
ಜೂನ್ ತಿಂಗಳ ನಾಲ್ಕನೇ ವಾರ 22-06-2025ರಿಂದ 29-06-2025ರವರೆಗೆ ಇರಲಿದೆ. ಕುಜನು ರವಿ ರಾಶಿಯಲ್ಲಿ ಇರಲಿದ್ದು ಕೇತುವಿನ ಸಂಯೋಗವೂ ಇರುವುದು. ಕುಜನ ಮಿತ್ರ ರಾಶಿಯಾದ ಕಾರಣ ಶುಭಫಲವಿದ್ದರೂ ಸ್ಥಾನಬಲದ ಮೂಲಕ ಫಲವು ಅಶುಭವೂ ಆಗಲಿದೆ. ಉಗ್ರ ಸ್ವರೂಪದ ದೇಯಿಯನ್ನು ಉಪಾಸನೆ ಮಾಡಿ ದೋಷವನ್ನು ಪರಿಹರಿಸಿಕೊಳ್ಳಬಹುದು.
ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಜೂನ್ ತಿಂಗಳ ಕೊನೆಯ ನಿಮಗೆ ಅಶುಭ. ಬೇಡದ ಯೋಚನೆಯಿಂದ ಮನಸ್ಸು ಹಾಳು. ನಿಮ್ಮಿಂದ ಸಹಾಯವನ್ನು ಪಡೆದರೂ ಅದನ್ನು ಮರೆಯುವ ಹಿತಶತ್ರುಗಳು ಇರಬಹುದು. ನಿಮ್ಮ ಕಾರ್ಯವನ್ನು ನಕಾರಾತ್ಮಕವಾಗಿ ತಿಳಿಯಬಹುದು. ಮೇಲಧಿಕಾರಿಗಳ ಜೊತೆ ವಿವಾದ ಮಾಡಿಕೊಳ್ಳುವಿರಿ. ಮಕ್ಕಳಿಂದ ನಾನಾ ರೀತಿಯ ವ್ಯಥೆಯುಂಟಾಗಲಿದೆ. ನಿಮ್ಮ ಸಮಯವು ಏನೂ ಆಗದೇ ಕಳೆದುಹೋಗಬಹುದು. ಹೆಚ್ಚಿನ ಅಧ್ಯಯನವನ್ನು ನೀವು ಇಷ್ಟಪಡುವಿರಿ. ನಿಮ್ಮ ಸಹಾಯವನ್ನು ಕೇಳಿ ಬಂದವರಿಗೆ ನಕಾರಾತ್ಮಕ ಪ್ರತಿಕ್ರಿಯೆ ಕೊಟ್ಟು ಕಳುಹಿಸುವುದು ಬೇಡ. ಕಲಾವಿದರಿಗೆ ಬೆಂಬಲವು ಕಡಿಮೆ ಆದಂತೆ ಅನ್ನಿಸೀತು.
ವೃಷಭ ರಾಶಿ: ರಾಶಿ ಚಕ್ರದ ಈ ರಾಶಿಗೆ ಅಶುಭ. ಸರ್ಕಾರದ ನೌಕರರಿಗೆ ಸ್ಥಾನ ಭ್ರಷ್ಟದ ಭೀತಿ ಉಂಟಾಗಲಿದೆ. ಮಾನಸಿಕವಾಗಿ ನೀವು ದುರ್ಬಲವಾದರೆ ಸ್ವಲ್ಪ ಸಮಯ ಏಕಾಂತವಾಗಿ ಇರಿ. ನಿಮಗೆ ಯಾರಾದರೂ ಸಾಲಕೊಡುವುದಾಗಿ ಬಂದರೆ ಖಂಡಿತ ನಿರಾಕರಿಸಿ. ನಿಮಗೆ ತಪ್ಪಿನ ಅರಿವಾಗಿ ಪಶ್ಚಾತ್ತಾಪವಾಗಲಿದೆ. ಉದರ ಬಾಧೆಯಿಂದ ಸಂಕಟವಾಗಲಿದೆ. ಅದೃಷ್ಟದ ಕೊರತೆ ಇದ್ದು ಪುರುಷಪ್ರಯತ್ನವು ಅಧಿಕವಾಗಿ ಬೇಕಾದೀತು. ನಿಮ್ಮನ್ನು ಯಾರದರೂ ಆಡಿಕೊಂಡಾರು. ಅದನ್ನು ಲೆಕ್ಕಿಸದೆ ನಿಮ್ಮ ಗುರಿಯ ಕಡೆ ಗಮನವಿರಲಿ. ಬುಂಧುವಿಯೋಗದ ದುಃಖವಾಗುವುದು. ಮನೋರಂಜನೆಯಲ್ಲಿ ಹೆಚ್ಚು ಸಮಯ ಕಳೆಯುವಿರಿ. ಗುರುಸ್ತೋತ್ರವನ್ನು ಮಾಡುವುದು ಉತ್ತಮ.
