Weekly Love Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ

ಡಿಸೆಂಬರ್ 28 ರಿಂದ ಜನವರಿ 3 ರ ವಾರದ ಪ್ರೇಮ ಭವಿಷ್ಯ ಇಲ್ಲಿದೆ. ಹೊಸ ವರ್ಷದ ಆರಂಭದೊಂದಿಗೆ ಗ್ರಹಗಳ ಸಂಚಾರವು ಪ್ರೇಮ ಸಂಬಂಧಗಳ ಮೇಲೆ ಪ್ರಭಾವ ಬೀರಲಿದೆ. ಶುಕ್ರ, ಕುಜ, ಸೂರ್ಯ ಮತ್ತು ಬುಧ ಗ್ರಹಗಳ ಸ್ಥಾನದಿಂದ ಪ್ರೀತಿ, ವಿವಾಹದಲ್ಲಿ ಯಶಸ್ಸು ಅಥವಾ ಸವಾಲುಗಳು ಎದುರಾಗಬಹುದು. ಪ್ರತಿಯೊಂದು ರಾಶಿಯೂ ಪ್ರೀತಿಯಲ್ಲಿ ಹೇಗೆ ಮುನ್ನಡೆಯಬೇಕು ಎಂದು ಅರಿತುಕೊಂಡು ಫಲ ಪಡೆಯಬಹುದು.

Weekly Love Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಪ್ರೇಮ - ಪ್ರೀತಿ ಭವಿಷ್ಯ ತಿಳಿಯಿರಿ
Weekly Love Horoscope
Edited By:

Updated on: Dec 26, 2025 | 1:06 PM

ಡಿಸೆಂಬರ್ 28ರಿಂದ ಜನವರಿ 3ರ ವರೆಗೆ ಈ ವಾರವಿದ್ದು, ಹೊಸ ವರ್ಷವೂ ವಾರದ ಮಧ್ಯದಲ್ಲಿ ಆರಂಭವಾಗಲಿದೆ. ಅನೇಕ ಗ್ರಹಗಳು ಧನು ರಾಶಿಯಲ್ಲಿ ಇರಲಿವೆ. ಪ್ರೇಮ, ವಿವಾಹ, ಭೋಗ, ಸುಖಗಳಿಗೆ ಪ್ರಸಿದ್ಧನಾದ ಶುಕ್ರನು ಗುರುವಿನ ಸ್ಥಾನದಲ್ಲಿ ಕುಜ, ಸೂರ್ಯ, ಬುಧರ ಜೊತೆ ಇರಲಿದ್ದು, ವಿರೋಧ, ಸಂಧಾನ, ತ್ಯಾಗ, ಅಧಿಕಾರ, ಮಾತುಗಳ ಮೂಲಕ ಪ್ರೀತಿ ಪ್ರೇಮಗಳನ್ನು ಸಫಲ ಮಾಡುವನು. ಯಾರಿಗೆ ಯಾವ ದಾರಿ ಎಂಬುದನ್ನು ಅರಿತು ಮುಂದುವರಿದರೆ ಪ್ರೇಮ‌ ಫಲದಾಯಕ. ಇಲ್ಲವಾದರೆ ಕಷ್ಟ. ಎಲ್ಲರಿಗೂ ಹೊಸ ವರ್ಷದ ಮೊದಲ‌ ವಾರ ಶುಭ ತರಲಿ.

ಮೇಷ ರಾಶಿ:

ಈ ರಾಶಿಯವರಿಗೆ ಕೊನೆಯ ವಾರ ವಿವಾದಗಳು ಸಣ್ಣ ಮಾತಿನಿಂದಲೇ ಹುಟ್ಟಬಹುದು, ಆದರೆ ಪ್ರೀತಿಯ ಕಾಳಜಿ ಅವನ್ನು ಶಮನಗೊಳಿಸುತ್ತದೆ. ವಿವಾಹ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಸಾಧ್ಯ. ಪುತ್ರನಿಂದ ಸಂತೋಷ ಸಿಗಲಿದೆ. ಪ್ರಿಯರಿಗೆ ಉಡುಗೊರೆ ನೀಡುವ ಮನಸ್ಸು ಬರಲಿದೆ. ಈ ವಾರ ಅಸಮಾಧಾನದಲ್ಲೂ ಪ್ರೀತಿಗೆ ತನ್ನದೇ ಆದ ಸ್ಥಳ ಉಳಿಯುತ್ತದೆ.

