
ಮೇ ತಿಂಗಳ ಕೊನೆಯ ವಾರ 25-05-2025ರಿಂದ 31-05-2025ರವರೆಗೆ ಇರಲಿದೆ. ಶುಕ್ರನು ಉಚ್ಚ ಸ್ಥಾನದಿಂದ ಮುಂದೆ ಹೋಗಿದ್ದಾನೆ. ಮಿತ್ರನ ಸ್ಥಾನದಲ್ಲಿದ್ದು ಶುಭವನ್ನೇ ಮಾಡುವನು. ಶುಕ್ರದಶೆಯವರಿಗೆ ಶುಭಫಲವೇ ಇದೆ. ಭೋಗವನ್ನು ಅನುಭವಿಸುವಾಗ ಎಚ್ಚರಿಕೆ ಇರಲಿ. ಸಂಪತ್ತಿನ ಹರಿವು ಗೊತ್ತಿರಲಿ. ಶಾಂತರೂಪಿಣಿ ದುರ್ಗಾ ಮಾತೆಯನ್ನು ಉಪಾಸನೆ ಮಾಡಿ.
ಮೇಷ ರಾಶಿ: ಮೇ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭ. ಶುಕ್ರನ ರಾಶಿ ಬದಲಾಗಿದ್ದು, ಈ ರಾಶಿಯನ್ನೇ ಪ್ರವೇಶಿಸಿದ್ದಾನೆ. ಕುಜನು ಇದರ ಅಧಿಪಾತಿಯಾದ ಬಯಕೆ ಅಧಿಕವಾಗಲಿದೆ. ಬೇಡ, ಬೇಕುಗಳ ಬಗ್ಗೆ ವಿವೇಚನೆ ಇಲ್ಲವಾಗುವುದು. ಭೋಗವನ್ನು ಹೆಚ್ಚು ಇಷ್ಟಪಡುವಿರಿ. ನಿಮಗೆ ಸೌಕರ್ಯಗಳು ಹೆಚ್ಚಾಯಿತು ಅನ್ನಿಸಬಹುದು. ಎಲ್ಲ ವಿಷಯ ಸುಖವನ್ನೂ ಪಡೆಯುವ ಮನಃಸ್ಥಿತಿ ನಿಮ್ಮದಾಗಲಿದೆ. ಅತಿಯಾದ ತಂತ್ರಜ್ಞಾನದ ಬಳಕೆಯಿಂದ ದೂರವಿರಲು ಬಯಸಬಹುದು. ಪ್ರೇಮಜೀವನದಲ್ಲಿ ಪ್ರೀತಿಯು ಅತಿಯಾದೀತು. ಇಷ್ಟಪಟ್ಟವರನ್ನು ಪಡೆಯುವ ತಂತ್ರವನ್ನು ಹೂಡಬಹುದು. ಆಪ್ತರಿಗೆಂದು ಉಡುಗೊರೆಯನ್ನು ಸಿದ್ಧಮಾಡಿಕೊಳ್ಳುವಿರಿ. ಅನಗತ್ಯ ಮಾತಿನಿಂದ ನಿಮಗೆ ಸುಸ್ತಾದೀತು.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಶುಭ. ಕೈಲಾಗದೇ ಪಕ್ಕಕ್ಕಿರಿಸಿದ್ದ ವಸ್ತುಗಳಿಂದ ಸಂಪತ್ತು ಸಿಗುವುದು. ನಿಮ್ಮ ಮನಸ್ಸಿಗೆ ವಿರುದ್ಧವಾದ ವಾತಾವರಣವಿದ್ದರೂ ಅದನ್ನು ಮನಸ್ಸಿಗೆ ತೆಗೆದುಕೊಳ್ಳದೇ ಮುನ್ನಡೆಯುವಿರಿ. ನಿಮ್ಮ ಬಳಿಯ ಯಾವ ವಸ್ತುವನ್ನು ಅಪಮೌಲ್ಯ ಮಾಡದೇ ಸರಿಯಾಗಿ ಇರಿಸಿ. ಮಕ್ಕಳಿಗೆ ನೀವು ತೋರಿಸುವ ಪ್ರೀತಿಯು ಖುಷಿ ಕೊಡುವುದು. ಹೊಸ ಬಟ್ಟೆಯನ್ನು ಧರಿಸುವಿರಿ. ಆರೋಗ್ಯವು ಸ್ಥಿರವಾಗಿರಲಿದೆ. ಸಂಗಾತಿಯ ಜೊತೆ ಮಾತನಾಡದೇ ಕಿರಿಕಿರಿಯಾದೀತು. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕಲಿದ್ದೀರಿ. ಆಲಸ್ಯದಿಂದ ಮನೆಯಲ್ಲಿಯೇ ಇರುವಿರಿ. ಅಸಂಬದ್ಧ ಆಲೋಚನೆಗಳು ನಿಮ್ಮನ್ನು ವಿಚಲಿತ ಗೊಳಿಸೀತು.