ಮಿಥುನ ರಾಶಿ: ಜೂನ್ ನ ಕೊನೆಯ ವಾರದಲ್ಲಿ ನಿಮಗೆ ಕಾರ್ಯದಲ್ಲಿ ಧೈರ್ಯ ಹೆಚ್ಚಾಗುವುದು. ಗೆಲ್ಲಲಾಗದ್ದನ್ನೂ ಗೊತ್ತಾಗದಂತೆ ಗೆಲ್ಲುವಿರಿ. ನೀವು ಸಂಗಾತಿಯ ಮೇಲೆ ಭಾವನಾತ್ಮಕವಾಗಿ ಇರುವಿರಿ. ಉದ್ಯೋಗದ ನಿಮಿತ್ತ ಸಂಗಾತಿಯನ್ನು ಬಿಡಲು ನಿಮಗೆ ಕಷ್ಟವಾದೀತು. ಆಭರಣ ಖರೀದಿ ಮತ್ತು ಧಾರಣೆಯಿಂದ ಸಂತೋಷ ಸಿಗಲಿದೆ. ಆರ್ಥಿಕ ಸ್ಥಿತಿಯನ್ನು ಬಹಳ ಪರಿಶ್ರಮದಿಂದ ಸರಿಮಾಡಿಕೊಳ್ಳುವಿರಿ. ಇಂದಿನ ಜೀವನದ ಬಗ್ಗೆ ದೈವಜ್ಞರ ಬಳಿ ಕೇಳಿ ಅಗತ್ಯವಾದ ಪರಿಹಾರವನ್ನು ಮಾಡಿಕೊಳ್ಳುವುದು ಒಳ್ಳೆಯದು. ಸಂಗಾತಿಯ ಕಾಡುವ ಮಾತುಗಳನ್ನು ಬಿಟ್ಟು ಮುಂದೆ ಆಲೋಚಿಸಿ. ನಿಮ್ಮದೇ ಆದ ಸ್ನೇಹಿತ ಬಳಗಕ್ಕೆ ನಿಮ್ಮ ಸಹಾಯವು ಸೀಮಿತವಾಗಿರಬಹುದು. ತ್ರಿಪುರಸುಂದರಿಯ ಸ್ತೋತ್ರವನ್ನು ಪಠಿಸಿ.
ಕರ್ಕಾಟಕ ರಾಶಿ: ಈ ವಾರ ನಿಮಗೆ ಮಿಶ್ರಫಲ. ಸಂಪತ್ತಿನ ಆಗಮನವಾದರೂ ನೆಮ್ಮದಿ ಇರದು. ಸರ್ಕಾರದಿಂದ ನಿಮಗೆ ಭಯ ಕಾಣಿಸುವುದು. ಮಾತನ್ನು ತಪ್ಪಾಗಿ ಆಡುವಿರಿ. ಮನೆಯಲ್ಲಿ ಆಡಿದ ಮಾತುಗಳಿಂದ ನೀವು ಹೊರಬರಲು ಸಮಯಬೇಕಾದೀತು. ಸಂಗಾತಿಯ ಮೇಲೆ ಅನುಮಾನದ ದೃಷ್ಟಿ ಇರಲಿದೆ. ಮನಸ್ಸನ್ನು ಹಾಳುಮಾಡಿಕೊಳ್ಳುವ ಸಂಗಾತಿಯನ್ನು ನೀವು ಬಿಡುವುದು ಉತ್ತಮ. ವಿದ್ಯಾಭ್ಯಾಸವು ಪೂರ್ತಿಯಾದರೂ ಕೆಲಸದ ಚಿಂತೆಯು ಕಾಡಬಹುದು. ದೇವರ ಮೊರೆ ಹೋಗದೇ ಬೇರೆ ದಾರಿ ಇಲ್ಲ ಅನ್ನಿಸಬಹುದು. ಸಾಲವು ಸಿಗುವುದು ಎಂದು ನಂಬಿದ್ದರೆ ನಿಮಗೆ ದುಃಖವಾದೀತು. ಸಹೋದ್ಯೋಗಿಗಳ ಮಾತನ್ನು ಕೇಳಿ ನೀವು ಕೆಡುವಿರಿ. ಶನೈಶ್ಚರನಿಗೆ ತೈಲದೀಪವನ್ನು ಬೆಳಗುವುದು ಉತ್ತಮ.
