು ಸಹಜವೇ. ಆದರೆ ಅದನ್ನು ಎದುರಿಸಬೇಕೋ ಶಾಂತಗೊಳಿಸಬೇಕೋ ಎನ್ನುವುದು ನಿಮಗೆ ಸೇರಿದ್ದು. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗುವುದು. ಬದುಕಿನ ಬಂಡಿಯು ನಿಧಾನವಾಗಿ ಸಾಗುವಂತೆ ಕಾಣುತ್ತದೆ. ಯಾರೂ ತಪ್ಪನ್ನು ಒಪ್ಪಿಕೊಳ್ಳದೇ ಇನ್ನೊಬ್ಬರ ಕಡೆ ಕೈ ತೋರಿಸುವಿರಿ. ಆಧಿಕಾರದ ಮಾತ್ರ ನಿಮ್ಮ ವರ್ತನೆಯನ್ನು ಬದಲಿಸಬೇಕೆಂದಿಲ್ಲ. ನಗು ಮೊಗವು ನಿಮಗೆ ಭೂಷಣವಾದೀತು. ಏಕಾಂತವನ್ನು ನೀವು ಇಷ್ಟಪಡುವಿರಿ. ವಾದಿಸಿದ ಮಾತ್ರಕ್ಕೆ ಸುಳ್ಳು ಸತ್ಯವಾಗದು. ಇನ್ನೊಬ್ಬರ ಕೋಪವನ್ನು ನಿವಾರಿಸುವ ಕಲೆ ನಿಮಗೆ ಗೊತ್ತಿದೆ. ನಿಮ್ಮವರು ನಿಮಗೆ ಇಂದು ಬೇಕಾದ ಸಹಾಯವನ್ನು ಮಾಡುವರು. ಸಂತೋಷದ ಕೊನೆಯಲ್ಲಿ ದುಃಖವಿರಲಿದೆ. ಇಬ್ಬರ ನಡುವಿನ ಶೀತಲ ಸಮರವು ತಿಳಿಯಾಗಬಹುದು. ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವಾಗುವುದು.

ಮೀನ ರಾಶಿ: ಅನ್ಯರಿಗೆ ನಿಮ್ಮನ್ನು ಹೋಲಿಸಿ ಅಪಮಾನವನ್ನೂ ಬೇಸರವನ್ನೂ ಮಾಡುವರು. ನಿಮ್ಮ ಮಾನಸಿಕ ತೊಳಲಾಟಕ್ಕೆ ಪೂರ್ಣವಿರಾಮದ ಅವಶ್ಯಕತೆ ಇದ್ದು, ಸರಿಯಾದ ವ್ಯಕ್ತಿಯಿಂದ ಅದು ಸಾಧ್ಯವಾಗುವುದು. ರೋಗ ಉಲ್ಬಣಿಸುವ ಸಾಧ್ಯತೆ ಇದೆ. ನಿಮ್ಮ ಬಹಳ ದಿನಗಳ ಚಿಂತೆಗೆ ಇಂದು ಮುಕ್ತಿ ಸಿಗುವುದು. ನೀವು ಜನರ ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ವ್ಯವಹಾರದಲ್ಲಿ ಅದನ್ನು ಪ್ರಯೋಗಿಸುವಿರಿ. ನಿಮಗೆ ಬೇಕಾದವರು ಇಂದು ನಿಮ್ಮಿಂದ ದೂರವಾಗಬಹುದು.‌ ವಿದ್ಯಾಭ್ಯಾಸದಲ್ಲಿ ಪ್ರಯತ್ನ ಸಾಲದಾಗುವುದು. ಸಹೋದರರು ನಿಮ್ಮ ಮಾತನ್ನು ಮೀರಿ ವರ್ತಿಸುವರು. ನಿಮ್ಮ ಮನಸ್ಸಿಗೆ ಸಮಾಧಾನ ತರುವವರ ಜೊತೆ ಎಲ್ಲವನ್ನೂ ಹೇಳಿಕೊಳ್ಳುವಿರಿ. ವ್ಯಾಪಾರದಿಂದ ನಿಮಗೆ ಸ್ವಲ್ಪ ನಷ್ಟವಾಗಿ ಅನಂತರ ಸ್ವಲ್ಪ ಲಾಭವಾಗಬಹುದು. ಆರ್ಥಿಕ ವಿವಾದವು ದ್ವೇಷವಾಗಿ ಪರಿವರ್ತನೆ ಆಗಬಹುದು. ನಿದ್ರೆಯ ಕಷ್ಟವನ್ನು ನೀವು ಅನುಭವಿಸುವಿರಿ.‌ ಅನಾರೋಗ್ಯದಿಂದ ಸ್ವಲ್ಪ ಆರಾಮೆನಿಸಬಹುದು.

-ಲೋಹಿತ ಹೆಬ್ಬಾರ್ – 8762924271 (what’s app only)

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