ಮೂಟೆ ಮೇಲೆ ಕುಳಿತು ತರಕಾರಿ ವ್ಯಾಪಾರಕ್ಕೆ ಇಳಿದ ಮಾಜಿ ಸಚಿವ ರೇವಣ್ಣ!
ಹಾಸನ: ಕೊರೊನಾ ಸೋಂಕು ಕಾಲದಲ್ಲಿ ಮಾಜಿ ಸಚಿವ ರೇವಣ್ಣ ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ! ಲಾಕ್ ಡೌನ್ 2.0 ಚಾಲ್ತಿಯಲ್ಲಿರುವಾಗ ರೈತರ ಓಡಾಟಕ್ಕೆ ಕಷ್ಟವಾಗಿದೆ. ಮಾರುಕಟ್ಟೆವರೆಗೂ ಬೆಳೆ ತರಲು ಆಗದೆ ಪಡದಾಡುತ್ತಿದ್ದಾರೆ. ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ರೈತರು ಕಂಗೆಟ್ಟಿದ್ದಾರೆ. ಪರಿಸ್ಥಿತಿಯನ್ನ ಅರಿತ ಹೆಚ್ಡಿ ರೇವಣ್ಣ ರೈತರಿಂದ ಲೋಡ್ ಗಟ್ಟಲೆ ತರಕಾರಿ ಖರೀದಿಸಿದ್ದಾರೆ. ಎಪಿಎಂಸಿಗೆ ಬರೋ ಲೋಡ್ ಗಟ್ಟಲೆ ತರಕಾರಿಯನ್ನ ಖರೀದಿಸಿ ಬಡವರಿಗೆ ಹಂಚಿದ್ದಾರೆ. ಹೊಳೆನರಸೀಪುರ ಪಟ್ಟಣದ ಎಪಿಎಂಸಿಯಲ್ಲಿ ಮಾಸ್ಕ್ ಧರಿಸಿಯೇ ತರಕಾರಿ ಖರೀದಿ ಮಾಡಿದ ರೇವಣ್ಣ, ಪ್ರತಿಗ್ರಾಮದ […]
ಹಾಸನ: ಕೊರೊನಾ ಸೋಂಕು ಕಾಲದಲ್ಲಿ ಮಾಜಿ ಸಚಿವ ರೇವಣ್ಣ ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ! ಲಾಕ್ ಡೌನ್ 2.0 ಚಾಲ್ತಿಯಲ್ಲಿರುವಾಗ ರೈತರ ಓಡಾಟಕ್ಕೆ ಕಷ್ಟವಾಗಿದೆ. ಮಾರುಕಟ್ಟೆವರೆಗೂ ಬೆಳೆ ತರಲು ಆಗದೆ ಪಡದಾಡುತ್ತಿದ್ದಾರೆ. ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ರೈತರು ಕಂಗೆಟ್ಟಿದ್ದಾರೆ. ಪರಿಸ್ಥಿತಿಯನ್ನ ಅರಿತ ಹೆಚ್ಡಿ ರೇವಣ್ಣ ರೈತರಿಂದ ಲೋಡ್ ಗಟ್ಟಲೆ ತರಕಾರಿ ಖರೀದಿಸಿದ್ದಾರೆ. ಎಪಿಎಂಸಿಗೆ ಬರೋ ಲೋಡ್ ಗಟ್ಟಲೆ ತರಕಾರಿಯನ್ನ ಖರೀದಿಸಿ ಬಡವರಿಗೆ ಹಂಚಿದ್ದಾರೆ.
ಹೊಳೆನರಸೀಪುರ ಪಟ್ಟಣದ ಎಪಿಎಂಸಿಯಲ್ಲಿ ಮಾಸ್ಕ್ ಧರಿಸಿಯೇ ತರಕಾರಿ ಖರೀದಿ ಮಾಡಿದ ರೇವಣ್ಣ, ಪ್ರತಿಗ್ರಾಮದ ಡೈರಿಗಳ ಮೂಲಕ ಬಡ ಜನರಿಗೆ ಅದನ್ನ ವಿತರಣೆ ಮಾಡಿದ್ದಾರೆ. ತಾವೇ ಖುದ್ದಾಗಿ ಮಾರ್ಕೆಟ್ಗೆ ಹೋಗಿ ತರಕಾರಿ ಖರೀದಿಸಿದ್ದಾರೆ ಮಾಜಿ ಸಚಿವ. ತನ್ಮೂಲಕ, ತಮ್ಮ ಕ್ಷೇತ್ರದ ಜನರಿಗೆ ತರಕಾರಿ ವಿತರಿಸಲು ಮತ್ತು ನಷ್ಟಕ್ಕೀಡಾಗುತ್ತಿರೋ ರೈತರಿಗೂ ಹೆಚ್.ಡಿ.ರೇವಣ್ಣ ನೆರವಾಗುತ್ತಿದ್ದಾರೆ. ತರಕಾರಿ ಖರೀದಿಸಿ ಬಡವರಿಗೆ ಹಂಚಿಕೆ ಮಾಡುವಾಗಲೂ ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದಾರೆ.