ತಡರಾತ್ರಿ ತವರೂರು ಸೇರಿದ 1200 ವಲಸೆ ಕಾರ್ಮಿಕರು: ಸಂಸದ, ಶಾಸಕರಿಂದ ಸ್ವಾಗತ

|

Updated on: May 12, 2020 | 7:05 AM

ಕಲಬುರಗಿ: ಕೆಲಸಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದ ಕಾರ್ಮಿಕರನ್ನು ತಮ್ಮ ತಮ್ಮ ತವರಿಗೆ ಸೇರಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಇದೇ ರೀತಿ ಮುಂಬೈನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ವಿಶೇಷ ರೈಲಿನಲ್ಲಿ ಕಲಬುರಗಿಗೆ ಕರೆತರಲಾಗಿದೆ. ತಡರಾತ್ರಿ 2 ಗಂಟೆ ಸುಮಾರಿಗೆ ಮುಂಬೈನಿಂದ ವಿಶೇಷ ರೈಲಿನಲ್ಲಿ 1,200 ವಲಸೆ ಕಾರ್ಮಿಕರು ಕಲಬುರಗಿ ನಗರಕ್ಕೆ ಆಗಮಿಸಿದ್ದಾರೆ. ಸಂಸದ ಡಾ.ಉಮೇಶ್ ಜಾಧವ್, ಕಲಬುರಗಿ ಗ್ರಾಮಾಂತರ ಶಾಸಕ ಬಸವರಾಜ್ ಮತ್ತಿಮೂಡ್ ಕಾರ್ಮಿಕರನ್ನು ಸ್ವಾಗತಿಸಿದ್ದಾರೆ. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಸ್ಕ್ರೀನಿಂಗ್ […]

ತಡರಾತ್ರಿ ತವರೂರು ಸೇರಿದ 1200 ವಲಸೆ ಕಾರ್ಮಿಕರು: ಸಂಸದ, ಶಾಸಕರಿಂದ ಸ್ವಾಗತ
Follow us on

ಕಲಬುರಗಿ: ಕೆಲಸಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದ ಕಾರ್ಮಿಕರನ್ನು ತಮ್ಮ ತಮ್ಮ ತವರಿಗೆ ಸೇರಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಇದೇ ರೀತಿ ಮುಂಬೈನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ವಿಶೇಷ ರೈಲಿನಲ್ಲಿ ಕಲಬುರಗಿಗೆ ಕರೆತರಲಾಗಿದೆ.

ತಡರಾತ್ರಿ 2 ಗಂಟೆ ಸುಮಾರಿಗೆ ಮುಂಬೈನಿಂದ ವಿಶೇಷ ರೈಲಿನಲ್ಲಿ 1,200 ವಲಸೆ ಕಾರ್ಮಿಕರು ಕಲಬುರಗಿ ನಗರಕ್ಕೆ ಆಗಮಿಸಿದ್ದಾರೆ. ಸಂಸದ ಡಾ.ಉಮೇಶ್ ಜಾಧವ್, ಕಲಬುರಗಿ ಗ್ರಾಮಾಂತರ ಶಾಸಕ ಬಸವರಾಜ್ ಮತ್ತಿಮೂಡ್ ಕಾರ್ಮಿಕರನ್ನು ಸ್ವಾಗತಿಸಿದ್ದಾರೆ. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ವಲಸೆ ಕಾರ್ಮಿಕರಿಗೆ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಸ್ಕ್ರೀನಿಂಗ್ ಬಳಿಕ ಕಲಬುರಗಿ ಜಿಲ್ಲೆಯ ಹಲವೆಡೆ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ.

Published On - 6:51 am, Tue, 12 May 20