ಪ್ರಾಣಿಗಳ ರಕ್ಷಣೆಗೆ ಸಾರ್ವಜನಿಕರಿಂದ 1.3 ಕೋಟಿ ರೂ. ದೇಣಿಗೆ: ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ವನಶ್ರೀ ಸಿಂಗ್​

| Updated By: preethi shettigar

Updated on: Jul 11, 2021 | 1:45 PM

2020ರಲ್ಲಿ ಪ್ರಾಣಿಗಳ ಪಾಲನೆಗೆ 60 ಲಕ್ಷ ದೇಣಿಗೆ ಸಂಗ್ರಹವಾಗಿತ್ತು. ಈ ಬಾರಿ ನಟ ದರ್ಶನ್​ ಕರೆ ಕೊಟ್ಟ ಹಿನ್ನೆಲೆ ಈ ಹಣ ದುಪ್ಪಟ್ಟಾಗಿದೆ. ವನ್ಯಜೀವಿಗಳ ಸಂರಕ್ಷಣೆಗಾಗಿ ದೇಣಿಗೆ ನೀಡಿದವರ ಹೆಸರು ಪಟ್ಟಿ ಮಾಡಿ ಫಲಕ ಹಾಕುತ್ತೇವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ವನಶ್ರೀ ಸಿಂಗ್​ ತಿಳಿಸಿದ್ದಾರೆ.

ಪ್ರಾಣಿಗಳ ರಕ್ಷಣೆಗೆ ಸಾರ್ವಜನಿಕರಿಂದ 1.3 ಕೋಟಿ ರೂ. ದೇಣಿಗೆ: ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ವನಶ್ರೀ ಸಿಂಗ್​
ಬನ್ನೇರುಘಟ್ಟ ಜೈವಿಕ ಉದ್ಯಾನವನ
Follow us on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಲಾಕ್​ಡೌನ್​ ಸಮಯದಲ್ಲಿ ಪ್ರಾಣಿಗಳ ರಕ್ಷಣೆಗೆ ಕರೆ ಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಪ್ರಾಣಿಗಳ ರಕ್ಷಣೆಗೆ ಸಾರ್ವಜನಿಕರಿಂದ 1.3 ಕೋಟಿ ದೇಣಿಗೆ ಹಣ ಬಂದಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ನೈಸರ್ಗಿಕ ಸಂಪತ್ತು ಮತ್ತು ವನ್ಯಜೀವಿಗಳ ರಕ್ಷಣೆಗೆ ಹಲವರು ಸಹಾಯ ನೀಡಿದ್ದು, ಪ್ರಾಣಿಗಳನ್ನು ದತ್ತು ಪಡೆಯಲು ಹಲವರಿಂದ ಅರ್ಜಿ ಬಂದಿವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ವನಶ್ರೀ ಸಿಂಗ್​ ಹೇಳಿಕೆ ನೀಡಿದ್ದಾರೆ.

2020ರಲ್ಲಿ ಪ್ರಾಣಿಗಳ ಪಾಲನೆಗೆ 60 ಲಕ್ಷ ದೇಣಿಗೆ ಸಂಗ್ರಹವಾಗಿತ್ತು. ಈ ಬಾರಿ ನಟ ದರ್ಶನ್​ ಕರೆ ಕೊಟ್ಟ ಹಿನ್ನೆಲೆ ಈ ಹಣ ದುಪ್ಪಟ್ಟಾಗಿದೆ. ವನ್ಯಜೀವಿಗಳ ಸಂರಕ್ಷಣೆಗಾಗಿ ದೇಣಿಗೆ ನೀಡಿದವರ ಹೆಸರು ಪಟ್ಟಿ ಮಾಡಿ ಫಲಕ ಹಾಕುತ್ತೇವೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಡಿ ವನಶ್ರೀ ಸಿಂಗ್​ ತಿಳಿಸಿದ್ದಾರೆ.

ದರ್ಶನ್​ ಹೇಳಿದ ಒಂದೇ ಮಾತಿಗೆ 6 ದಿನದಲ್ಲಿ ಹರಿದು ಬಂದಿತ್ತು 1 ಕೋಟಿ ರೂ.!
ನಟ ದರ್ಶನ್​ ಅವರ ಪ್ರಾಣಿಪ್ರೀತಿಯ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ಲಾಕ್​ಡೌನ್​ ಕಾರಣದಿಂದ ಮೃಗಾಲಯಗಳ ಪ್ರಾಣಿ-ಪಕ್ಷಿಗಳಿಗೆ ಸಂಕಷ್ಟ ಎದುರಾಗಿತ್ತು. ಪ್ರವಾಸಿಗರು ಬಾರದೇ ಇರುವುದರಿಂದ ಹಣ ಸಂಗ್ರಹ ಆಗುತ್ತಿರಲಿಲ್ಲ. ಆದ್ದರಿಂದ ಪ್ರಾಣಿಗಳ ದಿನನಿತ್ಯದ ಆಹಾರ ಮತ್ತು ನಿರ್ವಹಣೆಗೆ ತೊಂದರೆ ಆಗುತ್ತಿದೆ ಎಂಬುದನ್ನು ಗಮನಿಸಿದ ನಟ ದರ್ಶನ್​ ಅವರು ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದರು. ಕೈಲಾದಷ್ಟು ಸಹಾಯ ಮಾಡಿ, ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದರು. ಅವರ ಮಾತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಒಂದು ವಾರದಲ್ಲಿ ಬರೋಬ್ಬರಿ 1 ಕೋಟಿ ರೂ. ಸಂಗ್ರಹ ಆಗಿದೆ.

