BMW X1 20i Tech: ಭಾರತದಲ್ಲಿ ಬಿಎಂಡಬ್ಲ್ಯು X1 20i Tech 43 ಲಕ್ಷ ರೂಪಾಯಿಗೆ ಬಿಡುಗಡೆ

| Updated By: Srinivas Mata

Updated on: Jul 15, 2021 | 6:15 PM

ಜರ್ಮನ್ ಪ್ರೀಮಿಯಂ ಕಾರು ತಯಾರಕ ಬಿಎಂಡಬ್ಲ್ಯು ಹೊಸದಾಗಿ ಬಿಡುಗಡೆ ಮಾಡಿದ್ದು, ಎಕ್ಸ್1 20ಐ ಟೆಕ್​ಗೆ ಭಾರತದಲ್ಲಿ ಎಕ್ಸ್​ ಶೋರೂಮ್ ಬೆಲೆ 43 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.

BMW X1 20i Tech: ಭಾರತದಲ್ಲಿ ಬಿಎಂಡಬ್ಲ್ಯು X1 20i Tech  43 ಲಕ್ಷ ರೂಪಾಯಿಗೆ ಬಿಡುಗಡೆ
ಬಿಎಂಡಬ್ಲ್ಯು X1 20i tech
Follow us on

ಜರ್ಮನಿ ಮೂಲದ ಕಾರು ತಯಾರಿಕೆ ಕಂಪೆನಿ ಬಿಎಂಡಬ್ಲ್ಯುದಿಂದ X1 20I ಟೆಕ್ ಆವೃತ್ತಿಯನ್ನು 43 ಲಕ್ಷ ರೂಪಾಯಿಗೆ (ಎಕ್ಸ್‌ಶೋರೂಂ, ಭಾರತ) ಬಿಡುಗಡೆ ಮಾಡುವುದರೊಂದಿಗೆ ತನ್ನ ಪ್ರಾಡಕ್ಟ್ ಪೋರ್ಟ್​ಫೋಲಿಯೋವನ್ನು ಭಾರತದಲ್ಲಿ ವಿಸ್ತರಿಸಿದೆ. ಜರ್ಮನ್ ಪ್ರೀಮಿಯಂ ಕಾರು ತಯಾರಕ ಬಿಎಂಡಬ್ಲ್ಯು ಹೊಸದಾಗಿ ಬಿಡುಗಡೆ ಮಾಡಿದ ಎಕ್ಸ್1 20ಐ ಟೆಕ್ ಎಡಿಷನ್ ಕಮಾಂಡಿಂಗ್ ಪ್ರಪೋರ್ಷನ್​ಗಳು, ಉನ್ನತ ಆಸನ ವ್ಯವಸ್ಥೆ ಮತ್ತು ಈ ಹಿಂದೆಂದಿಗಿಂತಲೂ ಉತ್ತಮ ರಸ್ತೆ ವಿಸಿಬಲಿಟಿಯನ್ನು ನೀಡುತ್ತದೆ. ಎಕ್ಸ್1 20ಐ ಟೆಕ್ ಆವೃತ್ತಿಯ ಲಿಮಿಟೆಡ್​ ಎಡಿಷನ್​ಗಳನ್ನು ಮಾತ್ರ ಬಿಎಂಡಬ್ಲ್ಯು ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುತ್ತದೆ. ಮೇಲು ನೋಟಕ್ಕೆ ಕಾಣುವಂತೆ ಮುಂಭಾಗವು ದೊಡ್ಡದಾದ ಬಿಎಂಡಬ್ಲ್ಯು ಗ್ರಿಲ್ ಮತ್ತು ಏರ್ ಇಂಟೆಕ್‌ಗಳೊಂದಿಗೆ ಭವ್ಯವಾದ ನೋಟವನ್ನು ಹೊಂದಿದೆ. ಇದು ಎಲ್‌ಇಡಿ ಫಾಗ್ ಲ್ಯಾಂಪ್ಸ್​ಗಳ ಜತೆಗೆ ಎಲ್‌ಇಡಿ ಹೆಡ್‌ಲೈಟ್‌ಗಳಿಂದ ಸುತ್ತುವರೆದಿದೆ.

