
ಟಿವಿಎಸ್ ಮೋಟಾರ್ ಕಂಪೆನಿಯ ನೂತನ ಬೈಕ್ ಅಪಾಚೆ ಆರ್‌ಆರ್ 310 (TVS Apache RR 310) ಮೋಟಾರ್ ಸೈಕಲ್ ಇದೇ ತಿಂಗಳ 30 ರಂದು ಬಿಡುಗಡೆಯಾಗಲಿದೆ. ಈ ಹಿಂದೆ ನೂತನ ಬೈಕ್ ಅನ್ನು ಜನವರಿ 2021 ರಲ್ಲಿ ಬಿಡುಗಡೆ ಮಾಡುವುದಾಗಿ ಟಿವಿಎಸ್ ತಿಳಿಸಿತ್ತು. ಆದರೆ ಕೊರೋನಾ ಕಾರಣದಿಂದ ಬಿಡುಗಡೆಯು ವಿಳಂಬವಾಗಿದೆ.

ಇದೀಗ ಬಿಡುಗಡೆಗೂ ಮುನ್ನವೇ ಹೊಸ TVS Apache RR 310 ಕೆಲ ಮಾಹಿತಿಗಳು ಲೀಕ್ ಆಗಿವೆ. ಅದರಂತೆ ಹೊಸ ಬೈಕ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವುದು ಬಹುತೇಕ ಖಚಿತವಾಗಿದೆ. ಅಪಾಚೆಯ ನೂತನ ಬೈಕ್‌ನ ವಿಶೇಷತೆಗಳೇನು ನೋಡೋಣ.

ಟಿವಿಎಸ್ ಅಪಾಚೆ ಆರ್‌ಆರ್ 310 ಎಂಜಿನ್: ಕಂಪನಿಯು ಈ ಬೈಕ್‌ನ ಎಂಜಿನ್‌ನಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿದೆ. ಹೆಸರಿನಲ್ಲಿ ತಿಳಿಸಿರುವಂತೆ ಇದು 310 ಸಿಸಿ ಸಿಂಗಲ್ ಸಿಲಿಂಡರ್ ಒಳಗೊಂಡಿರಲಿದೆ. ಇನ್ನು ಈ ಇಂಜಿನ್ ಬಿಎಂಡಬ್ಲ್ಯು ಜಿ 310 ಆರ್ ಎಂಜಿನ್ ಅನ್ನು ಆಧರಿಸಿರುವುದು ವಿಶೇಷ. ಈ ಎಂಜಿನ್ ಗರಿಷ್ಠ 34 ಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತದೆ. ಕಂಪನಿಯು ಇದರಲ್ಲಿ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ನೀಡುತ್ತಿದೆ. ಇದರ ಹೊರತಾಗಿ, ಬೈಕ್‌ನ ಶಕ್ತಿ ಮತ್ತು ಟಾರ್ಕ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಟಿವಿಎಸ್ ಅಪಾಚೆ ಆರ್‌ಆರ್ 310 ಬೆಲೆ ಮತ್ತು ವೈಶಿಷ್ಟ್ಯಗಳು: 2020ರಲ್ಲಿ ಇದೇ ಮಾದರಿಯ ಬೈಕ್ ಅನ್ನು ಕಂಪನಿಯು 4 ರೈಡ್ ಮೋಡ್‌ಗಳೊಂದಿಗೆ ಬಿಡುಗಡೆ ಮಾಡಿತ್ತು . ಅವುಗಳೆಂದರೆ ಸ್ಪೋರ್ಟ್ಸ್, ಸಿಟಿ, ಟ್ರ್ಯಾಕ್ ಮತ್ತು ರೈನ್ ಮೋಡ್ಗಳು. ಇದನ್ನೇ ಹೊಸ ಮಾದರಿಯಲ್ಲೂ ಮುಂದುವರೆಸಲಾಗಿದೆ. ಹಾಗೆಯೇ ಬೈಕಿನಲ್ಲಿರುವ ಎರಡು ಟೈರ್‌ಗಳಿಗೆ ಡಿಸ್ಕ್ ಬ್ರೇಕ್‌ಗಳನ್ನು ಬಳಸಿದೆ, ಇದರ ಹೊರತಾಗಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಹ ಇದರಲ್ಲಿ ನೀಡಲಾಗಿದೆ.

ಈ ಹಿಂದೆ ಈ ಬೈಕ್ ಅನ್ನು ಮಿಚೆಲಿನ್ ರೋಡ್ 5 ಟೈರಿನೊಂದಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಾರಿ ಟಿವಿಎಸ್ ಕಂಪೆನಿಯು ಅತ್ಯಾಧುನಿಕ ಪ್ರೊಟೊರ್ಕ್ ಎಕ್ಸ್ ಟ್ರೀಮ್ ರಾಡಿಕಲ್ಸ್ ರಬ್ಬರ್ ಟೈರ್ಗಳೊಂದಿಗೆ ಹೊಸ ಬೈಕ್ ಅನ್ನು ಪರಿಚಯಿಸಲಿದೆ.

ಇನ್ನು TVS Apache RR 310 11 ಲೀಟರ್ ಫ್ಯುಯೆಲ್ ಟ್ಯಾಂಕ್ ನೀಡಲಾಗಿದ್ದು, 30 ರಿಂದ 40 ಕಿ.ಮೀ ಮೈಲೇಜ್ ಸಿಗಲಿದೆ. ಹಾಗೆಯೇ ಹೊಸ ಅಪಾಚೆ ಆರ್‌ಆರ್ 310 ಬೆಲೆ ರೂ 2.50 ಲಕ್ಷದಿಂದ (ಎಕ್ಸ್ ಶೋ ರೂಂ, ದೆಹಲಿ) ರೂ 2.60 ಲಕ್ಷದವರೆಗೆ (ಎಕ್ಸ್ ಶೋರೂಂ, ದೆಹಲಿ). ಇರಲಿದೆ.