
ಬೆಂಗಳೂರು: ಕರುನಾಡಿನಲ್ಲಿ ಕೊರೊನಾ ಕಂಡ ಕಂಡವರ ಮೈಹೊಕ್ಕಿ ಸುಮ್ಮನಾಗುತ್ತಿಲ್ಲ, ಸಾವಿನ ಸವಾರಿಯನ್ನೂ ಮಾಡುತ್ತಿದೆ. ತನ್ನ ಬಲೆಗೆ ನಿಧಾನವಾಗಿ ಕೆಡವಿಕೊಂಡು, ಪ್ರಾಣ ತೆಗೆದು ಕೇಕೆ ಹಾಕುತ್ತಿದೆ. ಅದರಲ್ಲೂ ದಿನ ಕಳೆದಂತೆ ಬರುವ ಸಾವಿನ ನಂಬರ್ ಕೊರೊನಾದ ಭಯವನ್ನ ಮತ್ತಷ್ಟು ಹೆಚ್ಚಿಸುತ್ತಿದೆ.
ರಾಜ್ಯದಲ್ಲಿ 1600 ದಾಟಿದ ಸಾವಿನ ಸಂಖ್ಯೆ!
ಯೆಸ್ ರಾಜ್ಯದಲ್ಲಿ ಎರಡು ದಿನ ಸಾವಿನ ಸಂಖ್ಯೆ ಕಡಿಮೆಯಾಗಿತ್ತು. ಜನ ಕೂಡಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ನಿನ್ನೆ ಮತ್ತೆ ಹಳೇ ಏಟು ಕೊಟ್ಟಿದೆ. 97 ಸೋಂಕಿತರ ಪ್ರಾಣ ತೆಗೆದಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾದಿಂದಲೇ ಸತ್ತವರ ಸಂಖ್ಯೆ 1,616 ಕ್ಕೆ ಏರಿಕೆಯಾಗಿದೆ. ಹಾಗಿದ್ರೆ ಕಳೆದ ಐದು ದಿನಗಳಲ್ಲಿ ಸಾವಿನ ಸಂಖ್ಯೆಯನ್ನ ನೋಡೋದಾದ್ರೆ.
ಬಲಿ ಪಡೆದು ರಣಕೇಕೆ
ಇನ್ನು ಕಳೆದ ಐದು ದಿನಗಳಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆಯಲ್ಲಿ ಏರುಪೇರು ಆಗಿದೆ. ಜುಲೈ 19 ರಂದು ರಾಜ್ಯದಲ್ಲಿ 91 ಜನ ಕೊರೊನಾಕ್ಕೆ ಬಲಿಯಾಗಿದ್ರೆ, ಜುಲೈ 20 ರಂದು ಸಾವಿನ ಸಂಖ್ಯೆ ಕೊಂಚ ತಗ್ಗಿತ್ತು. ಅಂದ್ರೆ 72 ಜನ ಸಾವನ್ನಪ್ಪಿದ್ರೂ. ಇನ್ನು ಜುಲೈ 21 ರಂದು 61 ಜನ ಬಲಿಯಾಗಿದ್ರೆ, ಜುಲೈ 22 ರಂದು 55 ಜನಕ್ಕೆ ಕೊರಾನಾಕ್ಕೆ ಬಲಿಯಾಗಿದ್ದಾರೆ. ಈ ಮೂರು ದಿನಗಳಲ್ಲಿ ಕೊರೊನಾ ಸೋಂಕಿತರು ಸಾವಿನ ಸಂಖ್ಯೆ ಇಳಿಕೆ ಆಗುತ್ತಿರುವುದು ನೋಡಿ ಎಲ್ಲರು ನೆಮ್ಮದಿಯಿಂದ ಇದ್ರೂ. ಆದ್ರೆ ನಿನ್ನೆ ಮತ್ತೆ ಶಾಕ್ ಕೊಟ್ಟ ಮಾರಿ 97 ಜನರನ್ನ ಬಲಿ ಪಡೆದಿದೆ. ಅಲ್ಲಿಗೆ ಇಲ್ಲಿ ತನಕ ಮಾರಿಯ ಆಟಕ್ಕೆ 1,616 ಜನ ಬಲಿಯಾಗಿದ್ದಾರೆ.