ಅಥ್ಲೆಟಿಕ್ ಸೈಡ್ ವ್ಯೂಗೆ ರೂಫ್ ಲೈನ್, ಕಣ್ಣು ಸೆಳೆಯುವಂಥ ಕ್ಯಾರೆಕ್ಟರ್​ ಲೈನ್​ಗಳಿವೆ ಮತ್ತು ಕಿಟಕಿ ಮೇಲ್ಮೈಗಳಿಂದ ರೂಪುಗೊಂಡ ಡೈನಾಮಿಕ್ ಬಾಗಿದ ಆಕಾರದಿಂದ ಪೂರಕವಾಗಿದೆ. ಹಿಂಭಾಗದ ವಿನ್ಯಾಸವು ಕಾರಿನ ಅಗಲ ಮತ್ತು ಸ್ಪೋರ್ಟಿ ನಿಲುವನ್ನು ಎಲ್ಇಡಿ ಹಿಂಭಾಗದ ದೀಪಗಳ ಸುತ್ತಲೂ, ಬಾಡಿ ಕಲರ್ ಹೊದಿಕೆಗಳು ಮತ್ತು ದೊಡ್ಡ ಅವಳಿ ಎಕ್ಸಾಸ್ಟ್ ಟೈಲ್‌ಪೈಪ್‌ಗಳಿವೆ. ವಾಹನವು ಹೊಸ 18-ಇಂಚಿನ ಅಲಾಯ್ಸ್ ಹೊಂದಿದ್ದು, ಸ್ಪೋರ್ಟಿಯಾಗಿ ಕಾಣಿಸುತ್ತದೆ. ಎಕ್ಸ್ 1 20 ಐ ಟೆಕ್ ಆವೃತ್ತಿ ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ – ಆಲ್​ಪೈನ್ ವೈಟ್, ಫೈಟೊನಿಕ್ ಬ್ಲೂ (ಮೆಟಾಲಿಕ್) ಜೊತೆಗೆ ಕಾರಿನ ಸೀಟು ಕವರ್ ಸೆನ್ಸಾಟೆಕ್ ಕಪ್ಪು ಬಣ್ಣಗಳೊಂದಿಗೆ ಬರುತ್ತದೆ.

ಒಳಾಂಗಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಎಕ್ಸ್ 1 20ಐ ಟೆಕ್ ಆವೃತ್ತಿಯು ಪ್ರೀಮಿಯಂ ಲೆದರ್ ಸೀಟ್ ಕವರ್, ಆಂಬಿಯೆಂಟ್ ಲೈಟಿಂಗ್, ಪನೋರಮಾ ಗ್ಲಾಸ್ ರೂಫ್ ಮತ್ತು ವಿಶಾಲವಾದ ಒಳಾಂಗಣ ವಿನ್ಯಾಸವನ್ನು ನೀಡುತ್ತದೆ. ಹೆಚ್ಚುವರಿ ವೈಶಿಷ್ಟ್ಯ ಅಂದರೆ, ಚಾಲಕ (ಮೆಮೊರಿ ಫಂಕ್ಷನ್​ನೊಂದಿಗೆ) ಮತ್ತು ಪ್ರಯಾಣಿಕರಿಗೆ ಇಬ್ಬರಿಗೂ ಎಲೆಕ್ಟ್ರಿಕಲ್ ಸೀಟ್ ಅಡ್ಜಸ್ಟಮೆಂಟ್ ಇದೆ. ಹಿಂದಿನ ಸೀಟ್ ಬ್ಯಾಕ್‌ರೆಸ್ಟ್ ಅನ್ನು ಒರಗಿಕೊಳ್ಳಬಹುದು ಮತ್ತು ಎರಡು ಕಪ್-ಹೋಲ್ಡರ್‌ಗಳೊಂದಿಗೆ ಸೆಂಟರ್ ಆರ್ಮ್​ ರೆಸ್ಟ್ ನೀಡುತ್ತದೆ. 40:20:40 ಸ್ಪ್ಲಿಟ್ ಬ್ಯಾಕ್‌ರೆಸ್ಟ್ ಅನ್ನು ಮಡಿಸುವುದರಿಂದ ಬೂಟ್ ಸಾಮರ್ಥ್ಯವನ್ನು 500-ಲೀಟರ್‌ನಿಂದ 1,550-ಲೀಟರ್‌ಗೆ ಹೆಚ್ಚಿಸುತ್ತದೆ. ಇನ್ನು ಬಿಎಂಡಬ್ಲ್ಯು ಎಕ್ಸ್ 1ನ ವೈಶಿಷ್ಟ್ಯವು ಎಲ್ಲ ರೀತಿಯ ಪ್ರಯಾಣಗಳಿಗೆ ಸೂಕ್ತವಾಗಿದೆ.

