ಸಿಮೆಂಟ್ ಚೀಲದಂತೆಯೇ ಮರಳು ಚೀಲಗಳನ್ನೂ ಮಾರುಕಟ್ಟೆಗೆ ಬಿಡಲು ಗಣಿ ಇಲಾಖೆ ತೀರ್ಮಾನ

| Updated By: ಸಾಧು ಶ್ರೀನಾಥ್​

Updated on: Jun 30, 2021 | 4:28 PM

ರಾಜ್ಯದ ಐದು ಕಡೆಗಳಲ್ಲಿ ಮರಳು ಪ್ಯಾಕಿಂಗ್ ಯುನಿಟ್ ಗಳ ನಿರ್ಮಾಣವಾಗಲಿದೆ. ಪ್ರಾಯೋಗಿಕ ಯಶಸ್ಸು ಸಿಕ್ಕಿದರೆ ಮುಂದೆ ರಾಜ್ಯಾದ್ಯಂತ ಮರಳಿನ ಪ್ಯಾಕೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಇಂದು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ

ಸಿಮೆಂಟ್ ಚೀಲದಂತೆಯೇ ಮರಳು ಚೀಲಗಳನ್ನೂ ಮಾರುಕಟ್ಟೆಗೆ ಬಿಡಲು ಗಣಿ ಇಲಾಖೆ ತೀರ್ಮಾನ
ಸಿಮೆಂಟ್ ಚೀಲದಂತೆಯೇ ಮರಳು ಚೀಲಗಳನ್ನೂ ಮಾರುಕಟ್ಟೆಗೆ ಬಿಡಲು ಗಣಿ ಇಲಾಖೆ ತೀರ್ಮಾನ
Follow us on

ಬೆಂಗಳೂರು: ಸಿಮೆಂಟ್ ಅನ್ನು ಮೂಟೆಗಳಲ್ಲಿ ಮಾರಾಟವಾಗುತ್ತಿರುವ ಮಾದರಿಯಲ್ಲಿಯೇ ಇನ್ನು ಮುಂದೆ ಮರಳನ್ನೂ ಸಹ ಪ್ಯಾಕಿಂಗ್ ನಲ್ಲಿ ಮಾರಾಟ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಹೊಸ ಐಡಿಯಾ ಮಾಡಿದೆ.

ಮರಳು ವೇಸ್ಟ್ ಆಗುವ ನಷ್ಟ ಅನುಭವಿಸುವವರಿಗೆ ಇದು ಪ್ರಯೋಜನಕಾರಿಯಾಗಲಿದೆ. ಸಿಮೆಂಟ್ ಚೀಲದಂತೆಯೇ ಮರಳು ಚೀಲಗಳನ್ನು ಮಾರುಕಟ್ಟೆಗೆ ತರಲು ಇಲಾಖೆ ತೀರ್ಮಾನ ಮಾಡಿದೆ. 50 ಕೆ.ಜಿ. ಯ ಮರಳಿನ ಪ್ಯಾಕ್, 100 ಕೆ.ಜಿ. ಮರಳಿನ ಪ್ಯಾಕ್ ತಯಾರಿಕೆಗೆ ನಿರ್ಧಾರ ಮಾಡಲಾಗಿದೆ. ಇದರಿಂದ ಶೇ. 30 ರಷ್ಟು ಮರಳು ನಷ್ಟವಾಗುವ ಸಂಭವ ಕಡಿಮೆಯಾಗಲಿದೆ.

ಇನ್ನು, ರಸ್ತೆಗಳಲ್ಲಿ ಚೆಲ್ಲಾಪಿಲ್ಲಿಯಾಗುವ ಮರಳನ್ನು ಸಂರಕ್ಷಿಸಿ, ಬಳಸಲು ಸಾಧ್ಯವಿದೆ. ರಾಜ್ಯದ ಐದು ಕಡೆಗಳಲ್ಲಿ ಮರಳು ಪ್ಯಾಕಿಂಗ್ ಯುನಿಟ್ ಗಳ ನಿರ್ಮಾಣವಾಗಲಿದೆ. ಪ್ರಾಯೋಗಿಕ ಯಶಸ್ಸು ಸಿಕ್ಕಿದರೆ ಮುಂದೆ ರಾಜ್ಯಾದ್ಯಂತ ಮರಳಿನ ಪ್ಯಾಕೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಇಂದು ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ (State Mines and Geology Minister Murugesh Nirani ) ಮಾಹಿತಿ ನೀಡಿದರು.

(sand to be sold in bags as cement says mining minister murugesh nirani)

ಸ್ಥಳೀಯರು, ರೈತರಿಗೆ ಮಾತ್ರ ಮರಳು ಸಾಗಾಟಕ್ಕೆ ಅವಕಾಶ, ಮರಳು ಮಾಫಿಯಾ ತಡೆಯಲು ಶೀಘ್ರದಲ್ಲಿಯೇ ಕ್ರಮ; ಸಚಿವ ಮುರುಗೇಶ್ ನಿರಾಣಿ