ಇಂಥ ಅದ್ಭುತ ಕಲ್ಲು-ಬಂಡೆಗಳ ರಮಣೀಯ ದೃಶ್ಯ ಕರ್ನಾಟಕದಲ್ಲಿಯೇ ನೋಡ ಸಿಗುತ್ತೆ ಗೊತ್ತಾ?

ಬಳ್ಳಾರಿ: ಏಷ್ಯಾ ಖಂಡದ ಎರಡನೇ ಅತಿದೊಡ್ಡ ಕರಡಿಧಾಮ ಅನ್ನೋ ಹೆಗ್ಗಳಿಕೆಯಿರುವ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿಧಾಮ ಈಗ ಪ್ರವಾಸಿತಾಣವಾಗುವತ್ತ ತನ್ನ ಸೌಂದರ್ಯವನ್ನು ಹೊರಜಗತ್ತಿಗೆ ತೆರೆದುಕೊಳ್ಳುತ್ತಿದೆ. ಅದರಲ್ಲೂ ಇಲ್ಲಿನ ಡೊಕ್ಕಲು ಗುಂಡು ಎನ್ನುವ ಬೆರಗುಗೊಳಿಸುವ ಕಲ್ಲುಗಳು ಈಗ ಪ್ರಮುಖ ಆಕರ್ಷಣೆಯಾಗುತ್ತಿವೆ. ಬಳ್ಳಾರಿಯ ಹೆಮ್ಮೆ ಗುಡೇಕೋಟೆ ಕರಡಿಧಾಮ ಗುಡೇಕೋಟೆಯಲ್ಲಿ ಆದಿಮಾನವನು ವಾಸಿಸುವ ಗುಹೆಗಳನ್ನು ಈಗಾಗಲೇ ಇತಿಹಾಸ ತಜ್ಞರು ಸಂಶೋಧನೆ ಮೂಲಕ ಪತ್ತೆ ಹಚ್ಚಿದ್ದಾರೆ. ಈ ಪ್ರದೇಶದಲ್ಲಿ ಗುಡೇಕೋಟೆ ಪಾಳೇಗಾರರು ಸಹ ಆಳ್ವಿಕೆ ನಡೆಸಿದ್ದರಿಂದ ಈ ಪ್ರದೇಶ ಅಪರೂಪದ […]

ಇಂಥ ಅದ್ಭುತ ಕಲ್ಲು-ಬಂಡೆಗಳ ರಮಣೀಯ ದೃಶ್ಯ ಕರ್ನಾಟಕದಲ್ಲಿಯೇ ನೋಡ ಸಿಗುತ್ತೆ ಗೊತ್ತಾ?
Follow us
Guru
|

Updated on: Jul 23, 2020 | 8:47 PM

ಬಳ್ಳಾರಿ: ಏಷ್ಯಾ ಖಂಡದ ಎರಡನೇ ಅತಿದೊಡ್ಡ ಕರಡಿಧಾಮ ಅನ್ನೋ ಹೆಗ್ಗಳಿಕೆಯಿರುವ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಕರಡಿಧಾಮ ಈಗ ಪ್ರವಾಸಿತಾಣವಾಗುವತ್ತ ತನ್ನ ಸೌಂದರ್ಯವನ್ನು ಹೊರಜಗತ್ತಿಗೆ ತೆರೆದುಕೊಳ್ಳುತ್ತಿದೆ. ಅದರಲ್ಲೂ ಇಲ್ಲಿನ ಡೊಕ್ಕಲು ಗುಂಡು ಎನ್ನುವ ಬೆರಗುಗೊಳಿಸುವ ಕಲ್ಲುಗಳು ಈಗ ಪ್ರಮುಖ ಆಕರ್ಷಣೆಯಾಗುತ್ತಿವೆ.

