ತರಕಾರಿ ವ್ಯಾಪಾರಿಯಾದ ಟೆಕ್ಕಿ.. ಇದು ಕೊರೊನಾ ಕಾಲದ ಸ್ವಾಭಿಮಾನಿ ಕಹಾನಿ!

ಹೈದರಾಬಾದ್​: ದೇಶಾದ್ಯಂತ ಘೋಷಿಸಿದ ಲಾಕ್​ಡೌನ್​ನಿಂದ ಕಾರ್ಮಿಕರು ಮತ್ತು ರೈತರ ಜೊತೆ ಸಮಾಜದ ಹಲವಾರು ವರ್ಗದವರೂ ಸಂಕಷ್ಟ ಎದುರಿಸಬೇಕಾಯಿತು. ಆದರೆ, ಇವರಲ್ಲಿ ಒಬ್ಬರು ಸಾಫ್ಟ್​ವೇರ್​ ಎಂಜಿನಿಯರ್​ ಸಹ ಇದ್ದಾರೆ ಎಂದರೆ ನಂಬ್ತೀರಾ? ಅರೇ, ಅವರಿಗೇನು? ಒಳ್ಳೇ ಸಂಬಳದ ಜೊತೆ ಲ್ಯಾಪ್​ಟಾಪ್​ ಹಾಗೂ Work From Home ನಂಥ ಅನುಕೂಲ ಕೊಟ್ಟಿರ್ತಾರೆ. ಲಾಕ್​ಡೌನ್​ನಿಂದ ಅವರಿಗ್ಯಾಕೆ ತೊಂದರೆ ಆಗುತ್ತೆ? ಅಂತಾ ನಿಮ್ಮ ಮನಸ್ಸಲ್ಲಿ ಪ್ರಶ್ನೆ ಎದ್ದಿದ್ರೇ ಈ ಸ್ಟೋರಿ ಓದಿ. ಅಂದ ಹಾಗೆ, ನಾವು ಹೇಳೋಕೆ ಹೊರಟಿರೋ ಸಂಗತಿ 26 ವರ್ಷದ […]

ತರಕಾರಿ ವ್ಯಾಪಾರಿಯಾದ ಟೆಕ್ಕಿ.. ಇದು ಕೊರೊನಾ ಕಾಲದ ಸ್ವಾಭಿಮಾನಿ ಕಹಾನಿ!
Follow us
KUSHAL V
| Updated By: ಆಯೇಷಾ ಬಾನು

Updated on:Nov 23, 2020 | 11:50 AM

ಹೈದರಾಬಾದ್​: ದೇಶಾದ್ಯಂತ ಘೋಷಿಸಿದ ಲಾಕ್​ಡೌನ್​ನಿಂದ ಕಾರ್ಮಿಕರು ಮತ್ತು ರೈತರ ಜೊತೆ ಸಮಾಜದ ಹಲವಾರು ವರ್ಗದವರೂ ಸಂಕಷ್ಟ ಎದುರಿಸಬೇಕಾಯಿತು. ಆದರೆ, ಇವರಲ್ಲಿ ಒಬ್ಬರು ಸಾಫ್ಟ್​ವೇರ್​ ಎಂಜಿನಿಯರ್​ ಸಹ ಇದ್ದಾರೆ ಎಂದರೆ ನಂಬ್ತೀರಾ? ಅರೇ, ಅವರಿಗೇನು? ಒಳ್ಳೇ ಸಂಬಳದ ಜೊತೆ ಲ್ಯಾಪ್​ಟಾಪ್​ ಹಾಗೂ Work From Home ನಂಥ ಅನುಕೂಲ ಕೊಟ್ಟಿರ್ತಾರೆ. ಲಾಕ್​ಡೌನ್​ನಿಂದ ಅವರಿಗ್ಯಾಕೆ ತೊಂದರೆ ಆಗುತ್ತೆ? ಅಂತಾ ನಿಮ್ಮ ಮನಸ್ಸಲ್ಲಿ ಪ್ರಶ್ನೆ ಎದ್ದಿದ್ರೇ ಈ ಸ್ಟೋರಿ ಓದಿ.

ಅಂದ ಹಾಗೆ, ನಾವು ಹೇಳೋಕೆ ಹೊರಟಿರೋ ಸಂಗತಿ 26 ವರ್ಷದ ಟೆಕ್ಕಿ ಉನದಾದಿ ಶಾರದಾರದ್ದು. ಕೆಲವು ತಿಂಗಳ ಹಿಂದೆ ಹೈದರಾಬಾದ್​ನ ಪ್ರತಿಷ್ಠಿತ MNC ಕಂಪನಿಯಲ್ಲಿ ಸಾಫ್ಟ್​ವೇರ್​ ಎಂಜಿನಿಯರ್​ ಆಗಿ ನೌಕರಿ ಗಿಟ್ಟಿಸಿಕೊಂಡ ಶಾರದಾ ಸಂತೋಷಕ್ಕೆ ಪಾರವೇ ಇರಲಿಲ್ಲ. ಬಡ ಕುಟುಂಬದವರಾದ ಶಾರದಾಗೆ ಈಗಲಾದ್ರೂ ತಮ್ಮ ಕಷ್ಟಗಳು ತೀರಿತು ಅನ್ನೋ ಸಂತಸವಿತ್ತು.