ಮಿಥುನ ರಾಶಿ: ಈ ರಾಶಿಯವರಿಗೆ ತಿಂಗಳ ಕೊನೆಯ ವಾರದಲ್ಲಿ ಆತಂಕ ದೂರವಾಗುಬುದು. ನಕಾರಾತ್ಮಕ ಯೋಚನೆಯಿಂದ ಹೊರಬರಲು ಸರಿಯಾದ ಅವಕಾಶ. ನಿಮ್ಮನ್ನು ಹಳಿದವರೇ ನಿಮ್ಮ ಸಹವಾಸ ಬಯಸಿ ಬರಬಹುದು. ಗುಣಮಟ್ಟದ ಜೀವನಕ್ಕೆ ಹೋಗಲು ಸತತವಾಗಿ ಮಾಡಿದ ಪ್ರಯತ್ನವು ಫಲ ಕೊಡಬಹುದು. ಅಜಾಗರೂಕತೆಯಿಂದ ಮಾಡಿಕೊಂಡ ಎಡವಟ್ಟಿಗೆ ಸಂಕಟಪಡಬೇಕಾದೀತು. ಕಛೇರಿಯಲ್ಲಿ ಕೆಲಸದಲ್ಲಿ ಖುಷಿಯಿದ್ದು ಬಹಳ ಉತ್ಸಾಹದಿಂದ ಮಾಡುವಿರಿ. ನಿಮ್ಮನ್ನು ಕಂಡು ಇತರರೂ ಖುಷಿಪಟ್ಟಾರು. ಮೇಲಧಿಕಾರಿಗಳ ಹೊಗಳಿಕೆಯು ನಿಮಗೆ ಸಿಕ್ಕೀತು.
ಕರ್ಕಾಟಕ ರಾಶಿ: ದಶಮದಲ್ಲಿ ಸಂಚರಿಸುವ ಶುಕ್ರನಿಂದ ನಿಮಗೆ ಈ ವಾರದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ತೊಂದರೆ ಕೊಡುವನು. ತಂತ್ರಜ್ಞರು ಹೆಚ್ಚು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲು ದೂರದಿಂದ ಹೋಗುವಿರಿ. ಜನರು ನಿಮ್ಮನ್ನು ಬಹಳ ಪ್ರೀತಿಯಿಂದ ನೋಡುವರು. ನಿಮ್ಮದೇ ವಸ್ತುವಾದರೂ ನಿಮಗೆ ಗೊತ್ತಾಗದೇ ಹೋಗುವ ಸಾಧ್ಯತೆ ಇದೆ. ಕುಟುಂಬದ ಜೊತೆ ಸಂತೋಷವನ್ನು ಹಂಚಿಕೊಳ್ಳಲು ಬಯಸುವಿರಿ. ನಿಮ್ಮ ಪ್ರೇಮವು ಬಹಳ ಅಚ್ಚುಕಟ್ಟಾಗಿ ಇರುವುದು. ಯಾರದೋ ಮಾತಿನ ಮೇಲೆ ನಂಬಿಕೆ ಇಟ್ಟುಕೊಳ್ಳುವುದು ಪೂರ್ಣ ಸರಿಯಲ್ಲ.
ಸಿಂಹ ರಾಶಿ: ಮೇ ತಿಂಗಳಲ್ಲಿ ನಿಮಗೆ ಅಶುಭ. ಶುಕ್ರನ ಸಂಚಾರದಿಂದ ಕಲಹ ಹೆಚ್ಚು. ಸಹೋದರ ನಡುವೆ ಕಲಹವಾಗಲಿದೆ. ಭೂಮಿಯನ್ನು ಪಡೆದುಕೊಳ್ಳುವ ಬಗ್ಗೆ ಅನೇಕ ಯೋಜನೆಯನ್ನು ಹಾಕಿಕೊಳ್ಳುವಿರಿ. ನಿಮ್ಮ ಬಳಿ ಇರುವುದನ್ನು ಇನ್ನೊಬ್ಬರಿಗೆ ಕೊಡುವ ಮನಸ್ಸು ಇರದು. ಅಧಿಕವಾದ ಮಾತುಗಳು ನಿಮ್ಮ ಸ್ವಭಾವವನ್ನು ತಿಳಿಸುವುದು. ಈ ವಾರ ಎಷ್ಟೋ ದಿನದ ಕನಸು ನನಸಾಗುವ ಸಾಧ್ಯತೆ ಇದೆ. ನಿಮ್ಮ ಬಗ್ಗೆ ನಿಮಗೇ ಕೆಲವು ವಿಚಾರಕ್ಕೆ ಬೇಸರ ಎನಿಸಬಹುದು. ಸಾಲವನ್ನು ಮರಳಿ ಪಡೆಯಲು ತಂತ್ರವನ್ನು ಬಳಸುವಿರಿ. ಪ್ರೀತಿಯನ್ನು ಹಂಚಿಕೊಳ್ಳಲು ಸಮಯಕ್ಕಾಗಿ ಕಾಯಬಹುದು. ಹೊಸ ತಂತ್ರಜ್ಞಾನವನ್ನು ಕಲಿಯುವ ಮನಸ್ಸಾದೀತು. ಹಿರಿಯರ ಮಾತಿಗೆ ಎದುರಾಡುವುದು ಅಭ್ಯಾಸವಾದೀತು.
ಕನ್ಯಾ ರಾಶಿ: ಇದು ರಾಶಿ ಚಕ್ರದ ಆರನೇ ರಾಶಿಯಾಗಿದ್ದು ಈ ತಿಂಗಳಲ್ಲಿ ನಿಮಗೆ ವಾಹನದಿಂದ ಸುಖ. ಯಾರದ್ದಾದರೂ ಜೊತೆ ಅಥವಾ ಸ್ವಂತ ವಾಹನದಲ್ಲಿ ಓಡಾಟ ಮಾಡುವ ಅವಕಾಶ ಸಿಗಲಿದೆ. ನಿಮ್ಮ ಉಪಕಾರವನ್ನು ಸ್ಮರಿಸುವ ಜನರು ಸಿಗುವರು. ನಿಮ್ಮ ಭಾವನೆಗಳನ್ನು ಹಾಸ್ಯ ಮಾಡುವರು. ಸೌಂದರ್ಯಕ್ಕೆ ಆಕರ್ಷಿತರಾಗುವಿರಿ. ಕೆಲಸದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗದ ಸ್ಥಾನವನ್ನು ಬದಲಿಸುವ ನಿಮ್ಮನ್ನು ಬಿಟ್ಟುಕೊಡಲು ಕಛೇರಿಯು ಸಿದ್ಧವಿರುವುದಿಲ್ಲ. ನೀವೇ ಹಾಕಿಕೊಂಡ ಚೌಕಟ್ಟನ್ನು ನೀವು ಮುರಿಯಬೇಕಾದೀತು. ನಿರ್ಧಾರವಾದ ವಿವಾಹವು ಮುಂದೆ ಹೋದೀತು. ನಿಮ್ಮ ಬಗ್ಗೆಯೇ ನಿಮಗೆ ತಪ್ಪಿತಸ್ಥಭಾವವು ಮೂಡಬಹುದು.