ಬಳ್ಳಾರಿಯ ಹೆಮ್ಮೆ ಗುಡೇಕೋಟೆ ಕರಡಿಧಾಮ ಗುಡೇಕೋಟೆಯಲ್ಲಿ ಆದಿಮಾನವನು ವಾಸಿಸುವ ಗುಹೆಗಳನ್ನು ಈಗಾಗಲೇ ಇತಿಹಾಸ ತಜ್ಞರು ಸಂಶೋಧನೆ ಮೂಲಕ ಪತ್ತೆ ಹಚ್ಚಿದ್ದಾರೆ. ಈ ಪ್ರದೇಶದಲ್ಲಿ ಗುಡೇಕೋಟೆ ಪಾಳೇಗಾರರು ಸಹ ಆಳ್ವಿಕೆ ನಡೆಸಿದ್ದರಿಂದ ಈ ಪ್ರದೇಶ ಅಪರೂಪದ ಸ್ಮಾರಕಗಳು, ನೈಸರ್ಗಿಕ ವಿಸ್ಮಯಗಳ ತಾಣವಾಗಿದೆ. 2013ರಲ್ಲಿ ಗುಡೇಕೋಟೆ ಕರಡಿಧಾಮವನ್ನು ಏಷ್ಯಾ ಖಂಡದ ಎರಡನೇ ಅತಿ ದೊಡ್ಡ ಕರಡಿಧಾಮ ಎಂದು ಘೋಷಣೆಯಾಗಿದೆ. ಆಗ 4761 ಹೆಕ್ಟೇರ್ ಪ್ರದೇಶದಷ್ಟಿದ್ದ ಇದಕ್ಕೆ 2019-20 ರಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶವನ್ನು ಸೇರ್ಪಡೆ ಮಾಡಲಾಗಿದೆ.

ಜೀವವೈವಿಧ್ಯಗಳ ತಾಣ ಗುಡೆಕೋಟೆ ಕರಡಿಧಾಮ ಕರಡಿಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದ ಸುತ್ತ ಅರಣ್ಯ ಇಲಾಖೆ ತಡೆಗೋಡೆ ನಿರ್ಮಿಸಿ ಜನ, ಜಾನುವಾರು ಕಾಡಿಗೆ ಬರದಂತೆ ನಿರ್ಭಂಧ ಹೇರಿದೆ. ಹೀಗಾಗಿ ಗುಡೇಕೋಟೆ ಕರಡಿಧಾಮದಲ್ಲಿ ಸಹಸ್ರಾರು ಜೀವವೈವಿಧ್ಯಗಳು ತನ್ನ ಪ್ರಬೇಧಗಳನ್ನು ಹೆಚ್ಚಳ ಮಾಡಿಕೊಳ್ಳಲು ಸಾಧ್ಯವಾಗಿದೆ. ಅಲ್ಲದೇ ಅಳಿವಿನಂಚಿಲ್ಲಿದ್ದ ಎಷ್ಟೋ ಸಸ್ತನಿಗಳು, ಪಕ್ಷಿಗಳು, ಚಿಟ್ಟೆಗಳು, ಸರೀಸೃಪಗಳು ಇಲ್ಲಿ ತಮ್ಮ ಸಂತತಿಯನ್ನು ವೃದ್ಧಿ ಮಾಡಿಕೊಳ್ಳಲು ಸಾಧ್ಯವಾಗಿದೆ. ಜೊತೆಗೆ ಪ್ರಾಕೃತಿಕವಾಗಿ ಈಗಾಗಲೇ ಇರುವ ಇಲ್ಲಿಯ ನೈಸರ್ಗಿಕ ಕಲ್ಲು ಬಂಡೆಗಳು, ಜಲಪಾತಗಳು ಇವುಗಳಿಗೆ ಸಂರಕ್ಷಣೆಯಾಗಿವೆ.