ವೃಷಭ ರಾಶಿ:

ಎರಡನೇ ರಾಶಿಯವರಿಗೆ ಈ ವಾರ ವಿವಾಹದಿಂದ ಜೀವನದಲ್ಲಿ ಭದ್ರತೆಯ ಭಾವ ಬರಲಿದೆ. ಪ್ರೀತಿಯನ್ನು ಶಬ್ದಕ್ಕಿಂತ ಕ್ರಿಯೆಯಲ್ಲಿ ತೋರಿಸಿ, ಅರ್ಥಮಾಡಿಸುವಿರಿ. ಪುತ್ರನ ಸಾಧನೆ ಹೆಮ್ಮೆ ತರಲಿದೆ. ಈ ವಾರ ವಿವಾದಗಳು ತಾನಾಗಿಯೇ ಕರಗಿಹೋಗುತ್ತವೆ. ನಿಮ್ಮೊಳಗೆ ಸಮಾಧಾನ ಇದ್ದರೂ ಹೃದಯದ ಬಂಧ ಸಡಿಲಾಗುವುದು.

ಮಿಥುನ ರಾಶಿ:

ಈ ರಾಶಿಯವರಿಗೆ ಉಡುಗೊರೆಯ ವಿನಿಮಯದಿಂದ ಸಂಬಂಧ ಭಾವ ಹಂಚಿಕೆಯಗಲಿದೆ. ಪ್ರೀತಿಯಲ್ಲಿ ಮಾತು ಮುಖ್ಯ ಪಾತ್ರ ವಹಿಸುತ್ತದೆ. ವಿವಾಹ ಕುರಿತು ಚರ್ಚಿಸದೇ ಮುಂದೂಡುವಿರಿ. ವಿವಾದಗಳಿಗೆ ತಾತ್ಕಾಲಿಕ ವಿರಾಮವನ್ನು ಹೇಳಿ. ಸಾರ್ವಜನಿಕವಾಗಿ ಮೌನ ವಹಿಸುವುದು ಮುಖ್ಯ. ಪುತ್ರನ ಭವಿಷ್ಯದ ವಿಚಾರದಲ್ಲಿ ಚಿಂತೆ. ಮನಸ್ಸಿದ್ದರೆ, ಅಶಾಂತಿಯಲ್ಲೂ ಪ್ರೀತಿಗೆ ಜಾಗ ಸಿಗುತ್ತದೆ.

ಕರ್ಕಾಟಕ ರಾಶಿ:

ಚಂದ್ರನ ಈ ರಾಶಿಯವರಿಗೆ ಪ್ರೀತಿಯ ಕಾಳಜಿ ಆಳವಾಗಿದ್ದು, ಅರ್ಥಮಾಡಿಕೊಳ್ಳಲಾಗದು. ಮಕ್ಕಳಿಂದ ಮನಸ್ಸಿಗೆ ನೆಮ್ಮದಿ ಬರುವುದು. ವಿವಾಹದ ಸಂಬಂಧ ಆತ್ಮೀಯವಾಗುತ್ತಾ ಹೋಗುವುದು. ಈ ವಾರ ಯಾವುದೋ ವಿವಾದಗಳು ಮತ್ತೇನನ್ನೋ ಹೊರಹಾಕಲಿದೆ. ಉಡುಗೊರೆಗೆ ಪ್ರತಿಯಾಗಿ ಮತ್ತೇನಾದರೂ ಕೊಡುವ ಸಾಧ್ಯತೆ ಇದೆ. ಅಪ್ರಕಟಿತ ಪ್ರೀತಿಯು ಇಲ್ಲವೆಂದು ಭಾವಿಸಲಾಗದು.