ತುಲಾ ರಾಶಿ: ಮೇ ತಿಂಗಳ ಈ ವಾರದಲ್ಲಿ ನಿಮಗೆ ಅಶುಭ. ಸ್ತ್ರೀ ಸಹವಾಸ ಸಿಕ್ಕರೂ ಉತ್ತಮ ಸ್ತ್ರೀಯ ಸಹವಾಸ ಸಿಗದು. ಸಂಗಾತಿಯು ಬೇರೆ ಯಾವುದೋ ಕಾರಣಕ್ಕೆ ದ್ವೇಷಿಸಿ, ಪೀಡಿಸುವಳು. ಅಂದುಕೊಂಡದ್ದು ಮಾತ್ರ ಸತ್ಯ ಎನ್ನುವ ನಿರ್ಧಾರಕ್ಕೆ ಬರುವುದು ಬೇಡ. ಇನ್ನೊಂದು ಮುಖವನ್ನೂ ನೊಡುವುದು ಉತ್ತಮ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಚಿಂತೆಯಾಗಲಿದೆ. ನೀವು ಶಿಕ್ಷಕರಾಗಿ ಇದ್ದರೆ ನಿಮಗೆ ನಿಮ್ಮ ವಿದ್ಯಾರ್ಥಿಗಳ ಸಹಾಯವು ಸಿಗಲಿದೆ. ಸ್ನೇಹಿತರ ನಿಮ್ಮ ಜೊತೆ ಕಳೆಯಲು ಬಯಸಬಹುದು. ನೆರೆಹೊರೆಯವರು ನಿಮ್ಮನ್ನು ಗಮನಿಸಬಹುದು. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ದುರಭ್ಯಾಸವನ್ನು ರೂಢಿಯಾಗಲಿದೆ.
ವೃಶ್ಚಿಕ ರಾಶಿ: ಈ ತಿಂಗಳ ಕೊನೆ ವಾರದಲ್ಲಿ ನಿಮಗೆ ಅಶುಭ. ಶುಕ್ರನ ಸಂಚಾರವು ನಿಮಗೆ ಸಂಕಟವನ್ನು ತರಲಿದೆ. ಶತ್ರುಗಳಿಂದ ದೈಹಿಕ ಹಾನಿಯಾಗಬಹುದು. ಅತಿಯಾದ ಹರಟೆಯಿಂದ ಜೊತೆಗಾರರಿಗೆ ಕಿರಿಕಿರಿ. ಕಛೇರಿಯ ಕೆಲಸದ ಒತ್ತಡದಲ್ಲಿ ಮನೆಯ ಕೆಲಸಗಳು ಮರೆಯಾಗಬಹುದು. ಜೀವನೋಪಾಯಕ್ಕೆ ಯಾವುದಾದರೂ ಇನ್ನೊಂದು ವೃತ್ತಿಯನ್ನು ಆಶ್ರಯಿಸುವಿರಿ. ಅವಸರದಲ್ಲಿ ಏನಾನ್ನಾದರೂ ಮಾಡಿಕೊಳ್ಳಬೇಕಾದೀತು. ಇನ್ನೊಬ್ಬರ ಬದುಕನ್ನು ನೋಡಿ ನಗುವುದು ಬೇಡ. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ವರ್ತನೆಯು ಬೇರೆಯವರಿಗೆ ಸರಿಯಾಗದು.
