ಮಕ್ಕಳಿಗೆ ವಿವಾಹ ಮಾಡಿಸಬೇಕು ಎನ್ನುವುದು ಎಲ್ಲ ತಂದೆ ತಾಯಿಗಳ ಆಸೆ. ಆದರೆ ಸರಿಯಾಗಿ ಗಂಡು ಸಿಗುವುದಿಲ್ಲ, ಹೆಣ್ಣು ಸಿಗುವುದಿಲ್ಲ ಎಂಬ ಕೊರಗೂ ಇದ್ದೇ ಇದೆ. ಆದರೂ ವಿವಾಹ ಮಾಡಬೇಕೆಂಬ ಛಲ ಮಾತ್ರ ಕಡಿಮೆಯಾಗದು. ನಾವು ಗಟ್ಟಿಯಿರುವಾಗಲೇ ಮಕ್ಕಳಿಗೆ ಒಂದು ದಾರಿ ತೋರಿಸಬೇಕು ಎನ್ನುವುದೇ ಎಲ್ಲ ತಂದೆ ತಾಯಿಗಳ ಕನಸು. ಅದಕ್ಕೆ ಕಾಲವೂ ಕೂಡಿ ಬರಬೇಕು. ಗ್ರಹಗತಿಗಳ ಅನುಕೂಲತೆಯಿಂದ ಅಥವಾ ದೈವಾನುಕೂಲದಿಂದ ಅದು ಸಾಧ್ಯ.
ದೈವಾನುಕೂಲವನ್ನು ಗೊತ್ತು ಮಾಡಿಕೊಳ್ಳುವುದು ಗ್ರಹಗಳ ಮೂಲಕ. ಈ ವರ್ಷ ಯಾವ ರಾಶಿ ವಿವಾಹವನ್ನು ಮಾಡಿಕೊಳ್ಳುತ್ತಾರೆ ಅಥವಾ ಮಾಡಿಕೊಳ್ಳುವ ಅವಕಾಶ ಇದೆ ಎನ್ನುವುದನ್ನು ನೋಡೋಣ.
ಇವರಿಗೆ ಈ ವರ್ಷ ವಿವಾಹ ಮಾಡಿಕೊಳ್ಳಬಹುದು. ಪ್ರೇಮದಲ್ಲಿ ಇದ್ದರೆ ಹಿರಿಯರ ನಿಶ್ಚಯದೊಂದಿಗೆ ಈ ಅವಕಾಶವನ್ನು ಮಾಡಿಕೊಳ್ಳಬಹುದು. ಸಂಗಾತಿಯನ್ನು ಹುಡುಕುತ್ತಿದ್ದರೆ ಅವರಿಗೂ ಸಿಗುವುದು. ಪಶ್ಚಿಮ ದಿಕ್ಕಿನ ಕಡೆಯಿಂದ ನಿಮಗೆ ಸಂಗಾತಿಯ ಲಾಭವಾಗಲಿದೆ. ನಗರ ಪ್ರದೇಶದ ಸಂಗಾತಿಯನ್ನು ನೀವು ವರಿಸುವ ಸಂದರ್ಭವು ಬರುವುದು. ಲಕ್ಷಣವುಳ್ಳ ಸಂಗಾತಿಯ ಪ್ರಾಪ್ತಿಯಾಗಲಿದೆ.
ಈ ರಾಶಿಯವರೂ ಕೂಡ ಸಂಗಾತಿಯ ಅನ್ವೇಷಣೆ ಮಾಡುತ್ತಿದ್ದರೆ ವಿವಾಹವಾಗಬಹುದು. ಪ್ರೇಮ ವಿವಾಹಕ್ಕೂ ಈ ವರ್ಷ ಅವಕಾಶವಿದೆ. ದಕ್ಷಿಣ ದಿಕ್ಕಿನಿಂದ ಸಂಗಾತಿಯ ಪ್ರಾಪ್ತಿಯಾಗುವುದು. ಗ್ರಾಮೀಣ ವಾಸಿಯಾದವರನ್ನು ಸಂಗಾತಿಯಾಗಿ ಪಡೆಯುವಿರಿ.
ಇವರಿಗೂ ಈ ವರ್ಷ ವಿವಾಹ ಯೋಗವಿದೆ. ಪ್ರೇಮ ವಿವಾಹವೂ ಎಲ್ಲರ ಒಪ್ಪಿಗೆಯಿಂದ ನಡೆಯಲಿದೆ. ರೂಪವುಳ್ಳ ಸಂಗಾತಿಯು ಸಿಗುವರು. ದಕ್ಷಿಣ ದಿಕ್ಕಿನಲ್ಲಿ ಸಂಗಾತಿಯನ್ನು ಅನ್ವೇಷಿಸಬಹುದು. ಹಳ್ಳಿಯಲ್ಲಿ ವಾಸಿಸುವವರು ಅಥವಾ ಹಳ್ಳಿಯಲ್ಲಿ ಆಸ್ತಿಯನ್ನು ಹೊಂದಿರುವವರು ಸಂಗಾತಿಯಾಗಿ ಸಿಗುವರು.
ಈ ರಾಶಿಯವರಿಗೆ ವಿವಾಹ ಯೋಗವಿದೆ. ಉತ್ತಮ ಕುಟುಂಬದ ಸಂಗಾತಿಯು ಸಿಗಲಿದ್ದಾರೆ. ಪೂರ್ವ ದಿಕ್ಕಿನಲ್ಲಿ ವಿವಾಹವನ್ನು ಬಯಸುವವರು ಹುಡುಕಬಹುದು. ಗ್ರಾಮೀಣ ಭಾಗದ ಸಂಗಾತಿಯನ್ನು ಪಡೆಯುವರು.
–ಲೋಹಿತ ಹೆಬ್ಬಾರ್ – 8762924271