ವಿಸ್ಮಯ ಕಲ್ಲು ಬಂಡೆಗಳು ಪ್ರಮುಖ ಆಕರ್ಷಣೆ ಅದರಲ್ಲೂ ಗುಡೇಕೋಟೆ ಕರಡಿಧಾಮ ಪ್ರದೇಶದಲ್ಲಿರುವ ವಿಸ್ಮಯ ಕಲ್ಲು ಬಂಡೆಗಳು ನೋಡುಗರನ್ನು ಮಂತ್ರಮುಗ್ದರನ್ನಾಗಿಸುತ್ತಿವೆ. ಸ್ಥಳೀಯರು ಈ ಬಂಡೆಗಳನ್ನು ಡೊಕ್ಕಲು ಬಂಡೆಗಳು ಎಂದು ಕರೆಯುತ್ತಾರೆ. ಈ ಪ್ರದೇಶ ನೋಡಬೇಕೆಂದರೆ ಗುಡೇಕೋಟೆಯಿಂದ 5 ಕಿ.ಮೀ.ದೂರ ಸಂಚರಿಸಬೇಕು. ಗುಡೇಕೋಟೆಯಿಂದ ಸರ್ವೋದಯ ಗ್ರಾಮಕ್ಕೆ ಬಂದರೆ ಅಲ್ಲಿಂದ ೩ ಕಿ.ಮೀ. ಕರಡಿಧಾಮ ಪ್ರದೇಶದ ವೀಕ್ಷಣಾ ಗೋಪುರದ ಹತ್ತಿರ ಹೋಗಬೇಕು. ಅಲ್ಲಿಂದ 500 ಮೀಟರ್ ದೂರದಲ್ಲಿ ಬೆಟ್ಟ ಹತ್ತಿ ಇಳಿದರೆ ಈ ಡೊಕ್ಕಲು ಗುಂಡು ಎಂಬ ವಿಸ್ಮಯ ಕಲ್ಲುಗಳನ್ನು ನೋಡಲು ಸಾಧ್ಯವಾಗುತ್ತದೆ.

ಪ್ರವಾಸಿ ತಾಣವಾಗುವತ್ತ ಕರಡಿಧಾಮ ಈ ವಿಸ್ಮಯ ಕಲ್ಲುಗಳು, ಅಂದಾಜು 20 ಅಡಿ ಎತ್ತರ ಇವೆ. ಇಂತಹ ವಿಸ್ಮಯ ಕಲ್ಲುಗಳು ಇಲ್ಲಿ ಅಪಾರವಾಗಿ ಸಿಗುತ್ತಿದ್ದು ಈ ಬಗ್ಗೆ ಸಂಶೋಧನೆ ಅಗತ್ಯವಾಗಿದೆ. ಆದರೆ ಇವು ಕರಡಿಧಾಮ ಪ್ರದೇಶದಲ್ಲಿರುವುದ್ದರಿಂದ ಸದ್ಯಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಗುಡೇಕೋಟೆ ಕರಡಿಧಾಮ ಪ್ರವಾಸಿತಾಣವಾಗುವತ್ತ ಹೆಜ್ಜೆ ಇಟ್ಟಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಯೊಂದಿಗೆ ಸಾರ್ವಜನಿಕರ ವೀಕ್ಷಣೆಗೆ ಸಿಗಲಿವೆ.

ಸೆಳೆಯುತ್ತಿರುವ ಚಿಕ್ಕ ಚಿಕ್ಕ ಜಲಪಾತಗಳು ಗುಡೇಕೋಟೆ ಕರಡಿಧಾಮದಲ್ಲಿ ಸಹಸ್ರಾರು ಜೀವವೈವಿಧ್ಯಗಳಿರುವಂತೆ ಅಸಂಖ್ಯಾತ ನೈಸರ್ಗಿಕ ತಾಣಗಳೂ ಇವೆ. ಕರಡಿಧಾಮ ಪ್ರದೇಶದಲ್ಲಿ ಇರುವ ಚಿಕ್ಕ ಚಿಕ್ಕ ಜಲಪಾತಗಳಿಗೆ ಲೆಕ್ಕವಿಲ್ಲ. ಬೆರಗು ಮೂಡಿಸುವ ಬಂಡೆಗಳಿಗೆ ಕೊರತೆ ಇಲ್ಲ. ಅಳಿವಿನಂಚಿನ ಎಷ್ಟೋ ಪ್ರಾಣಿ, ಪಕ್ಷಿಗಳು ಇಲ್ಲಿ ವಾಸಿಸುತ್ತಿವೆ. ಸರ್ಕಾರ ಈಗ ಗುಡೇಕೋಟೆ ಕರಡಿಧಾಮವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತಿದ್ದು, ಸಂಪೂರ್ಣವಾಗುವವರೆಗೆ ಸಾರ್ವಜನಿಕರು ಕಾಯಬೇಕಿದೆ.-ಬಸವರಾಜ ಹರನಹಳ್ಳಿ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM