ಶರಾವತಿ ಹಿನ್ನೀರಿನಲ್ಲಿ ಕಾಳಿಂಗನ ಸ್ವಚ್ಛಂದ ಓಡಾಟ.. ಅಪರೂಪದ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆ

ಶರಾವತಿ ಹಿನ್ನೀರಿನಲ್ಲಿ ಕಾಳಿಂಗ ಸರ್ಪವೊಂದು ಹರಿದಾಡಿದ ಅಪರೂಪದ ದೃಶ್ಯ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿಗ್ಗೇರಿಯಲ್ಲಿ ಕಂಡುಬಂದಿದೆ. ಕಾಡಿಗ್ಗೇರಿಯ ನಿವಾಸಿ ಈಶ್ವರಣ್ಣನ ಮನೆಯ ಸಮೀಪದಲ್ಲಿರುವ ಶರಾವತಿ ಹಿನ್ನೀರಿನಲ್ಲಿ ಕಾಳಿಂಗ ಸರ್ಪ ಕಂಡುಬಂತು .

ಶರಾವತಿ ಹಿನ್ನೀರಿನಲ್ಲಿ ಕಾಳಿಂಗನ ಸ್ವಚ್ಛಂದ ಓಡಾಟ.. ಅಪರೂಪದ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆ
ಕಾಳಿಂಗ ಸರ್ಪ

Updated on: Dec 03, 2020 | 2:35 PM

ಶಿವಮೊಗ್ಗ: ಶರಾವತಿ ಹಿನ್ನೀರಿನಲ್ಲಿ ಕಾಳಿಂಗ ಸರ್ಪವೊಂದು ಹರಿದಾಡಿದ ಅಪರೂಪದ ದೃಶ್ಯ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿಗ್ಗೇರಿಯಲ್ಲಿ ಕಂಡುಬಂದಿದೆ. ಕಾಡಿಗ್ಗೇರಿಯ ನಿವಾಸಿ ಈಶ್ವರಣ್ಣನ ಮನೆಯ ಸಮೀಪದಲ್ಲಿರುವ ಶರಾವತಿ ಹಿನ್ನೀರಿನಲ್ಲಿ ಕಾಳಿಂಗ ಸರ್ಪ ಕಂಡುಬಂತು .

ಯಾರ ಗೋಜಿಗೂ ಹೋಗದೆ, ತನ್ನ ಪಾಡಿಗೆ ತಾನು ಸರಾಗವಾಗಿ  ಈಜುತ್ತಾ ಸಾಗುತ್ತಿರುವ ದೃಶ್ಯ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿತು. ಸುಮಾರು 12 ಅಡಿ ಉದ್ದದ ಕಾಳಿಂಗನನ್ನು ನೋಡಿ ಜನರು ಆಶ್ಚರ್ಯಚಕಿತರಾದರು. ಕಾಳಿಂಗನ ಸ್ವಚ್ಛಂದ ಓಡಾಟವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದರು.

ಕಾಳಿಂಗ ಸರ್ಪದ ಸ್ವಚ್ಛಂದ ಓಡಾಟದ ದೃಶ್ಯ

Published On - 2:27 pm, Thu, 3 December 20