ಕ್ಷುಲ್ಲಕ ವಿಚಾರಕ್ಕೆ 7 ಸ್ಟಾರ್ ಹೋಟೆಲ್ಗೆ ನುಗ್ಗಿ ದಾಂಧಲೆ; ಐವರು ಬಂಧನ
ನಾವು ಲೋಕಲ್ ಹುಡುಗರು, ನೀನು ಫೋನ್ ಮಾಡಿ ಕರೆಸುವ ತನಕ ಕಾಯಬೇಕಾ ಎಂದು ಯುವಕರು ಗಲಾಟೆ ಮಾಡಿದ್ದಾರೆ. ಎಲ್ಲಿಂದಲೋ ಬಂದು ಇಲ್ಲಿ ವ್ಯಾಪಾರ ಮಾಡುತ್ತಿದ್ದೀರಾ. ನಮಗೆ ಎದುರು ಮಾತಾಡ್ತೀರಾ ಅಂತ ಗಲಾಟೆ ಮಾಡಿದ್ದಾರೆ.
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕರು ಹೋಟೆಲ್ಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ. ಜುಲೈ 4 ರಂದು ರಾತ್ರಿ 8.30 ರ ಸುಮಾರಿಗೆ ಭುವನೇಶ್ವರಿನಗರ ಮುಖ್ಯರಸ್ತೆಯಲ್ಲಿರುವ 7 ಸ್ಟಾರ್ ಹೋಟೆಲ್ನಲ್ಲಿ ದಾಂಧಲೆ ನಡೆದಿದೆ. ಮೂವರು ಯುವಕರು ಹೊಟೇಲ್ ಸಿಬ್ಬಂದಿ ಮನೀಶ್ ಎಂಬಾತನನ್ನ ಕೇಳಿಕೊಂಡು ಬಂದಿದ್ದರು. ಈ ವೇಳೆ ಮನೀಶ್ ಊಟ ಪಾರ್ಸೆಲ್ ಕೊಡೊಕೆ ಹೋಗಿದ್ದಾನೆ ಎಂದು ಮಾಲೀಕ ಹೇಳಿದರು. ಈ ವೇಳೆ ಮಾಲೀಕ ಹಾಗು ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ.
ನಾವು ಲೋಕಲ್ ಹುಡುಗರು, ನೀನು ಫೋನ್ ಮಾಡಿ ಕರೆಸುವ ತನಕ ಕಾಯಬೇಕಾ ಎಂದು ಯುವಕರು ಗಲಾಟೆ ಮಾಡಿದ್ದಾರೆ. ಎಲ್ಲಿಂದಲೋ ಬಂದು ಇಲ್ಲಿ ವ್ಯಾಪಾರ ಮಾಡುತ್ತಿದ್ದೀರಾ. ನಮಗೆ ಎದುರು ಮಾತಾಡ್ತೀರಾ ಅಂತ ಗಲಾಟೆ ಮಾಡಿದ್ದಾರೆ. ಅಲ್ಲದೇ ಸ್ಥಳಕ್ಕೆ ಒಂದಷ್ಟು ಸ್ಥಳೀಯ ಯುವಕರನ್ನ ಕರೆಯಿಸಿಕೊಂಡು ದಾಂಧಲೆ ಮಾಡಿದ್ದಾರೆ.
ಹೋಟೆಲ್ ಮಾಲೀಕರಾದ ಆಂಜನೇಯಲು ಹಾಗೂ ಹರೀಶ್ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದ್ದು, ದೊಣ್ಣೆ, ಕಲ್ಲುಗಳಿಂದ ಹೋಟೆಲ್ ಗಾಜು, ಟೇಬಲ್, ಚೇರ್ಗಳನ್ನು ಕಿಡಿಗೇಡಿಗಳು ಪುಡಿ ಪುಡಿ ಮಾಡಿದ್ದಾರೆ. ಯುವಕರ ಗುಂಪು ಹೂ ಕುಂಡಗಳನ್ನ ಗಾಜುಗಳ ಮೇಲೆ ಎಸೆದು ಧ್ವಂಸಗೊಳಿಸಿದ್ದಾರೆ. ಕಿಡಿಗೇಡಿಗಳ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಶಿವರಾಜ್, ವಿಶ್ವನಾಥ್ ಮತ್ತು ಚೇತನ್ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ
Crime News: ಬಾಯ್ಫ್ರೆಂಡ್ನನ್ನು ಕೆಲಸದಿಂದ ಕಿತ್ತೊಗೆದ ಕಂಪನಿಗೆ ಗರ್ಲ್ಫ್ರೆಂಡ್ ಮಾಡಿದ್ದೇನು ಗೊತ್ತಾ?
(Bengaluru Police have arrested the youths who broke into a 7 star hotel)