ಸಿಂಹ ರಾಶಿ: ಜೂನ್ ತಿಂಗಳ ಈ ವಾರ ನಿಮಗೆ ಹೇಳಿಕೊಳ್ಳಲಾಗದ ಸಂಕಟ. ಮನಸ್ಸು ಬಹಳ ದುಃಖದಿಂದ ಬಳಲುವುದು. ನಿಮ್ಮವರೂ ಪ್ರೀತಿಯಿಂದ ನಿಮ್ಮನ್ನು ಸೇವಿಸಲಾರರು. ಹೊಸ ಆಲೋಚನೆಯನ್ನು ಮಾಡುವ ಮಾನಸಿಕತೆ ಇದ್ದರೆ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಿರಿ. ಒಮ್ಮೆಲೇ ದೊಡ್ಡ ಯೋಚನೆಯನ್ನು ಕಾರ್ಯಗತಗೊಳಿಸುವುದು ಬೇಡ. ರಕ್ತಕ್ಕೆ ಸಂಬಂಧಿಸಿದ ರೋಗದಿಂದ ಬಾಧೆ. ನೀವು ಮೊದಲು ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಲು ನೀವು ಹಿಂದೇಟು ಹಾಕುವುದು ಒಳ್ಳೆಯದು. ಪೂರ್ಣವಾಗಿ ಅರ್ಥವಾದಮೇಲೆ ಮುಂದುವರಿಯಿರಿ. ದಾಖಲೆಗಳನ್ನು ಇಟ್ಟುಕೊಂಡೇ ಕಾನೂನಿಗೆ ಸಂಬಂಧಿಸಿದ ಹೋರಾಟದಲ್ಲಿ ತೊಡಗಿ. ಅನಧಿಕೃತ ಪತ್ರಗಳಿಗೆ ನೀವು ಉತ್ತರಿಸುವುದು ಬೇಡ.
ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಅಶುಭ. ನಿಮ್ಮದಾದ ಸಂಪತ್ತು ವಸ್ತುಗಳು ಇಲ್ಲವಾಗುವುದು. ಮನಸ್ಸಿನಲ್ಲಿ ಒತ್ತಡದ ಬಿಸಿ, ದೇಹದ ಬಿಸಿ ಎಲ್ಲವೂ ಇರುವುದು. ಬಾಡಿಗೆ ಮನೆಯಲ್ಲಿ ಇದ್ದರೆ ಮನೆಯ ಯಜಮಾನನ ಕಿರಿಕಿರಿಯಿಂದ ಮನೆಯನ್ನು ಬದಲಿಸಬೇಕಾದೀತು. ಪಿತ್ತ ಸಂಬಂಧದ ವ್ಯಾಧಿಯಿಂದ ಪೀಡಿತರಾಗುವಿರಿ. ಹಣದ ಮೂಲವನ್ನು ಬದಲಿಸುವ ಸಾಧ್ಯತೆ ಇದೆ. ಹೆಚ್ಚಿನ ಆದಾಯದತ್ತ ನೀವು ಮುಖ ಮಾಡುವಿರಿ. ಸಂಗಾತಿಯು ನಿಮ್ಮಿಂದ ದೂರವಿದ್ದು ದೂರವಾಣಿಯ ಮೂಲಕ ಮಾತನಾಡಿ ಸಂತೋಷ ಪಡುವಿರಿ. ಕಛೇರಿಯ ಒತ್ತಡವನ್ನು ನೀವು ಕಳೆದುಕೊಳ್ಳಲು ಇಚ್ಛಿಸುವಿರಿ. ನಿಮ್ಮ ದಕ್ಷತೆಯು ಸ್ವಲ್ಪ ಮಟ್ಟಿಗೆ ಕ್ಷೀಣಿಸಬಹುದು. ನಿಮ್ಮ ಮಾತಿಗೂ ಅನಾದರವೂ ಉಂಟಾಗಬಹುದು.
