ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!

|

Updated on: May 14, 2020 | 11:53 AM

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ. ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ […]

ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ತಿಳಿದ್ಕೊಳ್ಳಿ!
Follow us on

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಕ್ರಿಮಿ ಎಲ್ಲೆಲ್ಲಿ ವಾಸ ಮಾಡುತ್ತಿದೆ, ನೀವು ಯಾವ Zoneನಲ್ಲಿದ್ದೀರಿ ಎಂಬುದನ್ನು ಮೊದ್ಲು ತಿಳಿದುಕೊಳ್ಳಿ.

ನಗರದ 6 ವಲಯಗಳಲ್ಲಿ 20 ವಾರ್ಡ್‌ಗಳು ಕಂಟೈನ್ಮೆಂಟ್ Zone ನಲ್ಲಿವೆ. ಆ 20 ಕಂಟೈನ್ಮೆಂಟ್ Zone‌ ನಲ್ಲಿ 124 ಸಕ್ರಿಯ ಕೇಸ್​ಗಳಿವೆ. ಈ 20 ವಾರ್ಡ್‌ಗಳಲ್ಲಿ ಕೊರೋನಾ ಕೇಸ್ ಡಿಆಕ್ಟೀವ್ ಆಗಿಲ್ಲ. ಪಾದರಾಯನಪುರ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಹೊಂಗಸಂದ್ರ ಎರಡನೇ ಅತಿ ಹೆಚ್ಚು ಕೇಸ್ ಹೊಂದಿರೋ ಕಂಟೈನ್ಮೆಂಟ್ Zone. ಈ ಇಪ್ಪತ್ತರ ಹೊರತಾಗಿ ಉಳಿದ ಜೋನ್​ಗಳು ಗ್ರೀನ್​ ಜೋನ್​ಗಳಲ್ಲಿದ್ದು, ಅಲ್ಲಿನ ಜನ ನಿರಾಳರಾಗಿರಬಹುದಾದರೂ ಸ್ವಯಂ ಎಚ್ಚರಿಕೆಯಲ್ಲಿರುವುದು ಎಲ್ಲರಿಗೂ ಒಳಿತು ಎಂಬುದನ್ನು ಮರೆಯುವಂತಿಲ್ಲ.

ಯಾವ ಯಾವ ಕಂಟೈನ್ಮೆಂಟ್ Zone‌ಗಳಲ್ಲಿ ಆಕ್ಟೀವ್ ಕೇಸ್‌ಗಳು ಎಷ್ಟಿವೆ, ವಿವರ ಇಲ್ಲಿದೆ:
1) ಪಾದರಾಯನಪುರ -49 ಕೇಸ್
2) ಹೊಂಗಸಂದ್ರ -38 ಕೇಸ್
3) ಹಗದೂರು, ಕೆ.ಆರ್ ಮಾರ್ಕೆಟ್ -6 ಕೇಸ್
4) ಹಂಪಿ ನಗರ -4 ಕೇಸ್
5) ಜಗಜೀವನ ರಾಮನಗರ್ -3 ಕೇಸ್
6) ವಸಂತನಗರ -2 ಕೇಸ್
7) ಸುಧಾಮನಗರ, ಬೈರಸಂದ್ರ,
ಯಶವಂತಪುರ, ಛಲವಾದಿ ಪಾಳ್ಯ,
ದೀಪಾಂಜಲಿನಗರ, ಬಿಳೆಕಹಳ್ಳಿ,
ಬೇಗೂರು, ಬಿಟಿಎಂ ಲೇಔಟ್,
ಶಿವಾಜಿನಗರ, ಮಲ್ಲೇಶ್ವರಂ,
ಹೆಚ್.ಬಿ.ಆರ್ ಲೇಔಟ್
-ತಲಾ 1 ಕೇಸ್ ಆಕ್ಟೀವ್ ಆಗಿದೆ.

Published On - 10:45 am, Thu, 14 May 20