My Home Tarkshya: ಮೈ ಹೋಮ್ ಗ್ರೂಪ್ ಮುಡಿಗೆ ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿ

| Updated By: ರಮೇಶ್ ಬಿ. ಜವಳಗೇರಾ

Updated on: Oct 06, 2022 | 6:34 PM

ಮೈ ಹೋಮ್ ಗ್ರೂಪ್​ನ ತರ್ಕ್ಷ್ಯ ಪ್ರಾಜೆಕ್ಟ್​ಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದಿಂದ ಪ್ಲಾಟಿನಂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

My Home Tarkshya:  ಮೈ ಹೋಮ್ ಗ್ರೂಪ್ ಮುಡಿಗೆ ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿ
My Home Group
Follow us on

ನವದೆಹಲಿ: ಹೈದರಾಬಾದ್ ಮೂಲದ ಮೈ ಹೋಮ್ ಗ್ರೂಪ್  (My Home Group) ಮತ್ತೊಂದು ರಾಷ್ಟ್ರ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಮೈ ಹೋಮ್ ಗ್ರೂಪ್​ನ ತರ್ಕ್ಷ್ಯ ಪ್ರಾಜೆಕ್ಟ್​ಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದಿಂದ ಪ್ಲಾಟಿನಂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಡಿಯಲ್ಲಿರುವ ಪ್ರತಿಷ್ಠಿತ ಸ್ವಾಯತ್ತ ಸಂಸ್ಥೆಯಾದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಈ ಪ್ರಶಸ್ತಿ ನೀಡಿದೆ.

ನವದೆಹಲಿಯ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್​ನಲ್ಲಿ ಇಂದು(ಅಕ್ಟೋಬರ್. 6) ನಡೆದ ಸಮಾರಂಭದಲ್ಲಿ ಮೈ ಹೋಮ್ ತರ್ಕ್ಷ್ಯ ಪ್ರಾಜೆಕ್ಟ್​ಗೆ 14ನೇ QCI-DL ಶಾ ಕ್ವಾಲಿಟಿ ಪ್ಲಾಟಿನಂ ಪ್ರಶಸ್ತಿ(Prestigious Quality Platinum Award)  ನೀಡಲಾಯ್ತು. ಮೈ ಹೋಮ್ ಗ್ರೂಪ್ ಆಡಳಿತ ಮಂಡಳಿಯಿಂದ ಮೂವರು ಹಿರಿಯ ಸದಸ್ಯರು ಪ್ರಶಸ್ತಿ ಸ್ವೀಕರಿಸಿದ್ರು.

ಸೀನಿಯರ್ ಪ್ರೆಸಿಡೆಂಟ್ ಎಂ.ಕೆ. ರವಿ ಸಾಯಿ, ಮೈ ಹೋಮ್ ತರ್ಕ್ಷ್ಯ ಪ್ರಾಜೆಕ್ಟ್ ಅಸೋಸಿಯೇಟೆಡ್ ವೈಸ್ ಪ್ರೆಸಿಡೆಂಟ್ ವೈ.ಪುರುಷೋತ್ತಮ್ ಹಾಗೂ ಕಾರ್ಪೊರೇಟ್ ಕ್ವಾಲಿಟಿ ಜನರಲ್ ಮ್ಯಾನೇಜರ್ ನಾಗರೆಡ್ಡಯ್ಯ ಪ್ರಶಸ್ತಿ ಸ್ವೀಕರಿಸಿದ್ರು. ಗುಣಮಟ್ಟ ಹಾಗೂ ಸುರಕ್ಷತೆಯೇ ನಮ್ಮ ಗ್ರೂಪ್ ಚೇರ್ಮನ್ ಹೆಗ್ಗುರುತು. ಅಸಾಧಾರಣ ಗುಣಮಟ್ಟಕ್ಕೆ ಹೆಸರಾದ ಮೈ ಹೋಮ್ ಗ್ರೂಪ್ ನಿಂದ ತರ್ಕ್ಷ್ಯ ಪ್ರಾಜೆಕ್ಟ್ ನಲ್ಲಿ ಒಂದೇ ದಿನ 1122 ಫ್ಲ್ಯಾಟ್ ಮಾರಾಟವಾಗಿದ್ದು ವಿಶ್ವದಾಖಲೆ ಆಗಿದೆ ಅಂತಲೂ ತಿಳಿಸಿದ್ರು…

ಇದೇ ವೇಳೆ ಮಾತನಾಡಿದ  ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ (Piyush Goyal)  ಗುಣಮಟ್ಟ ಎಂದರೆ ಅದು ದುಬಾರಿ ಆಗಿರುವುದಿಲ್ಲ. ಕಡಿಮೆ ಬೆಲೆಯಲ್ಲಿಯೇ ಗುಣಮಟ್ಟದ ಉತ್ಪನ್ನ ನೀಡಬಹುದು ಎಂದು ಹೇಳಿದರು.

ಭಾರತದ ಗುಣಮಟ್ಟ ಸಮಿತಿ ಜತೆ ನಾನು ಉತ್ತಮ ಸಂಬಂಧ ಹೊಂದಿದ್ದು, ಈ ಕುರಿತು ಹಲವು ಬಾರಿ ಚರ್ಚಿಸಿದ್ದೇನೆ. ನಾನು ಸಚಿವನಾಗುವ ಮೊದಲು ಸಹ ಸಮಿತಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದೆ. ದೇಶದ ಸೇವೆ ದಿಸೆಯಲ್ಲಿ ಸಮಿತಿ ಕಾರ್ಯನಿರ್ವಹಿಸಿದೆ. ಎಂದಿಗೂ ಗುಣಮಟ್ಟದಲ್ಲಿ ರಾಜಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.