ಡ್ಯಾಶ್‌ಬೋರ್ಡ್​ನಲ್ಲಿ ಹೈ ರೆಸಲ್ಯೂಷನ್ 10.25 ಇಂಚಿನ ಸೆಂಟ್ರಲ್ ಇನ್​ಫರ್ಮೇಷನ್ ಡಿಸ್​ಪ್ಲೇ ಜತೆಗೆ ಐಡ್ರೈವ್ ಕೊಂಟ್ರೋಲರ್ ಮತ್ತು ಟಚ್ ಫಂಕ್ಷನಾಲಿಟಿ ನೇವಿಗೇಷನ್ ಹೊಂದಿದೆ. ಹೊಸ ಬಿಎಂಡಬ್ಲ್ಯು ಹೆಡ್-ಅಪ್ ಡಿಸ್​ಪ್ಲೇ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೇರವಾಗಿ ಚಾಲಕರ ದೃಷ್ಟಿಗೆ ತಕ್ಕಂತೆ ಇದೆ. ಅಲ್ಲದೆ ಈ ಕಾರು ಹೊಸ 205W ಹೈಫೈ ಧ್ವನಿವರ್ಧಕ ವ್ಯವಸ್ಥೆ ಮತ್ತು ವೈರ್‌ಲೆಸ್ ಚಾರ್ಜಿಂಗ್ ಅನ್ನು ಹೊಂದಿದೆ, ಜೊತೆಗೆ ಹೆಚ್ಚುವರಿ ಅನುಕೂಲಕ್ಕಾಗಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್​ ಪ್ಲೇ ಸಪೋರ್ಟ್ ಹೊಂದಿದೆ. ಹುಡ್ ಅಡಿಯಲ್ಲಿ, ಎಕ್ಸ್1 20ಐ ಟೆಕ್ ಆವೃತ್ತಿಯು 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್​ನಿಂದ ಕಂಟ್ರೋಲ್ ಆಗುತ್ತದೆ. 1,350 – 4,600 ಆರ್‌ಪಿಎಂ ನಡುವೆ 189 ಬಿಎಚ್‌ಪಿ ಮತ್ತು 280 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಏಳು-ವೇಗದ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಸ್ವಯಂಚಾಲಿತ ಟ್ರಾನ್ಸ್​ಮಿಷನ್​ಗೆ ಹೊಂದಿಕೆಯಾಗುತ್ತದೆ. ಹೆಚ್ಚುವರಿ ಅನುಕೂಲಕ್ಕಾಗಿ ವಾಹನವು ಮೂರು ಚಾಲನಾ ಮೋಡ್​ಗಳನ್ನು ನೀಡುತ್ತದೆ – ಇಕೊ ಪ್ರೊ, ಕಂಫರ್ಟ್ ಮತ್ತು ಸ್ಪೋರ್ಟ್.

ಸುರಕ್ಷತೆಗೆ ಸಂಬಂಧಿಸಿದಂತೆ, ಎಕ್ಸ್1 20ಐ ಟೆಕ್ ಆವೃತ್ತಿಯು ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್ (ಡಿಟಿಸಿ), ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ (ಸಿಬಿಸಿ) ಸೇರಿದಂತೆ ಆರು ಏರ್‌ಬ್ಯಾಗ್‌ಗಳು, ಅಂಟೆಂಟಿವ್​ನಿಸ್​ ಅಸಿಸ್ಟೆನ್ಸಿ, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಡಿಎಸ್‌ಸಿ), ಆಟೋ ಹೋಲ್ಡ್ ಹೊಂದಿರುವ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಸೈಡ್-ಇಂಪ್ಯಾಕ್ಟ್ ಪ್ರೊಟೆಕ್ಷನ್, ಎಲೆಕ್ಟ್ರಾನಿಕ್ ವೆಹಿಕಲ್ ಇಮೊಬೈಲೈಸರ್ ಮತ್ತು ಕ್ರ್ಯಾಶ್ ಸೆನ್ಸರ್, ISOFIX ಚೈಲ್ಡ್ ಸೀಟ್ ಮೌಂಟಿಂಗ್, ಮತ್ತು ಲೋಡ್ ಫ್ಲೋರ್ ಅಡಿಯಲ್ಲಿ ಇಂಟಿಗ್ರೇಟೆಡ್ ತುರ್ತು ಸ್ಪೇರ್ ಚಕ್ರ (ವ್ಹೀಲ್) ಇದೆ.

ಇದನ್ನೂ ಓದಿ: Car Loan: ಹೊಸ ಕಾರು ಖರೀದಿಗೆ ಯಾವ ಬ್ಯಾಂಕ್​ನಲ್ಲಿ ಕಡಿಮೆ ಬಡ್ಡಿ? ಇಲ್ಲಿದೆ ಸಂಪೂರ್ಣ ಮಾಹಿತಿ

(German based premium company BMW released X1 20i Tech in India for Rs 43 lakhs (India Ex Showroom Price))