ಮಾರುತಿ ಸುಜುಕಿ ಇಂಡಿಯಾ (Maruti Suzuki India) ಸೋಮವಾರದಂದು ತಿಳಿಸಿರುವಂತೆ, ಬಲೆನೊ ಹ್ಯಾಚ್ಬ್ಯಾಕ್ ಕಾರಿನ ಹೊಸ ವರ್ಷನ್ ಬುಕಿಂಗ್ ಆರಂಭಿಸಿದೆ. ಗ್ರಾಹಕರು 11 ಸಾವಿರ ರೂಪಾಯಿಯನ್ನು ಪಾವತಿಸುವ ಮೂಲಕ ಹೊಸ ಬಲೆನೊ ಅನ್ನು ಬುಕ್ ಮಾಡಬಹುದು, ಎಂದು ವಾಹನ ತಯಾರಕ ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ. “ಬಲೆನೊ ಬ್ರ್ಯಾಂಡ್ ಭಾರತದಲ್ಲಿ ಪ್ರೀಮಿಯಂ ಹ್ಯಾಚ್ಬ್ಯಾಕ್ ಸೆಗ್ಮೆಂಟ್ನ ಪುನರ್ವ್ಯಾಖ್ಯಾನ ಮಾಡಿದೆ ಮತ್ತು ಸ್ಥಿರವಾಗಿ ದೇಶದ ಟಾಪ್ 5 ಬೆಸ್ಟ್ ಸೆಲ್ಲಿಂಗ್ ಕಾರುಗಳಲ್ಲಿ ಸ್ಥಾನ ಪಡೆದಿದೆ,” ಎಂದು ಮಾರುತಿ ಸುಜುಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಮಾರಾಟ) ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ. ಹೊಸ ಬಲೆನೊ ಅನ್ನು ತಂತ್ರಜ್ಞಾನಪ್ರಿಯ ಹೊಸ ತಲೆಮಾರಿನ ಅಗತ್ಯಗಳನ್ನು ಪೂರೈಸುವ ಸಲುವಾಗಿಯೇ ಸಿದ್ಧಪಡಿಸಲಾಗಿದೆ. ಅದು ಅತ್ಯುತ್ತಮವಾದದ್ದನೇ ಕೊಡುವುದನ್ನು ಖಾತ್ರಿಪಡಿಸುತ್ತದೆ ಎಂದು ಅವರು ಸೇರಿಸಿದ್ದಾರೆ.
“ಅಮೋಘ ತಂತ್ರಜ್ಞಾನ ಮತ್ತು ಅದ್ಭುತವಾದ ಪರ್ಫಾಮೆನ್ಸ್ನೊಂದಿಗೆ ವಿಶಿಷ್ಟವಾದ ಅಸ್ತಿತ್ವದ ಮೂಲಕ ಈ ಹೊಸ ಬಲೆನೊ ಗ್ರಾಹಕರು ತಮ್ಮ ದೃಷ್ಟಿಯನ್ನು ತಿರುಗಿಸುವಂತೆ ಮತ್ತು ಸಂಭ್ರಮಿಸುವಂತೆ ಮಾಡಲಿದೆ ಎಂಬುದರ ಬಗ್ಗೆ ನಮಗೆ ವಿಶ್ವಾಸ ಇದೆ,” ಎಂದು ದಾಖಲಿಸಿದ್ದಾರೆ ಶ್ರೀವಾಸ್ತವ. ಕಂಪೆನಿಯ ಮುಖ್ಯ ತಾಂತ್ರಿಕ ಅಧಿಕಾರಿ (ಎಂಜಿನಿಯರಿಂಗ್) ಸಿ.ವಿ.ರಾಮನ್ ಮಾತನಾಡಿ, 2015ರಲ್ಲಿ ಆರಂಭಿಸಿದ್ದು ರಚನೆ, ಪ್ರೀಮಿಯಂ ಒಳಾಂಗಣ, ಅನುಕೂಲಕರ ಫೀಚರ್ಗಳ ಮೂಲಕ ಬಲೆನ್ ಟ್ರೆಂಡ್ ಸೆಟರ್ ಆಗಿದೆ. “ಹೊಸ ಬಲೆನೊದಲ್ಲಿ ಆಧುನಿಕ ತಂತ್ರಜ್ಞಾನ ಇದೆ. ಅತ್ಯಾಧುನಿಕ ಫೀಚರ್ಗಳು ಮತ್ತು ನೆಕ್ಸಾದ ಸಿಗ್ನೇಚರ್ ಆದ ಭವಿಷ್ಯದ ಕುಸುರಿ ರಚನೆ ಸಹ ಒಳಗೊಂಡಿದೆ. ಇದರಿಂದಾಗಿ ಪ್ರೀಮಿಯಂ ಹ್ಯಾಚ್ ಬ್ಯಾಕ್ ಸೆಗ್ಮೆಂಟ್ನಲ್ಲಿ ಹೊಸ ಸಂಪರ್ಕಕ್ಕೆ ಅನುಕೂಲ ಮಾಡಿಕೊಡುತ್ತದೆ. ನಾವು ಹೊಸ ಬಲೆನೊಗಾಗಿ ಕೆಲಸ ಮಾಡುವಾಗ ಗ್ರಾಹಕರಿಗೆ ಸಂತೋಷ ನೀಡುವ ಆಧುನಿಕ ತಂತ್ರಜ್ಞಾನದ ಬಳಕೆಗೆ ವಿಶೇಷ ಗಮನ ನೀಡಿದೆವು. ಇದರ ಜತೆಗೆ ಆರಾಮದಾಯಕ ಮತ್ತು ಸುರಕ್ಷಿತ ಚಾಲನೆಯನ್ನೂ ಗ್ರಾಹಕರಿಗೆ ಖಾತ್ರಿಪಡಿಸುತ್ತೇವೆ,” ಎಂದಿದ್ದಾರೆ.
ಹೆಡ್ಸ್ ಅಪ್ ಡಿಸ್ಪ್ಲೇ ಸೇರಿದಂತೆ ಹಲವಾರು ಹೊಸ ಫೀಚರ್ಗಳೊಂದಿಗೆ ಹೊಸ ಬಲೆನೊ ಬರುತ್ತದೆ. ಕಾರಿನಲ್ಲಿ ಮುಂದಿನ ತಲೆಮಾರಿನ ಕೆ- ಸಿರೀಸ್ ಪೆಟ್ರೋಲ್ ಎಂಜಿನ್ ಇರಲಿದ್ದು, ಜತೆಗೆ ಐಡಲ್ ಸ್ಟಾರ್ಟ್- ಸ್ಟಾಪ್ ತಂತ್ರಜ್ಞಾನ ಸಹ ಇರಲಿದೆ. ಅಂದ ಹಾಗೆ ಭಾರತದಲ್ಲಿ ಅತಿ ದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್. ಅದರ ಪ್ರೀಮಿಯಂ ಸೆಗ್ಮೆಂಟ್ ನೆಕ್ಸಾ ಅಡಿಯಲ್ಲಿ ಬಲೆನೊ ಬರುತ್ತದೆ.
ಇದನ್ನೂ ಓದಿ: Maruti Celerio CNG: ಮಾರುತಿ ಸೆಲೆರಿಯೋ ಸಿಎನ್ಜಿ ಘೋಷಣೆ; 36 ಕಿ.ಮೀ. ಮೈಲೇಜ್, 6.58 ಲಕ್ಷ ರೂಪಾಯಿ ಬೆಲೆ