ಕೊರೊನಾರ್ಭಟಕ್ಕೆ ರಾಜಧಾನಿಯಲ್ಲಿ ನಿನ್ನೆ 48 ಬಲಿ!
ಇನ್ನು ಬೆಂಗಳೂರಲ್ಲಿ ಕೊರೊನಾ ಕೇಕೆಗೆ ನಿನ್ನೆ ಬರೋಬ್ಬರಿ 48 ಮಂದಿ ಉಸಿರು ಚೆಲ್ಲಿದ್ದಾರೆ. ಈ ಮೂಲಕ ಬೆಂಗಳೂರಲ್ಲೇ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ783 ಕ್ಕೆ ಜಿಗಿದಿದೆ. ನಿತ್ಯ ಕೊಲ್ಲುಲ್ಲತೇ ಹೊರಟಿರೋ ಹೆಮ್ಮಾರಿ ಹಲವರು ಉಸಿರನ್ನೇ ಬಿಗಿ ಹಿಡಿದಿದೆ. ಇನ್ನು ಬೆಂಗಳೂರಿನಲ್ಲಿ ಕಳೆದ 5 ದಿನ ಗಳ ಸಾವಿನ ಲೆಕ್ಕ ನೋಡೋದಾದ್ರೆ.
ಬೆಂಗಳೂರಿನಲ್ಲಿ ಕೊರೊನಾ ಕೇಕೆ
ಇನ್ನು ಬೆಂಗಳೂರಿನಲ್ಲೂ ಅಷ್ಟೇ ಸಾವಿನ ಸಂಖ್ಯೆ ಇಳಿಮುಖವಾಗಿ ಮತ್ತೆ ಏರಿಕೆಯಾಗಿದೆ. ಇನ್ನು ಜುಲೈ 19 ರಂದು 36 ಜನ ರಾಜಧಾನಿಯಲ್ಲಿ ಉಸಿರು ಚೆಲ್ಲಿದ್ರೆ, ಜುಲೈ 20 ರಂದು 31 ಜನರ ಪ್ರಾಣ ಹೋಗಿತ್ತು. ಇನ್ನು ಜುಲೈ 21 ರಂದು 22 ಜನ ಬಲಿಯಾಗಿದ್ರೆ, ಜುಲೈ 22 ರಂದು 15 ಜನ ಮೃತಪಟ್ಟಿದ್ರು. ಜುಲೈ 19 ರಿಂದ ಮೊನ್ನೆ ತನತ ಸೋಂಕಿತರ ಸಾವಿನ ಸಂಖ್ಯೆ ಬೆಂಗಳೂರಿನಲ್ಲಿ ಕಮ್ಮಿಯಾಗಿತ್ತು. ಆದ್ರೆ ನಿನ್ನೆ ಮತ್ತೆ ಅಸಲಿ ಆಟ ಶುರು ಮಾಡಿದ ಮಾರಿ 48 ಜನರ ಉಸಿರನ್ನ ನಿಲ್ಲಿಸಿದೆ.
ಒಟ್ನಲ್ಲಿ ರಾಜ್ಯದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಯ್ತು ಅನ್ನುವಷ್ಟರಲ್ಲಿ ಮತ್ತೆ ಜಾಸ್ತಿ ಆಗಿದೆ. ಇದು ಕರುನಾಡಿನ ಜನರಲ್ಲಿ ಮತ್ತಷ್ಟು ಭಯ ಹುಟ್ಟಿಸಿದೆ. ನೀವು ಆದಷ್ಟು ಎಚ್ಚರ ವಹಿಸಿ ಕೊರೊನಾ ಸಾವಿನ ಆಟದಿಂದ ತಪ್ಪಿಸಿಕೊಳ್ಳಿ.