ತುಲಾ ರಾಶಿ: ಜೂನ್ ತಿಂಗಳ ನಾಲ್ಕನೇ ವಾರ ಈ ರಾಶಿಯವರಿಗೆ ಶುಭ. ಸರ್ಕಾರ ಅಥವಾ ಬರಬೇಕಾದ ಕಡೆಯಿಂದ ನಿಮಗೆ ಹಣ ಲಭಿಸಲಿದೆ. ನಿಮಗೆ ಪರಿಹರಿಸಿಕೊಳ್ಳಲು ಕಷ್ಟವಾದ ಸಮಸ್ಯೆಯನ್ನು ನೀವು ಅನುಭವಿಗಳ ಅಥವಾ ಆಪ್ತರ ಜೊತೆ ಹಂಚಿಕೊಳ್ಳಿ. ಭೂಮಿಯ ಖರೀದಿ ಪೂರ್ಣವಾಗುವುದು. ಸಜ್ಜನಿಕೆಯನ್ನು ತೋರಿಸಲು ಹೋಗಿ ಕಷ್ಟಕ್ಕೆ ಸಿಕ್ಕಿಕೊಳ್ಳಬಹುದು. ಬಂಧುಗಳ ಸಲಹೆಯನ್ನು ಸ್ವೀಕರಿಸದೇ ಇದ್ದುದಕ್ಕೆ ನಿಮಗೆ ಬೇಸರವಾಗಬಹುದು. ನೀವು ಆರಂಭಿಸಿದ ಹೊಸ ಉದ್ಯೋಗದಲ್ಲಿ ಬರಬಹುದಾದ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಮಿತಿಯಲ್ಲಿ ಅವುಗಳನ್ನು ಸರಿಮಾಡಿಕೊಳ್ಳಿ. ಆಧಾರವಿಲ್ಲದೇ ಬಂದ ಸುದ್ದಿಗೆ ನೀವು ಭಯಪಡುವ ಅವಶ್ಯಕತೆ ಇಲ್ಲ. ಸಮಯಕ್ಕೆ ಬಂದುದನ್ನು ನೀವು ಸ್ವೀಕರಿಸಬೇಕಾದೀತು.
ವೃಶ್ಚಿಕ ರಾಶಿ: ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಕೆಟ್ಟ ಕೆಲಸವನ್ನು ಮಾಡುವ, ಪರರಿಗೆ ನೋವುಂಟುಮಾಡುವ ಕೆಲಸವನ್ನೇ ಮಾಡುವಿರಿ. ನೀವು ಮಾಡ ಹೊರಟ ಕೆಲಸವು ಮುಂದಕ್ಕೆ ಹೋಗಲಿಸದೆ. ಯೋಗ್ಯರಿಗೆ ದಾನವನ್ನು ಮಾಡಿ. ನಿಮ್ಮವರಿಗೆ ನೀಡಿದ ಹಣವನ್ನು ಪಡೆಯಲು ಬಹಳ ಸಾಹಸ ಪಡುವಿರಿ. ಸಂಗಾತಿಯನ್ನು ನೀವು ಅಲಕ್ಷಿಸುವ ಸಾಧ್ಯತೆ ಇದೆ. ನಿಮ್ಮ ಪೂರ್ಣಬಲವನ್ನೂ ಈ ವಾರ ಬಳಸಲೇಬೇಕಾಗುವುದು. ದೇಹಾಯಾಸವನ್ನು ಅನುಭವಿಸಲೇಬೇಕು. ನಿಮ್ಮಿಂದಾಗದ ಕೆಲಸಕ್ಕೆ ನೀವು ಹೋಗುವಿರಿ. ಕಾಳಜಿ ವಿಚಾರದಲ್ಲಿ ನೀವು ಬಹಳ ಹಿಂದುಳಿದವರಾಗಿದ್ದೀರಿ. ಶ್ರೀಮಂತಿಕೆಯ ಅಮಲು ನಿಮ್ಮನ್ನು ನೆಮ್ಮದಿಯಿಂದ ಇರಲು ಬಿಡದು. ಸಂಗಾತಿಯ ನಡುವೆ ಹಳೆಯ ವಿಚಾರಕ್ಕೆ ಹೆಚ್ಚು ಮತ್ತೆ ಜಗಳವಾಗಲಿದೆ.