ಸಿಂಹ ರಾಶಿ:

ಈ ವಾರ ನಿಮಗೆ ವಿವಾಹ ಸಂಬಂಧದಲ್ಲಿ ಗೌರವ ಮತ್ತು ಪ್ರೀತಿ ಹೆಚ್ಚಾಗುತ್ತದೆ. ಪ್ರೀತಿಯಲ್ಲಿ ನೀವು ಮುಖ್ಯ ಎನ್ನುವುದನ್ನು ಪ್ರತಿಪಾದಿಸುವಿರಿ. ಪುತ್ರನ ಸಾಧನೆಗೆ ಸಂತೋಷ ವ್ಯಕ್ತವಾಗಲಿದೆ. ವಿವಾದಗಳಲ್ಲಿ ನಿಮ್ಮ ಮಾತು ಅನರ್ಥವನ್ನು ಉಂಟುಮಾಡಬಹುದು. ನೀವು ಕೊಡುವ ವಸ್ರುಗಳ ಮೂಲಕ ಭಾವನೆ ವ್ಯಕ್ತವಗಲಿದೆ.

ಕನ್ಯಾ ರಾಶಿ:

ಕೊನೆಯ ವಾರದಲ್ಲಿ ವಿವಾದಗಳು ಇಬ್ಬರ ಸಣ್ಣ ವಿಚಾರಗಳಿಂದ ಹುಟ್ಟಬಹುದು. ಪ್ರೀತಿಯಲ್ಲಿ ಎಲ್ಲವನ್ನೂ ತುಲನಾತ್ಮಕವಾಗಿ ಕಂಡರೆ ನೆಮ್ಮದಿ ಸಿಗುವುದು ಕಷ್ಟ. ಈ ವಾರ ಪುತ್ರನ ಅನಾರೋಗ್ಯ ಅನ್ಯರಿಂದ ಗಮನಕ್ಕೆ ಬರುತ್ತದೆ. ದಾಂಪತ್ಯದಲ್ಲಿ ಸಣ್ಣ ಭಿನ್ನಾಭಿಪ್ರಾಯ. ಸಮಯ ಪಡೆದು ಸಮಾಧಾನದಿಂದ ಸಮಸ್ಯೆ ಬಗೆಹರಿಯಲಿ.

ತುಲಾ ರಾಶಿ:

ಕೊನೆಯ ವಾರದಲ್ಲಿ ಪ್ರೀತಿಯಲ್ಲಿ ಸಮತೋಲನ ಅವಶ್ಯಕ. ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಉಡುಗೊರೆ ವಿನಿಮಯ ಸಂಬಂಧಕ್ಕೆ ಮಾಧುರ್ಯ ಸಿಗಲಿದೆ. ವಿವಾಹ ಜೀವನದಲ್ಲಿ ಸುಖಮಯವಾಗಿ ಮುನ್ನಡೆಯುವುದು. ವಿವಾದಗಳು ಹಿರಿಯರ ಸಮ್ಮುಖದಲ್ಲಿ ತ್ವರಿತವಾಗಿ ಶಮನ. ಒತ್ತಡದ ನಡುವೆಯೂ ಪ್ರೀತಿಗೆ ನ್ಯಾಯ ನೀಡುವಿರಿ.

ವೃಶ್ಚಿಕ ರಾಶಿ:

ಈ ವಾರ ನಿಮಗೆ ಹಲವರ ಪ್ರೀತಿಯಲ್ಲಿ ಆಳವಾದ ಆಕರ್ಷಣೆ ಉಂಟಾಗಲಿದೆ. ವಿವಾದಗಳು ತೀವ್ರವಾಗುವ ಸಾಧ್ಯತೆ ಇದ್ದು, ನಿಮ್ಮ ಎಚ್ಚರಿಕೆ ಮುಖ್ಯ. ಈ ವಾರ ನಿಮ್ಮ ವಿವಾಹದ ಕುರಿತು ಗಂಭೀರ ಚರ್ಚೆ. ಈ ವಾರ ಇಷ್ಟದ ಉಡುಗೊರೆಯು ಸ್ನೇಹದ ಭಾವನಾತ್ಮಕ ಅರ್ಥ ಪ್ರಕಟಿಸುತ್ತದೆ. ಮಕ್ಕಳ ಆಸೆ ಅತಿಯಾಗಲಿದೆ. ಪ್ರೀತಿಯ ತೀವ್ರತೆ ಕಡಿಮೆಯಾಗುವುದು.

ಧನು ರಾಶಿ:

ಒಂಭತ್ತನೇ ರಾಶಿಯವರಿಗೆ ಈ ವಾರ ಪ್ರೀತಿಯಲ್ಲಿ ಉತ್ಸಾಹ ಮತ್ತು ಮುಕ್ತತೆ ನಿಮ್ಮ ಅನುಭವಕ್ಕೆ ಬರಲಿದೆ. ಮಕ್ಕಳಿಂದ ಪ್ರಿಯ ಶುಭವಾರ್ತೆ ಸಿಗುವುದು. ವಿವಾದದ ಪ್ರಮಾಣವು ಬಂಧುಗಳ ಆಗಮನದಿಂದ ಕಡಿಮೆಯಾಗಲಿದೆ. ವಿವಾಹ ವಿಚಾರವನ್ನು ಮುಂದೂಡುವಿರಿ. ಒತ್ತಾಯದ ಪ್ರೀತಿಗೆ ಆಯಸ್ಸು ಕಡಿಮೆ‌‌.

ಮಕರ ರಾಶಿ:

ಈ ವಾರ ವಿವಾಹದಿಂದ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಗುತ್ತದೆ. ಪ್ರೀತಿಯನ್ನು ಮಾತಿನಲ್ಲಿ ಹೇಳದೇ ಕಾರ್ಯರೂಪದಲ್ಲಿ ತೋರಿಸುವಿರಿ. ವಿವಾದಗಳು ನಿಧಾನವಾಗಿ ಹೊಸ ತಿರುವು ಪಡೆಯಬಹುದು. ಸಮಾಧಾನದಲ್ಲೂ ಪ್ರೀತಿಗೆ ಸ್ಥಾನ ಇರದು. ಬೇಸರ ವ್ಯಕ್ತವಾಗಲಿದೆ.

ಕುಂಭ ರಾಶಿ:

ಶನಿಯ ರಾಶಿಗೆ ಪ್ರೀತಿಯಲ್ಲಿ ಸ್ನೇಹಭಾವ ಅಧಿಕವಾಗಿ ಕಾಣಿಸುವುದು. ವಿವಾದಗಳನ್ನು ಬುದ್ಧಿವಾದದಿಂದ ಪರಿಹರಿಸಲು ಸಾಧ್ಯವಾಗದು. ವಿವಾಹಕ್ಕಾಗಿ ಓಡಾಟ ಸುತ್ತಾಟ ಮಾಡುವಿರಿ‌. ಮಕ್ಕಳ ಜೊತೆ ಗಂಭೀರವಾದ ಮಾತುಕತೆ ನಡೆಯಲಿದೆ. ಶಾಂತಿಯಿದ್ದರೆ ಪ್ರೀತಿಗೆ ಹೊಸ ರೂಪ ಸಿಗುತ್ತದೆ.

ಮೀನ ರಾಶಿ:

ಈ ವಾರ ಪ್ರೀತಿಯಲ್ಲಿ ಕರುಣೆ ಮತ್ತು ತ್ಯಾಗವಿರಲಿ. ಯಾರದೋ ಮಾತಿನಿಂದ ಮನಸ್ತಾಪ ಕಾಣಿಸಿಕೊಳ್ಳುವುದು. ಪ್ರೀತಿಯನ್ನು ಅಳೆಯುದು ಸರಿಯಲ್ಲ‌. ಆಕಸ್ಮಿಕವಾಗಿ ಹಳೆಯ ಪ್ರೇಮಿಯ ಭೇಟಿಯಾಗಲಿದೆ. ಪ್ರೀತಿಯನ್ನು ಭದ್ರವಾಗಿಸಿಕೊಳ್ಳಲು ಪ್ರಯತ್ನಿಸಿ.

– ಲೋಹಿತ ಹೆಬ್ಬಾರ್ – 8762924271 (what’s app only)