ಆದರೆ, ಆಗಲೇ ನೋಡಿ ಕೊರೊನಾ ಮಹಾಮಾರಿ ದೇಶಕ್ಕೆ ಎಂಟ್ರಿ ಕೊಟ್ಟಿದ್ದು. ಕ್ರೂರಿ ಬಂದಿದ್ದೇ ತಡ, ಜನರನ್ನ ಬಲಿ ಪಡೆಯೋದರ ಜೊತೆಗೆ ಹಲವರ ಉದ್ಯೋಗವನ್ನೇ ನುಂಗಿಬಿಟ್ಟಿತು. ಅದರಲ್ಲಿ ಶಾರದಾ ಸಹ ಒಬ್ಬರು. ತನ್ನ ಕಂಪನಿಯ ಆರ್ಥಿಕ ಸ್ಥಿತಿ ದುಸ್ತರವಾಗಿ, ಸೇರಿದ ಕೆಲವೇ ತಿಂಗಳಲ್ಲಿ ಶಾರದಾ ನೌಕರಿ ಕಳೆದುಕೊಳ್ಳಬೇಕಾಯ್ತು.

ಶಾರದೆ ‘ಲಕ್ಷ್ಮೀ’ ಪುತ್ರಿಯಾಗಿದ್ದು.. ಟೆಕ್ಕಿ​ ಟು ತರಕಾರಿ ವ್ಯಾಪಾರಿ! ಒಂದು ಕಡೆ ನೌಕರಿ ಕಳೆದುಕೊಂಡ ನೋವು. ಮತ್ತೊಂದೆಡೆ ಕುಟುಂಬ ನಿರ್ವಹಣೆಯ ಚಿಂತೆ ಶಾರದಾಗೆ ಕಾಡಿತು. ಇದರಿಂದ ಒಂದು ಕ್ಷಣ ಆಕೆ ಕುಗ್ಗಿದರೂ ಧೃತಿಗೆಡದೆ ಜೀವನೋಪಾಯಕ್ಕಾಗಿ ಏನಾದರೂ ಮಾಡಲೇಬೇಕು ಅಂತಾ ಯೋಚಿಸಿದರು.

ಆಗ, ಥಟ್​ ಅಂತಾ ನೆನಪಾಗಿದ್ದು ತನ್ನ ತಂದೆ ವೆಂಕಟಯ್ಯನ ಬೀದಿ ಬದಿ ತರಕಾರಿ ವ್ಯಾಪಾರ. ಈ ಹಿಂದೆಯೂ ವ್ಯಾಪಾರದಲ್ಲಿ ತನ್ನ ತಂದೆಗೆ ಸಹಾಯ ಮಾಡಿದ್ದ ಅನುಭವ ಶಾರದಾಗೆ ಇತ್ತು. ಹೀಗಾಗಿ. ಮರುಯೋಚಿಸದೆ ತರಕಾರಿ ವ್ಯಾಪಾರ ಮಾಡಲು ಮುಂದಾದರು ಶಾರದಾ. ಝಣಝಣ ಲಕ್ಷ್ಮೀ, ಟೆಕ್ಕೀ ಶಾರದೆಯ ಕೈಹಿಡಿದಳು.

ಸುಮಾರು 12 ಗಂಟೆ ಕಾಲ ತರಕಾರಿ ವ್ಯಾಪಾರ ಮಾಡುವ ಶಾರದಾಗೆ ಈ ಕೆಲಸ ತನ್ನ ಘನತೆಗೆ ತಕ್ಕಂಥದ್ದಲ್ಲ ಎಂದು ಅನ್ನಿಸಲೇ ಇಲ್ಲವಂತೆ. ಒಣ ಪ್ರತಿಷ್ಠೆಗೆ ಒಗ್ಗು ಹೋಗದೇ, ಗೌರವಯುತ ಬದುಕು ನಡೆಸಲು ಯಾವ ಕೆಲಸವಾದರೇನು ಅಂತಾ ಜೀವನ ಸಾಗಿಸುತ್ತಿದ್ದಾರೆ. ತನ್ನ ಕುಟುಂಬಕ್ಕೆ ಬೆನ್ನೆಲು‘ಬಾಗಿ’ ನಿಂತಿದ್ದಾರೆ. ಈ ಮಧ್ಯೆ, ಶಾರದಾ ಪರಿಸ್ಥಿತಿ ಸುಧಾರಿಸಿದ ಮೇಲೆ ಮತ್ತೊಮ್ಮೆ ಸಾಫ್ಟ್​ವೇರ್​ ಉದ್ಯೋಗಕ್ಕೆ ಮರಳಲು ನಿರ್ಧರಿಸಿದ್ದಾರೆ.

Published On - 12:16 pm, Tue, 28 July 20

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