Bengaluru Tech Summit 2021: ಬೆಂಗಳೂರು ಟೆಕ್ ಶೃಂಗದಲ್ಲಿ ಇಸ್ರೇಲ್, ಆಸ್ಟ್ರೇಲಿಯಾ ಪ್ರಧಾನಿ ಭಾಗಿ -ಐಟಿ ಬಿಟಿ ಸಚಿವ ಅಶ್ವಥ್

| Updated By: ಸಾಧು ಶ್ರೀನಾಥ್​

Updated on: Nov 12, 2021 | 3:28 PM

BTS 2021 Virtual Event: 24ನೇ ಬೆಂಗಳೂರು ಟೆಕ್​ ಶೃಂಗವು ವರ್ಚುಯಲ್​ ಈವೆಂಟ್ ಆಗಿ ಇದೇ ನವೆಂಬರ್ 17 ರಿಂದ 19 ವರಗೆಗೆ ನಡೆಯಲಿದೆ. ಈ ಬಾರಿಯ ಬೆಂಗಳೂರು ಟೆಕ್ ಶೃಂಗದಲ್ಲಿ 17 ಸೆಷನ್‌ಗಳು ತಂತ್ರಜ್ಞಾನ ಆವಿಷ್ಕಾರ ಆರೋಗ್ಯ, ಶಿಕ್ಷಣ, ವ್ಯವಸಾಯ ಮುಂದಾದ ಕ್ಷೇತ್ರಗಳ ಕುರಿತು ಆಗುತ್ತಿದೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದಾರೆ. 

Bengaluru Tech Summit 2021: ಬೆಂಗಳೂರು ಟೆಕ್ ಶೃಂಗದಲ್ಲಿ ಇಸ್ರೇಲ್, ಆಸ್ಟ್ರೇಲಿಯಾ ಪ್ರಧಾನಿ ಭಾಗಿ -ಐಟಿ ಬಿಟಿ ಸಚಿವ ಅಶ್ವಥ್
Bengaluru Tech Summit 2021: ಬೆಂಗಳೂರಿನಲ್ಲಿ ಟೆಕ್ ಶೃಂಗ; ಇಸ್ರೇಲ್ ಪ್ರಧಾನಿ, ಆಸ್ಟ್ರೇಲಿಯಾ ಪ್ರಧಾನಿ ಭಾಗಿ -ಐಟಿ ಬಿಟಿ ಸಚಿವ ಡಾ. ಅಶ್ವಥ್
Follow us on

ಬೆಂಗಳೂರು: ಬೆಂಗಳೂರು ಜಾಗತಿಕ ನಗರವಾಗಿ ಬೆಳೆದಿದೆ. ಬೆಂಗಳೂರು ಜ್ಞಾನ ಸಂಪಾದನೆ ನಗರವೆಂದು ಮಾನ್ಯತೆ ಪಡೆದಿದೆ. ತಂತ್ರಜ್ಞಾನ, ಆವಿಷ್ಕಾರ ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಿದೆ. ಯಾವ ರೀತಿ ತಲುಪುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಕೊವಿಡ್​ ಸಂದರ್ಭದಲ್ಲೂ ರಾಯಭಾರಿಗಳು ಭಾಗಿಯಾಗಿದ್ದಾರೆ. ತಂತ್ರಜ್ಞಾನ, ಆವಿಷ್ಕಾರ, ಶಿಕ್ಷಣ, ವ್ಯವಸಾಯ ಕ್ಷೇತ್ರದ ಬಗ್ಗೆ ಚರ್ಚೆಯಾಗಿದೆ. 24ನೇ ಬೆಂಗಳೂರು ಟೆಕ್​ ಶೃಂಗ ಯಾವ ರೀತಿ ಆಗುತ್ತೆ ಎಂದು ಸಭೆ ನಡೆಸಿದ್ದೇವೆ. ಇಸ್ರೇಲ್ ಪ್ರಧಾನಿ, ಆಸ್ಟ್ರೇಲಿಯಾ ಪ್ರಧಾನಿ ಭಾಗಿಯಾಗುತ್ತಾರೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಿಟಿಎಸ್ (Bengaluru Tech Summit -BTS) ಉದ್ಘಾಟಿಸುತ್ತಾರೆ ಎಂದು ಬೆಂಗಳೂರಿನಲ್ಲಿ ಐಟಿ-ಬಿಟಿ ಖಾತೆ ಸಚಿವ ಸಿ.ಎನ್.ಅಶ್ವತ್ಥ್​ ನಾರಾಯಣ ತಿಳಿಸಿದ್ದಾರೆ.

24ನೇ ಬೆಂಗಳೂರು ಟೆಕ್​ ಶೃಂಗವು (BTS 2021 Virtual Event) ವರ್ಚುಯಲ್​ ಈವೆಂಟ್ ಆಗಿ ಇದೇ ನವೆಂಬರ್ 17 ರಿಂದ 19 ವರಗೆಗೆ ನಡೆಯಲಿದೆ. ತಂತ್ರಜ್ಞಾನ ಆವಿಷ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯಾವ ರೀತಿ ತಲುಪುತ್ತದೆ ಅಂತ ನಾವು ನೋಡಿದ್ದೇವೆ. ಕೋವಿಡ್ ಸವಾಲಿನ ಮಧ್ಯದಲ್ಲೂ ವಿವಿಧ ದೇಶದ ರಾಯಭಾರಿಗಳು ಬಂದು ಭಾಗಿಯಾಗಿದ್ದಾರೆ. ತಮ್ಮ ಯೋಚನೆಗಳನ್ನ ಹೇಳಿದ್ದಾರೆ. ಈ ಬಾರಿಯ ಬೆಂಗಳೂರು ಟೆಕ್ ಶೃಂಗದಲ್ಲಿ 17 ಸೆಷನ್‌ಗಳು ತಂತ್ರಜ್ಞಾನ ಆವಿಷ್ಕಾರ ಆರೋಗ್ಯ, ಶಿಕ್ಷಣ, ವ್ಯವಸಾಯ ಮುಂದಾದ ಕ್ಷೇತ್ರಗಳ ಕುರಿತು ಆಗುತ್ತಿದೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದಾರೆ.

(Bengaluru Tech summit it bt minister dr ashwath narayan statement)