ಧನು ರಾಶಿ: ಈ ರಾಶಿಯವರಿಗೆ ಕೊನೆಯ ವಾರದಲ್ಲಿ ನಿಮಗೆ ಅಶುಭ. ಪರಾಜಯವನ್ನು ಕಾಣಬೇಕಾಗುವುದು, ಹಣಕಾಸಿನ ತೊಂದರೆಯಿಂದ ಯೋಜನೆ ಕುಂಟುವುದು. ಕೊಟ್ಟ ಮಾತಿಗೆ ಸರಿಯಾಗಿ ಗುರಿಯನ್ನು ಮುಟ್ಟಲಾಗದು. ನೂತನ ಉದ್ಯೋಗವನ್ನು ಅರಸುತ್ತಿದ್ದು, ಸಿಗದೇ ನೀವೂ ಬಹು ಆತಂಕವಾಗಲಿದೆ. ಈಗಾಗಲೇ ಉದ್ಯೋಗದಲ್ಲಿ ಇರುವವರು ವೇತನವನ್ನು ಹೆಚ್ಚಿಸಲು ವಿನಂತಿಸಲಿದ್ದೀರಿ. ದೇಹವು ದಷ್ಟಪುಷ್ಟವಾಗಿದ್ದರೂ ಬಲಮಾತ್ರ ಇರದು. ದುರ್ಘಟನೆಯನ್ನು ಮನಸ್ಸಿನಿಂದ ಹೊರಹಾಕಲು ಕಷ್ಟವಾದೀತು. ಸಂತೋಷವನ್ನು ನೀವು ಯಾರ ಜೊತೆ ಹಂಚಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ಸಂತೋಷ ನಿಂತಿದೆ. ವಿದ್ಯಾಭ್ಯಾಸದ ಬಗ್ಗೆ ನಿಮಗೆ ಬಹಳ ತುಡಿತವಿದ್ದು ಮಾರ್ಗದರ್ಶನ ಹಾಗೂ ಸಹಾಯದ ಕೊರತೆ ಇರಲಿದೆ. ದೂರವಾಣಿಗೆ ಅಪರಿಚಿತ ಕರೆಗಳು ಬರಬಹುದು.
ಮಕರ ರಾಶಿ: ಈ ವಾರ ನಿಮಗೆ ಅಶುಭ. ಕುಜನು ಅಷ್ಟಮದಲ್ಲಿ ಇದ್ದು ಸಹೋದರಿಂದ ಧನವನ್ನು ಕಳೆದುಕೊಳ್ಳುವಿರಿ. ಅಧಿಕಾರಿಗಳಿಂದ ಅಪಾಮಾನವಾಗಲಿದೆ. ಉತ್ಸಾಹಕ್ಕೆ ಭಂಗ ಬರುವ ಸನ್ನಿವೇಶವನ್ನು ನೀವು ಎದುರಿಸುವಿರಿ. ಒರಟು ಒರಟಾಗಿ ವರ್ತಿಸುವಿರಿ. ನಿಮ್ಮ ಮೂಲ ಸಂಪತ್ತನ್ನು ಖರ್ಚುಮಾಡಬೇಕಾಗಿ ಬರಬಬಹುದು. ಅದರ ಬದಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಮುಂದಾಲೋಚನೆಯು ಹೆಚ್ಚಿನ ಅನುಕೂಲವನ್ನು ಮಾಡಲಿದೆ. ದೃಷ್ಟಿದೋಷವನ್ನು ಪರಿಹರಿಸಿಕೊಳ್ಳುವುದು ಉತ್ತಮ. ನಿಮ್ಮ ಎಂತಹುದೇ ಸಮಸ್ಯೆ ಇದ್ದರೂ ಆಪ್ತರನ್ನು ಭೇಟಿಯಾಗುವುದು ಅನಿವಾರ್ಯವಾಗಬಹುದು. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.
