ಪಾದರಾಯನಪುರದಲ್ಲಿ ಕೊರೊನಾ ಆತಂಕ, ಒಟ್ಟು 19 ಜನರಲ್ಲಿ ಸೋಂಕು

ಬೆಂಗಳೂರು: ಪಾದರಾಯನಪುರದಲ್ಲಿ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದು ಕೊರೊನಾ ತವರೂರು ಆಗಲಿದೆಯಾ ಎಂಬ ಆತಂಕ ಹೆಚ್ಚಾಗಿದೆ. ಯಾಕೆಂದರೆ ನಿಜಾಮುದ್ದೀನ್‌ಗೆ ಹೋಗಿಬಂದಿದ್ದ ಮೂವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ನಂತರ ಈ ಮೂವರ ಜತೆ ಸಂಪರ್ಕ ಹೊಂದಿದ್ದ 16 ಜನರಿಗೆ ಸೋಂಕು ತಗುಲಿದೆ. ಹೀಗಾಗಿ ಪಾದರಾಯನಪುರದಲ್ಲಿ ಒಟ್ಟು 19 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಮೂವರ ಜತೆ ಒಟ್ಟು 60 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ರು. 60 ಜನರ ಪೈಕಿ 16 ಜನರಿಗೆ ಕೊರೊನಾ […]

ಪಾದರಾಯನಪುರದಲ್ಲಿ ಕೊರೊನಾ ಆತಂಕ, ಒಟ್ಟು 19 ಜನರಲ್ಲಿ ಸೋಂಕು

Updated on: Apr 21, 2020 | 7:52 AM

ಬೆಂಗಳೂರು: ಪಾದರಾಯನಪುರದಲ್ಲಿ ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದು ಕೊರೊನಾ ತವರೂರು ಆಗಲಿದೆಯಾ ಎಂಬ ಆತಂಕ ಹೆಚ್ಚಾಗಿದೆ. ಯಾಕೆಂದರೆ ನಿಜಾಮುದ್ದೀನ್‌ಗೆ ಹೋಗಿಬಂದಿದ್ದ ಮೂವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ನಂತರ ಈ ಮೂವರ ಜತೆ ಸಂಪರ್ಕ ಹೊಂದಿದ್ದ 16 ಜನರಿಗೆ ಸೋಂಕು ತಗುಲಿದೆ. ಹೀಗಾಗಿ ಪಾದರಾಯನಪುರದಲ್ಲಿ ಒಟ್ಟು 19 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

ಮೂವರ ಜತೆ ಒಟ್ಟು 60 ಜನ ಪ್ರಾಥಮಿಕ ಸಂಪರ್ಕ ಹೊಂದಿದ್ರು. 60 ಜನರ ಪೈಕಿ 16 ಜನರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಮೂವರ ಜತೆ 58 ಜನ ದ್ವಿತೀಯ ಸಂಪರ್ಕ ಹೊಂದಿದ್ದವರಿದ್ದಾರೆ. 58 ಜನರನ್ನು ಈಗ ಹೋಟೆಲ್​ನಲ್ಲಿ ಕ್ವಾರಂಟೈನ್ ಮಾಡಲಾಗಿದೆ.

58 ಜನರಲ್ಲಿ ಒಬ್ಬರಿಗೆ ಸೋಂಕು ಪತ್ತೆಯಾದರೂ ಸಂಕಷ್ಟ ಎದುರಾಗಲಿದೆ ಯಾಕೆಂದರೆ ಪಾದರಾಯನಪುರದಲ್ಲಿ ನಡೆದ ಗಲಾಟೆ ವೇಳೆ ಇವರು ಸ್ಥಳದಲ್ಲಿದ್ದರು. ಹೀಗಾಗಿ ಗಲಾಟೆ ಮಾಡಿದ್ದವರಿಗೂ ಸೋಂಕಿನ ಆತಂಕ ಉಂಟಾಗಿದೆ. ಗಲಾಟೆಯಲ್ಲಿ ಭಾಗಿಯಾಗಿದ್ದವರನ್ನ ವಶಕ್ಕೆ ಪಡೆಯಲಾಗಿದೆ. ಬಂಧಿಸಲಾಗಿರುವವರಲ್ಲಿ ಸೋಂಕು ಕಂಡು ಬಂದರೆ ಮುಂದೆ ದೊಡ್ಡ ಅನಾಹುತ ಆಗಲಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು.

Published On - 7:51 am, Tue, 21 April 20