ಧನು ರಾಶಿ: ಈ ರಾಶಿಯವರಿಗೆ ಮೇ ಕೊನೆಯ ವಾರದಲ್ಲಿ ಶುಕ್ರನ ಬದಲಾವಣೆಯಿಂದ ಪುತ್ರಪ್ರಾಪ್ತಿಯ ವಾರ್ತೆ ಕೇಳುವಿರಿ. ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಬಹುದು. ನಿರ್ಲಕ್ಷ್ಯ ಮಾಡದೇ ಚಿಕಿತ್ಸೆ ನೀಡಿ. ಉದ್ಯೋಗದಲ್ಲಿ ಉನ್ನತ ಸ್ಥಾನ ಸಿಗಲು ಅವಕಾಶಗಳಿದ್ದರೂ ಕಾಲಕ್ಕಾಗಿ ಕಾಯಬೇಕಾಗಿದೆ. ವ್ಯಕ್ತಿಗತ ದೋಷಗಳನ್ನು ಮರೆತು ಮುನ್ನಡೆಯಿರಿ. ಸಮೂಹವನ್ನು ಮುನ್ನಡೆಸುವ ನಾಯಕರಾಗುವಿರಿ. ನಿಮ್ಮ ಸುಕೃತವು ಕಾಪಾಡಲಿದೆ. ನಿಮ್ಮ ದೃಷ್ಟಿಯನ್ನು ಶುದ್ಧ ಮಾಡಿಕೊಳ್ಳುವುದು ಉತ್ತಮ. ಸಾಮಾಜಿಕ ಚಟುವಟಿಕೆಗಳು ನಿಮಗೆ ಯಶಸ್ಸನ್ನು ತಂದು ಕೊಡುವುದು. ದೀರ್ಘಕಾಲದ ಹೂಡಿಕೆಗೆ ನಿಮ್ಮ ಗಟ್ಟಿಯಾದ ನಿಲುವಿರಲಿ.
ಮಕರ ರಾಶಿ: ಮೇ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಮಿತ್ರರ ಲಾಭವಿದೆ. ಆದರೆ ಅವರು ಒಳ್ಳೆಯವರಾಗಿರಲಾರರು. ಏನೋ ಉದ್ದೇಶವನ್ನು ಇಟ್ಟುಕೊಂಡು ಬಂದು, ಶತ್ರುತ್ವವನ್ನು ತಂದುಕೊಳ್ಳುವರು. ಯೋಚನೆ ಇಲ್ಲದೇ ಮುಂದಾದರೆ ತೊಂದರೆ. ನಿಮ್ಮ ಉತ್ಸಾಹವನ್ನು ಅಧಿಕಗೊಳಿಸುವ ಘಟನೆಗಳು ಇರಬಹುದು. ನಿಮ್ಮ ವಾಹನವನ್ನು ಮಾರಾಟ ಮಾಡಲಿದ್ದೀರಿ. ಹಣವು ಸಿಗದೇ ಅದೆರ ಬಗ್ಗೆ ಮೋಹವು ಕಡಿಮೆಯಾಗುವುದು. ಪ್ರೇಮಿಗಳು ದೂರಾಗುವ ಸಂಭವವಿದೆ. ನಿವೃತ್ತರಿಗೆ ಸಮಯವನ್ನು ಕಳೆಯಲು ಬಹಳ ಕಷ್ಟವಾದೀತು. ನಿಮ್ಮ ಫಲಿತಾಂಶವು ನಿನಗೆ ಖುಷಿಕೊಡುವುದು. ಭಿನ್ನಾಭಿಪ್ರಾಯಗಳು ಸಹಜವಿದ್ದರೂ ಅದನ್ನು ಉಳಿಸಿಕೊಳ್ಳುವುದು ಬೇಡ.