ಕುಂಭ ರಾಶಿ: ರಾಶಿ ಚಕ್ರದ ಈ ರಾಶಿಯವರಿಗೆ ತಿಂಗಳ ಕೊನೆಯ ವಾರ ಅಶುಭ. ಸಂಗಾತಿಯ ಜೊತೆ ನಿರಂತರ ಕಲಹ ಏರ್ಪಡುವುದು. ಅನಗತ್ಯ ಓಡಾಟವನ್ನು ನಿಲ್ಲಿಸಿ. ಇದು ನಷ್ಟದ ಓಡಾಟವೇ ಆಗಲಿದೆ. ದೇಹವನ್ನು ನೀವು ದಂಡಿಸುವಿರಿ. ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸುವುದು. ಕ್ರಮಬದ್ಧವಾಗಿ ಇರದೇ ಇರುವುದರಿಂದ ನೋವುಗಳು ಕಾಣಿಸಿಕೊಳ್ಳಬಹುದು. ಅತಿಯಾದ ದಾಹದಿಂದ ನೀವು ಕಂಗೆಡುವಿರಿ. ಕಛೇರಿಯ ಘಟನೆಯನ್ನು ಮನೆಯಲ್ಲಿ ಹೇಳಿ ಅವರನ್ನು ಆತಂಕಕ್ಕೆ ತಳ್ಳುವವರಿದ್ದೀರಿ. ಕಣ್ಣಿನ ತುರಿಕೆಯಿಂದ ಬೇರೆ ಏನಾದರೂ ಮಾಡಿಕೊಳ್ಳುವಿರಿ. ಸ್ನೇಹಿತರ ಸಹವಾಸದಿಂದ ಧನನಷ್ಟವು ಆಗಲಿದೆ. ಕುಚೋದ್ಯದ ಮನಃಸ್ಥಿತಿ ನಿಮಗೆ ಇಷ್ಡವಾಗದು. ಇದಕ್ಕೆ ಜಗಳವೂ ಆಗಬಹುದು. ಆದಷ್ಟು ತಾಳ್ಮೆಯಿಂದ ಇರುವುದು ಮುಖ್ಯ.
ಮೀನ ರಾಶಿ: ಜೂನ್ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭ. ಕುಜನು ನೀಚಸ್ಥಾನದಿಂದ ದೂರವಾಗಿ ಮಿತ್ರನ ರಾಶಿಯಲ್ಲಿ ಇದ್ದಾನೆ. ಶತ್ರುವಿನಿಂದ ಪೀಡೆ ಇರದೇ ಮನಸ್ಸಿಗೆ ಸಮಾಧಾನವಿರಲಿದೆ. ಬಹಳ ದಿನದಿಂದ ಉಂಟಾದ ಜ್ವರದ ಬಾಧೆಯಿಂದ ಮುಕ್ತಿ ಸಿಗಲಿದೆ. ನೀವು ಅಧ್ಯಾತ್ಮದ ವಿಚಾರದಿಂದ ಪ್ರಭಾವಿತರಾಗಿರುವಿರಿ. ನಿಮ್ಮ ಆತುರದ ನಿರ್ಧಾರದಿಂದ ಕುಟುಂಬಕ್ಕೆ ಸಮಸ್ಯೆಯಾಗಬಹುದು. ಸೋಲುಣ್ಣುತ್ತಿದ್ದ ಕಾರ್ಯದಲ್ಲಿ ಜಯ ಸಿಗುವುದು. ಸಹೋದರನ ಸಹಕಾರದಿಂದ ನೀವು ವಾಹನವನ್ನು ಖರೀದಿಸುವಿರಿ. ಗಂಭೀರವಾದ ವಿಷಯವನ್ನು ಬಹಳ ಲಘುವಾಗಿ ತೆಗೆದುಕೊಳ್ಳುವಿರಿ. ನಿಮ್ಮ ಯೋಜನೆಯ ಸಂಪೂರ್ಣ ಚಿತ್ರಣ ದೊರೆತ ಅನಂತರ ಕಾರ್ಯವನ್ನು ಆರಂಭಿಸಿ, ಅವಸರವಾಗಿ ಬೇಡ.
-ಲೋಹಿತ ಹೆಬ್ಬಾರ್ – 8762924271 (what’s app only)