‘ಚಾಲೆಂಜಿಂಗ್​ ಸ್ಟಾರ್’ ಅವರ ಅಭಿಮಾನಿ ಬಳಗ ದೊಡ್ಡದು. ಅವರು ಏನೇ ಹೇಳಿದರೂ ಜನರು ಗೌರವದಿಂದ ಪಾಲಿಸುತ್ತಾರೆ. ಮೃಗಾಲಯಗಳಿಗೆ ನೆರವು ನೀಡಲು ಅವರು ಮಾಡಿದ ಮನವಿಗೆ ಅದ್ಭುತ ಸ್ಪಂದನೆ ಸಿಕ್ಕಿದೆ ಕರ್ನಾಟಕದ ಎಲ್ಲ 9 ಮೃಗಾಲಯಗಳಿಗೂ ದೇಣಿಗೆ ಹರಿದು ಬಂದಿದೆ. ಎಲ್ಲ ಸೇರಿದರೆ ಕೇವಲ ಆರು ದಿನಗಳಲ್ಲಿ ಒಂದು ಕೋಟಿ ರೂ. ಸಂಗ್ರಹ ಆಗಿದೆ. ಇನ್ನೂ ಕೂಡ ದೇಣಿಗೆ ಹರಿದುಬರುತ್ತಿರುವುದು ಖುಷಿಯ ವಿಚಾರ.

ಈ ಬಗ್ಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರವೇ ಅಧಿಕೃತವಾಗಿ ಟ್ವಿಟರ್​ ಖಾತೆ ಮೂಲಕ ಮಾಹಿತಿ ಹಂಚಿಕೊಂಡಿದೆ. ಅಲ್ಲದೆ, ಇದಕ್ಕೆ ಕಾರಣರಾದ ದರ್ಶನ್​ ಅವರಿಗೆ ಧನ್ಯವಾದ ತಿಳಿಸಲಾಗಿದೆ. ಯಾವ ಮೃಗಾಲಯಕ್ಕೆ ಎಷ್ಟು ಹಣ ಬಂದಿದೆ ಎಂಬುದರ ವಿವರವನ್ನೂ ನೀಡಲಾಗಿದೆ.

ಮೈಸೂರು ಮೃಗಾಲಯಕ್ಕೆ 51,75,700, ಬನ್ನೇರುಘಟ್ಟ ಮೃಗಾಲಯಕ್ಕೆ 29,83,000, ಶಿವಮೊಗ್ಗ ಮೃಗಾಲಯಕ್ಕೆ 7,24,800, ಗದಗ ಮೃಗಾಲಯಕ್ಕೆ 2,66,400, ಹಂಪಿ ಮೃಗಾಲಯಕ್ಕೆ 2,42,200, ಬೆಳಗಾವಿ ಮೃಗಾಲಯಕ್ಕೆ 2,22,300, ದಾವಣಗೆರೆ ಮೃಗಾಲಯಕ್ಕೆ 1,94,900, ಚಿತ್ರದುರ್ಗ ಮೃಗಾಲಯಕ್ಕೆ 1,49,300, ಕಲಬುರಗಿ ಮೃಗಾಲಯಕ್ಕೆ 89,300 ರೂಪಾಯಿ ಸಂಗ್ರಹವಾಗಿದ್ದು, ಒಟ್ಟು 1,00,47,900 ರೂಪಾಯಿ ಸಂಗ್ರಹವಾಗಿದೆ.

ಇದನ್ನೂ ಓದಿ:
Darshan: ದರ್ಶನ್​ ಹೇಳಿದ ಒಂದೇ ಮಾತಿಗೆ 6 ದಿನದಲ್ಲಿ ಹರಿದು ಬಂತು 1 ಕೋಟಿ ರೂ.! ಯಾವ ಮೃಗಾಲಯಕ್ಕೆ ಎಷ್ಟು ಲಕ್ಷ?

Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರೆಗೆ ಓಗೊಟ್ಟು ಮೈಸೂರು ಮೃಗಾಲಯದಿಂದ ಮೂರು ಹಕ್ಕಿಗಳನ್ನು ದತ್ತು ಪಡೆದ ದಂಪತಿ