ಲಂಡನ್: ಇನ್ಫೋಸಿಸ್ ಕಂಪನಿ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಅವರ ಪತ್ನಿ ಸುಧಾಮೂರ್ತಿ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಆದ್ರೆ ಈಗ ಸುದ್ದಿಯಾಗ್ತಾ ಇರೋದು ಇವರಲ್ಲ, ಇವರ ಪುತ್ರಿ ಅಕ್ಷತಾ ಮೂರ್ತಿ.
ಅಕ್ಷತಾ ಮೂರ್ತಿ ಬ್ರಿಟನ್ನ ಹಣಕಾಸು ಸಚಿವ ರಿಶಿ ಸುನಕ್ ಅವರ ಪತ್ನಿಯೂ ಕೂಡ ಹೌದು. ಬ್ರಿಟನ್ ಹಾಗೂ 15 ಕಾಮನ್ವೆಲ್ತ್ ರಾಷ್ಟ್ರಗಳಿಗೆ ರಾಣಿಯಾಗಿರುವ ಕ್ವೀನ್ ಎಲಿಜಬೆತ್ ಅವರಿಗಿಂತ ಬೆಂಗಳೂರಿನ ಅಕ್ಷತಾ ಮೂರ್ತಿ ಅಧಿಕ ಆಸ್ತಿ ಹೊಂದಿದ್ದಾರೆ.
ಬ್ರಿಟನ್ನಲ್ಲಿ ನೆಲೆಸಿರುವ ಅಕ್ಷತಾ ಮೂರ್ತಿ ಮತ್ತು ರಿಶಿ ಸುನಕ್ ಇಬ್ಬರೂ ಜನಪ್ರಿಯ ವ್ಯಕ್ತಿಗಳು. 2015ರಲ್ಲಿ ಬ್ರಿಟನ್ ಸಂಸತ್ತಿಗೆ ರಿಶಿ ಆಯ್ಕೆಯಾಗಿದ್ರು, ಇದಕ್ಕೂ ಮುಂಚೆ ಬ್ರಿಟನ್ ಖಜಾನೆ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿದ್ರು, ಕಳೆದ ಫೆಬ್ರವರಿಯಲ್ಲಿ ಬ್ರಿಟನ್ನಲ್ಲಿ ಸಂಚಿವ ಸಂಪುಟ ಪುನಾರಚನೆಯಾಯಿತು. ಅದೇ ವೇಳೆಗೆ ಆಗಿನ ಹಣಕಾಸು ಸಚಿವ ಸಾಜಿದ್ ಜಾವಿದ್ ರಾಜೀನಾಮೆ ನೀಡಿದರು. ಆ ಸಂದರ್ಭದಲ್ಲಿ ಇನ್ಫೋಸಿಸ್ ಕಂಪನಿಯ ನಾರಾಯಣ ಮೂರ್ತಿ ಅಳಿಯ ರಿಶಿ ಸುನಕ್ನನ್ನು ಹಣಕಾಸು ಸಚಿವರ ಸ್ಥಾನಕ್ಕೆ ಪ್ರಧಾನಿ ಬೋರಿಸ್ ಜಾನ್ಸನ್ ನೇಮಕ ಮಾಡಿದರು.
ಈಗ ಬ್ರಿಟನ್ನಲ್ಲಿ ಬರಿ ರಿಶಿ ಸುನಕ್ ಹೆಸರು ಅಷ್ಟೇ ಅಲ್ಲ, ಅವರ ಪತ್ನಿ ಅಕ್ಷತಾ ಮೂರ್ತಿ ಹೆಸರು ಸದ್ದು ಮಾಡ್ತಾ ಇದೆ. ಇದಕ್ಕೆ ಕಾರಣ ಅಕ್ಷತಾ ಅವರ ಹೆಸರಲ್ಲಿ ಇರುವ ಆಸ್ತಿ. ಅಷ್ಟಕ್ಕೂ ಅಕ್ಷತಾ ಎಲಿಜಬೆತ್ ರಾಣಿಯನ್ನು ಮೀರಿಸುವಂತಹ ಆಸ್ತಿ ಹೊಂದಿದ್ದಾರೆ ಅಂದ್ರೆ ಎಲ್ಲಿಂದ ಬಂತು ಅಷ್ಟೋಂದು ಸಂಪತ್ತು ಎಂಬ ಪ್ರಶ್ನೆ ಉಂಟಾಗುವುದು ಸಹಜ.
ಅಕ್ಷತಾ ಎಲಿಜಬೆತ್ ರಾಣಿಗಿಂತ ಶ್ರೀಮಂತರಾಗಿದ್ದು ಹೇಗೆ?
ಸದ್ಯ ಬೆಂಗಳೂರಿನ ಇನ್ಫೋಸಿಸ್ ಕಂಪನಿಯಲ್ಲಿ ಅಕ್ಷತಾ ಮೂರ್ತಿ ಶೇ 0.91ರಷ್ಟು ಷೇರು ಹೊಂದಿದ್ದು, ಅದರ ಮೌಲ್ಯ ₹4200 ಕೋಟಿ ರೂ. ಆಗಿದೆ. ಆದರೆ ಬ್ರಿಟನ್ ರಾಣಿಯ ಒಟ್ಟಾರೆ ಆಸ್ತಿಯ ಮೌಲ್ಯ ಸುಮಾರು ₹ 3444 ಕೋಟಿ ಎಂದು ವರದಿಗಳು ಹೇಳಿವೆ. ಆ ಪ್ರಕಾರ ರಾಣಿ ಎಲಿಜಬೆತ್ಗಿಂತ ₹ 750 ಕೋಟಿಯಷ್ಟು ಆಸ್ತಿಯನ್ನು ಅಕ್ಷತಾ ಮೂರ್ತಿ ಹೊಂದಿದ್ದಾರೆ.
ಅಕ್ಷತಾ ಆಸ್ತಿ ವಿವರ ಹೊರಬಂದಿದ್ದು ಹೇಗೆ?
ಈಗ ಅವರ ಆಸ್ತಿ ವಿವರ ಹೊರಬಿಳಲು ಒಂದು ಪ್ರಮುಖ ಕಾರಣ ಇದೆ. ರಿಶಿ ಬ್ರಿಟನ್ನ ಹಣಕಾಸು ಸಚಿವರಾಗಿರುವುದರಿಂದ ಅವರ ಸಹೋದರರು, ಪೋಷಕರು, ಪತ್ನಿ, ಪತ್ನಿಯ ಪೋಷಕರ ಆಸ್ತಿಯ ವಿವರವನ್ನು ಘೋಷಣೆ ಮಾಡಿಕೊಳ್ಳಬೇಕಿತ್ತು. ಹೀಗಾಗಿಯೇ ರಿಶಿ ತಮ್ಮ ಪತ್ನಿ ಹೊಂದಿರುವ ಆಸ್ತಿಯ ವಿವರವನ್ನು ಬಹಿರಂಗಪಡಿಸಿದರು.
ಇದನ್ನೂ ಓದಿ: ಇನ್ಫೊಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ಬ್ರಿಟನ್ ಹಣಕಾಸು ಸಚಿವ