ಕುಂಭ ರಾಶಿ: ಈ ತಿಂಗಳಲ್ಲಿ ಶುಕ್ರನು ತೃತೀಯ ಸ್ಥಾನಕ್ಕೆ ಹೋಗಲಿದ್ದು, ನಿಮಗೆ ಸಹೋದರ ಅಥವಾ ಸಹೋದರನಿಂದ ಧನಾಗಮನವಾಗವುದು. ಇನ್ನು ಉದ್ಯಮ ನಡೆಸುತ್ತಿರುವವರಿಗೆ ಬಂಡವಾಳ ಹಾಕುವ ವ್ಯಕ್ತಿಗಳು ಸಿಗುವರು. ಮಾನಸಿಕವಾಗಿ ಆಗುವ ನೋವನ್ನು ಶಮನ ಮಾಡಿಕೊಳ್ಳಲು ದೂರಪ್ರಯಾಣ ಮಾಡಬಹುದು. ಹೊಸ ಉದ್ಯಮವನ್ನು ಸೃಷ್ಟಿಸಿದವರಿಗೆ ಲಾಭ. ನಿಮಗೆ ಪರಿಶ್ರಮದ ಕೆಲಸವು ಸಿಕ್ಕಿ ಅದರಲ್ಲಿ ಹೆಚ್ಚು ಆನಂದ ಪಡುವಿರಿ. ಶ್ರಮ ಹೆಚ್ಚಿದ್ದರೂ ಸಂಪತ್ತೂ ತಕ್ಕಮಟ್ಟಿಗೆ ಬರಬಹುದು. ತಂದೆ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ಅದನ್ನು ಕುಳಿತು ಬಗೆ ಹರಿಸಿಕೊಳ್ಳುವುದು ಉತ್ತಮ. ಸುಮ್ಮನೇ ವಾಗ್ವಾದಗಳು ಬೇಡ. ಹೊಂದಣಿಕೆಯಿಂದ ಇತ್ಯರ್ಥ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಅಭ್ಯಾಸಕ್ಕಾಗಿ ದೂರದ ಊರಿಗೆ ಹೋಗಬೇಕಾಗಬಹುದು.
ಮೀನ ರಾಶಿ: ಈ ವಾರ ಶುಕ್ರನು ಉಚ್ಚಸ್ಥಾನವನ್ನು ಬಿಟ್ಟು ದೂರ ಸಾಗುವನು. ದ್ವಿತೀಯದಲ್ಲಿ ಇರುವ ಕಾರಣ ಹಣಕಾಸಿನ ವ್ಯವಹಾರ ಕೈಗೂಡುವುದು. ಬರಬೇಕಾದ ಹಣವು ಬರಲಿದೆ. ಹೂಡಕೆಯಿಂದ, ಬಂಡವಾಳದ ಹಣವು ನಿಮ್ಮದಾಗಬಹುದು. ಆರ್ಥಿಕತೆಗೆ ಸಂಬಂಧಿಸಿದಂತೆ ಮನಸ್ತಾಪಗಳು ಬರಬಹುದು. ಮಾರಾಟ ಮಾಡುವ ವಸ್ತುವು ಉತ್ತಮ ಬೆಲೆಗೆ ಹೋಗುವುದು. ಕಾರ್ಯಗಳಲ್ಲಿ ಹಿನ್ನಡೆಯಾಗಲಿದೆ. ಮಾಡಬೇಕು ಎಂದುಕೊಂಡ ಕೆಲಸಗಳು ಆರಂಭವಾಗದೇ ಇರಬಹುದು. ವೈವಾಹಿಕ ಜೀವನಕ್ಕೆ ಕಾಲಿಡಲು ಆತುರ ಬೇಡ. ನಿಮಗೆ ಇಷ್ಟವಾದ ಕೆಲಸವನ್ನು ಮಾಡುವಿರಿ. ನಿಮಗೆ ಎಲ್ಲ ವಿಚಾರದಲ್ಲಿಯೂ ಹಿಂಜರಿಕೆ ಉಂಟಾಗಲಿದೆ. ದೈವಜ್ಞರ ಸಲಹೆ ಪಡೆದು ಸೂಕ್ತ ಪರಿಹಾರವನ್ನು ಕಂಡುಕೊಳ್ಳಿ. ಮನಸ್ಸಿನಲ್ಲಿ ಏಕಾಗ್ರತೆಯ ಕೊರತೆ ಕಾಣಲಿದೆ.
-ಲೋಹಿತ ಹೆಬ್ಬಾರ್ – 8762924271 (what’s app only)